ಮೈಸೂರು ಮೂಲದ ವ್ಯಕ್ತಿಯಿಂದ ಐರ್ಲೆಂಡ್ ದೇಶದಲ್ಲಿ ಹೆಂಡತಿ, ಮಕ್ಕಳ ಹತ್ಯೆ

ಮೈಸೂರು: ಮೂಲದ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಐರ್ಲೆಂಡಿನಲ್ಲಿ ಮಾಡಲಾಗಿದೆ. ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿ ಮೂಲದ ಅಬ್ದುಲ್‌ ಗಫಾರ್‌ ಅವರ ಪುತ್ರಿ ಸೀಮಾ ಬಾನು (37), ಅವರ ಪುತ್ರಿ ಅಫ್ರಿಯಾ ಸಯ್ಯದ್‌ (11), ಪುತ್ರ ಫೈಜಾನ್‌ ಸಯ್ಯದ್ ‌(6) ಮೃತರು. ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಈ ಘಟನೆ ನಡೆದಿದ್ದು, ಕಳೆದ ಅಕ್ಟೋಬರ್‌ 28ರಂದು ಮೈಸೂರಿನಲ್ಲಿರುವ ಮೃತಳ ಪೋಷಕರಿಗೆ ವಿಚಾರ ತಿಳಿದು ಬಂದಿದೆ. ತಾಯಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ. ಸೀಮಾ ಬಾನು ಮತ್ತು ಮಕ್ಕಳನ್ನು ಆಕೆಯ ಪತಿಯೇ ಕೊಲೆ ಮಾಡಿರುವುದಾಗಿ ಮೃತಳ ಪೋಷಕರು ಆರೋಪಿಸಿದ್ದು, ಮೂವರ ಶವವನ್ನು ಭಾರತಕ್ಕೆ ತರಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. 13 ವರ್ಷಗಳ ಹಿಂದೆ ಸೀಮಾ ಬಾನು ಅವರು ಮೈಸೂರಿನ ರಾಜೀವ್‌ ನಗರದ ನಿವಾಸಿ ಸಾಫ್ಟ್‌ವೇರ್‌ ಎಂಜಿನಿಯರ್‌ ಸಮೀರ್‌ ಸಯ್ಯದ್‌ ಅವರನ್ನು ವಿವಾಹವಾಗಿ, ಉದ್ಯೋಗ ನಿಮಿತ್ತ ದುಬೈನಲ್ಲಿ ನೆಲೆಸಿದ್ದರು. ಬಳಿಕ ಉತ್ತಮ ಉದ್ಯೋಗ ಸಿಕ್ಕಿದ್ದರಿಂದ ಅಲ್ಲಿಂದ ಐರ್ಲೆಂಡ್‌ಗೆ ತೆರಳಿ ನೆಲೆಸಿದ್ದರು. ಈ ಮಧ್ಯೆ ಮೈಸೂರಿಗೆ ಮಕ್ಕಳೊಂದಿಗೆ ದಂಪತಿ ಹಿಂದಿರುಗಿದ್ದರು. ಈ ವೇಳೆ ಸಮೀರ್‌ ಸಯ್ಯದ್‌ ಮೈಸೂರಿನಲ್ಲಿರುವ ಆಸ್ತಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದರು. ಇದಕ್ಕೆ ಪತ್ನಿ ಸೀಮಾ ಬಾನು ವಿರೋಧ ವ್ಯಕ್ತಪಡಿಸಿದ್ದರಿಂದ ಗಲಾಟೆಯಾಗಿತ್ತು. ಈ ಬಗ್ಗೆ ಉದಯಗಿರಿ ಪೊಲೀಸ್‌ ಠಾಣೆಯಲ್ಲಿ ದೂರು ಕೂಡ ನೀಡಲಾಗಿತ್ತು. ಪೊಲೀಸರು ಬಂಧಿಸಲಿದ್ದಾರೆ ಎಂಬ ಭಯದಿಂದ ಹೆಂಡತಿ ಮಕ್ಕಳನ್ನು ಬಿಟ್ಟು ವಿದೇಶಕ್ಕೆ ತೆರಳಿದ್ದರು. ಅಲ್ಲಿಗೆ ತೆರಳಿದ ಬಳಿಕ ಪತ್ನಿ ಮತ್ತು ಮಕ್ಕಳ ಮನವೊಲಿಸಿ ಕರೆಸಿಕೊಂಡು ಜೀವನ ನಡೆಸುತ್ತಿದ್ದರು. ಈ ಮಧ್ಯೆ ಪತಿ ಮತ್ತು ಪತ್ನಿ ನಡುವೆ ಐರ್ಲೆಂಡ್‌ನಲ್ಲೂ ಆಗಾಗ್ಗೆ ಜಗಳ ನಡೆಯುತ್ತಿದ್ದು, ಪತಿಯ ಕಿರುಕುಳದಿಂದ ಬೇಸತ್ತ ಸೀಮಾ ಬಾನು ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಸ್ಥಳೀಯ ಪೊಲೀಸರು, ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣ ಇತ್ಯರ್ಥವಾಗುವವರೆಗೂ ಪ್ರತ್ಯೇಕವಾಗಿ ಇರುವಂತೆ ಸೂಚನೆ ನೀಡಿತ್ತು. ಅದರಂತೆ ಸೀಮಾ ಬಾನು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಿದ್ದರು. ಸೀಮಾ ಬಾನು ಹಾಗೂ ಆಕೆಯ ನಾಲ್ಕು ದಿನಗಳ ಕಾಲ ಮನೆಯಿಂದ ಹೊರ ಬಾರದೇ ಇರುವುದನ್ನು ಗಮನಿಸಿದ ನೆರೆಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು, ಮನೆ ಬಾಗಿಲು ತೆರೆದು ಪರಿಶೀಲನೆ ನಡೆಸಿದಾಗ, ತಾಯಿ- ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ತಾಯಿ ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಸೀಮಾ ಬಾನು ಅವರ ಸಂಬಂಧಿ ಅಬು ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಪೋಷಕರಿಗೆ ವಿಡಿಯೋ ಕಾಲ್‌ ಮಾಡಿದ್ದ ಸೀಮಾ ಬಾನು, 'ನನ್ನ ಪತಿ ನನ್ನನ್ನು ಉಳಿಸುವುದಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದರು. ಅಕ್ಟೋಬರ್‌ 25ರ ನಂತರ ಅವರಿಂದ ಯಾವುದೇ ಕರೆ ಬಂದಿರಲಿಲ್ಲ. 28ರಂದು ಆಕೆ ಕೊಲೆಯಾಗಿರುವ ಬಗ್ಗೆ ಮಾಹಿತಿ ಬಂದಿದೆ' ಎಂದು ಅಬು ತಿಳಿಸಿದ್ದಾರೆ. ಶವ ತರಲು ಮನವಿ: ತಾಯಿ- ಮಕ್ಕಳ ಶವವನ್ನು ಭಾರತಕ್ಕೆ ತರಲು ಸ್ಥಳೀಯ ಸಂಸದರೊಂದಿಗೆ ಕೇಂದ್ರ ಸರಕಾರ ನೆರವು ನೀಡಬೇಕು ಎಂದು ಮೃತಳ ತಂದೆ ಅಬ್ದುಲ್‌ ಗಫಾರ್‌ ಮನವಿ ಮಾಡಿದ್ದಾರೆ.


from India & World News in Kannada | VK Polls https://ift.tt/38074Yf

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...