ಸಂಜಯ ಪಾಟೀಲ ಕೂಡಲೇ ಕ್ಷಮೆ ಕೇಳಬೇಕು: ಲಿಂಗಾಯತ ಪಂಚಮಸಾಲಿ ಸಮಾಜ ಒತ್ತಾಯ

ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಕುರಿತು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಂಜಯ ಪಾಟೀಲ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಲಿಂಗಾಯತ ಪಂಚಮಸಾಲಿ ಸಮಾಜ ಖಂಡಿಸುತ್ತದೆ. ಅಸಹನೀಯ ಹೇಳಿಕೆ ನೀಡಿರುವ ಸಂಜಯ ಪಾಟೀಲ ಸಮಾಜದ ಕ್ಷಮೆ ಕೇಳಬೇಕು ಒಂದು ಲಿಂಗಾಯತ ಪಂಚಮಸಾಲಿ ಸಮಾಜ ಒತ್ತಾಯಿಸಿದೆ. ಭಾನುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ‌ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಆರ್.ಕೆ ಪಾಟೀಲ ಮಾತನಾಡಿದರು. ಮಾಜಿ ಶಾಸಕ ಸಂಜಯ ಪಾಟೀಲ ಅವರು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ರಾತ್ರಿ ರಾಜಕಾರಣ ಮಾಡಿಯೇ ಗೆದ್ದಿರೋದು ಎಂದು ಅಸಹನೀಯ ಶಬ್ದ ಬಳಸಿ ಅವಮಾನಿಸಿದ್ದಾರೆ. ರಾಜಕೀಯವಾಗಿ ಏನೇ ವೈರುಧ್ಯಗಳಿದ್ದರೂ ವೈಯಕ್ತಿಕವಾಗಿ ನಿಂದನೆ ರೂಪದಲ್ಲಿ ಹೇಳಿಕೆ ನೀಡಿರುವುದು ಇಡೀ ಸಮಾಜಕ್ಕೆ ಮಾಡಿದ ಅಪಮಾನ ಎಂದರು. ಅಲ್ಲದೇ ಇದು ಪುನಾವರ್ತನೆಯಾಗಬಾರದು. ಇಲ್ಲದಿದ್ದರೆ ರಾಜ್ಯವಿಡೀ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಬಸವ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಖಿರಾಯಿ ಮಾತನಾಡಿ, ರಾಜಕೀಯ ದ್ವೇಷಕ್ಕಾಗಿ ಸಂಜಯ ಪಾಟೀಲ ಹೀಗೆ ವೈಯಕ್ತಿಕ ಟೀಕೆಗೆ ಇಳಿಯಬಾರದು. ಒಬ್ಬ ಮಹಿಳೆಗೆ ಅಗೌರವ ತೋರಿದ ಸಂಜಯ ಪಾಟೀಲ ಅವರನ್ನು ಪಕ್ಷದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ನಗರ ಘಟಕದ ಅಧ್ಯಕ್ಷ ರಾಜು ಮಗದುಮ್ಮ, ವಕೀಲ ಶಿವಪುತ್ರ ಫಡಗಲ್ಲ, ಧರೆಪ್ಪ ಠಕ್ಕನ್ನವರ, ರಾಮನಗೌಡ ಪಾಟೀಲ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು. ಏನಿದು ?ಲಕ್ಷ್ಮಿ ಹೆಬ್ಬಾಳ್ಕರ್ಗೆ ನೈಟ್ ಪಾಲಿಟಿಕ್ಸ್ ಚೆನ್ನಾಗಿ ಗೊತ್ತು ಎಂದು ಮಾಜಿ ಬಿಜೆಪಿ ಶಾಸಕ ಸಂಜಯ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಸ್ತೆ ಗುಂಡಿ ರಾಜಕೀಯ ವಿಚಾರವಾಗಿ ಮಾತನಾಡುವ ವೇಳೆ ಅವರು ಈ ಹೇಳಿಕೆ ನೀಡಿ ನಾಲಿಗೆ ಹರಿಬಿಟ್ಟಿದ್ದರು. ಬಿಜೆಪಿಯವರಿಗೆ ನೈಟ್ ಪಾಲಿಟಿಕ್ಸ್ ಮಾಡಿ ಗೊತ್ತಿಲ್ಲ. ಕಾಂಗ್ರೆಸ್ನವರು ನೈಟ್ ಪಾಲಿಟಿಕ್ಸ್ ಮಾಡ್ತಾರೆ. ಲಕ್ಷ್ಮಿ ಹೆಬ್ಬಾಳ್ಕರ್ಗೆ ನೈಟ್ ಪೊಲಿಟಿಕ್ಸ್ ಚೆನ್ನಾಗಿ ಗೊತ್ತು. ಹೀಗಾಗಿ ನೈಟ್ ಪೊಲಿಟಿಕ್ಸ್ ಮಾಡಿ ಗೆದ್ದು ಬಂದಿದ್ದಾರೆ. ಜನರಿಗೆ ಸುಳ್ಳು ಭರವಸೆ ಕೊಟ್ಟು ಗೆದ್ದು ಬಂದಿದ್ದಾರೆ. ಈಗ ಭಾವನಾತ್ಮಕ ಪಾಲಿಟಿಕ್ಸ್ ಮಾಡುತ್ತಿದ್ದಾರೆ ಎಂದು ಸಂಜಯ ಪಾಟೀಲ್ ತಮ್ಮ ನಾಲಿಗೆ ಹರಿಯಬಿಟ್ಟಿದ್ದರು.


from India & World News in Kannada | VK Polls https://ift.tt/3Fge15p

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...