ರೈತರಿಗೆ ಅಡಕೆಗೆ ಪರ್ಯಾಯವಾಗಿ ಮೀನುಗಾರಿಕೆಗೆ ಹೆಚ್ಚಿನ ಉತ್ತೇಜನ; ಸಚಿವ ಎಸ್ ಅಂಗಾರ

ಕೊೖಲ: ಅಡಕೆ ಕೃಷಿ ಇವತ್ತು ಲಾಭದಾಯಕವಾಗಿದ್ದರೂ ಅಡಕೆಗೆ ಹಳದಿ ರೋಗ ಬಾಧಿಸಿ ಸಂಕಷ್ಟದಲ್ಲಿರುವ ರೈತರಿಗೆ ಅಡಕೆ ಬೆಳೆಗೆ ಪರ್ಯಾಯವಾಗಿ ಮೀನುಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದು ಬಂದರು, ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್‌.ಅಂಗಾರ ಹೇಳಿದರು. ಕೊೖಲ ಪಶು ಸಂಗೋಪನಾ ಕ್ಷೇತ್ರದಲ್ಲಿ ರಾಜ್ಯ ಸರಕಾರದ ಅಮೃತ ಸಿರಿ ಯೋಜನೆಯಲ್ಲಿ ಸುಳ್ಯ ಹಾಗೂ ಕಡಬ ತಾಲೂಕಿನ ಫಲನಾಭವಿಗಳಿಗೆ ಮಲೆನಾಡು ಗಿಡ್ಡ ತಳಿಯ ಹೆಣ್ಣು ಕರು ಹಾಗೂ ಗಡಸುಗಳನ್ನು ವಿತರಿಸಿ ಅವರು ಶುಕ್ರವಾರ ಮಾತನಾಡಿದರು. ನಮ್ಮ ಹಿರಿಯರು ನಡೆಸಿಕೊಂಡು ಬರುತ್ತಿದ್ದ ಆಹಾರ ಪದ್ಧತಿಯನ್ನು ನಾವು ಮರೆಯುತ್ತಿರುವುದರಿಂದ ಅರೋಗ್ಯವಂತ ಬದುಕಿನಿಂದ ವಿಮುಖರಾಗುತ್ತಿದ್ದೇವೆ. ಮಲೆನಾಡು ಗಿಡ್ಡ ತಳಿಯ ಹಸುಗಳಿಂದ ಪೌಷ್ಠಿಕಾಂಶಯುಕ್ತ ಹಾಲು ದೊರೆಯುತ್ತದೆ. ಆದ್ದರಿಂದ ಸರಕಾರ ಇದಕ್ಕೆ ಒತ್ತು ನೀಡಿ ಅಮೃತಸಿರಿ ಯೋಜನೆಯನ್ನು ಜಾರಿಗೊಳಿಸಿದೆ. ಮಾತ್ರವಲ್ಲ, ಸಾವಯವ ಕೃಷಿಗೂ ಹೆಚ್ಚು ಒತ್ತು ನೀಡುತ್ತಿದೆ ಎಂದು ಸಚಿವರು ಹೇಳಿದರು. ಮತ್ಸ್ಯ ಸಾಕಣೆಗೆ ಉತ್ತೇಜನ:ರೈತರು ಮತ್ಸ್ಯ ಸಾಕಣೆಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಸ್ಥಳೀಯ ತಳಿಯ ಮಡೆಂಜಿ ಹಾಗೂ ಮಲೆಜ್ಜಿ ಮೀನುಗಳ ಸಾಕಾಣೆಗೆ ಉತ್ತೇಜನ ನೀಡಲಾಗುವುದು. ಈ ಮೀನುಗಳು ಆರೋಗ್ಯಕ್ಕೆ ಪೂರಕವಾಗಿರುವುದರಿಂದ ಅದಕ್ಕೆ ಹೆಚ್ಚಿನ ಬೇಡಿಕೆ ಸಿಗಲಿದೆ.ಬೇಡಿಕೆ ಹೆಚ್ಚಾದಂತೆ ವಿದೇಶಕ್ಕೆ ರಫ್ತು ಮಾಡುವ ಉದೇಶ ಕೂಡಾ ಇದೆ. ಇದರಿಂದ ರೈತರು ಆರ್ಥಿಕವಾಗಿ ಸಬಲರಾಗುತ್ತಾರೆ ಎಂದು ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್‌.ಅಂಗಾರ ಹೇಳಿದರು.. ಕೊೖಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್‌ ಕುಮಾರ್‌ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಾಲ್ಕು ವರ್ಷ ಮಾರಾಟ ಮಾಡುವಂತಿಲ್ಲ: ಅಮೃತಸಿರಿ ಯೋಜನೆ ಸರಕಾರ ಒಂದು ಉತ್ತಮ ಯೋಜನೆಯಾಗಿದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೂರಕವೆಂಬಂತೆ ಮಲೆನಾಡು ಗಿಡ್ಡ ತಳಿಯ ಹಸುಗಳ ಸಾಕಾಣೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೂರಕವೆಂಬಂತೆ ಮಲೆನಾಡು ಗಿಡ್ಡ ತಳಿಯ ಹಸುಗಳ ಸಾಕಣೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗ್ರಾಮೀಣ ಭಾಗದ ರೈತರಿಗೆ 75 ಶೇ.ಸಬ್ಸಿಡಿಯಲ್ಲಿ ಹೆಣ್ಣು ಕರು ಹಾಗೂ ಗಡಸುಗಳನ್ನು ವಿತರಿಸಲಾಗುತ್ತಿದೆ. ಈ ಯೋಜನೆಯ ಸದುಪಯೋಗ ಆಗಬೇಕೆಂಬ ನಿಟ್ಟಿನಲ್ಲಿಇವುಗಳನ್ನು ಸಾಕಿ ಬೆಳೆಸಬೇಕೇ ಹೊರತು ಕನಿಷ್ಟ ನಾಲ್ಕು ವರ್ಷಗಳ ತನಕ ಮಾರಾಟ ಮಾಡುವಂತಿಲ್ಲ. ಹಾಗೆ ಮಾಡಿದಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಮಂಗಳೂರು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ. ಪ್ರಸನ್ನ ಕುಮಾರ್‌ ಹೇಳಿದರು. ಸುಳ್ಯ ಹಾಗೂ ಕಡಬ ತಾಲೂಕಿನ ಒಟ್ಟು ಇಪ್ಪತ್ತ ನಾಲ್ಕು ಫಲಾನುಭವಿಗಳಿಗೆ ಚೀಟಿ ಎತ್ತುವ ಮೂಲಕ ಕರು ಹಾಗೂ ಗಡಸುಗಳ ಆಯ್ಕೆಗೆ ಅವಕಾಶ ಮಾಡಿಕೊಡಲಾಯಿತು. ಆಯ್ಕೆ ಪ್ರಕ್ರಿಯೆಯನ್ನು ಕಡಬ ಪಶು ವೈದ್ಯಾಧಿಕಾರಿ ಡಾ.ಅಜಿತ್‌ ಹಾಗೂ ಡಾ.ನಿತಿನ್‌ ಪ್ರಭು ನಡೆಸಿಕೊಟ್ಟರು.


from India & World News in Kannada | VK Polls https://ift.tt/3onK5OU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...