ಹೊಸದಿಲ್ಲಿ: ಕೊರೊನಾ ವೈರಸ್‌ಗೆ ಪರಿಣಾಮಕಾರಿ ಔಷಧ ಶೋಧ ಕಾರ್ಯ ನಿರಂತರವಾಗಿ ನಡೆಯುತ್ತಿರುವ ನಡುವೆ ಅಮೆರಿಕದ ಗಿಲೇಡ್ ಸಂಸ್ಥೆಯು ಆವಿಷ್ಕರಿಸಿರುವ ಭರವಸೆ ಮೂಡಿಸುತ್ತಿದೆ. ಐದು ವರ್ಷದ ಹಿಂದೆ ಎಬೊಲಾ ವೈರಸ್ ನಿಯಂತ್ರಣದ ವೇಳೆ ಸಂಶೋಧಿಸಲಾದ ರೆಮ್‌ಡೆಸಿವಿಯರ್, ಕೊರೊನಾದ ವಿರುದ್ಧದ ಸೆಣಸಾಟದಲ್ಲೂ ಯಶಸ್ಸು ಸಾಧಿಸಿರುವುದು ಅಮೆರಿಕದ ಪ್ರಯೋಗಾಲಯದಲ್ಲಿ ಸಾಬೀತಾಗಿದೆ. ಹೀಗಾಗಿ ಡ್ರಗ್ ಆ್ಯಂಡ್ ಫುಡ್ ಅಡ್ಮಿನಿಸ್ಪ್ರೇಷನ್ ಮದ್ದು ತಯಾರಿಗೆ ಅನುಮತಿ ಕೊಟ್ಟಿದ್ದು, ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಏತನ್ಮಧ್ಯೆ, ಜಾಗತಿಕವಾಗಿ ಸುಮಾರು 130 ಆ್ಯಂಟಿ ವೈರಸ್ ಲಸಿಕೆಗಳ ವೈದ್ಯಕೀಯ ಪ್ರಯೋಗ ನಡೆಯುತ್ತಿದೆ. ಇವುಗಳಲ್ಲಿ ಕೆಲವು ವೈರಸ್ ವಿರುದ್ಧ ಹೋರಾಡುವ ಶಕ್ತಿ ಹೊಂದಿದ್ದರೆ, ಇನ್ನೂ ಕೆಲವು ಕೊರೊನಾ ಹಾವಳಿಯಿಂದ ಮನುಷ್ಯನ ಅಂಗಾಂಗಳಿಗೆ ಆಗುವ ಹಾನಿ ತಡೆಗಟ್ಟಲು ಸಮರ್ಥವಾಗಿದೆ.
"ಪ್ರಸ್ತುತ ರೆಮ್‌ಡೆಸಿವಿಯರ್ ಮಾತ್ರ ಹೆಚ್ಚು ಭರವಸೆ ಮೂಡಿಸಿದೆ. ಅತಿ ವೇಗದಲ್ಲಿ ಸುಧಾರಿಸಿಕೊಳ್ಳಲು ಅದು ನೆರವು ನೀಡುವ ಜತೆಗೆ ತೀವ್ರ ಅಸ್ವಸ್ಥಗೊಂಡ ರೋಗಿಗಳನ್ನೂ ಸಾವಿನ ದವಡೆಯಿಂದ ಪಾರು ಮಾಡಬಲ್ಲದು," ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇಂಟಿಗ್ರೇಟಿವ್ ಮೆಡಿಸಿನ್‌ನ ನಿರ್ದೇಶಕ ರಾಮ್ ವಿಶ್ವಕರ್ಮ ಅವರು ಅಭಿಪ್ರಾಯಪಟ್ಟಿದ್ದಾರೆ.
from India & World News in Kannada | VK Polls https://ift.tt/3cYrf8y