ಸಿಂದಗಿ ಕ್ಷೇತ್ರ ಕಳೆದುಕೊಂಡ ಜೆಡಿಎಸ್: ಎಚ್ಡಿಕೆ ಬೆವರಿಗೆ, ನಾಜಿಯಾ ಕಣ್ಣೀರಿಗೆ ಬೆಲೆ ಕೊಡದ ಮತದಾರ..

ಹಾವೇರಿ ಜಿಲ್ಲೆ ಹಾನಗಲ್ ಹಾಗೂ ವಿಜಯಪುರ ಜಿಲ್ಲೆ ಎರಡೂ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲೂ ಹೀನಾಯ ಪ್ರದರ್ಶನ ನೀಡಿದೆ. ಉಪ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ತೆನೆ ಹೊತ್ತ ಮಹಿಳೆ ಮಾಡಿದ ತಂತ್ರಗಳೆಲ್ಲವೂ ವಿಫಲವಾಗಿವೆ. ಉಪ ಚುನಾವಣೆಯಿಂದಾಗಿ ಜೆಡಿಎಸ್‌ ತೆಕ್ಕೆಯಿಂದ ಮತ್ತೊಂದು ಕ್ಷೇತ್ರ ಕೈಜಾರಿದಂತಾಗಿದೆ. ಈ ರೀತಿ ಜೆಡಿಎಸ್‌ ತೆಕ್ಕೆಯಿಂದ ಜಾರಿದ ಸಿಂದಗಿ ಕ್ಷೇತ್ರದಲ್ಲಿ ಜೆಡಿಎಸ್ ಸೋಲಿಗೆ ಕಾರಣವಾದ ಅಂಶಗಳೇನು ಅನ್ನೋದ್ರ ವಿವರ ಇಲ್ಲಿದೆ: ನಾಜಿಯಾಗೆ ಇಲ್ಲ ಮತದಾರರ ಒಲವು ಸಿಂದಗಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿ ಮತದಾರರು ಇರುವ ಕಾರಣಕ್ಕೆ ಯುವ ಮಹಿಳಾ ಮುಸ್ಲಿಂ ಅಭ್ಯರ್ಥಿ ನಾಜಿಯಾ ಶಕೀಲ್‌ ಅವರಿಗೆ ಜೆಡಿಎಸ್ ಟಿಕೆಟ್ ನೀಡಿತ್ತು. ಉತ್ತರ ಕರ್ನಾಟಕಕ್ಕೆ ಜೆಡಿಎಸ್‌ ನೀಡಿದ ಕೊಡುಗೆಯನ್ನೇ ಬಿಂಬಿಸಿ ಚುನಾವಣಾ ಪ್ರಚಾರ ಕಣದಲ್ಲಿ ಜೆಡಿಎಸ್ ಅಬ್ಬರಿಸಿತ್ತು. ಮನಗೊಳಿಯವರು ಜೆಡಿಎಸ್ ಶಾಸಕರಾಗಿ, ಸಚಿವರಾಗಿ ಮಾಡಿದ್ದ ಅಭಿವೃದ್ಧಿ ಕಾರ್ಯಗಳೇ ನಾಜಿಯಾಗೆ ವರವಾಗಲಿದೆ ಎಂಬುದು ಜೆಡಿಎಸ್ ನಂಬಿಕೆಯಾಗಿತ್ತು. ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ಮಾಡಿದ್ದ ಮಾಜಿ ಸಿಎಂ ಎಚ್ಡಿಕೆ, ನಾಜಿಯಾ ಪರ ಮತ ಕೇಳುವ ಜೊತೆಯಲ್ಲೇ ಆರ್‌.ಎಸ್‌.ಎಸ್., ಬಿಜೆಪಿ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದ್ದರು. ಜೊತೆಯಲ್ಲೇ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದು ಏಕೆ ಎಂದು ಪ್ರಶ್ನಿಸಿದ್ದ ಕಾಂಗ್ರೆಸ್ ವಿರುದ್ಧವೂ ಬಹಿರಂಗ ಸಮರ ಸಾರಿದ್ದರು. ರೇವಣ್ಣ, ಪ್ರಜ್ವಲ್ ಕೂಡಾ ಆಗಾಗ ಪ್ರಚಾರ ಕಣದಲ್ಲಿ ಕಾಣಸಿಕ್ಕರು. ಪ್ರಚಾರದ ಅಂತಿಮ ಘಟ್ಟದಲ್ಲಿ ಮಾಜಿ ಪ್ರಧಾನಿ ದೇವೇಗೌಡರೂ ನಾಜಿಯಾ ಪರ ಮತ ಯಾಚನೆ ಮಾಡಿದ್ದರು. ನಾಜಿಯಾ ಅವರ ಮಾವ ಚುನಾವಣೆಗೆ ಕೆಲ ದಿನ ಮುನ್ನ ನಿಧನರಾಗಿದ್ದೂ ಪ್ರಚಾರ ಕಣದಲ್ಲಿ ಸದ್ದು ಮಾಡಿತ್ತು. ನಾಜಿಯಾ ಅವರು ತಮ್ಮ ಅತ್ತೆಯವರ ಜೊತೆ ಸೇರಿ ಕಣ್ಣೀರಿಟ್ಟು ಮತ ಯಾಚಿಸಿದ್ದರು. ಆದ್ರೆ, ಸಿಂದಗಿಯಲ್ಲಿ ಜೆಡಿಎಸ್‌ಗೆ ಭದ್ರ ನೆಲೆ ಇಲ್ಲ ಅನ್ನೋದನ್ನು ಚುನಾವಣಾ ಫಲಿತಾಂಶ ಸಾಬೀತುಪಡಿಸಿದೆ. ಕೇವಲ ಮನಗೊಳಿ ಅವರ ವೈಯಕ್ತಿಕ ಪ್ರಭಾವದಿಂದ ಸಿಂದಗಿಯಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಜೆಡಿಎಸ್ ಕೇವಲ 4 ಸಾವಿರ ಚಿಲ್ಲರೆ ಮತಗಳಿಗೆ ತೃಪ್ತಿಪಡುವಂತಾಗಿದೆ. ಈ ಅಖಾಡದಲ್ಲಿ ಏನಿದ್ದರೂ ನೇರಾನೇರ ಹಣಾಹಣಿ ಇದ್ದದ್ದು ಬಿಜೆಪಿ-ಕಾಂಗ್ರೆಸ್ ನಡುವೆ. ಈ ಹಗ್ಗಜಗ್ಗಾಟದಲ್ಲಿ ಅಂತಿಮವಾಗಿ ಗೆಲುವು ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಅವರಿಗೆ ಒಲಿದಿದೆ. ಜೊತೆಯಲ್ಲೇ ನಾಜಿಯಾ ಶಕೀಲ್‌ಗೆ ರಾಜಕೀಯ ಅನುಭವ ಇಲ್ಲದೇ ಇರುವುದೂ ಕೂಡಾ ಜೆಡಿಎಸ್ ಸೋಲಿನ ಪ್ರಮುಖ ಫ್ಯಾಕ್ಟರ್ ಎನ್ನಬಹುದು. ಅಲ್ಪಸಂಖ್ಯಾತ ಮತಗಳನ್ನಷ್ಟೇ ಜೆಡಿಎಸ್‌ ನೆಚ್ಚಿಕೊಂಡಿತ್ತು. ಹಾಗೆ ನೋಡಿದ್ರೆ ಇದೇ ಮತಗಳು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳೂ ಕೂಡಾ..! ಹೀಗಾಗಿ, ಮತ ವಿಭಜನೆ ಉಂಟಾದ ಕಾರಣ ಜೆಡಿಎಸ್‌ ಹೀನಾಯವಾಗಿ ಸೋಲುಂಡಿದೆ. ಪ್ರಚಾರ ಕಣದಲ್ಲಿ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರ ಎದುರಿಗೆ ಅತ್ತೆ - ಸೊಸೆ ಕಣ್ಣೀರಿಟ್ಟರೂ ಮತದಾರನ ಮನಸ್ಸು ಕರಗಿಲ್ಲ ಅನ್ನೋದು ಚುನಾವಣಾ ಫಲಿತಾಂಶದಿಂದ ದೃಢಪಟ್ಟಿದೆ.


from India & World News in Kannada | VK Polls https://ift.tt/3jZETO5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...