ಬೆಂಗಳೂರು: ರಾಜ್ಯದ 13 ಜಿಲ್ಲೆಗಳಲ್ಲಿ ಮಳೆ ಹಾಗೂ ಪ್ರವಾಹದಿಂದ ಭಾರೀ ಹಾನಿಯಾಗಿದ್ದು ಪರಿಹಾರ ಕಾರ್ಯಗಳಿಗೆ 510 ಕೋಟಿ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ.ಈ ಕುರಿತಾಗಿ ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ಸಿಎಂ ಅವರು, 466 ಗ್ರಾಮಗಳಲ್ಲಿ ಪ್ರವಾಹದಿಂದ ಸಮಸ್ಯೆ ಆಗಿದ್ದು 13 ಮಂದಿ ಸಾವನ್ನಪ್ಪಿದ್ದಾರೆ. ಓರ್ವ ನಾಪತ್ತೆ ಆಗಿದ್ದಾರೆ ಎಂದು ತಿಳಿಸಿದರು. ಈ ಎಲ್ಲ ಹಿನ್ನೆಲೆಯಲ್ಲಿ ಕೂಡಲೇ ಸಂಪರ್ಕ ರಸ್ತೆ ಪುನರ್ ನಿರ್ಮಾಣಕ್ಕಾಗಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಗಿದೆ. ಹಣಕಾಸು ಕಾರ್ಯದರ್ಶಿ ಜೊತೆ ಚರ್ಚೆ ನಡೆಸಲಾಗಿದೆ. 510 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದರು. ಎನ್‌ಡಿಆರ್‌ಎಫ್‌ನಿಂದ 150 ಕೋಟಿ ಬಿಡುಗಡೆ ಮಾಡಲಾಗಿದೆ. 700 ಕೋಟಿ ಹಣ ಡಿಸಿಗಳ ಖಾತೆಯಲ್ಲಿದೆ, ಮಳೆಯಿಂದ ಬೆಳೆ ನಾಶ ವಿಚಾರಗಿ 15 ದಿನಗಳಲ್ಲಿ ಸಮೀಕ್ಷೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಎನ್‌ಡಿಆರ್‌ಎಫ್ ಮಾನದಂಡ ಪ್ರಕಾರ ಪೂರ್ಣ ಹಾನಿಯಾದ ಮನೆಗೆ ಐದು ಲಕ್ಷ, ಭಾಗಷಃ ಹಾನಿಯಾದರೆ ಮೂರು ಲಕ್ಷ ಹಾಗೂ ಅಲ್ಪ ಹಾನಿ 50,000 ಪರಿಹಾರ ನೀಡಲಾಗುವುದು ಎಂದರು. ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದೇನೆ. ಪ್ರವಾಹದ ಪೂರ್ಣ ಹಾನಿಯ ಸಮೀಕ್ಷೆಗೆ ತಂದ ಕಳಿಸಲು ಮನವಿ ಮಾಡಲಾಗಿದೆ ಎಂದರು.
from India & World News in Kannada | VK Polls https://ift.tt/3fj49ww