19 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ ಬ್ಯಾಟ್‌ ಮೇಲೆ ದಿಗ್ಗಜನ ಹಸ್ತಾಕ್ಷರ ಪಡೆದ ಯಶಸ್ವಿ ಜೈಸ್ವಾಲ್‌!

ಅಬುಧಾಬಿ: ವಿರುದ್ಧದ ಹೈ ಸ್ಕೋರಿಂಗ್‌ ಪಂದ್ಯದಲ್ಲಿ ತಂಡಕ್ಕೆ ಮನಮೋಹಕ ಜಯ ತಂದ ಯುವ ಓಪನರ್‌ ಯಶಸ್ವಿ ಜೈಸ್ವಾಲ್‌ ಅವರಿಗೆ ವಿಶೇಷ ಉಡುಗೊರೆ ಒಂದು ಲಭ್ಯವಾಗಿದೆ. ಪಂದ್ಯದಲ್ಲಿ ಗೆಲುವಿಗೆ 190 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಸ್ಪೋಟಕ ಆರಂಭ ಕೊಟ್ಟ 19 ವರ್ಷದ ಯುವ ಎಡಗೈ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಅಂತಿಮವಾಗಿ 21 ಎಸೆತಗಳಲ್ಲಿ 50 ರನ್‌ಗಳೊಂದಿಗೆ ಜೈಸ್ವಾಲ್‌ ಇನಿಂಗ್ಸ್‌ ಅಂತ್ಯಗೊಂಡಿತು. ಪಂದ್ಯದ ಬಳಿಕ ಜೈಸ್ವಾಲ್‌ ತಮ್ಮ ಬ್ಯಾಟ್‌ ಮೇಲೆ ಸಿಎಸ್‌ಕೆ ಕ್ಯಾಪ್ಟನ್‌ ಅವರ ಹಸ್ತಾಕ್ಷರ ಪಡೆದುಕೊಂಡಿದ್ದಾರೆ. ಸಿಎಸ್‌ಕೆ ದಿಗ್ಗಜನ ಹಸ್ತಾಕ್ಷರ ಪಡೆದು ಬಹಳಾ ಖುಷಿಯಾಗಿದೆ ಎಂದು ಜೈಸ್ವಾಲ್‌ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಜೈಸ್ವಾಲ್‌ ಹೊರತಾಗಿ ಯುವ ಆಲ್‌ರೌಂಡರ್‌ ಶಿವಂ ದುಬೇ 42 ಎಸೆತಗಳಲ್ಲಿ 64 ರನ್‌ ಸಿಡಿಸುವ ಮೂಲಕ ರಾಯಲ್ಸ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ ತಂದರು. ಪರಿಣಾಮ ಅಂಕಪಟ್ಟಿಯಲ್ಲಿ ರಾಜಸ್ಥಾನ್‌ ತಂಡ 5ನೇ ಸ್ಥಾನಕ್ಕೇರಿದೆ. ಆದರೂ ತನ್ನ ಪಾಲಿನ ಬಾಕಿ ಉಳಿದ ಎರಡೂ ಪಂದ್ಯಗಳನ್ನು ಗೆದ್ದರಷ್ಟೇ ರಾಯಲ್ಸ್‌ಗೆ ಪ್ಲೇ ಆಫ್ಸ್‌ ಅರ್ಹತೆ ಲಭ್ಯವಾಗಲಿದೆ. "ಪಿಚ್‌ ಕಂಡು ಇಲ್ಲಿ ಬ್ಯಾಟಿಂಗ್‌ ಸುಲಭ ಅಂದುಕೊಂಡಿದ್ದೆ. ಆದರೆ, ಗೆಲ್ಲಲು 190 ರನ್‌ಗಳ ಗುರಿ ನಮ್ಮೆದುರಿತ್ತು. ಪಿಚ್‌ ಚೆನ್ನಾಗಿದೆ ಎಂಬುದು ಗೊತ್ತಿತ್ತು. ಕೆಟ್ಟ ಎಸೆತಗಳ ಎದುರು ರನ್‌ ಗಳಿಸುವ ಕಡೆಗಷ್ಟೇ ಗಮನ ನೀಡಿದ್ದೆ. ರನ್‌ ಚೇಸ್‌ ಮಾಡಲು ತಂಡಕ್ಕೆ ಉತ್ತಮ ಆರಂಭ ಕೊಡಬೇಕು ಎಂಬುದಷ್ಟೇ ನಮ್ಮ ಲೆಕ್ಕಾಚಾರವಾಗಿತ್ತು," ಎಂದು ಪಂದ್ಯದ ಬಳಿಕ ಮಾತನಾಡಿದ ಜೈಸ್ವಾಲ್‌ ಹೇಳಿಕೊಂಡಿದ್ದಾರೆ. "ಪಂದ್ಯದ ಬಳಿಕ ನನ್ನ ಬ್ಯಾಟ್‌ ಮೇಲೆ ಎಂಎಸ್‌ ಧೋನಿ ಹಸ್ತಾಕ್ಷರ ಪಡೆದುಕೊಂಡೆ. ಈ ಬಗ್ಗೆ ಬಹಳಾ ಖುಷಿಯಿದೆ," ಎಂದಿದ್ದಾರೆ. ಇದಕ್ಕೂ ಮುನ್ನ ಋತುರಾಜ್‌ ಗಾಯಕ್ವಾಡ್‌ ಅವರ ಸ್ಫೋಟಕ ಶತಕದ ಬಲದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ತನ್ನ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 189 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. "ನಾನು ಅಲ್ಲಿ ಬ್ಯಾಟ್‌ ಮಾಡಲು ಹೋದಾಗ ನಮ್ಮ ತಂಡ ಉತ್ತಮ ಸ್ಥಿತಿಯಲ್ಲಿತ್ತು. ಸ್ಫೋಟಕ ಆರಂಭ ಲಭ್ಯವಾಗಿತ್ತು. ಹೀಗಾಗಿ ನನ್ನ ಸ್ವಾಭಾವಿಕ ಆಟವನ್ನಾಡುವ ಪ್ರಯತ್ನ ಮಾತ್ರ ಮಾಡಿದೆ. ಸುಲಭವಾಗಿ ರನ್‌ ಚೇಸ್‌ ಮಾಡಲು ಸಾಧ್ಯವಾಯಿತು," ಎಂದು ದುಬೇ ಹೇಳಿಕೊಂಡಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ತಂಡ ಮಂಗಳವಾರ ಮುಂಬೈ ಇಂಡಿಯನ್ಸ್‌ ವಿರುದ್ಧ ಶಾರ್ಜಾ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಲಿದೆ. ಈ ಪಂದ್ಯ ಇತ್ತಂಡಗಳಿಗೆ ನಾಕ್‌ಔಟ್‌ ಮಹತ್ವ ಪಡೆದಿದೆ. ಸೋತ ತಂಡದ ಪ್ಲೇ ಆಫ್ಸ್‌ ಹಾದಿ ಸಂಪೂರ್ಣವಾಗಿ ಮುಚ್ಚಿಹೋಗಲಿದೆ. ಸಿಎಸ್‌ಕೆ-ಆರ್‌ಆರ್‌ ಪಂದ್ಯದ ಸಂಕ್ಷಿಪ್ತ ಸ್ಕೋರ್‌ ಚೆನ್ನೈ ಸೂಪರ್‌ ಕಿಂಗ್ಸ್‌: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 189 ರನ್ (ಋತುರಾಜ್ ಗಾಯಕ್ವಾಡ್ 101*, ಫಾಫ್ ಡು'ಪ್ಲೆಸಿಸ್‌ 25, ಮೊಯೀನ್ ಅಲಿ 21, ರವೀಂದ್ರ ಜಡೇಜಾ 32*; ರಾಹುಲ್ ತೆವಾಟಿಯಾ 39ಕ್ಕೆ 3). ರಾಜಸ್ಥಾನ್ ರಾಯಲ್ಸ್‌: 17.3 ಓವರ್‌ಗಳಲ್ಲಿ 3 ವಿಕೆಟ್‌ಗೆ 190 ರನ್ (ಎವಿನ್ ಲೂಯಿಸ್ 27, 50, ಸಂಜು ಸ್ಯಾಮ್ಸನ್ 28, ಶಿವಂ ದುಬೇ 64*; ಶಾರ್ದುಲ್ ಠಾಕೂರ್‌ 30ಕ್ಕೆ 2). ಪಂದ್ಯಶ್ರೇಷ್ಠ: ಋತುರಾಜ್ ಗಾಯಕ್ವಾಡ್


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2YiDqL6

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...