ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಹಲವು ಕಡೆಗಳಲ್ಲಿ ಮರಗಳು ಧರೆಗೆ ಉರುಳಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಗೋಡೆ ಕುಸಿತದಿಂದಾಗಿ ಕಾರುಗಳು ಕೂಡಾ ಜಖಂಗೊಂಡಿವೆ. ಕೋರಮಂಗಲ 6 ನೇ ಬ್ಲಾಕ್‌ನಲ್ಲಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದೆ. ಇದರ ಪರಿಣಾಮ ರಾತ್ರಿ ಇಡೀ ಅಲ್ಲಿಯ ನಿವಾಸಿಗಳು ಪರದಾಟ ನಡೆಸುವ ಸ್ಥಿತಿ ನಿರ್ಮಾನವಾಗಿದೆ. ಇದೀಗ ಕೊಳಚೆ ನೀರನ್ನು ಪೌರಕಾರ್ಮಿಕರ ಸಹಾಯದಿಂದ ಸ್ವಚ್ಛ ಮಾಡಲಾಗುತ್ತಿದೆ. ಮಳೆಯಿಂದಾಗಿ ಆರ್. ಆರ್ ನಗರ, ಮಲ್ಲೇಂಶ್ವರಂನಲ್ಲೂ ಮರಗಳು ಧರೆಗುರುಳಿವೆ. ನಾಗರಭಾವಿ ಏರಿಯಾದಲ್ಲೂ ಅವಾಂತರ ಸೃಷ್ಟಿಯಾಗಿದ್ದು ಜನರು ಪರದಾಡುವಂತಾಗಿದೆ. ಎಚ್‌ಎಎಲ್ ರಮೇಶ್ ನಗರದ ಗೋಡೆ ಕುಸಿತ ಉಂಟಾಗಿದೆ. ಮಹದೇವಪುರದಲ್ಲಿ 10 ಅಡಿ ಕಾಪೌಂಡ್ ಕುಸಿದಿದೆ. ಜೆಸಿ ನಗರದಲ್ಲೂ ಹಲವು ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ನೀರಿನಲ್ಲಿ ಅಂಗಡಿಯಲ್ಲಿದ್ದ ವಸ್ತುಗಳು ತೇಲಾಡುತ್ತಿವೆ. ಕೆಂಚೇನಹಳ್ಳಿಯಲ್ಲಿ ರಾಜಕಾಲುವೆ ನೀರು ಕೊಟ್ಟಿಗೆಗೆ ನುಗ್ಗಿ 10 ಜಾನುವಾರುಗಳು ಸಾವನ್ನಪ್ಪಿವೆ. ಹೊಯ್ಸಲ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಜಯನಗರದ ಎರಡನೇ ಹಂತದ ಅಪೋಲೋ ಅಸ್ಪತ್ರೆಯ ಹತ್ತಿರದಲ್ಲಿ ಕೊಂಬೆ ಬಿಂದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಬೆಳಗ್ಗೆ 4.30 ಗಂಟೆಗೆ ಅಂಗಡಿ ತೆರೆಯಲು ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಎಲ್ಲೆಲ್ಲಿ ಎಷ್ಟೆಷ್ಟು ಪ್ರಮಾಣದ ಮಳೆ ಜ್ಞಾನ ಭಾರತಿ ವಾರ್ಡ್ - 98 ಮಿ.ಮೀ.ಮಳೆ ಪ್ರಮಾಣ ನಾಗರಭಾವಿ - 91 ಮಿ.ಮೀ ಮಳೆ ಪ್ರಮಾಣ ಹಂಪಿ ನಗರ - 90 ಮಿ.ಮೀ ಮಳೆ ನಂದಿನಿ ಲೇಔಟ್ - 79 ಮಿ.ಮೀ ಮಳೆ ಹೆಗ್ಗನಹಳ್ಳಿ - 67.5 ಮೀ.ಮೀ ಮಳೆ ಮಾರುತಿ ಮಂದಿರ - 64.5 ಮೀ.ಮಿ ಮಳೆ ವಿ.ವಿ.ಪುರಂ - 58.5 ಮೀ.ಮಿ ಮಳೆ ಆರ್.ಆರ್.ನಗರ - 53.5 ಮೀ.ಮಿ ಮಳೆ ದಯಾನಂದ ನಗರ - 48.5 ಮೀ.ಮಿ ಮಳೆ ಗೋಡೆ ಕುಸಿತ ಭಾರೀ ಮಳೆಯಿಂದಾಗಿ ಹೆಚ್.ಎ.ಎಲ್ ಬಳಿಯ ರಮೇಶ್ ನಗರದಲ್ಲಿ ಗೋಡೆ ಕುಸಿತ ಉಂಟಾಗಿದೆ. ಹೆಚ್.ಎ.ಎಲ್ ಸಂಸ್ಥೆಗೆ ಸೇರಿದ 12 ಅಡಿ ಎತ್ತರದ ಸುಮಾರು 100 ಮೀಟರ್ ಉದ್ದದ ಗೋಡೆ ಕುಸಿತ ಉಂಟಾಗಿದೆ. ಪರಿಣಾಮ ಗೋಡೆ ಬದಿಯಲ್ಲಿ ನಿಲ್ಲಿಸಿದ್ದ 10 ಕ್ಕೂ ಹೆಚ್ಚು ವಾಹನ ಜಖಂಗೊಂಡಿವೆ. ಆಟೋ ಕಾರು ಬೈಕ್ ಸೇರಿ 10 ಕ್ಕೂ ಹೆಚ್ಚು ವಾಹನ ಜಖಂಗೊಂಡಿದ್ದು, ಸ್ಥಳಕ್ಕೆ ಹೆಚ್.ಎ.ಎಲ್ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.
from India & World News in Kannada | VK Polls https://ift.tt/3Fdcz3V