ಬೆಂಗಳೂರು: ಒಳಗೊಂದು ಹೊರಗೊಂದು ಮಾತನಾಡುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಅಭ್ಯಾಸವಾಗಿ ಬಿಟ್ಟಿದೆ. ಶಿವಕುಮಾರ್ ಸೀಸನ್ ರಾಜಕಾರಣಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕಿಡಿಕಾರಿದ್ದಾರೆ. ವಿಧಾನಸಭಾ ಅಧಿವೇಶನದ ಮೂರನೇ ದಿನವಾದ ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ ಪಾಟೀಲ್, ಮಂಗಳವಾರ ಸದನದ ಒಳಗೆ ನನ್ನ ಆತ್ಮೀಯ ಸ್ನೇಹಿತ ಎಂದವರು ಸಂಜೆ ಹೊತ್ತಿಗೆ ತಮ್ಮ ಮಾತು ಬದಲಾಯಿಸಿದ್ದಾರೆ. ಅವರು ಒಳಗೊಂದು ಹೊರಗೊಂದು ಮಾತನಾಡುವುದನ್ನು ಬಿಡಲಿ ಎಂದು ಹೇಳಿದ್ದಾರೆ. ಮಂಗಳವಾರ ಸದನದಲ್ಲಿ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ , ಕೊರೊನಾ ನಿಯಂತ್ರಣ ವಿಚಾರದಲ್ಲಿ ಸರ್ಕಾರದ ವಿಫಲತೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಜನಸಾಮಾನ್ಯರು ದುಡ್ಡಿಲ್ಲದೆ ಪರದಾಡಿದ್ದರು. ರೈತರು ಕೂಡ ಸಂಕಷ್ಟಕ್ಕೊಳಗಾಗಿದ್ರು ಎಂದು ಹೇಳಿದ್ದರು. ಈ ವೇಳೆ ಬಿಸಿ ಪಾಟೀಲ್ ಮಧ್ಯಪ್ರವೇಶಿಸಿದಾಗ ನೀವು ನನ್ನ ಸ್ನೇಹಿತರು, ಈಗ ನನಗೆ ಮಾತಾಡೋಕೆ ಅವಕಾಶ ಕೊಟ್ಟಿದ್ದಾರೆ ನೀವು ಆಮೇಲೆ ಮಾತಾಡಿ ಎಂದು ಹೇಳಿದ್ದರು. ಈ ಹಿನ್ನೆಲೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಬಿಸಿ ಪಾಟೀಲ್, ಒಳಗೊಂದು, ಹೊರಗೊಂದು, ರೂಂನಲ್ಲೊಂದು ಮಾತನಾಡುವುದು ಶಿವಕುಮಾರ್‌ಗೆ ಅಭ್ಯಾಸವಾಗಿದೆ. ಅವರು ತಮ್ಮ ತೆವಲಿಗೆ ಮಾತನಾಡುವುದನ್ನು ಬಿಡಲಿ ಎಂದು ತಿರುಗೇಟು ನೀಡಿದರು. ಅಲ್ಲಧೇ ಎಪಿಎಂಸಿ ಕಾಯ್ದೆಯಿಂದ ಯಾವುದೇ ನಷ್ಟವಿಲ್ಲ. ರೈತರಿಗೆ ಒಳ್ಳೆಯದೇ ಆಗಲಿದೆ. ರೈತರು ಯಾವ ಕಾರಣಕ್ಕಾಗಿ ಹೋರಾಟ ಮಾಡುತ್ತಿದ್ದಾರೆಂಬುದು ಸ್ಪಷ್ಟವಾಗಬೇಕು. ರೈತರು ತಮ್ಮ ಹೋರಾಟ ಕೈಬಿಡಬೇಕೆಂದು ಬಿ.ಸಿ.ಪಾಟೀಲರು ಮನವಿ ಮಾಡಿದರು.
from India & World News in Kannada | VK Polls https://ift.tt/3cvgBGY