ಕಂಪ್ಲಿಯಲ್ಲಿ ದಾಳಿಂಬೆಗೆ ದುಂಡಾಣು ಅಂಗಮಾರಿ ಬಾಧೆ; ಎಕರೆಗೆ 10 ಟನ್‌ ಇಳುವರಿ!

ಕಂಪ್ಲಿ: ತಾಲೂಕಿನಲ್ಲಿ ಬೆಳೆಸಿದ ಬೆಳೆಗೆ ಕಳೆದ ಎರಡು ತಿಂಗಳಿಂದ ದುಂಡಾಣು ಅಂಗಮಾರಿ ರೋಗ ಕಾಣಿಸಿಕೊಂಡಿದ್ದು, ರೈತರಿಗೆ ನಷ್ಟ ಅನುಭವಿಸುವಂತಾಗಿದೆ. ಸ್ಥಳೀಯ ರೈತರು ಪಂಪ್‌ಸೆಟ್‌ ಆಧರಿತ ಕೃಷಿ ಭೂಮಿಯಲ್ಲಿ ಬಗ್ಗುವಾ, ಗಣೇಶ, ಕೇಸರ್‌, ಬೃಜುಲಾ ಸೇರಿ ನಾನಾ ತಳಿ ದಾಳಿಂಬೆಯನ್ನು ಸುಮಾರು 2500 ಎಕರೆ ಪ್ರದೇಶದಲ್ಲಿ ಬೆಳೆಸಿದ್ದು, ಈ ಪೈಕಿ ಬಗ್ಗುವಾ ತಳಿ ಹೆಚ್ಚಾಗಿದೆ. ಈ ಬೆಳೆ ನಾಟಿ ಮಾಡಿದ 18 ತಿಂಗಳ ಬಳಿಕ ಕಾಯಿ ಬಿಡುತ್ತವೆ. ನಂತರ ಕಾಯಿ ಕತ್ತರಿಸಿ ಮಾರಾಟ ಮಾಡಲಾಗುತ್ತದೆ. ಗಿಡ ಬೆಳೆಸಲು ಔಷಧ ಸಿಂಪರಣೆ, ಗೊಬ್ಬರ, ಕೃಷಿ ಚುಟುವಟಿಕೆ ಸೇರಿ ಎಕರೆಗೆ ಸಾವಿರಾರು ರೂ. ಖರ್ಚು ಮಾಡಲಾಗುತ್ತದೆ. ಸುಗ್ಗಿ ಹಂಗಾಮಿನಲ್ಲಿ ಎಕರೆಗೆ 10 ಟನ್‌ ದಾಳಿಂಬೆ ಇಳುವರಿ ಬರುತ್ತದೆ. ಆದರೆ ಕಳೆದ ಕೆಲ ತಿಂಗಳಿಂದ ರೋಗ ಕಾಣಿಸಿಕೊಂಡಿದ್ದು, ಗಿಡದ ಹೂವಿನಿಂದ ಹಿಡಿದು ಎಲೆ, ಕಾಂಡಕ್ಕೂ ರೋಗ ತಗುಲಿ ಕಾಯಿಗಳು ಗಿಡದಲ್ಲಿಯೇ ಒಡೆಯುತ್ತವೆ. ಅಳಿದುಳಿದ ಕಾಯಿ ಮೇಲೆ ಮಚ್ಚೆ ಕಾಣಿಸಿಕೊಳ್ಳುತ್ತವೆ. ಅಲ್ಲದೇ ಕಾಯಿ ಗಾತ್ರ ಚಿಕ್ಕದಾಗಿರುವುದರಿಂದ ಖರೀದಿದಾರರು ಕೊಳ್ಳುವುದಿಲ್ಲ ಎಂದು ಈ ಬೆಳೆ ಬೆಳೆಸಿದ ಮಂಡವ ಶ್ರೀಕಾಂತ್‌ ಹೇಳುತ್ತಾರೆ. ಸಾವಿರಾರು ರೂ. ವೆಚ್ಚ ವಾತಾವರಣ ವೈಪರೀತ್ಯದಿಂದ ದಾಳಿಂಬೆಗೆ ರೋಗ ಕಾಣಿಸಿದೆ. ಇದರ ನಿಯಂತ್ರಣಕ್ಕಾಗಿ ಔಷಧ ಸಿಂಪರಣೆಗಾಗಿ ಎಕರೆಗೆ ಸಾವಿರಾರು ರೂ. ವೆಚ್ಚ ಮಾಡಲಾಗಿದೆ. ಇಳುವರಿ ಕುಂಠಿತವಾಗಿದ್ದು, ನಾವು ನಷ್ಟ ಅನುಭವಿಸುವಂತಾಗಿದೆ ಎಂದು ಈ ಬೆಳೆ ಬೆಳೆದ ಪ್ರಗತಿ ಪರ ರೈತ ಕೆ.ಸುರೇಶ(ಚಿನ್ನಿ) ಹೇಳುತ್ತಾರೆ. ಭೇಟಿ ರೋಗ ಕಾಣಿಸಿದ ದಾಳಿಂಬೆ ತೋಟಗಳಿಗೆ ಹೊಸಪೇಟೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೆ.ಶಂಕರ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರೋಗ ನಿಯಂತ್ರಣಕ್ಕಾಗಿ ತೋಟವನ್ನು ರೈತರು ಸ್ವಚ್ಛವಾಗಿಟ್ಟುಕೊಳ್ಳಬೇಕು. ಬೇಡವಾದ ರೆಂಬೆ ಕತ್ತರಿಸಬೇಕು. ಕಳೆ ನಿಯಂತ್ರಿಸಬೇಕು. ರೋಗ ನಿಯಂತ್ರಣಕ್ಕಾಗಿ ಸ್ಟೆರೆಪೊಟೊಸ್ಟೊಸೈಪಿಲೈನ್‌ (ಎಸ್ಟಿಆರ್‌ಇಪಿಟಿಒಸಿವೈಪಿಸಿಎಲ್‌ಐಎನ್‌ಇ) ಪ್ರತಿ ಲೀಟರ್‌ ನೀರಿಗೆ 5 ಎಂ.ಎಲ್‌ ಬೆರೆಸಬೇಕು. ಸಿಒಸಿ ಪ್ರತಿ ಲೀಟರ್‌ ನೀರಿಗೆ 3 ಗ್ರಾಂ ಬೆರೆಸಿ ಸಂಜೆ ಅಥವಾ ಬೆಳಗಿನ ಸಮಯದಲ್ಲಿ ಸಿಂಪರಣೆ ಮಾಡಬೇಕು. 15 ದಿಗಳ ಬಳಿಕ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದ ದಾಳಿಂಬೆ ಸ್ಪಷಲ್‌ ಒಂದು ಲೀಟರ್‌ ನೀರಿಗೆ 5 ಗ್ರಾಂ ಬೆರೆಸಿ ಸಿಂಪರಣೆ ಮಾಡಿದರೆ, ಗಿಡಗಳು ಆರೋಗ್ಯವಾಗಿರುತ್ತವೆ, ಜತೆಗೆ ಉತ್ತಮ ಇಳುವರಿ ಪಡೆಯಬಹುದು ಎಂದರು.


from India & World News in Kannada | VK Polls https://ift.tt/3mcy1hQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...