ರಾಹುಲ್‌ ಅಲ್ಲ, ಈತನಿಗೆ ಬೌಲ್‌ ಮಾಡುವುದು ತುಂಬಾನೇ ಕಷ್ಟವೆಂದ ಚಹಲ್‌!

ಶಾರ್ಜಾ: ಹದಿನಾಲ್ಕನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 48ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್ ತಂಡದ ಮಯಾಂಕ್‌ ಅಗರ್ವಾಲ್‌ಗೆ ಬೌಲ್‌ ಮಾಡುವುದು ತುಂಬಾ ಕಠಿಣವಾಯಿತು ಎಂದು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್‌ ತಿಳಿಸಿದ್ದಾರೆ. ಭಾನುವಾರ ಇಲ್ಲಿನ ಶಾರ್ಜಾ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 164 ರನ್‌ ಗಳಿಸಿತ್ತು. ಆ ಮೂಲಕ ಪಂಜಾಬ್‌ ಕಿಂಗ್ಸ್‌ಗೆ 165 ರನ್ ಕಠಿಣ ಗುರಿ ನೀಡಿತ್ತು. ನಂತರ ಗುರಿ ಹಿಂಬಾಲಿಸಿದ್ದ ಪಂಜಾಬ್‌ ಕಿಂಗ್ಸ್ ತಂಡಕ್ಕೆ ಓಪನಿಂಗ್‌ ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್‌ ರಾಹುಲ್‌ ಹಾಗೂ ಮೊದಲನೇ ವಿಕೆಟ್‌ಗೆ 91 ರನ್‌ ಗಳಿಸುವ ಮೂಲಕ ಭರ್ಜರಿ ಆರಂಭ ತಂದುಕೊಟ್ಟಿದ್ದರು. ಈ ವೇಳೆ ನಾಯಕ ವಿರಾಟ್‌ ಕೊಹ್ಲಿ ತಮಗೆ ನೀಡಿದ್ದ ಸಲಹೆಯನ್ನು ಯುಜ್ವೇಂದ್ರ ಚಹಲ್ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಬಹಿರಂಗಪಡಿಸಿದ್ದಾರೆ. "ಈ ವಿಕೆಟ್‌ನಲ್ಲಿ 160 ರನ್‌ ಅತ್ಯಂತ ಒಳ್ಳೆಯ ಮೊತ್ತ. ಆರಂಭದಲ್ಲಿ ವಿಕೆಟ್‌ಗಳನ್ನು ಪಡೆದುಕೊಂಡರೆ, ಈ ಮೊತ್ತಕ್ಕೆ ಎದುರಾಳಿ ತಂಡವನ್ನು ನಿಯಂತ್ರಿಸಬಹುದೆಂದು ನಮಗೆ ತಿಳಿದಿತ್ತು. ಅದರಂತೆ ಮಧ್ಯಮ ಓವರ್‌ಗಳಲ್ಲಿ ವಿರಾಟ್‌ ಭಾಯ್‌, ವಿಕೆಟ್‌ ಪಡೆಯುವಂತೆ ಹೇಳಿದ್ದರು ಹಾಗೂ ಹೆಚ್ಚಿನ ಡಾಟ್‌ ಬಾಲ್‌ಗಳನ್ನು ಹಾಕುವಂತೆ ತಿಳಿಸಿದ್ದರು," ಎಂದು ಚಹಲ್‌ ಹೇಳಿದರು. ಮಯಾಂಕ್ ಅಗರ್ವಾಲ್‌ಗೆ ಬೌಲ್‌ ಮಾಡುವುದು ಸವಾಲು: ಚಹಲ್‌ ಪಂಜಾಬ್‌ ಕಿಂಗ್ಸ್ ಪರ ಅತ್ಯುತ್ತಮ ಬ್ಯಾಟ್‌ ಮಾಡಿದ ಮಯಾಂಕ್‌ ಅಗರ್ವಾಲ್‌ ಅರ್ಧಶತಕ ಸಿಡಿಸಿದರು. ಆದರೆ, ಅವರು ಪಂದ್ಯವನ್ನು ಮುಗಿಸಲು ಯುಜ್ವೇಂದ್ರ ಚಹಲ್ ಅವಕಾಶ ಮಾಡಿಕೊಡಲಿಲ್ಲ. ಇದು ಪಂದ್ಯಕ್ಕೆ ಟರ್ನಿಂಗ್‌ ಪಾಯಿಂಟ್‌ ಆಯಿತು. ಒಂಬತ್ತು ಇನಿಂಗ್ಸ್‌ಗಳಲ್ಲಿ ಮಯಾಂಕ್‌ ಅಗರ್ವಾಲ್‌ ಅವರನ್ನು ಚಹಲ್‌ ಔಟ್‌ ಮಾಡಿರುವುದು ಇದು ಐದನೇ ಬಾರಿ ಎನ್ನುವುದು ವಿಶೇಷ. "ಅವರು(ಮಯಾಂಕ್‌ ಅಗರ್ವಾಲ್‌) ಅದ್ಭುತ ಬ್ಯಾಟ್ಸ್‌ಮನ್‌. ಆತನಿಗೆ ಬೌಲ್‌ ಮಾಡುವುದು ಸವಾಲುದಾಯಕವಾಗಿರುತ್ತದೆ. ಹಾಗಾಗಿ, ಅವರಿಗೆ ಕೆಟ್ಟ ಎಸೆತಗಳನ್ನು ಹಾಕಬಾರದೆಂದು ಬಯಸಿದ್ದೆ. ಮಯಾಂಕ್‌ ಅವರಿಂದ ಸಾಧ್ಯವಾದರೆ, ಬೌಂಡರಿ ಸಿಡಿಸಬೇಕೆಂದು ನಾನು ಅಂದುಕೊಂಡಿದ್ದೆ. ಆದರೆ, 16ನೇ ಓವರ್‌ನಲ್ಲಿ ಅವರನ್ನು ಔಟ್‌ ಮಾಡಿದಾಗ ಪಂದ್ಯ ನಮ್ಮ ಕಡೆ ತಿರುಗಿತು," ಎಂದು ಹೇಳಿದರು. "ಕಳೆದ ಎರಡು ಪಂದ್ಯಗಳ ಬಳಿಕ ನಾವು ಅತ್ಯುತ್ತಮವಾಗಿ ಕಮ್‌ಬ್ಯಾಕ್‌ ಮಾಡಿದ್ದೇವೆ. ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಮೂರೂ ವಿಭಾಗಗಳಲ್ಲಿ ನಾವು ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದೇವೆ. ಆದರೆ, ಏಕಕಾಲದಲ್ಲಿ ಒಂದೇ ಒಂದು ಪಂದ್ಯದ ಮೇಲೆ ನಾವು ಗಮನ ಹರಿಸುತ್ತಿದ್ದೇವೆ," ಎಂದು ಯುಜ್ವೇಂದ್ರ ಚಹಲ್‌ ಹೇಳಿದ್ದಾರೆ. ಅಂದಹಾಗೆ ಭಾರತದಲ್ಲಿ ನಡೆದಿದ್ದ ಟೂರ್ನಿಯ ಮೊದಲ ಅವಧಿಯಲ್ಲಿ ಯುಜ್ವೇಂದ್ರ ಚಹಲ್‌ ಆಡಿದ್ದ 7 ಪಂದ್ಯಗಳಿಂದ 47.5ರ ಸರಾಸರಿಯಲ್ಲಿ ಕೇವಲ 4 ವಿಕೆಟ್‌ ಕಬಳಿಸಿದ್ದರು. ಆದರೆ, ಯುಎಇ ಚರಣದಲ್ಲಿ ಆಡಿದ ಐದು ಪಂದ್ಯಗಳಲ್ಲಿ ಚಹಲ್‌ 10.7ರ ಸರಾಸರಿಯಲ್ಲಿ 10 ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. 2020ರ ಐಪಿಎಲ್‌ ಟೂರ್ನಿಯಿಂದ ಇಲ್ಲಿಯವರೆಗೂ ಆರ್‌ಸಿಬಿ ಸ್ಪಿನ್ನರ್‌ ಯುಎಇಯಲ್ಲಿ 31 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2021ರ ಐಪಿಎಲ್‌ ಟೂರ್ನಿಯ ಯುಎಇ ಚರಣ ಆರಂಭಕ್ಕೂ ಮುನ್ನ ಯುಜ್ವೇಂದ್ರ ಚಹಲ್‌ ಅವರ ಫಾರ್ಮ್‌ ಸ್ಥಿರವಾಗಿ ಕಾಣಿಸದ ಕಾರಣ ಬಿಸಿಸಿಐ ಆಯ್ಕೆದಾರರು ಆರ್‌ಸಿಬಿ ಸ್ಪಿನ್ನರ್‌ ಅನ್ನು ಐಸಿಸಿ ಟಿ20 ವಿಶ್ವಕಪ್‌ ಭಾರತ ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ಆದರೆ, ಇದೀಗ ಚಹಲ್‌ ಫಾರ್ಮ್‌ ಅನ್ನು ನೋಡಿ ಆಯ್ಕೆದಾರರು ಅ.10 ರೊಳಗೆ ತಂಡದಲ್ಲಿ ಹಲವು ಬದಲಾವಣೆ ಮಾಡುವ ಸಾಧ್ಯತೆ ಇದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3BarPMi

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...