ಗ್ಲಾಸ್ಗೋ: ಇಸ್ರೇಲ್‌ನಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿ ಎಂದು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಹೇಳಿದ್ದಾರೆ. ಅಲ್ಲದೇ ನಮ್ಮ ಪಕ್ಷಕ್ಕೆ ಮೋದಿ ಸೇರ್ಪಡೆಯಾಗಬೇಕು ಎಂದೂ ಬೆನೆಟ್ ಆಹ್ವಾನ ನೀಡಿದ್ದಾರೆ. ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಜಾಗತಿಕ ಹವಾಮಾನ ಬದಲಾವಣೆ(COP26) ಸಮ್ಮೇಳನದ ವೇಳೆ, ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಅವರ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದ ಬೆನೆಟ್, ಮೋದಿ ಇಸ್ರೇಲ್‌ನಲ್ಲಿ ಅತ್ಯಂತ ಜನಪ್ರಿಯರಾಗಿರುವ ವ್ಯಕ್ತಿ. ಹೀಗಾಗಿ ನಾನು ಅವರನ್ನು ನಮ್ಮ ಪಕ್ಷ ಸೇರಿಕೊಳ್ಳುವಂತೆ ಆಹ್ವಾನ ನೀಡುತ್ತೇನೆ ಎಂದು ಹೇಳಿದರು. ನಫ್ತಾಲಿ ಬೆನೆಟ್ ಅವರ ಈ ಆಹ್ವಾನಕ್ಕೆ ಮುಗುಳ್ನಕ್ಕ ಪ್ರಧಾನಿ ಮೋದಿ, ಇಸ್ರೇಲ್ ಹಾಗೂ ಭಾರತದ ದ್ವಿಪಕ್ಷೀಯ ಸಂಬಂಧ ಐತಿಹಾಸಿಕವಾಗಿ ಘನಿಷ್ಠ ಮಟ್ಟವನ್ನು ತಲುಪಿದೆ ಎಂದು ಹೇಳಿದರು. ಇಸ್ರೇಲ್ ಮತ್ತು ಭಾರತದ ರಾಜತಾಂತ್ರಿಕ ಸಂಬಂಧ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ. ಪ್ರಾಚೀನ ನಾಗರಿಕತೆಗಳ ಇತಿಹಾಸ ಹೊಂದಿರುವ ಎರಡೂ ರಾಷ್ಟ್ರಗಳು, ಜಾಗತಿಕವಾಗಿ ಹಲವು ಸಾಮಾನ್ಯ ಆಸಕ್ತಿಗಳನ್ನು ಹೊಂದಿವೆ ಎಂದು ನಫ್ತಾಲಿ ಬೆನೆಟ್ ಈ ವೇಳೆ ನುಡಿದರು. ಪ್ರಧಾನಿ ಮೋದಿ ಭಾರತ-ಇಸ್ರೇಲ್ ನಡುವಿನ ಸಂಬಂಧ ಗಟ್ಟಿಗೊಳ್ಳಲು ಸಾಕಷ್ಟು ಶ್ರಮಿಸಿದ್ದಾರೆ. ಇದೇ ಕಾರಣಕ್ಕೆ ಇಸ್ರೇಲ್‌ನ ಜನ ಅವರನ್ನು ಬಹಳ ಪ್ರೀತಿಸುತ್ತಾರೆ. ಮೋದಿ ಇಸ್ರೇಲ್‌ನ ಅತ್ಯಂತ ಜನಪ್ರಿಯ ವ್ಯಕ್ತಿ ಎಂದು ನಫ್ತಾಲಿ ಬೆನೆಟ್ ನುಡಿದರು.
from India & World News in Kannada | VK Polls https://ift.tt/31qv19O