ಸುನಿಲ್ ಪೊನ್ನೇಟಿ ಮಡಿಕೇರಿ ಮಡಿಕೇರಿ: ಜಿಲ್ಲೆಯಲ್ಲೂ ಜಾಲ ಬೇರು ಬಿಟ್ಟಿದೆಯಾ? ಮೂಲದ ಕೆಲವು ನಟ-ನಟಿಯರು, ಸೆಲೆಬ್ರಿಟಿಗಳು ವಿಚಾರಣೆಗೆ ಒಳಗಾಗುತ್ತಿರುವ ಬೆನ್ನಲ್ಲೇ ಇಂತಹ ಪ್ರಶ್ನೆ ನಾಗರಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕಳೆದ 6 ತಿಂಗಳಿನಿಂದ ಪೊಲೀಸ್ ಇಲಾಖೆ ದಂಧೆ ವಿರುದ್ಧ ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದು, ಸಾಕಷ್ಟು ಮಂದಿಯನ್ನು ಬಂಧಿಸಲಾಗಿದೆ. ಈಗಲೂ ಗಾಂಜಾ ಜಾಲದ ಮೇಲೆ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಮಂಗಳವಾರ ಡಿಸಿಐಬಿ ಪೊಲೀಸರಿಗೆ ಸಿಕ್ಕಿಬಿದ್ದ ದಕ್ಷಿಣ ಆಫ್ರಿಕಾ ಮೂಲದ ವ್ಯಕ್ತಿ ಮೇಲೆ ಮಾದಕ ವಸ್ತುಗಳನ್ನು ಸರಬರಾಜು ಮಾಡಿದ ಆರೋಪ ಇದೆ. ಇದು ಕೂಡ ಇಲ್ಲಿ ಈ ಮೊದಲು ನಡೆಯುತ್ತಿದ್ದ ಪಾರ್ಟಿಗಳು, ಸಂಗೀತ ಕಾರ್ಯಕ್ರಮಗಳನ್ನು ಅನುಮಾನದಿಂದ ನೋಡುವಂತಾಗಿದೆ. ರೆಸಾರ್ಟ್, ಹೋಂಸ್ಟೇಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಸಾಮಾನ್ಯವಾಗಿ ನಡೆಯುವ ಡಿಜೆ ಸೇರಿದಂತೆ ಹಲವು ಬಗೆಯ ಕಸರತ್ತುಗಳಿಗೂ ಮಾದಕ ಜಾಲದ ನಂಟಿತ್ತಾ ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ. ಕೊಡಗಿನಲ್ಲಿ ಈ ಹಿಂದೆ ನಾಪೋಕ್ಲು ಸಮೀಪದ ನೆಲಜಿ ಮತ್ತು ಪೊನ್ನಂಪೇಟೆ ಸಮೀಪದ ನಲ್ಲೂರಿನಲ್ಲಿ 2 ಪ್ರತ್ಯೇಕ ರೇವ್ ಪಾರ್ಟಿಗಳ ಮೇಲೆ ಪೊಲೀಸರು ದಾಳಿ ಮಾಡಿ ಮಾದಕ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದರು. ರಾಜ್ಯ, ಹೊರರಾಜ್ಯದಿಂದ ಬಂದಿದ್ದವರೂ ಸಿಕ್ಕಿಬಿದ್ದಿದ್ದರು. ಬೆಳಕಿಗೆ ಬಾರದಂತೆ ಇಂತಹ ರೇವ್ ಪಾರ್ಟಿಗಳು ಬೇರೆ ಕಡೆಯೂ ನಡೆದಿರುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ. ಪ್ರವಾಸೋದ್ಯಮದಿಂದಾಗಿ ಸದಾ ಚಟುವಟಿಕೆಯಿಂದ ಕೂಡಿರುವ ಕೊಡಗಿಗೆ ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಎಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳೂ ಇಲ್ಲಿವೆ. ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳ ದಂಧೆ ನಡೆಸುವವರಿಗೆ ಇಂತಹ ವಾತಾವರಣ ಪೂರಕವಾಗಿದ್ದು, ಪೊಲೀಸ್ ವ್ಯವಸ್ಥೆ ಮತ್ತಷ್ಟು ಬಿಗಿಯಾಗಬೇಕು ಎನ್ನುವ ಅಭಿಪ್ರಾಯಗಳು ಪ್ರಜ್ಞಾವಂತರಿಂದ ವ್ಯಕ್ತವಾಗುತ್ತಿದೆ. ವೀಕೆಂಡ್‌ಗಳಲ್ಲಿ ಪಾರ್ಟಿ ರೇವ್ ಪಾರ್ಟಿ ನಡೆಸುವವರು ಸಾಮಾಜಿಕ ಜಾಲ ತಾಣಗಳ ಮೂಲಕವೇ ಸಾಮಾನ್ಯವಾಗಿ ವ್ಯವಹಾರಗಳನ್ನು ಕುದುರಿಸುತ್ತಾರೆ ಎನ್ನುವುದು ಕೊಡಗಿನಲ್ಲಿ ನಡೆದಿದ್ದ ಪೊಲೀಸ್ ದಾಳಿಗಳ ವೇಳೆ ಬಹಿರಂಗವಾಗಿತ್ತು. ಆಕರ್ಷಕ ಪೋಸ್ಟರ್ ತಯಾರಿಸಿ, ರೇವ್ ಪಾರ್ಟಿ ಬಗೆಗಿನ ಎಲ್ಲಾ ವಿವರಗಳನ್ನು ಅದರಲ್ಲಿ ನಮೂದಿಸಿ ಕಾರ್ಯಕ್ರಮಕ್ಕೆ ಸಾಕಷ್ಟು ಸಮಯ ಇರುವಾಗಲೇ ತೀರಾ ಆತ್ಮೀಯ ಬಳಗದ ಒಳಗೆ ಹರಿಯ ಬಿಡಲಾಗುತ್ತದೆ. ಈ ವಿಷಯ ಹೊರ ಪ್ರಪಂಚದ ಅರಿವಿಗೆ ಬಾರದಂತೆ ಗರಿಷ್ಠ ಎಚ್ಚರಿಕೆಗಳನ್ನು ವಹಿಸಲಾಗುತ್ತದೆ. ಬೆಟ್ಟ, ದಟ್ಟ ಕಾಡು, ತೋಟದ ನಡುವಿನ ಜಾಗದಲ್ಲಿರುವ ಸ್ಥಳಗಳನ್ನೇ ಆಯ್ದುಕೊಳ್ಳಲಾಗುತ್ತದೆ. ಹಣದ ವ್ಯವಹಾರವೂ ಬಹುತೇಕ ಆನ್‌ಲೈನ್‌ನಲ್ಲೇ ನಡೆದುಹೋಗುತ್ತದೆ. ವೀಕೆಂಡ್‌ಗಳಲ್ಲಿ ಇಂತಹ ಪಾರ್ಟಿ ಆಯೋಜಿಸುವುದರಿಂದ ಇಲ್ಲಿಗೆ ಆಗಮಿಸುವವರನ್ನು ಸ್ಥಳೀಯರು ಕೂಡ ಪ್ರವಾಸಿಗರು ಎಂದೇ ನಂಬುತ್ತಾರೆ. ಹಾಗಾಗಿ ಬಹುತೇಕ ರೇವ್ ಪಾರ್ಟಿಗಳು ಗುಪ್ತವಾಗಿ ನಡೆದು ಹೋಗಿರುತ್ತದೆ ಎನ್ನಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಮಾದಕ ವ್ಯಸನಿಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ರಹಸ್ಯವಾಗಿ ಮಾಹಿತಿ ನೀಡಬಹುದು. ಈ ಮೂಲಕ ಮಾದಕ ವಸ್ತುಗಳ ಬಳಕೆ, ಮಾರಾಟಕ್ಕೆ ಕಡಿವಾಣ ಹಾಕಲು ಸಹಕರಿಸಬೇಕು. ಕ್ಷಮಾ ಮಿಶ್ರಾ, ಕೊಡಗು ಎಸ್‌ಪಿ
from India & World News in Kannada | VK Polls https://ift.tt/32WMIvV