ಕೊಹ್ಲಿಗೆ ಸಡ್ಡು ಹೊಡೆದು ವಿಶ್ವ ದಾಖಲೆಯತ್ತ ಕಾಲಿಟ್ಟ ರಿಝ್ವಾನ್‌!

ಅಬುಧಾಬಿ: ಟಿ20 ಕ್ರಿಕೆಟ್‌ನಲ್ಲಿ ಅದ್ಭುತ ಲಯದಲ್ಲಿರುವ ತಂಡದ ಯುವ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ವಿಶೇಷ ವಿಶ್ವ ದಾಖಲೆ ನಿರ್ಮಿಸಲು ಇನ್ನು ಕೇವಲ 5 ರನ್‌ಗಳನ್ನು ಗಳಿಸಬೇಕಿದೆ. ಯುಎಇ ಮತ್ತು ಒಮಾನ್‌ ಆತಿಥ್ಯದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಂಗಳವಾರ ನಡೆದ ಸೂಪರ್‌ 12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಪಾಕ್‌ ಪರ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡಿದ ರಿಝ್ವಾನ್‌, 50 ಎಸೆತಗಳಲ್ಲಿ ಅಜೇಯ 79 ರನ್‌ಗಳನ್ನು ಸಿಡಿಸಿ ತಂಡಕ್ಕೆ 45 ರನ್‌ಗಳ ಭರ್ಜರಿ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ತಮ್ಮ ಸ್ಫೋಟಕ ಇನಿಂಗ್ಸ್‌ನಲ್ಲಿ 8 ಫೋರ್‌ ಮತ್ತು 4 ಸಿಕ್ಸರ್‌ ಸಿಡಿಸಿದ ರಿಝ್ವಾನ್‌ ಟೂರ್ನಿಯಲ್ಲಿ ತಮ್ಮ ಎರಡನೇ ಅರ್ಧಶತಕ ದಾಖಲಿಸಿದರು. ಅಂದಹಾಗೆ ಈ ವರ್ಷ ಟಿ20 ಕ್ರಿಕೆಟ್‌ನಲ್ಲಿ ವೃತ್ತಿಬದುಕಿನ ಶ್ರೇಷ್ಠ ಪ್ರದರ್ಶನ ನೀಡಿರುವ ರಿಝ್ವಾನ್‌, ಒಂದೇ ವರ್ಷದದಲ್ಲಿ ಅತಿ ಹೆಚ್ಚು ಟಿ20 ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ (1614) ಅವರಿಗೆ ಸಡ್ಡು ಹೊಡೆದಿದ್ದಾರೆ. ಬಲಗೈ ಬ್ಯಾಟ್ಸ್‌ಮನ್‌ ಇನ್ನೈದು ರನ್‌ ಗಳಿಸಿದರೆ ಸ್ವಘೋಷಿತ ಯೂನಿವರ್ಸ್‌ ಬಾಸ್‌ (1665) ಅವರ ವಿಶ್ವ ದಾಖಲೆ ಅಳಿಸಿಹಾಕಲಿದ್ದಾರೆ. ಸ್ಕಾಟ್ಲೆಂಡ್‌ ವಿರುದ್ಧದ ಮುಂದಿನ ಪಂದ್ಯದಲ್ಲಿ ರಿಝ್ವಾನ್‌ ಈ ದಾಖಲೆ ತಮ್ಮದಾಗಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. 2016ರಲ್ಲಿ ತಮ್ಮ ವೃತ್ತಿ ಬದುಕಿನ ಶ್ರೇಷ್ಠ ಲಯದಲ್ಲಿದ್ದ ವಿರಾಟ್‌ ಕೊಹ್ಲಿ, ಐಪಿಎಲ್‌ನಲ್ಲಿ 950ಕ್ಕೂ ಹೆಚ್ಚು ರನ್‌ ಗಳಿಸಿ ಆ ವರ್ಷ ಟಿ20 ಕ್ರಿಕೆಟ್‌ನಲ್ಲಿ ಒಟ್ಟು 1614 ರನ್‌ಗಳನ್ನು ಬಾರಿಸಿದ್ದರು. ಇದಕ್ಕೂ ಮೊದಲು 2015ರಲ್ಲಿ ವೆಸ್ಟ್‌ ಇಂಡೀಸ್‌ನ ದೈತ್ಯ ಎಡಗೈ ಬ್ಯಾಟ್ಸ್‌ಮನ್ 1665 ರನ್‌ಗಳನ್ನು ಬಾರಿಸಿ ವಿಶ್ವ ದಾಖಲೆ ಬರೆದಿದ್ದರು. ದಾಖಲೆಯ ಓಪನಿಂಗ್‌ ಜೊತೆಯಾಟನಮಿಬಿಯಾ ವಿರುದ್ಧದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ತಂಡದ ಪರ ಮೊಹಮ್ಮದ್ ರಿಝ್ವಾನ್‌ (79*) ಮತ್ತು ನಾಯಕ ಬಾಬರ್‌ ಆಝಮ್‌ (70) ಮೊದಲ ವಿಕೆಟ್‌ಗೆ 113 ರನ್‌ಗಳ ಜೊತೆಯಾಟವಾಡಿದರು. ಇದು ಬಾಬರ್‌-ರಿಝ್ವಾನ್‌ ಜೋಡಿ ಟಿ20-ಐನಲ್ಲಿ ಮೊದಲ ವಿಕೆಟ್‌ಗೆ ಆಡಿದ 5ನೇ ಶತಕದ ಜೊತೆಯಾಟವಾಗಿದೆ. ಈ ಮೂಲಕ ಭಾರತದ ರೋಹಿತ್‌ ಶರ್ಮಾ ಮತ್ತು ಶಿಖರ್‌ ಧವನ್‌ ಅವರ ಹೆಸರಲ್ಲಿದ್ದ ಮೊದಲ ವಿಕೆಟ್‌ಗೆ 4 ಶತಕಗಳ ಜೊತೆಯಾಟದ ವಿಶ್ವ ದಾಖಲೆಯನ್ನು ಬಾಬರ್‌-ರಿಝ್ವಾನ್‌ ಜೋಡಿ ಅಳಿಸಿಹಾಕಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ಗೆ ಗರಿಷ್ಠ ರನ್‌ಗಳ (152*) ವಿಶ್ವ ದಾಖಲೆಯ ಜೊತೆಯಾಟವೂ ಬಾಬರ್-ರಿಝ್ವಾನ್‌ ಹೆಸರಲ್ಲಿದೆ. ಸೂಪರ್‌ 12 ಹಂತದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಎದುರು ಪಾಕ್‌ನ ಆರಂಭಿಕ ಬ್ಯಾಟ್ಸ್‌ಮನ್‌ಗಳ ಈ ವಿಶ್ವ ದಾಖಲೆ ನಿರ್ಮಿಸಿದ್ದರು. ಪಾಕಿಸ್ತಾನ-ನಮಿಬಿಯಾ ಪಂದ್ಯದ ಪಾಕಿಸ್ತಾನ: 20 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 189 ರನ್‌ (ಬಾಬರ್‌ ಆಝಮ್‌ 70, ಮೊಹಮ್ಮದ್‌ ರಿಝ್ವಾನ್‌ 79*, ಮೊಹಮ್ಮದ್‌ ಹಫೀಝ್ 32*; ಡೇವಿಡ್‌ ವೀಸ 30ಕ್ಕೆ 1, ಜಾನ್‌ ಫ್ರೈಲಿಂಕ್ 31ಕ್ಕೆ 1). ನಮಿಬಿಯಾ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 144 ರನ್‌ (ಸ್ಟೆಫನ್ ಬಾರ್ಡ್‌ 29, ಕ್ರೇಗ್‌ ವಿಲಿಯಮ್ಸ್‌ 40, ಡೇವಿಡ್‌ ವೀಸ 43*, ಹಸನ್‌ ಅಲಿ 22ಕ್ಕೆ 1, ಇಮಾದ್‌ ವಾಸಿಮ್ 13ಕ್ಕೆ 1, ಹ್ಯಾರಿಸ್‌ ರೌಫ್ 25ಕ್ಕೆ 1, ಶದಾಬ್ ಖಾನ್ 35ಕ್ಕೆ 1). ಪಂದ್ಯಶ್ರೇಷ್ಠ: ಮೊಹಮ್ಮದ್‌ ರಿಝ್ವಾನ್‌


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3GKdBoB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...