ಭಾಷೆ ಅನ್ನೋದು ಕೇವಲ ವರ್ಣಮಾಲೆಯಲ್ಲ, ಮನುಷ್ಯರೊಳಗಿನ ಆಳವಾದ ಭಾವನೆ; ಸಿದ್ದರಾಮಯ್ಯ ಸುದೀರ್ಘ ಲೇಖನ

ಬೆಂಗಳೂರು: ಇಂದು ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. , ನೆಲ ಜಲದ ಬಗ್ಗೆ ಅನೇಕ ಕಡೆ ಕಾರ್ಯಕ್ರಮಗಳನ್ನೂ ಮಾಡಿ ಜನತೆಗೆ ಅರಿವು ಹೆಚ್ಚಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ಮಧ್ಯೆ ವಿಪಕ್ಷ ನಾಯಕ ಕನ್ನಡ ಜನತೆಗೆ ಸುದೀರ್ಘವಾದ ಲೇಖನವೊಂದನ್ನು ಬರೆದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬರೆದಿರುವ ಲೇಖನ ಹೀಗಿದೆ. ‘ಪ್ರೀತಿಯ ಕನ್ನಡ ಬಂಧುಗಳೇ, ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಒಟ್ಟು ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಮತ್ತು ಸಮಸ್ತ ಕನ್ನಡಿಗರು ಮಾಡಬೇಕಾಗಿರುವ ಕೆಲಸಗಳ ಬಗ್ಗೆ ನನ್ನ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿರುವೆ. ದಯವಿಟ್ಟು ಇದನ್ನು ಓದಿ, ಚರ್ಚಿಸಿ, ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ಕೇವಲ ನವಂಬರ್ ತಿಂಗಳ ಉತ್ಸವವಾಗಬಾರದು, "ಕನ್ನಡ ನಿತ್ಯೋತ್ಸವ" ಆಗಬೇಕು. ಅಕ್ಕರೆಯ ಕನ್ನಡಿಗರೇ, ಕರ್ನಾಟಕದ ಭಾಷಾ ವೈವಿಧ್ಯತೆಗೆ ದೀರ್ಘಕಾಲದ ಇತಿಹಾಸ ಇದೆ. ಕ್ರಿ.ಶ. ಪ್ರಾರಂಭವಾದಾಗಿನಿಂದ ಮೌರ್ಯರಿಂದ ಹಿಡಿದು ಕದಂಬ, ಗಂಗ, ರಾಷ್ಟ್ರಕೂಟ ಚಾಲುಕ್ಯರು ಮತ್ತು ಹೊಯ್ಸಳರ ವಿಭಿನ್ನ ಆಡಳಿತ ಶೈಲಿ ಹಾಗೂ ವಿವಿಧ ಭಾಷೆಗಳಿಗೆ ಪ್ರಾಧಾನ್ಯತೆ ನೀಡಿರುವುದನ್ನು ಇತಿಹಾಸದ ಪುಟಗಳಲ್ಲಿ ಕಾಣಬಹುದು. ಕರ್ನಾಟಕದಲ್ಲಿ ಮಾತ್ರ ಕನ್ನಡಕ್ಕೆ ಅಗ್ರಸ್ಥಾನ. ಇದು ನಮ್ಮ ರಾಜ್ಯಭಾಷೆಯೂ ಹೌದು, ಮಾತೃಭಾಷೆಯೂ ಹೌದು. ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕೆಂಬುದು ನಮ್ಮ ಸಂಕಲ್ಪ. ‘ಭಾಷಾ ಮಾಧ್ಯಮವನ್ನು ಕಡ್ಡಾಯ ಮಾಡುವಂತಿಲ್ಲ. ಅದು ಮಕ್ಕಳ ಹೆತ್ತವರ ಆಯ್ಕೆ’ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿರುವ ಪರಿಶೀಲನಾ ಅರ್ಜಿ ಮತ್ತು ಮೇಲ್ಮನವಿಗಳೆರಡನ್ನೂ ಸುಪ್ರೀಕೋರ್ಟ್ ತಿರಸ್ಕರಿಸಿದೆ. ಇದರಿಂದ ನ್ಯಾಯಾಂಗದ ಹೋರಾಟದ ಮೂಲಕ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮವನ್ನು ಉಳಿಸುವ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿಲ್ಲ. ಆದರೆ ಇದರಿಂದಾಗಿ ರಾಜ್ಯದ ಜನತೆ ಧೃತಿಗೆಡಬೇಕಾದ ಅಗತ್ಯ ಇಲ್ಲ. ನಮ್ಮ ಮುಂದೆ ಹಲವಾರು ಆಯ್ಕೆಗಳಿವೆ. ನಮ್ಮ ಸಾಹಿತಿಗಳು, ಕನ್ನಡ ಪರ ಹೋರಾಟಗಾರರು ಮತ್ತು ಕಾನೂನು ತಜ್ಞರ ಜೊತೆ ಸೇರಿ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ನಾನು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದೇನೆ. ಈ ಪ್ರಯತ್ನವನ್ನು ರಾಜ್ಯ ಸರ್ಕಾರ ಮುಂದುವರಿಸಬೇಕು. ವಿಶ್ವದ ವಿವಿಧ ದೇಶಗಳಲ್ಲಿ ಶಿಕ್ಷಣ ಮಾಧ್ಯಮ ನೀತಿ ಮತ್ತು ಅದರ ಅನುಷ್ಠಾನ ಸರ್ಕಾರಗಳಿಗೆ ಸವಾಲಿನ ಪ್ರಶ್ನೆಯಾಗಿಬಿಟ್ಟಿದೆ. ಶೇಕಡಾ 80ರಷ್ಟು ಗ್ರಾಮೀಣ ಪ್ರದೇಶಗಳನ್ನು ಹೊಂದಿರುವ ಭಾರತ ಪ್ರಾದೇಶಿಕ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿಸದಿದ್ದರೆ ದೇಶದ ಬೆಳವಣಿಗೆ ಅಸಾಧ್ಯ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಸುಪ್ರೀಂಕೋರ್ಟ್ ಈ ತೀರ್ಪು ಜಾರಿಯಾದರೆ ಕನ್ನಡವೊಂದೇ ಅಲ್ಲ, ನಮ್ಮ ಎಲ್ಲ ಪ್ರಾದೇಶಿಕ ಭಾಷೆಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯಕ್ಕೀಡಾಗಲಿವೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಮಧ್ಯೆ ಪ್ರವೇಶ ಮಾಡಬೇಕಾಗಿದೆ. ಅಗತ್ಯ ಬಿದ್ದರೆ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ಮುಖ್ಯಮಂತ್ರಿಯಾಗಿದ್ದಾಗ ನಾನು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಈ ಬೇಡಿಕೆಯನ್ನು ಮುಂದಿಟ್ಟು ಒತ್ತಾಯಿಸಿದ್ದೇನೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳ ಜತೆಯಲ್ಲಿಯೇ ಸಮಾಲೋಚನೆ ನಡೆಸಿ ಮಾತೃ ಭಾಷೆಯ ರಕ್ಷಣೆಯ ಬಗ್ಗೆ ಸಂಘಟಿತ ಹೋರಾಟವನ್ನು ನಡೆಸಲು ನಾವು ಮುಂದಾಗಬೇಕು. ನಮ್ಮದು ಒಕ್ಕೂಟ ವ್ಯವಸ್ಥೆಯ ರಾಜ್ಯ. ಸಂವಿಧಾನದಲ್ಲಿ ಯೂನಿಯನ್ ಎಂಬ ಮಾತಿದ್ದರೂ, ಅದು ಒಕ್ಕೂಟದ ಸ್ವರೂಪವನ್ನು ಅಳಿಸಿಹಾಕುವಂತಹದ್ದಲ್ಲ. ನಮ್ಮ ದೇಶದ ರಾಜ್ಯಗಳು ಭಾಷೆಗಳ ಆಧಾರದ ಮೇಲೆ ರಚಿತವಾಗಿದೆ. ಭಾಷಾವಾರು ಪ್ರಾಂತ ರಚನೆಯಲ್ಲಿ ಪ್ರಾದೇಶಿಕ ಭಾಷೆಗಳ ಸಾರ್ವಭೌಮತೆಯನ್ನು ಮನ್ನಿಸಬೇಕಾಗುತ್ತದೆ. ಮಾತೃಭಾಷೆಯ ವ್ಯಾಖ್ಯಾನವನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತಿದೆ. ಅದು ವೈಜ್ಞಾನಿಕವಾದ ವಾದ ವ್ಯಾಖ್ಯಾನ ಅಲ್ಲ. ಮಾತೃಭಾಷೆ ಎನ್ನುವುದು ಪರಿಸರದ ಭಾಷೆ. ಪರಿಸರ ಭಾಷೆ ಎಂದರೆ ಪ್ರಾದೇಶಿಕ ಮಾನ್ಯತೆ ಪಡೆದ ಭಾಷೆ, ಪ್ರಾದೇಶಿಕ ಆಶೋತ್ತರಗಳನ್ನು ಮೈಗೂಡಿಸಿಕೊಂಡ ಭಾಷೆ ಎನ್ನುವುದನ್ನು ಮರೆಯಬಾರದು. ಇದನ್ನು ಗೌರವಿಸಬೇಕೆಂದು ಭಾಷಾವಾರು ನೀತಿ ಹೇಳುತ್ತದೆ. ಸ್ವತಂತ್ರವಾದ ಆಲೋಚನಾ ಪದ್ದತಿ, ಸಂಕೀರ್ಣವಾದ ಭಾವನೆಗಳ ಅಭಿವ್ಯಕ್ತಿ ಸಾಮರ್ಥ್ಯಗಳನ್ನು ಬೆಳೆಸಲು ಮಾತೃಭಾಷೆಯಿಂದ ಮಾತ್ರ ಸಾಧ್ಯ ಎನ್ನುವುದು ಎಲ್ಲರೂ ಒಪ್ಪಿಕೊಳ್ಳುವ ಸತ್ಯ. ಮಹಾತ್ಮಗಾಂಧಿ, ಡಾ.ರಾಮಮನೋಹರ ಲೋಹಿಯಾ, ಸ್ವಾಮಿ ವಿವೇಕಾನಂದರು ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕೆಂದು ಪ್ರತಿಪಾದಿಸಿದ್ದಾರೆ. ‘ಮಾತೃಭಾಷೆ ಜನರ ಉಸಿರು, ಉಸಿರಿಲ್ಲದೆ ಮನುಷ್ಯ ಹೇಗೆ ಬಾಳಲಾರನೋ ಅದೇ ರೀತಿ ಮಾತೃಭಾಷೆಯಿಲ್ಲದೆ ಮನುಷ್ಯ ಬಾಳಲಾರ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದರು. ಭಾಷೆ ಎನ್ನುವುದು ಕೇವಲ ವರ್ಣಮಾಲೆಯಲ್ಲ, ಅದು ಕೇವಲ ಶಬ್ದ-ವಾಕ್ಯಗಳಲ್ಲ. ಭಾಷೆಯಲ್ಲಿ ಅದನ್ನಾಡುವ ಮನುಷ್ಯನ ಆಳವಾದ ಭಾವನೆಗಳಿರುತ್ತವೆ, ಪರಸ್ಪರ ಸಂಬಂಧಗಳಿರುತ್ತವೆ, ತನ್ನತನದ ಪ್ರಜ್ಞೆಯಿರುತ್ತದೆ. ಭಾಷೆ ಎಂದರೆ ಒಂದು ಪ್ರದೇಶದ, ಜನಾಂಗದ ಸಂಸ್ಕೃತಿ ಕೂಡಾ ಆಗಿರುತ್ತದೆ.. ಆದ್ದರಿಂದ ಭಾಷೆಯ ಸಾವು ಎಂದರೆ ಸಂಸ್ಕೃತಿಯ ಸಾವು ಕೂಡಾ ಆಗಿರುತ್ತದೆ. ಆದರೆ ಇತ್ತೀಚೆಗೆ ಶಿಕ್ಷಣ ಕ್ಷೇತ್ರಕ್ಕೆ ವ್ಯಾಪಾರಿ ಮನೋವೃತ್ತಿಯ ಖಾಸಗಿವಲಯದ ಪ್ರವೇಶದಿಂದಾಗಿ ಪ್ರಾದೇಶಿಕ ಭಾಷೆಗಳು ಅಸುರಕ್ಷತೆಯನ್ನು ಅನುಭವಿಸುತ್ತಿದೆ. ಯಾವ ಭಾಷೆಯ ಹೇರಿಕೆಯೂ ಸರಿಯಲ್ಲ. ಯಾವುದೇ ಭಾಷೆಯ ಕಲಿಕೆಯನ್ನು ತಡೆಯುವುದೂ ಸರಿಯಲ್ಲ. ಒಂದು ಘಟ್ಟದಿಂದ ಮುಂದಕ್ಕೆ ವಿದ್ಯಾರ್ಥಿಗಳು ತಮಗೆ ಬೇಕಾದ ಭಾಷೆಗಳನ್ನು ಆಯ್ದುಕೊಂಡು ಅಭ್ಯಾಸ ಮಾಡುವ ಅವಕಾಶ ಇದ್ದೇ ಇದೆ. ಈ ಘಟ್ಟದವರೆಗೆ ಮಾತೃಭಾಷೆಯ ಹಾಗೂ ಪ್ರಾದೇಶಿಕ ಭಾಷೆಯ ಕಡ್ಡಾಯ ಶಿಕ್ಷಣ ಕೊಡುವುದು ಸರ್ಕಾರದ ಕರ್ತವ್ಯವಾಗಿರುತ್ತದೆ. ಭಾಷೆ ಎನ್ನುವುದು ಜ್ಞಾನ ಸಂಪಾದನೆಯ ಸಾಧನವೇ ಹೊರತು ಜ್ಞಾನ ಅಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಇಂಗ್ಲೀಷ್ ಮಾತನಾಡಿದರೆ ಮಾತ್ರ ಬುದ್ಧಿವಂತ ಎನ್ನುವ ತಪ್ಪು ಅಭಿಪ್ರಾಯ ನಮ್ಮಲ್ಲಿ ಅನೇಕರಲ್ಲಿದೆ. ಇಂತಹದ್ದೊಂದು ಅಭಿಪ್ರಾಯ ಜನಸಾಮಾನ್ಯರಿಗಿಂತ ಹೆಚ್ಚಾಗಿ ವಿದ್ಯಾವಂತರಲ್ಲಿಯೇ ಇದೆ. ಇದನ್ನು ಕಳಚಿಕೊಂಡಾಗ ನಮ್ಮ ಮಾತೃ ಭಾಷೆ ಬೆಳೆಯುತ್ತದೆ. ಇಂಗ್ಲಿಷನ್ನು ಭಾಷೆಯನ್ನಾಗಿ ಕಲಿಸಿ, ವಿಷಯಗಳನ್ನು ನಮ್ಮ ನಮ್ಮ ಭಾಷೆಗಳಲ್ಲಿಯೇ ಕಲಿಸಬೇಕು. ಮಾಧ್ಯಮದ ಪ್ರಶ್ನೆ ನಮ್ಮಲ್ಲಿ ಬಗೆಹರಿಯಲಾರದ ಸಮಸ್ಯೆಯಾಗಿದೆ. ಶಿಕ್ಷಣ ತಜ್ಞರೆನಿಸಿಕೊಂಡವರಿಗೂ ಅನೇಕ ಸಲ ಭಾಷೆಯನ್ನು ಕಲಿಸುವುದು, ಭಾಷೆಯ ಮೂಲಕ ಕಲಿಸುವುದು ಇವುಗಳ ನಡುವಿನ ಅಂತರ ತಿಳಿದಿರುವುದಿಲ್ಲ. ಕನ್ನಡ ಮಾಧ್ಯಮವಾಗಬೇಕು ಎಂದರೆ ಇಂಗ್ಲಿಷನ್ನು ಕಲಿಸಬಾರದು ಎಂದಲ್ಲ. ಆಧುನಿಕ ವಿಜ್ಞಾನವನ್ನು ಕಲಿಯುವುದು ಕಲಿಸುವುದು ನಮ್ಮ ಭಾಷೆಗಳ ಮೂಲಕ ಸಾಧ್ಯವಾಗುವುದಿಲ್ಲ ಎನ್ನುವುದು ಮೂಢನಂಬಿಕೆ. ಕನ್ನಡದ ಮೂಲಕ ಕಲಿತೂ ಶ್ರೇಷ್ಠ ವಿಜ್ಞಾನಿಯಾಗಬಹುದು ಎನ್ನುವುದಕ್ಕೆ ನಮ್ಮವರೇ ಆದ ಅನೇಕ ವಿಜ್ಞಾನಿಗಳೂ, ತಂತ್ರಜ್ಞರು, ಸಾಹಿತಿಗಳು ತೋರಿಸಿಕೊಟ್ಟಿದ್ದಾರೆ. ಕನ್ನಡ ಭಾಷೆ ಬೆಳೆಯಬೇಕಾದರೆ ಬೇರೆಬೇರೆ ಜ್ಞಾನ ಶಿಸ್ತುಗಳಲ್ಲಿ ತೊಡಗಿಸಿಕೊಂಡ ಪಂಡಿತರು, ವಿದ್ವಾಂಸರು ಕನ್ನಡ ಭಾಷೆಯ ಬಗ್ಗೆ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಜ್ಞಾನಕ್ಷೇತ್ರಕ್ಕೆ ಸಂಬಂಧಿಸಿದ ಹೊರ ಪರಿಭಾಷೆಯನ್ನು ಕಂಡುಕೊಳ್ಳಬೇಕು. ಕನ್ನಡದ ಜ್ಞಾನ ಸಂಪತ್ತು, ಶಬ್ದ ಸಂಪತ್ತು ಬೆಳೆಯಬೇಕು. ಇದು ಸಾಧ್ಯವಾಗಬೇಕಾದರೆ ಕೇವಲ ಶಿಕ್ಷಕರು, ಸಾಹಿತಿಗಳಷ್ಟೇ ಕನ್ನಡದಲ್ಲಿ ಬರೆದರೆ ಸಾಲದು ವೈದ್ಯರು, ವಕೀಲರ, ವಿಜ್ಞಾನಿಗಳು ಹೀಗೆ ಸಮಾಜದ ವಿವಿಧ ವರ್ಗಗಳು ಕನ್ನಡವನ್ನು ಬಳಸಬೇಕು, ಕನ್ನಡದಲ್ಲಿಯೇ ಬರೆಯಬೇಕು ಮತ್ತು ವ್ಯವಹರಿಸಬೇಕು. ನಮ್ಮಲ್ಲಿ ಒಂದಷ್ಟು ವೈದ್ಯರು ಕನ್ನಡದಲ್ಲಿ ಬರೆಯುತ್ತಿದ್ದಾರೆ, ಉಳಿದ ವೃತ್ತಿಯವರು ಕನ್ನಡದಲ್ಲಿ ಬರೆಯಲು ಹಿಂದೇಟು ಹಾಕುತ್ತಾರೆ. ವಿಜ್ಞಾನ-ತಂತ್ರಜ್ಞಾನವನ್ನು ಕನ್ನಡದಲ್ಲಿ ಹೇಳಲಿಕ್ಕೆ ಬರುವುದಿಲ್ಲ ಎನ್ನುವುದು ಸುಳ್ಳು. ಕನ್ನಡ ಅಪಾರ ಚೈತನ್ಯವುಳ್ಳ ಭಾಷೆ. ಕನ್ನಡದಲ್ಲಿ ತಂತ್ರಜ್ಞಾನವನ್ನು ಹೇಳಲಿಕ್ಕೆ ಬರುವುದಿಲ್ಲ ಎನ್ನುವ ಪೂರ್ವ ನಿರ್ಧರಿತ ಅಭಿಪ್ರಾಯದಿಂದ ಅವರು ಹೊರಬರಬೇಕು. ಇಂಗ್ಲಿಷ್ ನಮಗೆ ಬೇಕು. ಆದರೆ ನಮ್ಮ ಭಾಷೆ ಬದಲಿಗೆ ಅಲ್ಲ. ಇಂಗ್ಲಿಷ್ ಒಂದೇ ಅಲ್ಲ. ಇನ್ನೂ ಹಲವೂ ಭಾಷೆಗಳು ನಮಗೆ ಬೇಕು. ಒಂದೊಂದು ಭಾಷೆಯೂ ಒಂದೊಂದು ವರ; ಒಂದೊಂದು ಜಗತ್ತು. ಆದರೆ ಯಾವ ಭಾಷೆ ಬೇಕು ಎನ್ನುವುದು ನಮ್ಮ ಅಗತ್ಯವನ್ನು ಅನುಸರಿಸಿದ್ದು, ಆಯ್ಕೆಯನ್ನು ಅವಲಂಭಿಸಿದ್ದು. ಹೊರ ಜಗತ್ತಿನ ಸಂಪರ್ಕಕ್ಕಾಗಿ ನಮಗೆ ಇಂಗ್ಲಿಷ್ ಬೇಕು. ಆದರೆ ಅದೇ ಸರ್ವಸ್ವವಾಗಿ ಅಲ್ಲ. ಇಂಗ್ಲಿಷ್ ಮೂಲಕವಾದ ಶಿಕ್ಷಣ ಕುಂಡದಲ್ಲಿ ನೆಟ್ಟ ಗಿಡಗಳಂತೆ. ಬೇರು ನೆಲಕ್ಕಿಳಿಯುವುದಿಲ್ಲ. ಇಂಗ್ಲಿಷ್, ಬೋಧನೆಗೆ ಸಂಬಂಧಿಸಿದಂತೆ ಒಂದು ರಾಷ್ಟ್ರೀಯ ಧೋರಣೆ ಸಿದ್ಧಗೊಳ್ಳಬೇಕು. ಓದಲು, ಬರೆಯಲು ಗ್ರಹಿಸಲು ಇಂಗ್ಲಿಷ್ ಬೋಧನೆ ನಮ್ಮ ಅಗತ್ಯವಾಗಿದೆ. ರಾಜ್ಯ ಸರ್ಕಾರ ತನ್ನ ಆಡಳಿತದಲ್ಲಿ ಕನ್ನಡವನ್ನು ಬಳಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ಸು ಕಾಣಬೇಕಾದರೆ ಜನರು, ಜನರಿಂದ, ಜನರಿಗಾಗಿ ಎಂಬ ಆಶಯ ಸಾಕಾರಗೊಳ್ಳಬೇಕಾದರೆ, ಜನರ ಬಳಿ ಸರ್ಕಾರವನ್ನು ಕೊಂಡೊಯ್ಯಬೇಕಾದರೆ ಜನರು ಆಡುವ ಭಾಷೆಯಲ್ಲಿಯೇ ಆಡಳಿತ ನಡೆಯಬೇಕಾಗುತ್ತದೆ. ಭಾರತವೆನ್ನುವುದು ಬಹುಭಾಷೆಗಳ ತೊಟ್ಟಿಲು ಇಂತಹ ನಾಡಿನಲ್ಲಿ ಭಾಷಾ ನೀತಿಯು ಸಮಾನ ಗೌರವ ಮತ್ತು ಸಮಾನ ಅವಕಾಶಗಳನ್ನು ಎಲ್ಲರಿಗೂ ಕಲ್ಪಿಸಬೇಕಾಗುತ್ತದೆ. ಇದು ರಾಜ್ಯಭಾಷೆಯಿಂದ ಮಾತ್ರ ಸಾಧ್ಯ. ಮಂತ್ರಿಮಂಡಲದ ನಿರ್ಣಯಗಳು, ಮಂತ್ರಿಗಳ ಟಿಪ್ಪಣಿಗಳು, ವಿಧಾನ ಸಭೆಯ ಮುಂದೆ ಬರುವ ವಿಧೇಯಕಗಳು ಕನ್ನಡದಲ್ಲೇ ಇದ್ದುಬಿಟ್ಟರೆ ಕನ್ನಡ ಅನಿವಾರ್ಯವಾಗಿ ಆಡಳಿತದಲ್ಲಿ ನೆಲೆಗೊಳ್ಳುವಂತಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳು ಎಲ್ಲ ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಬೇಕು, ನಾನು ಮುಖ್ಯಮಂತ್ರಿಯಾಗಿದ್ದಾಗ ಕಾಲಕಾಲಕ್ಕೆ ಅಂತಹ ಸೂಚನೆ ನೀಡಿದ್ದೆ. ಆಡಳಿತದಲ್ಲಿ ಕನ್ನಡವನ್ನು ಬಳಸುವ ಮೂಲಕ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ಪ್ರಯತ್ನವನ್ನು ಎಲ್ಲರೂ ಮಾಡಬೇಕು. ಉದ್ಯೋಗ ಎನ್ನುವುದು ಇತ್ತೀಚಿನ ದಿನಗಳಲ್ಲಿ ಕನ್ನಡಿಗ ಯುವಕ-ಯುವತಿಯರು ಎದುರಿಸುವ ಮುಖ್ಯ ಸಮಸ್ಯೆಯಾಗಿದೆ. ಖಾಸಗಿ ಕ್ಷೇತ್ರಗಳಲ್ಲಿನ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಸಿಗಬೇಕಾದ ನ್ಯಾಯದ ಪಾಲು ಸಿಗುತ್ತಿಲ್ಲ ಎನ್ನುವ ಅಸಮಾಧಾನ ಕನ್ನಡಿಗರಲ್ಲಿದೆ. ರಾಜ್ಯದಲ್ಲಿ ಸ್ಥಾಪಿತವಾಗುವ ಕೇಂದ್ರದ ಉದ್ಯಮಗಳಲ್ಲಿ ಕೂಡಾ ಇದೇ ಸ್ಥಿತಿ ಇದೆ. ಒಂದು ಹಂತದವರೆಗಿನ ನೇಮಕಾತಿಯಲ್ಲಿ ಸ್ಥಳೀಯರನ್ನೇ ಪರಿಗಣಿಸಬೇಕಾದ ಅಗತ್ಯವಿದ್ದರೂ ಇಲ್ಲಿ ಹಾಗಾಗುವುದಿಲ್ಲ. ನಮ್ಮ ಸರ್ಕಾರ ಬಿಡುಗಡೆಗೊಳಿಸಿದ್ದ ಹೊಸ ಕೈಗಾರಿಕಾ ನೀತಿಯಲ್ಲಿ ಖಾಸಗಿರಂಗದ ಉದ್ಯಮಗಳಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗವಕಾಶ ಕಲ್ಪಿಸುವಂತಹ ಪ್ರಯತ್ನವನ್ನು ಮಾಡಿತ್ತು. ಕನ್ನಡಿಗರಿಗೆ ಉದ್ಯೋಗ ಎನ್ನುವ ನಮ್ಮ ದೀರ್ಘಕಾಲದ ಆಶಯ ಸಾಕಾರಗೊಳ್ಳಬೇಕಾದರೆ ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು. ಸಮಸ್ತ ಕನ್ನಡಿಗರ ಆಶಯದಂತೆ ನಮ್ಮ ಸರ್ಕಾರ ಕನ್ನಡ-ಕನ್ನಡಿಗ-ಕರ್ನಾಟಕದ ಅಸ್ಮಿತೆಯಾಗಿ ನಾಡ ಧ್ವಜವನ್ನು ರಚಿಸಿ ಅಂಗೀಕಾರಕ್ಕಾಗಿ ಕೇಂದ್ರ ಸರ್ಕಾರ ಕಳುಹಿಸಿತ್ತು. ಇಲ್ಲಿಯ ವರೆಗೆ ಕೇಂದ್ರ ಸರ್ಕಾರ ಅದನ್ನು ಅಂಗೀಕರಿಸಿಲ್ಲ. ಇದಕ್ಕೆ ಇರುವ ಅಡೆ-ತಡೆಗಳನ್ನು ನಿವಾರಿಸಲು ನಮ್ಮ ಸರ್ಕಾರ ಮತ್ತು ನಮ್ಮ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕನ್ನಡಿಗರೆಲ್ಲರೂ ಪಕ್ಷಭೇದ ಮರೆತು ರಾಷ್ಟ್ರಮಟ್ಟದಲ್ಲಿ ಕನ್ನಡಿಗರನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಬೇಕು. ಈಚಿನ ದಿನಗಳಲ್ಲಿ ಭಾರತದ ಸಮಗ್ರತೆ ಮತ್ತು ಏಕತೆಯ ಮಾತು ಬಹುವಾಗಿ ಕೇಳಿ ಬರುತ್ತಿದೆ. ಅದು ರಾಜಕೀಯವಾಗಿ ಮತ್ತು ವೇದಿಕೆಯ ಘೋಷಣೆಯಾಗಿಯಷ್ಟೇ ಕೇಳಿ ಬರುತ್ತಿದೆ, ಹೃದಯದ ಮಾತಾಗಿ ಅಲ್ಲ. ಭಾರತದ ಏಕತೆ ಇರುವುದೇ ವೈವಿಧ್ಯದಲ್ಲಿ. ಭಿನ್ನತೆಯಲ್ಲಿ ವೈವಿಧ್ಯತೆ –ಇದು ಭಾರತೀಯ ಮನಸ್ಸಿನ ಪ್ರತೀಕ. ನಮ್ಮದು ಬಹುಧರ್ಮ, ಬಹುಭಾಷೆ, ಬಹು ಸಂಸ್ಕೃತಿಗಳ ದೇಶ. ಈ ಬೆಸುಗೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಇದು ಪ್ರೀತಿಯಿಂದ, ಕಾಳಜಿಯಿಂದ, ಅಂತ:ಕರಣದ ಮೂಲಕ ಮಾಡಬೇಕಾಗಿದೆ. ಒತ್ತಡ, ಹಿಂಸೆ, ಘರ್ಷಣೆಗಳ ಮೂಲಕ ಅಲ್ಲ. ಏಕತೆಯನ್ನು ಸಾಧಿಸಲು ವೈವಿಧ್ಯವನ್ನು ಅಳಿಸಲು ಹೋದರೆ ಅನಾಹುತವಾಗುತ್ತದೆ. ಇದು ಆತ್ಮಹತ್ಯಾಕಾರಿಯಾದ ಧೋರಣೆಯಾಗಿದೆ. ನಿಜವಾದ ರಾಷ್ಟ್ರೀಯ ಧೋರಣೆ ಹೇಗಿರಬೇಕೆಂದರೆ ವೈವಿಧ್ಯವನ್ನು ಅರ್ಥಮಾಡಿಕೊಂಡು, ಜನರು ಒಂದಾಗಿರುವಂತೆ ಮಾಡುವುದು. ನಮ್ಮ ಜನರು ಒಬ್ಬರಿಗೊಬ್ಬರು ಅಪರಿಚಿತರಾಗಿರದಂತೆ ಮಾಡುವುದೇ ನಿಜವಾದ ಏಕತೆಯ ಪ್ರಯತ್ನ. ಇದು ನಮ್ಮ ರಾಷ್ಟ್ರೀಯ ಧೋರಣೆಯಾಗಬೇಕು. ಇಂಥ ಕೆಲಸ ಎಂದಿಗಿಂತ ಹೆಚ್ಚಾಗಿ ಈಗ ಆಗಬೇಕಾಗಿದೆ. "ಸಮೃದ್ಧ ಕರ್ನಾಟಕ ಮಾತ್ರವಲ್ಲ, ಸೌಹಾರ್ದ ಕರ್ನಾಟಕದ ಸ್ಥಾಪನೆ ನಮ್ಮೆಲ್ಲರ ಗುರಿಯಾಗಿರಲಿ".


from India & World News in Kannada | VK Polls https://ift.tt/3pUHUmB

ಅಧಿಕಾರಿಗಳಲ್ಲಿ ಕುಗ್ಗಿದ ಕನ್ನಡ ಬಳಕೆ; ಆಂಗ್ಲಭಾಷೆ ವ್ಯಾಮೋಹಕ್ಕೆ ಬಿದ್ದ ಸರ್ಕಾರಿ ಅಧಿಕಾರಿಗಳು!

ರವಿಕಿರಣ್‌ ವಿ. ರಾಮನಗರ ರಾಮನಗರ: ನವೆಂಬರ್‌ 1ರಂದು 66ನೇ ವರ್ಷದ ಕನ್ನಡ ರಾಜ್ಯೋತ್ಸವದ ಸಂಭ್ರಮ. ಹಲವು ಮಂದಿಯ ತ್ಯಾಗ ಬಲಿದಾನದಿಂದ ಇಂದು ಕರ್ನಾಟಕ ರಾಜ್ಯ ಉದಯವಾಗಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಇತ್ತೀಚಿನ ದಿನಗಳಲ್ಲಿ ಸರಕಾರಿ ಅಧಿಕಾರಿಗಳೇ ಬಳಕೆ ಮಾಡುವುದು ಕಡಿಮೆಯಾಗುತ್ತಿದೆ. ಆಂಗ್ಲಭಾಷೆಯ ವ್ಯಾಮೋಹಕ್ಕೆ ಬಿದ್ದಿರುವ ಅಧಿಕಾರಿಗಳಿಂದ ಸಾವಿರಾರು ವರ್ಷ ಇತಿಹಾಸ ಹೊಂದಿರುವ ಭಾಷೆಗೆ ಕುತ್ತು ಬರುವಂತೆ ಆಗಿದೆ. ಕನ್ನಡ ಉಳಿಕೆ ಹಾಗೂ ಉತ್ತೇಜನ ನೀಡುವ ಸಲುವಾಗಿ ಆಡಳಿತದಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಿ ಈಗಾಗಲೇ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಆದರೆ, ರಾಜ್ಯ ಸೇರಿ ಜಿಲ್ಲೆಯಲ್ಲಿ ಈ ಆದೇಶ ಕೇವಲ ಕಾಗದಲ್ಲಿ ಉಳಿಯುವಂತೆ ಆಗಿದೆ. ಜಿಲ್ಲಾಡಳಿತ ಹಾಗೂ ಜಿಲ್ಲಾಆರೋಗ್ಯ ಇಲಾಖೆ ಹೊರಡಿಸುವ ಬಹುತೇಕ ಎಲ್ಲಾ ಆದೇಶಗಳು ಆಂಗ್ಲಮಯವಾಗಿಯೇ ಇರುತ್ತದೆ. ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಅಧಿಕಾರಿಗಳು ಜಿಲ್ಲೆಯಲ್ಲಿ ಕಂಡು ಬಂದರೂ, ಆಂಗ್ಲ ಆದೇಶಗಳನ್ನು ಜಾರಿ ಮಾಡುವುದನ್ನು ಮಾತ್ರ ತಡೆಗಟ್ಟಲು ಸಾಧ್ಯವಾಗದಂತೆ ಆಗಿದೆ. ಇಂಗ್ಲಿಷ್‌ ವ್ಯಾಮೋಹ ಮಾತ್ರ ಕನ್ನಡ ಮಕ್ಕಳಿಗೆ ದ್ರೋಹವನ್ನುಂಟು ಮಾಡುವಂತೆ ಮಾಡಿದೆ. ಏನಾಗಿದೆ?ಎಲ್ಲರಿಗೂ ತಿಳಿದಿರುವಂತೆ ಕಳೆದ ಎರಡು ವರ್ಷಗಳಿಂದ ಕೊರೊನಾ ಎಲ್ಲೆಡೆ ಹೆಮ್ಮರವಾಗಿ ಬೆಳೆದಿತ್ತು. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅದರ ಆರ್ಭಟ ಕಡಿಮೆಯಾಗಿವೆಯಾದರೂ ಸಂಪೂರ್ಣವಾಗಿ ನಶಿಸಿಲ್ಲ. ಕೊರೊನಾಗೆ ಸಂಬಂಧಪಟ್ಟ ಎಲ್ಲಾ ಆದೇಶಗಳನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾಆರೋಗ್ಯ ಇಲಾಖೆ ಅಧಿಕಾರಿಗಳು ಇಂಗ್ಲೀಷ್‌ನಲ್ಲಿಯೇ ಹೊರಡಿಸುತ್ತಿದ್ದಾರೆ. ಅದರಲ್ಲೂ ವೈದ್ಯಕೀಯ ಭಾಷೆ ಸಾಮಾನ್ಯವಲ್ಲ. ಸ್ವತಃ ಆರೋಗ್ಯ ಇಲಾಖೆ ಸಿಬ್ಬಂದಿಯೇ ಅರ್ಥ ಮಾಡಿಕೊಳ್ಳಲು ಕಷ್ಟ ಪಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಜಿಲ್ಲಾಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ನಿತ್ಯ ಕೊರೊನಾ ಪಾಸಿಟಿವ್‌ಗೆ ಸಂಬಂಧಿಸಿದಂತೆ ಪಟ್ಟಿ ಬಿಡುಗಡೆ ಮಾಡುತ್ತದೆ. ಇದರಲ್ಲಿ ಕೊರೊನಾ ಸೋಂಕಿಗೆ ತುತ್ತಾದವರು ಹಾಗೂ ಚಿಕಿತ್ಸೆ ಫಲಿಸಿ ಬಿಡುಗಡೆಯಾದವೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದವರ ವಿವರವನ್ನು ಪ್ರಕಟಿಸುತ್ತಿದೆ. ಈ ಪ್ರಕಟಣೆಯೂ ಸಂಪೂರ್ಣ ಆಂಗ್ಲಮಯವಾಗಿವೆ. ಕನ್ನಡದಲ್ಲಿ ಕನ್ನಡಿಗರ ಸಾರ್ವಭೌಮ ಎಂಬ ಆಶಯವನ್ನು ತಲೆಕೆಳಗಾಗಿಸುವಂತೆ ಮಾಡಿದೆ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯೊಂದಿಗೆ ಜಿಲ್ಲೆಯ ಪ್ರಮುಖ ಇಲಾಖೆ ಆದೇಶದ ಪ್ರತಿಗಳು ಸಂಪೂರ್ಣವಾಗಿ ಆಂಗ್ಲಮಯವಾಗಿರುತ್ತದೆ. ದುರ್ಬೀನು ಹಾಕಿ ನೋಡಿದರೂ ಕನಿಷ್ಠ ಒಂದೇ ಒಂದು ಕನ್ನಡದ ಅಕ್ಷರ ಕಾಣ ಸಿಗುವುದೇ ಇಲ್ಲ. ಈ ಕುರಿತು ಅಧಿಕಾರಿಗಳನ್ನು ವಿಚಾರಿಸಿದರೆ, ಇನ್ನು ಮುಂದೆ ಸರಿ ಮಾಡುತ್ತೇವೆ ಎಂಬುದಾಗಿ ಸಬೂಬು ನೀಡುತ್ತಾರೆ. ಕರ್ನಾಟಕ ಸರಕಾರದ ಸೇವೆಯಲ್ಲಿದ್ದುಕೊಂಡು, ಸರಕಾರಿ ವೇತನ ಪಡೆದರೂ ಕನ್ನಡ ಬಳಕೆ ಮಾತ್ರ ಮಾಡದಿರುವುದು ವಿಪರ್ಯಾಸವೇ ಸರಿ. ಇನ್ನು ಇಲಾಖೆಯ ಕಾರ್ಯಕ್ರಮ ಮತ್ತು ಕೆಲಸದ ಮಾಹಿತಿ ತಿಳಿಸುವ ಸಲುವಾಗಿ ಪ್ರತಿ ಇಲಾಖೆಯು ವಾಟ್ಸಪ್‌ನಲ್ಲಿ ಗುಂಪು ರಚನೆ ಮಾಡಿಕೊಂಡಿವೆ. ಅದರಲ್ಲಿ ಅಧಿಕಾರಿಗಳು ಸಿಬ್ಬಂದಿ ಇದ್ದಾರೆ. ಮೇಲಧಿಕಾರಿಗಳು ತಮ್ಮ ಕೆಳ ಸಿಬ್ಬಂದಿಗೆ ಕೆಲಸ ಹಂಚುವುದು ಸಹ ಇಂಗ್ಲಿಷ್‌ನಲ್ಲಿಯೇ. ಕೆಲವು ಆಂಗ್ಲಭಾಷೆಗಳು ಉಚ್ಛವಾಗಿದ್ದು, ಸಿಬ್ಬಂದಿಗೆ ಅರ್ಥವಾಗದೆ ಇರುತ್ತದೆ ಎಂಬುದು ಸಿಬ್ಬಂದಿ ಮಾತು. ಗಡಿ ಪ್ರದೇಶದಲ್ಲಿ ಇತರೆ ಭಾಷಿಕರ ಹಾವಳಿ ಒಂದೆಡೆ ಅಧಿಕಾರಿಗಳಿಂದಲೇ ಕನ್ನಡ ಕಗ್ಗೊಲೆಯಾಗುತ್ತಿದ್ದರೆ, ಮತ್ತೊಂದೆಡೆ ಜಿಲ್ಲೆಯ ಗಡಿ ಪ್ರದೇಶದಲ್ಲಿ ಇತರೆ ಭಾಷಿಕರ ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲೂ ಕನಕಪುರದ ಗಡಿ ನೆರೆಯ ತಮಿಳುನಾಡಿಗೆ ಹೊಂದಿಕೊಂಡಿರುವ ಕಾರಣ, ಈ ಪ್ರದೇಶದಲ್ಲಿ ಅನ್ಯಭಾಷಿಕರು ಹೆಚ್ಚಾಗುತ್ತಿದ್ದಾರೆ. ಅಲ್ಲಿನ ಚುನಾವಣಾ ಭಿತ್ತಿ ಚಿತ್ರಗಳನ್ನು ಇಲ್ಲಿ ಅಂಟಿಸಲಾಗಿದೆ. ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಏನಿಲ್ಲವೆಂದರೂ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಅದರಲ್ಲೂ ತಮಿಳುನಾಡು ಹಾಗೂ ಕೇರಳ ರಾಜ್ಯಕ್ಕೆ ತೆರಳಲು ಇದು ಸಮೀಪದ ರಸ್ತೆಯಾಗಿರುವ ಕಾರಣ ಆ ರಾಜ್ಯದ ವಾಹನಗಳು ಈ ಹಾದಿಯನ್ನೇ ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತವೆ. ಇಂತಹ ಜನತೆಗೆ ಅನಕೂಲವಾಗಲೆಂದು ಸ್ಥಳೀಯ ಹೋಟೆಲ್‌ ಮಾಲೀಕರು ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಬೋರ್ಡ್‌ ಬರೆಸಿರುವ ದೃಶ್ಯಗಳು ಕಾಣಸಿಗುತ್ತವೆ. ಆಂಗ್ಲಭಾಷೆಯ ಬಳಕೆ ಕುರಿತು ಗಮನಕ್ಕೆ ಬಂದಿದೆ. ಈ ಕುರಿತು ಸಭೆಯಲ್ಲಿ ಚರ್ಚೆಯಾಗಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಜವರೇಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ, ರಾಮನಗರ


from India & World News in Kannada | VK Polls https://ift.tt/3pRpG5y

ಕನ್ನಡದ ಶಕ್ತಿ ಕುಗ್ಗಿಸುವುದು ಅಸಾಧ್ಯ; ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕನ್ನಡಕ್ಕೆ ತನ್ನದೇ‌‌ ಆದ ಅಂತರ್ಗತ ಶಕ್ತಿ ಇದೆ, ಅದನ್ನು ಕಡಿಮೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವು ರಾಜರು ನಮ್ಮನ್ನು ಆಳಿದರೂ ಕನ್ನಡ ತನ್ನ ಅಸ್ತಿತ್ವ ಕಾಪಾಡಿಕೊಂಡು ಗಟ್ಟಿಯಾಗಿ ನಿಂತಿದೆ. ಹಲವು ದಾಳಿಗಳನ್ನು ಕನ್ನಡ ಎದುರಿಸಿ ನಿಂತಿದೆ. ಕನ್ನಡಕ್ಕೆ ತನ್ನದೇ ಆದ ಅಂತರ್ಗತ ಶಕ್ತಿ ಇದೆ.‌ ಇದನ್ನು ಕಡಿಮೆ ಮಾಡಲು ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದರು. ಕೋವಿಡ್ ಹಿನ್ನೆಲೆಯಲ್ಲಿ ಕನ್ನಡದ ರಾಜ್ಯೋತ್ಸವವನ್ನು ಸೀಮಿತವಾಗಿ ಆಚರಣೆ ಮಾಡಬೇಕಾಗಿ ಬಂದಿದೆ ಎಂದ ಅವರು, ಕನ್ನಡ ನಮ್ಮೆಲ್ಲರನ್ನು ಒಗ್ಗೂಡಿಸಿದೆ. ಅದು ಬೇರು ಇದ್ದಂತೆ. ಈ ತಾಯಿ ಬೇರನ್ನು ಸಂರಕ್ಷಣೆ ಮಾಡಿ ಅದರ ಮೂಲಕ ಪ್ರಪಂಚದಲ್ಲಿ ಅತೀ ದೊಡ್ಡ ಮರವನ್ನಾಗಿ ಮಾಡಬೇಕಿದೆ ಎಂದರು. ಮನಕುಲಕ್ಕೆ ಕನ್ನಡದ ಮಹತ್ವ ಪ್ರಯೋಜನ ಹಾಗೂ ಸ್ವಾಭಿಮಾನ ತಿಳಿಸುವ ಶತಮಾನ 21 ನೇ ಶತಮಾನಾಗಿದೆ ಎಂದು ಹೇಳಿದರು. ಕನ್ನಡಕ್ಕೆ ದೊಡ್ಡ ಇತಿಹಾಸ ಇದೆ. ಭಾಷೆ ಬದುಕನ್ನು ರೂಪಿಸುವ ಅಸ್ತ್ರವಾಗಿದೆ. ಭಾಷೆ ಗಟ್ಟಿ ಆದಷ್ಟು ನಾಡು ಶಕ್ತಿಶಾಲಿ‌ ಆಗಿರುತ್ತದೆ. ಕನ್ನಡವನ್ನು ಎಲ್ಲಾ ಆಯಾಮಗಳಲ್ಲಿ ವಿಸ್ತರಣೆ ಮಾಡಬೇಕಿದೆ. ಕನ್ನಡವನ್ನು ಗಡಿಗಳಿಗೆ ಸೀಮಿತಗೊಳಿಸಿ ನೋಡಬಾರದು. ಹೈದರಾಬಾದ್ ಕರ್ನಾಟಕ ಕಲ್ಯಾಣ ಕರ್ನಾಟಕ ಎಂದು ಹೆಸರಿಡಲಾಯಿತು, ಮುಂದಿನ ಸಚಿವ ಸಂಪುಟದಲ್ಲಿ ಮುಂಬಯಿ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಬಳಕೆ ಮಾಡಲು ನಿರ್ಣಯ ಕೈಗೊಳ್ಳಲಾಗುವುದು ಎಂದು‌ ತಿಳಿಸಿದರು. ಕರ್ನಾಟಕ ಏಕೀಕರಣ ಆದ ಮೇಲೆ ಗಡಿ ವಿವಾದ ಪ್ರಾರಂಭವಾಯಿತು.‌ ಆದರೂ ಅಲ್ಲಲ್ಲಿ ಗಡಿ ವಿವಾದ ಇದೆ. ಇಂತಹ ಸಂದರ್ಭಗಳಲ್ಲಿ ಮುಂಬಯಿ ಕರ್ನಾಟಕ ಎಂದು ಕರೆಯುವುದು ಅರ್ಥವಿಲ್ಲ. ಹೆಸರಿನ ಬದಲಾವಣೆ ಜೊತೆಗೆ ಜನರ ಬದುಕು ಉತ್ತಮಗೊಳಿಸಲು ಕ್ರಮ. ಪ್ರಾದೇಶಿಕ ಅಸಮತೋಲನ ಹೋಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ನಡೆಸಲಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಅನುದಾನ ದುಪ್ಪಟ್ಟು ಮಾಡಲಾಗುವುದು. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 3000 ಕೋಟಿ ಅನುದಾನ ನೀಡುವುದರ ಜೊತೆ ಕಿತ್ತೂರು ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದರು. ಮೈಸೂರು ಭಾಗದಲ್ಲಿ ಬಾಕಿ ಇರುವ ನಿರಾವರಿ ಯೋಜನೆ ಪೂರ್ಣಗೊಳಿಲಾಗಿವುದು ಎಂದರು. ಕೌಶಲ್ಯ ವಲಯದಲ್ಲಿ ಕನ್ನಡಿಗರಿಗೆ 75 ಶೇಕಡಾ ಉದ್ಯೋಗ ಸಿಗಬೇಕು. ‌ಖಾಸಗಿ ಸರಕಾರಿ ಹಾಗೂ ಅರೆ ಸರ್ಕಾರಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುವ ನಿಟ್ಟಿನಲ್ಲಿ ಪ್ರಾಧ್ಯಾನ್ಯತೆ ನೀಡುವುದು ಜೊತೆಗೆ ಆಡಳಿತದಲ್ಲಿ ಕನ್ನಡಕ್ಕಾಗಿ ವಿಶೇಷ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಮುಂದಿನ ದಿನಗಳಲ್ಲಿ ಕನ್ನಡ ಜನೋತ್ಸವವಾಗಬೇಕು. ಸಮಗ್ರವಾದ ಅಭಿವೃದ್ಧಿ ಆದರೆ ಮಾತ್ರ ಜನೋತ್ಸವ ಆಗಲು ಸಾಧ್ಯ ಎಂದರು.


from India & World News in Kannada | VK Polls https://ift.tt/3mEBMx3

ಮಡಿಕೇರಿ ಮಿನಿ ವಿಧಾನಸೌಧಕ್ಕೆ ಗ್ರಹಣ; ಐದು ವರ್ಷ ಕಳೆದರೂ ಮುಗಿಯದ ಕಾಮಗಾರಿ!

ಉದಿಯಂಡ ಜಯಂತಿ ಮಂದಣ್ಣ ಮಡಿಕೇರಿ: ಐದು ವರ್ಷ ಕಳೆದರೂ ಜಿಲ್ಲಾಕೇಂದ್ರ ಮಡಿಕೇರಿ ತಾಲೂಕು ಕಟ್ಟಡ ಮೇಲೇಳುವ ಲಕ್ಷಣಗಳು ಕಂಡು ಬರುತ್ತಿಲ್ಲ. ಮಡಿಕೇರಿ ನಗರದ ಕಾನ್ವೆಂಟ್‌ ಜಂಕ್ಷನ್‌ ಸಮೀಪ 1.5 ಎಕರೆ ಪ್ರದೇಶದಲ್ಲಿ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ 2016ರಲ್ಲೇ ಆರಂಭವಾಗಿದೆ. ಮೊದಲ ಹಂತದಲ್ಲಿ 5 ಕೋಟಿ ರೂ. ಯೋಜನೆಯಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಸ್ಥಗಿತಗೊಂಡಿದ್ದು, ಮಿನಿ ವಿಧಾನಸೌಧ ಕಟ್ಟಡ ಸದ್ಯ ಪಾಳು ಬಿದ್ದ ಸ್ಥಿತಿಯಲ್ಲಿದೆ. ಮೊದಲ ಹಂತದಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಕೆಲಸ ಪೂರ್ಣಗೊಂಡಿದೆ. ಎರಡನೇ ಹಂತದ ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಿದೆ. ಕಟ್ಟಡ ಕಾಮಗಾರಿಗೆ ಕಂದಾಯ ಇಲಾಖೆಯ ನಿರ್ದೇಶನದಂತೆ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಅಧಿಕಾರಿಗಳ ಉಸ್ತುವಾರಿಯಲ್ಲಿ ಖಾಸಗಿ ಕಂಪನಿ 2016ರಲ್ಲಿ ಗುತ್ತಿಗೆ ಆರಂಭಿಸಿತ್ತು. ಆರಂಭದ ಸಮಯದಲ್ಲಿ ಜೌಗು ಭೂಮಿಯನ್ನು ಮಿನಿ ವಿಧಾನಸೌಧಕ್ಕೆ ನೀಡಲಾಗಿದೆ ಎಂಬ ಅಸಮಾಧಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದ್ದವು. ನಂತರ ಕೆಲ ಸಮಯದಲ್ಲಿ ನಿವೇಶನದ ಗೊಸರು, ನಿರಂತರ ಜಲಮೂಲ ಸಮಸ್ಯೆ, ಮಳೆಗಾಲದಲ್ಲಿ ಇಡೀ ಪ್ರದೇಶ ಕೆಸರುಮಯವಾಗಿ ಪರಿರ್ವತನೆಗೊಂಡ ಪರಿಣಾಮ ಹಲವು ಸಮಯ ಕೆಲಸ ಮುಂದುವರೆಯಲೇ ಇಲ್ಲ. ಇದೆಲ್ಲದರ ನಡುವೆ ಸುಮಾರು 22 ಅಡಿಯಷ್ಟು ಆಳಕ್ಕೆ ನಿವೇಶನದ ಮಣ್ಣು ತೆರವುಗೊಳಿಸಲಾಯಿತು. ಆ ಮುಖಾಂತರ ಅಷ್ಟೇ ಆಳದಿಂದ ಕಬ್ಬಿಣದ ಸಲಾಕೆಗಳ ಬಳಕೆಯೊಂದಿಗೆ ಕಟ್ಟಡ ತಜ್ಞರ ಅಭಿಪ್ರಾಯದಂತೆ 20 ಅಡಿ ಕಾಂಕ್ರಿಟ್‌ ಬಿಡ್‌ನಿಂದ ಕೂಡಿದ ಪಿಲ್ಲರ್‌ ನಿರ್ಮಿಸಲಾಯಿತು. ಹೀಗೆ ನಾಲ್ಕು ಅಡಿಯಷ್ಟು ಮೊದಲ ಹಂತದ ಕಾಂಕ್ರಿಟ್‌ ಬಿಡ್‌ ನಿರ್ಮಿಸುವುದರೊಂದಿಗೆ ಆ ಹಂತದಲ್ಲಿ ಮಣ್ಣನ್ನು ತುಂಬಿ ನಿವೇಶನವನ್ನು ಸಮತಟ್ಟುಗೊಳಿಸಲಾಗಿದೆ. ಆರಂಭದ ವರ್ಷದಲ್ಲೇ ಮೊದಲ ಹಂತದಲ್ಲಿ ಅಲ್ಪಸ್ವಲ್ಪ ಕಾಮಗಾರಿ ಮಾತ್ರ ಪೂರ್ಣಗೊಂಡಿದ್ದು, ಎರಡು ಅಂತಸ್ತಿನ ಸ್ಲ್ಯಾಬ್ ಪೂರ್ಣಗೊಂಡು, ಮುಂದಿನ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಕಟ್ಟಡದ ಡಿಸೈನ್‌ನನ್ನು ಮಂಗಳೂರು ಮೂಲದ ಆರ್ಕಿಟೆಕ್ಟ್ ಡಿಸೈನ್‌ ಮಾಡಿಕೊಟ್ಟಿದ್ದು, ಇದರಂತೆ ಕಟ್ಟಡ ಕಾಮಗಾರಿ ನಡೆಸಲಾಗುತ್ತಿದೆ. ಈ ಕಟ್ಟಡದಲ್ಲಿವೆ ಹಲವು ಕಚೇರಿ ಮೂರು ಅಂತಸ್ತನ್ನು ಒಳಗೊಂಡಿರುವ ಕಟ್ಟಡ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ಕಚೇರಿಗಳನ್ನು ಒಳಗೊಳ್ಳಲಿದೆ. ಮೀಟಿಂಗ್‌ ಹಾಲ್‌, ಸಬ್‌ ರಿಜಿಸ್ಟ್ರಾರ್‌ ಕಚೇರಿ, ಕಂದಾಯ ಇಲಾಖೆಯ ಖಜಾನೆ, ಪಹಣಿ ಕೇಂದ್ರ, ಶಾಸಕರ ಕಚೇರಿಗಳು, ಆರ್‌ಟಿಸಿ ನೀಡುವ ಸಿಬ್ಬಂದಿ ಕಚೇರಿ, ಚುನಾವಣೆ ಸಂದರ್ಭ ಸಭೆ ನಡೆಸಲು ಸಭಾಂಗಣ ನಿರ್ಮಾಣದ ಯೋಜನೆಯನ್ನು ಮಿನಿ ವಿಧಾನಸೌಧ ಒಳಗೊಂಡಿದೆ. ಕಾಮಗಾರಿ ಪೂರ್ಣಗೊಳಿಸಲು ಆಗ್ರಹ ದಿನನಿತ್ಯ ಕಂದಾಯ ಇಲಾಖೆಯ ಕೆಲಸಕ್ಕಾಗಿ ನೂರಾರು ಸಾರ್ವಜನಿಕರು ಕಂದಾಯ ಇಲಾಖೆಗೆ ಭೇಟಿ ನೀಡುತ್ತಾರೆ. ಹೀಗಿರುವಾಗ ಕಂದಾಯ ಇಲಾಖೆಗೆ ಶಾಶ್ವತವಾಗಿ ಕಟ್ಟಡ ಇಲ್ಲದೆ ಇರುವುದರಿಂದ ದೂರದೂರಿನಿಂದ ಬರುವ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದ್ದು, ಶೀಘ್ರದಲ್ಲಿಯೇ ಕಟ್ಟಡ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುವು ಮಾಡಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ. ಮೊದಲ ಹಂತದಲ್ಲಿ ಸರಕಾರದಿಂದ ಲಭ್ಯವಾದ 5 ಕೋಟಿ ರೂ. ಅನುದಾನದಲ್ಲಿ ಕಟ್ಟಡ ಕಾಮಗಾರಿಯನ್ನು ಮಾಡಿದ್ದೇವೆ. ಎರಡನೇ ಹಂತದ ಕಾಮಗಾರಿಗಾಗಿ 5 ಕೋಟಿ ರೂ. ಮಂಜೂರಾಗಿದೆ. ಶೀಘ್ರದಲ್ಲಿಯೇ ಟೆಂಡರ್‌ ಕರೆದು 9 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಮಹೇಶ್‌ ಎಡಬ್ಲ್ಯೂಇ. ಉಸ್ತುವಾರಿ, ಮಿನಿ ವಿಧಾನಸೌಧ


from India & World News in Kannada | VK Polls https://ift.tt/3w3qB3U

'ಸೂದ್‌ ಭಾಯ್‌, ಭಾರತದ ಆಟಗಾರರಿಗೆ ಟಿಕೆಟ್‌ ಕೊಡಿಸಿ ಪ್ಲೀಸ್‌..' ಅಭಿಮಾನಿಗಳಿಂದ ಆಕ್ರೋಶ!

ಹೊಸದಿಲ್ಲಿ: ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸುವ ಮೂಲಕ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ರೇಸ್‌ನಿಂದ ಬಹುತೇಕ ಹೊರ ಬಿದ್ದಿರುವ ನಾಯಕತ್ವದ ಟೀಮ್‌ ಇಂಡಿಯಾವನ್ನು ಮಾಜಿ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಟೀಕಿಸಿದ್ದಾರೆ. ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಟೀಮ್ ಇಂಡಿಯಾ, ಮತ್ತೊಮ್ಮೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು ಹಾಗೂ ತನ್ನ ಪಾಲಿನ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 110 ರನ್‌ಗಳ ಅಲ್ಪ ಮೊತ್ತ ದಾಖಲಿಸಲಷ್ಟೇ ಶಕ್ತವಾಯಿತು. ಆಮೂಲಕ ನ್ಯೂಜಿಲೆಂಡ್‌ಗೆ ಕೇವಲ 111 ರನ್ ಸಾಧಾರಣ ಗುರಿ ನೀಡಿತು. ಬಳಿಕ ಸಾಧಾರಣ ಗುರಿ ಹಿಂಬಾಲಿಸಿದ ನ್ಯೂಜಿಲೆಂಡ್‌ ತಂಡ ಎಚ್ಚರಿಕೆಯ ಆಟವಾಡಿ 14.3 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್‌ಗಳ ನಷ್ಟದಲ್ಲಿ ಮೆಟ್ಟಿನಿಂತಿತು. ಈ ಮೂಲಕ ಸೂಪರ್‌ 12 ಹಂತದಲ್ಲಿ ತನ್ನ ಮೊದಲ ಜಯ ದಾಖಲಿಸಿದ ನ್ಯೂಜಿಲೆಂಡ್‌ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದು ಸೆಮಿಫೈನಲ್‌ ರೇಸ್‌ನಲ್ಲಿ ಉಳಿದಿದೆ. ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ವಿರುದ್ಧ ಎರಡು ಅಭ್ಯಾಸ ಪಂದ್ಯಗಳಲ್ಲಿ ಭರ್ಜರಿ ಗೆಲುವು ಪಡೆದ ಬಳಿಕ ಪಾಕಿಸ್ತಾನ ವಿರುದ್ದದ ಮೊದಲನೇ ಕಾದಾಟಕ್ಕೆ ಭಾರತ ಸಾಕಷ್ಟು ವಿಶ್ವಾದಲ್ಲಿತ್ತು. ಆದರೆ, ಕೊಹ್ಲಿ ಬಾಯ್ಸ್‌ ಪಾಕ್‌ ವಿರುದ್ಧ 10 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸುವ ಮೂಲಕ ಎಲ್ಲರಿಗೂ ನಿರಾಸೆ ಮೂಡಿಸಿದ್ದಾರೆ. ಈ ಸೋಲಿನೊಂದಿಗೆ ಭಾರತ ತಂಡ ಸೆಮಿಫೈನಲ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಸತತ ಎರಡನೇ ಪಂದ್ಯದಲ್ಲಿಯೂ ಹೀನಾಯ ಸೋಲು ಅನುಭವಿಸಿದ ಟೀಮ್‌ ಇಂಡಿಯಾ ವಿರುದ್ಧ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ದುಬೈ ಸ್ಟೇಡಿಯಂನಿಂದ ಹೊರ ಬಂದ ಅಭಿಮಾನಿಗಳು ಸೋಲಿನ ಬಗ್ಗೆ ಪ್ರತಿಕ್ರಿಯಿಸಿ, ಭಾರತ ತಂಡ ಅತ್ಯಂತ ಕಳಪೆ ಪ್ರದರ್ಶನ ತೋರಿದೆ ಹಾಗೂ ಟೆಸ್ಟ್‌ ತಂಡದ ರೀತಿ ಆಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ, ಟಿ20 ಕ್ರಿಕೆಟ್‌ ಸ್ವರೂಪದಂತೆ ಭಾರತ ಉತ್ತಮ ಪ್ರದರ್ಶನ ತೋರಲಿಲ್ಲ. ತಂಡದ ಆಯ್ಕೆ ಕೂಡ ಸರಿ ಇರಲಿಲ್ಲ ಎಂದು ಟೀಮ್‌ ಮ್ಯಾನೇಜ್‌ಮೆಂಟ್‌ ವಿರುದ್ಧ ದೂರಿದ್ದಾರೆ. ಅಷ್ಟೇ ಅಲ್ಲದೆ ಟ್ವಿಟರ್‌ನಲ್ಲಿಯೂ ಮಾಜಿ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ಟೀಮ್‌ ಇಂಡಿಯಾದ ಅತ್ಯಂತ ನೀರಸ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋತಿರುವ ಟೀಮ್‌ ಇಂಡಿಯಾ ಆಟಗಾರರು ತವರಿಗೆ ಮರಳಲು ವಿಮಾನದ ಟಿಕೆಟ್‌ ಬುಕ್‌ ಮಾಡುವಂತೆ ಸೋನು ಸೂದ್‌ಗೆ ಒಬ್ಬ ಅಭಿಮಾನಿ ಮನವಿ ಮಾಡುವ ಮೂಲಕ ಕೊಹ್ಲಿ ಪಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್‌ ವಿನೋದ್‌ ಕಾಂಬ್ಲಿ ಪ್ರತಿಕ್ರಿಯಿಸಿ, "ಟೀಂ ಇಂಡಿಯಾದಿಂದ ನಿರಾಶಾದಾಯಕ ಪ್ರದರ್ಶನ ಇದಾಗಿದೆ. ಹೇಳಲು ಏನು ಉಳಿದಿಲ್ಲ..." ಎಂದು ಟ್ವೀಟ್‌ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ವಿರಾಟ್‌ ಕೊಹ್ಲಿ ಒಬ್ಬರೇ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ಭಾರತದ ವೈಫಲ್ಯಕ್ಕೆ ವಿರಾಟ್‌ ಕೊಹ್ಲಿ ಒಬ್ಬರೇ ಕಾರಣದಲ್ಲಿ, ತಂಡದ ಆಟಗಾರರು ಹಾಗೂ ಕೋಚ್‌ಗಳು ಕೂಡ ಕಾರಣರಾಗಿದ್ದಾರೆ," ಎಂದು ಟೀಮ್‌ ಇಂಡಿಯಾ ಮಾಜಿ ನಾಯಕ ಮೊಹಮ್ಮದ್‌ ಅಝರುದ್ದೀನ್‌ ಟ್ವೀಟ್ ಮಾಡಿ ಕೊಹ್ಲಿಯನ್ನು ಬೆಂಬಲಿಸಿದ್ದಾರೆ. ಪಂದ್ಯದ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್‌ ಕೊಹ್ಲಿ, "ಭಾರತ ತಂಡದ ಪರ ಆಡುವಾಗ ನಿಮ್ಮ ಮೇಲೆ ಸಾಮಾನ್ಯವಾಗಿ ಸಾಕಷ್ಟು ನಿರೀಕ್ಷೆಗಳು ಇರುತ್ತವೆ. ಇದು ಕೇವಲ ಅಭಿಮಾನಿಗಳಿಂದ ಮಾತ್ರವಲ್ಲದೆ, ಆಟಗಾರರಿಂದಲೂ ಕೂಡ ನಿರೀಕ್ಷೆ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದು ನಮ್ಮ ಮೇಲೆ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತದೆ ಹಾಗೂ ಇದನ್ನು ಕಳೆದ ಹಲವು ವರ್ಷಗಳಿಂದ ನಾವು ಸ್ವೀಕರಿಸಿದ್ದೇವೆ," ಎಂದರು. "ಭಾರತ ತಂಡದ ಪರ ಆಡುವ ಪ್ರತಿಯೊಬ್ಬರೂ ಇದನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇದನ್ನು ಸ್ವೀಕರಿಸಿ ಪ್ರತಿಯೊಬ್ಬರು ಒಂದು ತಂಡವಾಗಿ ಆಡಿದಾಗ, ಒತ್ತಡವನ್ನು ಮೆಟ್ಟಿ ನಿಲ್ಲಬಹುದು. ಆದರೆ, ಕಳೆದ ಎರಡು ಪಂದ್ಯಗಳಲ್ಲಿ ನಾವು ಇದನ್ನು ಮಾಡಿಲ್ಲ," ಎಂದು ವಿರಾಟ್‌ ಕೊಹ್ಲಿ ಬೇಸರ ವ್ಯಕ್ತಪಡಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3jURphL

'ಬ್ಯಾಟಿಂಗ್‌ ಅಥವಾ ಬೌಲಿಂಗ್‌ನಲ್ಲಿ ನಾವು ಧೈರ್ಯಶಾಲಿಗಳಾಗಿರಲಿಲ್ಲ': ಕೊಹ್ಲಿ!

ದುಬೈ: ಪಾಕಿಸ್ತಾನ ಹಾಗೂ ವಿರುದ್ದದ ಎರಡೂ ಪಂದ್ಯಗಳಲ್ಲಿ ಆಟಗಾರರು ಧೈರ್ಯಶಾಲಿಯಾಗಿರಲಿಲ್ಲ ಎಂದು ಭಾರತ ತಂಡದ ನಾಯಕ ಬೇಸರ ವ್ಯಕ್ತಪಡಿಸಿದರು. ನ್ಯೂಜಿಲೆಂಡ್‌ ವಿರುದ್ಧ ಸೋಲಿನ ಮೂಲಕ ಕೊಹ್ಲಿ ಪಡೆಯ ಸೆಮಿಫೈನಲ್‌ ಹಾದಿ ಕಠಿಣವಾಗಿದೆ. ಭಾನುವಾರ ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಟೀಮ್ ಇಂಡಿಯಾ, ಮತ್ತೊಮ್ಮೆ ಬ್ಯಾಟಿಂಗ್‌ ವೈಫಲ್ಯ ಕಂಡು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 110 ರನ್‌ಗಳ ಅಲ್ಪ ಮೊತ್ತ ದಾಖಲಿಸಲಷ್ಟೇ ಶಕ್ತವಾಯಿತು. ಗೆಲ್ಲಲು 111 ರನ್‌ಗಳ ಸುಲಭದ ಗುರಿ ಬೆನ್ನತ್ತಿದ ಕಿವೀಸ್‌ ಪಡೆ ಎಚ್ಚರಿಕೆಯ ಆಟವಾಡಿ 14.3 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್‌ಗಳ ನಷ್ಟದಲ್ಲಿ ಮೆಟ್ಟಿನಿಂತಿತು. ಈ ಮೂಲಕ ಸೂಪರ್‌ 12 ಹಂತದಲ್ಲಿ ತನ್ನ ಮೊದಲ ಜಯ ದಾಖಲಿಸಿದ ನ್ಯೂಜಿಲೆಂಡ್‌ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದು ಸೆಮಿಫೈನಲ್‌ ರೇಸ್‌ನಲ್ಲಿ ಉಳಿದಿದೆ. ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ, ಈ ಎರಡೂ ಪಂದ್ಯಗಳಲ್ಲಿ ನಮ್ಮವರು ಮೈದಾನದಲ್ಲಿ ಧೈರ್ಯಶಾಲಿಯಾಗಿ ಕಂಡುಬಂದಿರಲಿಲ್ಲ ಎಂದು ಹೇಳಿದರು. "ಸಾಕಷ್ಟು ವಿಲಕ್ಷಣ. ಬ್ಯಾಟಿಂಗ್‌ ಅಥವಾ ಬೌಲಿಂಗ್‌ನಲ್ಲಿ ನಾವು ಧೈರ್ಯಶಾಲಿಯಾಗಿ ಕಂಡು ಬಂದಿದ್ದೇವೆಂದು ನಾನು ಭಾವಿಸುವುದಿಲ್ಲ. ನಮ್ಮನ್ನು ನಾವು ಹೆಚ್ಚು ಸಮರ್ಥಿಸಿಕೊಳ್ಳುವುದಿಲ್ಲ ಆದರೆ ಮೈದಾನಕ್ಕೆ ಕಾಲಿಟ್ಟಾಗ ನಾವು ಧೈರ್ಯಶಾಲಿಯಾಗಿರಲಿಲ್ಲ. ನಾವು ಇನ್ನೇನು ಪಂದ್ಯ ಆರಂಭಿಸಬೇಕೆಂದಾಗ ನಮ್ಮ ವಿಕೆಟ್‌ಗಳು ಉರುಳುತ್ತಿದ್ದವು. ಟಿ20 ಕ್ರಿಕೆಟ್‌ನಲ್ಲಿ ಕೆಲವು ಹಿಂಜರಿಕೆಗಳು ಬಂದಾಗ ಇಂಥಾ ಘಟನೆಗಳು ಸಂಭವಿಸುತ್ತವೆ," ಎಂದು ವಿರಾಟ್‌ ಕೊಹ್ಲಿ ತಿಳಿಸಿದ್ದಾರೆ. ಆರಂಭಿಕ ಎರಡೂ ಪಂದ್ಯಗಳಲ್ಲಿ ಭಾರತ ತಂಡದ ಬ್ಯಾಟಿಂಗ್‌ ತುಂಬಾ ಹೀನಾಯವಾಗಿತ್ತು. ಪಾಕಿಸ್ತಾನ ವಿರುದ್ಧ 152 ರನ್‌ ಗಳಿಸಿದ್ದ ಕೊಹ್ಲಿ ಪಡೆ, ನ್ಯೂಜಿಲೆಂಡ್‌ ವಿರುದ್ಧ ಕೇವಲ 110 ರನ್‌ಗಳಿಗೆ ಸೀಮಿತವಾಯಿತು. ರವೀಂದ್ರ ಜಡೇಜಾ(26*) ಭಾರತದ ಪರ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. 14.3 ಓವರ್‌ಗಳಲ್ಲಿ ಗುರಿ ತಲುಪಲು ನ್ಯೂಜಿಲೆಂಡ್‌ಗೆ ಡ್ಯಾರಿಲ್‌ ಮಿಚೆಲ್‌ ಹಾಗೂ ಕೇನ್‌ ವಿಲಿಯಮ್ಸನ್‌ ನೆರವಾದರು. ಈ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್‌ ಕೊಹ್ಲಿ, "ಭಾರತ ತಂಡದ ಪರ ಆಡುವಾಗ ನಿಮ್ಮ ಮೇಲೆ ಸಾಮಾನ್ಯವಾಗಿ ಸಾಕಷ್ಟು ನಿರೀಕ್ಷೆಗಳು ಇರುತ್ತವೆ. ಇದು ಕೇವಲ ಅಭಿಮಾನಿಗಳಿಂದ ಮಾತ್ರವಲ್ಲದೆ, ಆಟಗಾರರಿಂದಲೂ ಕೂಡ ನಿರೀಕ್ಷೆ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದು ನಮ್ಮ ಮೇಲೆ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತದೆ ಹಾಗೂ ಇದನ್ನು ಕಳೆದ ಹಲವು ವರ್ಷಗಳಿಂದ ನಾವು ಸ್ವೀಕರಿಸಿದ್ದೇವೆ," ಎಂದರು. "ಭಾರತ ತಂಡದ ಪರ ಆಡುವ ಪ್ರತಿಯೊಬ್ಬರೂ ಇದನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇದನ್ನು ಸ್ವೀಕರಿಸಿ ಪ್ರತಿಯೊಬ್ಬರು ಒಂದು ತಂಡವಾಗಿ ಆಡಿದಾಗ, ಒತ್ತಡವನ್ನು ಮೆಟ್ಟಿ ನಿಲ್ಲಬಹುದು. ಆದರೆ, ಕಳೆದ ಎರಡು ಪಂದ್ಯಗಳಲ್ಲಿ ನಾವು ಇದನ್ನು ಮಾಡಿಲ್ಲ," ಎಂದು ವಿರಾಟ್‌ ಕೊಹ್ಲಿ ಬೇಸರ ವ್ಯಕ್ತಪಡಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3w0FELy

ಶಾಂತಿಯುತವಾಗಿ ನಡೆದ ಅಪ್ಪು ಅಂತ್ಯಸಂಸ್ಕಾರ; ಅಭಿಮಾನಿಗಳ ಸಂಯಮದ ನಡೆಗೆ ವ್ಯಾಪಕ ಪ್ರಶಂಸೆ

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಅಂತಿಮ ನಮನಕ್ಕೆ ಲಕ್ಷೋಪಲಕ್ಷ ಮಂದಿ ಅಭಿಮಾನಿಗಳು ಹರಿದು ಬಂದರೂ ಬಹಳ ಸಂಯಮದಿಂದ ನಡೆದುಕೊಂಡರು. ಯಾರೂ ಅತಿರೇಕದಿಂದ ವರ್ತಿಸಲಿಲ್ಲ. ಸರದಿ ಸಾಲಿನಲ್ಲಿ ಗಂಟೆಗಟ್ಟಲೇ ಕಾದು ನಿಂತರು ತಾಳ್ಮೆ ಕಳೆದುಕೊಳ್ಳಲಿಲ್ಲ. ಅಂತ್ಯಸಂಸ್ಕಾರವೂ ಸುಸೂತ್ರವಾಗಿ ನಡೆಯಿತು. ಅಪ್ಪು ಅಭಿಮಾನಿಗಳು ಶಾಂತಿಪ್ರಿಯರು ಎಂಬುದು ಮತ್ತೊಮ್ಮೆ ಸಾಬೀತಾಯಿತು. ಇದರ ಜತೆಗೆ, ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತು, ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ, ಕಾನೂನು ಸುವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಮೇರು ನಟನ ಅಂತ್ಯಸಂಸ್ಕಾರಕ್ಕೆ ಶ್ರಮಿಸಿದ ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಸರಕಾರ, ಅಧಿಕಾರಿಗಳು ಹಾಗೂ ಪೊಲೀಸ್‌ ಇಲಾಖೆ ಬಗ್ಗೆಯೂ ಸಾರ್ವಜನಿಕರು ಮತ್ತು ಚಲನಚಿತ್ರರಂಗದಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಪಾಠ ಕಲಿಸಿದ ಹಿಂದಿನ ಕಹಿ ಘಟನೆಗಳು :ಕಳೆದ 16 ವರ್ಷಗಳಿಂದೀಚೆಗೆ ರಾಜ್ಯ ಮತ್ತು ಚಲನಚಿತ್ರ ರಂಗ ಡಾ.ರಾಜ್‌ಕುಮಾರ್‌, ಡಾ.ವಿಷ್ಣುವರ್ಧನ್‌, ಡಾ.ಅಂಬರೀಶ್‌ ಹಾಗೂ ಅ.29ರಂದು ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ನಾಲ್ಕು ಅಮೂಲ್ಯ ರತ್ನಗಳನ್ನು ಕಳೆದುಕೊಂಡಿದೆ. 2006ರ ಏಪ್ರಿಲ್‌ 12ರಂದು ಡಾ.ರಾಜ್‌ಕುಮಾರ್‌ ಅವರು ಮೃತಪಟ್ಟಾಗ ಬೆಂಗಳೂರು ನಗರದಲ್ಲಿ ಭಾರಿ ಗಲಭೆ ನಡೆದಿತ್ತು. ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡುವುದರಿಂದ ಹಿಡಿದು ಅಂತ್ಯಕ್ರಿಯೆ ಆಗುವವರೆಗೂ ಭಾರಿ ಗಲಭೆ ಸಂಭವಿಸಿತ್ತು. ಅಂತ್ಯಕ್ರಿಯೆಯಲ್ಲಿ ಡಾ.ರಾಜ್‌ಕುಮಾರ್‌ ಅವರ ಕುಟುಂಬಸ್ಥರು ಪಾಲ್ಗೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿತ್ತು. ವಾಹನಗಳು, ಪೆಟ್ರೋಲ್‌ ಬಂಕ್‌ಗಳಿಗೆ ಬೆಂಕಿ ಹಚ್ಚಿದ್ದ ಕಿಡಿಗೇಡಿಗಳು, ವಾಹನಗಳನ್ನು ಸುಟ್ಟು ಮತ್ತು ಕಟ್ಟಡಗಳ ಗಾಜುಗಳನ್ನು ಒಡೆದು ಹಾಕಿದ್ದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಹಲವು ಬಾರಿ ಲಾಠಿ ಚಾರ್ಜ್‌ ಮಾಡಿದ್ದರು ಮತ್ತು ಗೋಲಿಬಾರ್‌ನಲ್ಲಿ ಹಲವು ಮಂದಿ ಜೀವ ಬಿಟ್ಟರು. ಹಲವರು ಗಾಯಗೊಂಡ್ದಿರು. ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಕೂಡ ಸಾಕಷ್ಟು ನೋವುಂಡರು. ನಂತರ, 2009ರ ಡಿಸೆಂಬರ್‌ 30ರಂದು ನಟ ವಿಷ್ಣುವರ್ಧನ್‌ ಅವರು ಮೃತಪಟ್ಟ ಸಂದರ್ಭದಲ್ಲೂ ಇದೇ ಘಟನೆಗಳು ಮರುಕಳಿಸಿದವು. ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ದುಷ್ಕರ್ಮಿಗಳು, ಗಲಭೆ ಸೃಷ್ಟಿಸಿ, ವಾಹನಗಳನ್ನು ಸುಟ್ಟು ಹಾಕಿ, ರೆಸ್ಟೋರೆಂಟ್‌, ಅಂಗಡಿ, ಮಳಿಗೆಗಳ ಗಾಜುಗಳನ್ನು ಪುಡಿಪುಡಿ ಮಾಡಿ ಅವಾಂತರ ಸೃಷ್ಟಿಸಿದ್ದರು. ಈ ಎಲ್ಲಾ ಘಟನೆಗಳಿಂದ ಎಚ್ಚೆತ್ತುಕೊಂಡ ರಾಜ್ಯ ಸರಕಾರ, ಖ್ಯಾತನಾಮರು ಮೃತಪಟ್ಟಾಗ ಪೊಲೀಸ್‌ ಇಲಾಖೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡು, ಕಾನೂನು ಸುವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸಲು ಒತ್ತು ನೀಡಿತು. ಹಾಗಾಗಿ, 2018ರ ನವೆಂಬರ್‌ 24ರಂದು ನಟ ಅಂಬರೀಶ್‌ ಅವರ ಮೃತಪಟ್ಟ ವೇಳೆ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಅಂತ್ಯಕ್ರಿಯೆ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಲಿಲ್ಲ. ಸೂರ್ಯ ಮೂಡುವುದರೊಳಗೆ ಸ್ಥಳಕ್ಕೆ ತಲುಪಿದ ಮೆರವಣಿಗೆನಗರದ ಹೃದಯ ಭಾಗದಲ್ಲಿರುವ ಕಂಠೀರವ ಸ್ಟೇಡಿಯಂನಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಮೂರು ದಿನಗಳ ಕಾಲ ಹಗಲಿರುಳೆನ್ನದೆ ಸುಮಾರು 25 ಲಕ್ಷಕ್ಕೂ ಹೆಚ್ಚು ಮಂದಿ ದರ್ಶನ ಪಡೆದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖುದ್ದು ಸ್ಥಳದಲ್ಲಿ ಮೊಕ್ಕಾಂ ಹೂಡಿ, ಪರಿಸ್ಥಿತಿಯನ್ನು ನಿಭಾಯಿಸಿದರು. ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿದ್ದ ಕಾರಣ, ಬೆಂಗಳೂರು ನಗರದಾದ್ಯಂತ ಸುಮಾರು 10 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಕಿಡಿಗೇಡಿಗಳು ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂಬ ಕಾರಣದಿಂದ ಶನಿವಾರ ಸಂಜೆ ನಡೆಯಬೇಕಿದ್ದ ಅಂತ್ಯಕ್ರಿಯೆಯನ್ನು ಭಾನುವಾರಕ್ಕೆ ಮುಂದೂಡಲಾಗಿತ್ತು. ಪಾರ್ಥಿವ ಶರೀರದ ಮೆರವಣಿಗೆ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ದೊಡ್ಡ ಗುಂಪಾಗಿ ಅವಾಂತರ ಸೃಷ್ಟಿಸಬಹುದು ಎಂಬುದನ್ನು ಅರಿತ ಸರಕಾರ, ಭಾನುವಾರ ಮುಂಜಾನೆ 5ಕ್ಕೆ ಮೆರವಣಿಗೆ ಆರಂಭಿಸಿ, ಸೂರ್ಯ ಮೂಡುವುದರ ಒಳಗೆ ಅಂತ್ಯಕ್ರಿಯೆ ನಡೆಯಬೇಕಿದ್ದ ಕಂಠೀರವ ಸ್ಟುಡಿಯೊ ತಲುಪಲಾಯಿತು. ಭದ್ರತೆ ಮತ್ತು ಶಾಂತಿಯು ಅಂತ್ಯಕ್ರಿಯೆ ನಡೆಸುವ ಸಲುವಾಗಿ ಕೇವಲ ಗಣ್ಯರು ಮತ್ತು ಡಾ.ರಾಜ್‌ಕುಮಾರ್‌ ಅವರ ಕುಟುಂಬದವರಿಗೆ ಕಂಠೀರವ ಸ್ಟುಡಿಯೋ ಒಳಗೆ ಅವಕಾಶ ನೀಡಲಾಗಿತ್ತು. ಸಾರ್ವಜನಿಕರ ಅನುಕೂಲಕ್ಕಾಗಿ ಕಂಠೀರವ ಸ್ಟುಡಿಯೋ ಹೊರಗೆ ಬೃಹತ್‌ ಎಲ್‌ಇಡಿ ಪರದೆಗಳನ್ನು ನಿರ್ಮಿಸಿ, ನೇರ ಪ್ರಸಾರ ಮಾಡಲಾಯಿತು. ಮಂಗಳವಾರದವರೆಗೆ ನಿಷೇದಾಜ್ಞೆಡಾ.ರಾಜ್‌ಕುಮಾರ್‌ ಅವರ ಮೃತಪಟ್ಟ ವೇಳೆ ಅವರು ಕುಟುಂಬ ಸದಸ್ಯರಿಗೆ ಉತ್ತರ ಕ್ರಿಯೆ ಕಾರ್ಯಗಳನ್ನು ನಡೆಸಲು ಅಭಿಮಾನಿಗಳು ಬಿಟ್ಟಿರಲಿಲ್ಲ. ಕೆಲವರು ಸಮಾಧಿಯನ್ನು ಅಗೆಯಲು ಯತ್ನಿಸಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಅಪ್ಪು ಅವರ ಉತ್ತರ ಕ್ರಿಯೆಗಳಿಗೆ ಯಾವುದೇ ತೊಂದರೆಯಾಗದಂತೆ ಕಂಠೀರವ ಸ್ಟುಡಿಯೋ ಸುತ್ತಮತ್ತು ನ.2ರ ಮಂಗಳವಾರದವರೆಗೆ ಸರಕಾರ ನಿಷೇಧಾಜ್ಞೆ ವಿಧಿಸಿದೆ. ನಂತರ, ಸಾರ್ವಜನಿಕರು ಮತ್ತು ಅಭಿಮಾನಿಗಳಿಗೆ ಪೂಜೆಗೆ ಅವಕಾಶ ಕಲ್ಪಿಸಿಕೊಡಲು ನಿರ್ಧರಿಸಿದೆ.


from India & World News in Kannada | VK Polls https://ift.tt/2Y3b0Vv

ಹಿಂಗಾರು ಅಬ್ಬರ: ರಾಜ್ಯದಲ್ಲಿ ನಾಲ್ಕು ದಿನ ಭಾರಿ ಮಳೆ ಸಂಭವ!

ಬೆಂಗಳೂರು: ರಾಜ್ಯದಲ್ಲಿ ಕೂಡ ಆರ್ಭಟ ಮಾಡುತ್ತಿದ್ದು, ಮುಂದಿನ ನಾಲ್ಕು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಕಡೆ ಗುಡುಗು ಸಿಡಿಲಿನಿಂದ ಕೂಡಿದ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೊಅಲರ್ಟ್‌ ನೀಡಲಾಗಿದೆ. ಕರಾವಳಿ ಜಿಲ್ಲೆಗಳ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಭಾರಿ ಮಳೆಯಾಗುವ ಸಾಧ್ಯತೆ ಇದೆ. ನ.3 ಮತ್ತು ನ.5ರಂದು ಯೆಲ್ಲೊಅಲರ್ಟ್‌ ಹಾಗೂ ನ.4ರಂದು ಆರೆಂಜ್‌ ಅಲರ್ಟ್‌ ನೀಡಲಾಗಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಲ್ಲೆಗಳಿಗೆ ನ.1ರಿಂದ ನ.4ರವರೆಗೆ ಯೆಲ್ಲೊ ಅಲರ್ಟ್‌ ನೀಡಲಾಗಿದೆ. ನವೆಂಬರ್‌ 4ರಂದು ಮಲೆನಾಡಿನ ಜಿಲ್ಲೆಗಳ ಜತೆಗೆ ದಕ್ಷಿಣ ಒಳನಾಡಿನ ಚಾಮರಾಜನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಮೈಸೂರು, ರಾಮನಗರ ಜಿಲ್ಲೆಗಳಿಗೂ ಯೆಲ್ಲೊಅಲರ್ಟ್‌ ನೀಡಲಾಗಿದೆ. ಉತ್ತರ ಒಳನಾಡಿನ ಬೀದರ್‌, ಕಲಬುರಗಿ, ಯಾದಗಿರಿ, ಗದಗ, ಹಾವೇರಿ, ಧಾರವಾಡ, ಬೆಳಗಾವಿ, ಕೊಪ್ಪಳ, ಬಾಗಲಕೋಟ, ವಿಜಯಪುರ, ರಾಯಚೂರು ಜಿಲ್ಲೆಗಳಲ್ಲಿ ನ.1 ಮತ್ತು ನ.2ರಂದು ಒಣಹವೆ ಮುಂದುವರಿಯಲಿದ್ದು, ನ.3ರಿಂದ ನ.5ರವರೆಗೆ ಗುಡುಗು ಸಿಡಿಲು ಸಹಿತ ಮಳೆ, ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.


from India & World News in Kannada | VK Polls https://ift.tt/3jU0c3y

ಕರುನಾಡಿಗೆ ನಾಡಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಸೇರಿ ಗಣ್ಯರಿಂದ ರಾಜ್ಯೋತ್ಸವದ ಶುಭಾಶಯ

ಬೆಂಗಳೂರು: ನವೆಂಬರ್ 1 ಸಮಸ್ತ ಕನ್ನಡಿಗರು ಪುಳಕಗೊಳ್ಳುವ ದಿನ. ಅನ್ನೋದು ಕನ್ನಡಿಗರ ಪಾಲಿಗೆ ಒಂದು ಭಾವನಾತ್ಮಕ ಆಚರಣೆ. ಇಂದು ಆಚರಿಸುತ್ತಿರುವ ಕರ್ನಾಟಕದ ಜನತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಶುಭಾಶಯ ಕೋರಿದ್ದಾರೆ. ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಶುಭಾಶಯ ಕೋರಿ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ‘ಕರ್ನಾಟಕ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಶುಭ ಹಾರೈಕೆಗಳು. ಕರ್ನಾಟಕವು ತನ್ನ ಜನರ ಹೊಸತನದ ಶೋಧದ ತುಡಿತದಿಂದಾಗಿ ವಿಶೇಷ ಛಾಪು ಮೂಡಿಸಿದೆ. ರಾಜ್ಯವು ಅತ್ಯುತ್ಕೃಷ್ಟ ಸಂಶೋಧನೆ ಮತ್ತು ಉದ್ಯಮಶೀಲತೆಯಿಂದಾಗಿ ಮುಂಚೂಣಿಯಲ್ಲಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ’ ಎಂದು ಶುಭಹಾರೈಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕ ರಾಜ್ಯೋತ್ಸವಕ್ಕೆ ಶುಭಹಾರೈಸಿದ್ದು, ಸಮಸ್ತ ಕನ್ನಡಿಗರಿಗೆ ೬೬ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ನಾಡು-ನುಡಿ ರಕ್ಷಣೆಯ ಜೊತೆಗೆ ಸಮೃದ್ಧ, ಸಹಬಾಳ್ವೆಯ, ಅಭಿವೃದ್ಧಿಶೀಲ ಕರ್ನಾಟಕದ ನಿರ್ಮಾಣದ ನಿಟ್ಟಿನಲ್ಲಿ ಸಮಸ್ತ ಕನ್ನಡಿಗರೂ ಒಂದಾಗಿ ಮುನ್ನಡೆಯೋಣ. ಹಸಿರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ! ಎಂದು ಟ್ವೀಟ್‌ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಕೂಡ ನಾಡಹಬ್ಬಕ್ಕೆ ಶುಭಹಾರೈಸಿದ್ದು, ‘ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ನಾಡು, ನುಡಿ, ಜನಪದ, ಇತಿಹಾಸ, ಪರಂಪರೆ, ಸಂಸ್ಕೃತಿಗಳನ್ನು ಉಳಿಸುವ, ಬೆಳೆಸುವ ದೃಢ ಸಂಕಲ್ಪ ನಮ್ಮದಾಗಿರಲಿ. ಸಮೃದ್ಧ, ಆರೋಗ್ಯಪೂರ್ಣ, ಪ್ರಗತಿಶೀಲ ನವಕರ್ನಾಟಕದ ನಿರ್ಮಾಣದ ನಿಟ್ಟಿನಲ್ಲಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸೋಣ.’ ಎಂದು ಟ್ವೀಟ್‌ ಮಾಡಿದ್ದಾರೆ. ಇನ್ನು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕೂಡ ಸಮಸ್ತ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯ ಕೋರಿದ್ದು, ‘ಜಗತ್ತಿನ ಸಮಸ್ತ ಕನ್ನಡಿಗರಿಗೆ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ನಮ್ಮೆಲ್ಲರ ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವಾಗಲಿ. ಉಸಿರಿನ ಪ್ರತಿ ಕಣಕಣದಲ್ಲೂ ಕನ್ನಡವಿರಲಿ. ನಮ್ಮ ಆಶಯವೇ ಇದಾಗಿರಲಿ ಎಂದು ಹಾರೈಸಿದ್ದಾರೆ. ಅಲ್ಲದೇ, 1,500 ವರ್ಷಗಳಿಗೂ ಹೆಚ್ಚು ಘನ ಇತಿಹಾಸವುಳ್ಳ ಕನ್ನಡ, ಶಾಸ್ತ್ರೀಯ ಸ್ಥಾನ ಅಲಂಕರಿಸಿದ ಅಭಿಜಾತ ಕನ್ನಡ, ಅಷ್ಟ ಜ್ಞಾನಪೀಠಗಳ ಮೇರುಗನ್ನಡ, ನಮ್ಮ ಬದುಕು- ಬಾಳ್ವೆಯ ತಾಯ್ಗನ್ನಡ. ಕನ್ನಡವೆಂದರೆ ಬರೀ ಭಾಷೆಯಲ್ಲ, ನಮ್ಮ ಪಾಲಿನ ದೇವಭಾಷೆ. ನಮ್ಮ ಮನಸು- ಕನಸುಗಳನ್ನು ಅರಳಿಸಿ ಭವಿಷ್ಯದ ರೆಕ್ಕೆಕೊಟ್ಟು ಹಾರಲು ಶಕ್ತಿ ತುಂಬುವ ಜೀವಭಾಷೆ ಎಂದಿದ್ದಾರೆ. ಕನ್ನಡಿಗರ ಮನೆ-ಮನದಲ್ಲೂ ಕನ್ನಡ ಬೆಳಗುತ್ತಿದೆ, ನಿಜ. ಆದರೆ, ನಮ್ಮ ಕಣ್ಮಣಿಯಾಗಿದ್ದ ಅಕ್ಕರೆಯ ಅಪ್ಪು, ಅಣ್ಣಾವ್ರ ಮುದ್ದಿನ ಕುಡಿ ಪುನೀತ್‌ ರಾಜಕುಮಾರ್‌ ಅವರು ಕನ್ನಡ ಹಬ್ಬಕ್ಕೆ ಮುನ್ನ ನಮನ್ನಗಲಿದ್ದಾರೆ. ನಮ್ಮೊಳಗೆ ಕನ್ನಡ ದೀಪವನ್ನು ಬೆಳಗುತ್ತಲೇ ಕಳೆದುಹೋದ ಯುವರತ್ನನ ಆದರ್ಶಗಳಿಗೆ ಅಗ್ರಪೀಠ ಹಾಕಿ ನಮಿಸೋಣ. ಆ ಮೂಲಕ ಪುನೀತರಾಗೋಣ ಎಂದಿರುವ ಕುಮಾರಸ್ವಾಮಿ, ಭೂಮಂಡಲ ಇರುವಷ್ಟು ದಿನ ಕನ್ನಡವಿರುತ್ತದೆ. ಕನ್ನಡ ಇರುವಷ್ಟು ದಿನ ಅಪ್ಪು ಇರುತ್ತಾರೆ. ಈ ವರ್ಷ ಕನ್ನಡದ ಹಬ್ಬವನ್ನು ಪುನೀತ್‌ ರಾಜಕುಮಾರ್‌ ಅವರಿಗೆ ಅರ್ಪಿಸುತ್ತಾ, ಮತ್ತೊಮ್ಮೆ ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತೇನೆ ಎಂದಿದ್ದಾರೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಟ್ವೀಟ್‌ ಮಾಡಿ, 'ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷದ ಅವಿರತ ಪ್ರಯತ್ನದಿಂದಾಗಿ ಹರಿದುಹೋಗಿದ್ದ ಕರುನಾಡು ಕರ್ನಾಟಕ ರಾಜ್ಯವಾಗಿ ರೂಪುಗೊಂಡಿತು. ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ರಾಜ್ಯೋತ್ಸವ ದಿನವಾದ ಇಂದು ನಮನಗಳನ್ನು ಅರ್ಪಿಸುತ್ತೇನೆ.' ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/3BvAqZt

ಶಿಥಿಲ ಕಟ್ಟಡಗಳಲ್ಲೇ ವಿದ್ಯಾರ್ಥಿಗಳಿಗೆ ಪಾಠ; ರಾಜ್ಯದ ಸರಕಾರಿ ಶಾಲೆಗಳಲ್ಲಿ ತೀವ್ರ ಮೂಲಸೌಕರ್ಯ ಕೊರತೆ!

ಜಯಂತ್‌ ಗಂಗವಾಡಿ ಬೆಂಗಳೂರು ಬೆಂಗಳೂರು: ಕೋವಿಡ್‌ ಸೋಂಕು ಇಳಿಕೆ ಹಾದಿಯಲ್ಲಿರುವಂತೆ ರಾಜ್ಯಾದ್ಯಂತ 1ರಿಂದ 10ನೇ ತರಗತಿವರೆಗಿನ ಶಾಲೆಗಳು ಆರಂಭವಾಗಿದ್ದು, ಈ ವರ್ಷ ಹೆಚ್ಚುವರಿಯಾಗಿ 2.35 ಲಕ್ಷ ಮಕ್ಕಳು ದಾಖಲಾಗಿದ್ದಾರೆ. ಖಾಸಗಿ ಶಾಲೆಗಳನ್ನು ಬಿಟ್ಟು ಭಾರಿ ಸಂಖ್ಯೆಯ ಮಕ್ಕಳು ಸರಕಾರಿ ಶಾಲೆಗಳ ಕಡೆಗೆ ಬರುತ್ತಿದ್ದಾರೆ. ಆದರೆ ಮೂಲಸೌಕರ್ಯ ಕೊರತೆಯಿಂದ ಸರಕಾರಿ ಶಾಲೆಗಳು ಬಳಲುತ್ತಿವೆ. ಆಗಲೋ ಈಗಲೋ ಮುರಿದು ಬೀಳುವ, ಮಳೆ ಬಂದರೆ ಚಾವಣಿಯಿಂದ ನೀರು ಸೋರುವ ಸ್ಥಿತಿಯಲ್ಲಿವೆ. ಲಾಕ್‌ಡೌನ್‌ನಿಂದಾಗಿ ಸುಮಾರು ಒಂದೂವರೆ ವರ್ಷ ಶಾಲೆಗಳು ಬಂದ್‌ ಆಗಿದ್ದ ಕಾರಣ ನಿರ್ವಹಣೆಯಿಲ್ಲದೆ ಶಿಥಿಲಗೊಂಡಿವೆ. ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದಾಗಿ ಹಲವೆಡೆ ಕಟ್ಟಡಗಳು ಕುಸಿದಿವೆ. ರಾಜ್ಯಾದ್ಯಂತ 7,800 ಶಾಲಾ ಕಟ್ಟಡಗಳು ಹಾನಿಗೊಳಗಾಗಿವೆ. ಶಾಲೆಗಳಲ್ಲಿರುವ ಮೂಲಸೌಕರ್ಯ ಮತ್ತು ಸ್ಥಿತಿಗತಿಗಳ ಬಗ್ಗೆ ಶಿಕ್ಷಣ ಇಲಾಖೆ ಮಾಹಿತಿ ಸಂಗ್ರಹಿಸಿದೆ. 3 ಸಾವಿರಕ್ಕೂ ಹೆಚ್ಚು ಶಾಲಾ ಕಟ್ಟಡಗಳು ತೀವ್ರವಾಗಿ ಹಾನಿಗೊಳಗಾಗಿದ್ದು, 4 ಸಾವಿರಕ್ಕೂ ಹೆಚ್ಚು ಕಟ್ಟಡಗಳು ಮಧ್ಯಮ ಪ್ರಮಾಣದ ಹಾನಿಗೊಳಗಾಗಿವೆ. ಇದರಲ್ಲಿ ಗ್ರಾಮೀಣ ಮತ್ತು ಪ್ರಾಥಮಿಕ ಶಾಲೆಗಳೇ ಹೆಚ್ಚು. ಜಲ ಜೀವನ್‌ ಮಿಷನ್‌ ಅನುಷ್ಠಾನಈ ನಡುವೆ, ರಾಜ್ಯ ಸರಕಾರ ಮುಖ್ಯವಾಗಿ ಗ್ರಾಮೀಣ ಸರಕಾರಿ ಶಾಲೆಗಳಿಗೆ 'ಜಲ ಜೀವನ್‌ ಮಿಷನ್‌' ಎಂಬ ಯೋಜನೆ ಜಾರಿಗೆ ತಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮೂಲಕ ನೀರಿನ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಂಡಿದೆ. ಈ ಯೋಜನೆಯನ್ವಯ 13,058 ಶಾಲೆಗಳಿಗೆ ಕುಡಿಯುವ ನೀರಿನ ಸಂಪರ್ಕ, 16,259 ಶಾಲೆಗಳಲ್ಲಿ ಶೌಚಾಲಯಕ್ಕೆ ಪ್ರತ್ಯೇಕ ನೀರಿನ ವ್ಯವಸ್ಥೆ, 14,855 ಶಾಲೆಗಳಲ್ಲಿ ಅಡುಗೆ ಕೋಣೆಗಳಿಗೆ ನೀರಿನ ಸಂಪರ್ಕ ಹಾಗೂ 5,014 ಶಾಲೆಗಳಿಗೆ ಮಾತ್ರ ಕಾಂಪೌಂಡ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅಮೃತ ಮಹೋತ್ಸವ ಶಾಲೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯ ದಿನೋತ್ಸವದಂದು ಸಿಎಂ ಬಸವರಾಜ ಬೊಮ್ಮಾಯಿ ಅಮೃತ ಮಹೋತ್ಸವ ಯೋಜನೆ ಘೋಷಿಸಿದ್ದಾರೆ. ಇದರ ಅನ್ವಯ ರಾಜ್ಯಾದ್ಯಂತ 750 ಶಾಲೆಗಳನ್ನು ಈ ಯೋಜನೆಯಡಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಇದರನ್ವಯ ತಲಾ 10 ಲಕ್ಷ ರೂ. ವೆಚ್ಚದಲ್ಲಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದರ ಜತೆಗೆ, ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡದ ಎಂಟು ಮೇರು ಸಾಹಿತಿಗಳು ವ್ಯಾಸಂಗ ಮಾಡಿರುವ ಅಭಿವೃದ್ಧಿಪಡಿಸುವುದಾಗಿ ರಾಜ್ಯ ಸರಕಾರ 2021-22ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದೆ. ಈ ಶಾಲೆಗಳ ಅಭಿವೃದ್ಧಿಗೆ 18.80 ಕೋಟಿ ರೂ. ನಿಗದಿ ಮಾಡಲಾಗಿದೆ. ಆದರೆ, ಇದುವರೆಗೆ ಈ ಯಾವುದೇ ಯೋಜನೆಗಳ ಕಾಮಗಾರಿಗೆ ಪ್ರಾರಂಭವಾಗಿಲ್ಲ. ನಿರ್ವಹಣೆ ಕೊರತೆಯಿಂದ ಸರಕಾರಿ ಶಾಲೆಗಳು ಶಿಥಿಲಗೊಂಡಿವೆ. ಈ ಸಂಬಂಧ 13 ಮಾನದಂಡಗಳನ್ನು ಅನುಸರಿಸಿ, ಶಾಲೆಗಳಲ್ಲಿರುವ ಕೊರತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಖಾಸಗಿ ಕಂಪನಿಗಳ ಸಿಎಸ್‌ಆರ್‌ ನಿಧಿ, ಸ್ವಯಂಸೇವಾ ಸಂಸ್ಥೆ, ಹಳೆ ಸಂಘಗಳ ನೆರವಿನಿಂದ ಈ ಶಾಲೆಗಳ ರಿಪೇರಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಬಿ.ಸಿ.ನಾಗೇಶ್‌, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಶಾಲೆಗಳ ಸ್ಥಿತಿಗತಿ ನೋಟ... ಒಟ್ಟು ಶಾಲೆಗಳ ಸಂಖ್ಯೆ- 48,486
  • ಶಿಥಿಲಗೊಂಡಿರುವ ಶಾಲೆಗಳು- 7,800
  • ಸ್ವಂತ ಕಟ್ಟಡ ಹೊಂದಿರುವ ಶಾಲೆ -44,687
  • ಬಾಡಿಗೆ ಕಟ್ಟಡದಲ್ಲಿರುವ ಶಾಲೆ -3,799
  • ಶೌಚಾಲಯ ರಹಿತ ಶಾಲೆಗಳು- 120
  • ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯವಿಲ್ಲದ ಶಾಲೆಗಳು -90
  • ವಿದ್ಯುತ್‌ ಸಂಪರ್ಕರಹಿತ ಶಾಲೆಗಳು- 7
  • ಆಟದ ಮೈದಾನರಹಿತ ಶಾಲೆಗಳು- 24,135
  • ಗ್ರಂಥಾಲಯ ಸೌಲಭ್ಯ ಇಲ್ಲದ ಶಾಲೆಗಳು- 5,150
  • ವಿಶೇಷಚೇತನರಿಗೆ ರಾರ‍ಯಂಪ್‌ ಇಲ್ಲದ ಶಾಲೆಗಳ 26,313


from India & World News in Kannada | VK Polls https://ift.tt/3CyeMVZ

ಕಿವೀಸ್‌ಗೆ ಮಣಿದರೂ ಭಾರತ ಸೆಮಿಫೈನಲ್‌ ತಲುಪಲು ಇನ್ನೂ 2 ಮಾರ್ಗವಿದೆ!

ಹೊಸದಿಲ್ಲಿ: ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಕಣಕ್ಕೆ ಇಳಿದಿದ್ದ ನಾಯಕತ್ವದ ತನ್ನ ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿ ಅಘಾತಕ್ಕೆ ಒಳಗಾಗಿದೆ. ಇನ್ನು ಭಾರತಕ್ಕೆ ಉಳಿದಿರುವುದು ಮೂರು ಪಂದ್ಯಗಳು ಮಾತ್ರ. ಹಾಗಾಗಿ, ಸೆಮಿಫೈನಲ್‌ಗೆ ಅವಕಾಶ ಪಡೆಯಲು ಕೊಹ್ಲಿ ಪಡೆಗೆ ಇನ್ನೂ ಅವಕಾಶವಿದೆಯೇ ಎಂಬ ಬಗ್ಗೆ ಪ್ರಶ್ನೆ ಕಾಡುತ್ತಿರುವುದು ಸಹಜ. ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ವಿರುದ್ಧ ಎರಡು ಅಭ್ಯಾಸ ಪಂದ್ಯಗಳಲ್ಲಿ ಭರ್ಜರಿ ಗೆಲುವು ಪಡೆದ ಬಳಿಕ ಪಾಕಿಸ್ತಾನ ವಿರುದ್ದದ ಮೊದಲನೇ ಕಾದಾಟಕ್ಕೆ ಭಾರತ ಸಾಕಷ್ಟು ವಿಶ್ವಾದಲ್ಲಿತ್ತು. ಆದರೆ, ಕೊಹ್ಲಿ ಬಾಯ್ಸ್‌ ಪಾಕ್‌ ವಿರುದ್ಧ 10 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸುವ ಮೂಲಕ ಎಲ್ಲರಿಗೂ ನಿರಾಸೆ ಮೂಡಿಸಿದ್ದರು. ಇದಾದಾ ಬಳಿಕ ಪಾಕಿಸ್ತಾನ ತಂಡ, ಹಾಗೂ ವಿರುದ್ದ ತನ್ನ ಎರಡೂ ಪಂದ್ಯಗಳಲ್ಲಿ ಜಯ ಗಳಿಸಿತ್ತು. ಆ ಮೂಲಕ ಸೆಮಿಫೈನಲ್‌ ಸ್ಥಾನವನ್ನು ಬಹುತೇಕ ಖಾತ್ರಿ ಪಡೆಸಿಕೊಂಡಿದೆ. ಪಾಕ್‌ಗೆ ಇನ್ನೂ ಎರಡು ಪಂದ್ಯಗಳು ಬಾಕಿ ಇದ್ದರೂ, ಭಾರತ ಮತ್ತು ನ್ಯೂಜಿಲೆಂಡ್‌ ಬಲಿಷ್ಠ ತಂಡಗಳ ಎದುರಿನ ಗೆಲುವು ಅದರ ವಿಶ್ವಾಸವನ್ನು ಹೆಚ್ಚಿಸಿದೆ. ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ವಿರುದ್ಧ ಗೆಲುವಿನ ಲಯ ಮುಂದುವರಿಸಿರುವ ನ್ಯೂಜಿಲೆಂಡ್‌, 2021ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡು ಅಂಕಗಳನ್ನು ಕಲೆ ಹಾಕಿದೆ. ಆ ಮೂಲಕ ಸೆಮಿಫೈನಲ್‌ ಹಾದಿಯನ್ನು ಉತ್ತವಾಗಿರಿಸಿಕೊಂಡಿದೆ. ಮತ್ತೊಂದೆಡೆ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡಕ್ಕೆ ಸೆಮಿಫೈನಲ್‌ ಹಾದಿ ಅತ್ಯಂತ ಕಠಿಣವಾಗಿದೆ. ಆದರೆ, ಟೀಮ್ ಇಂಡಿಯಾ ಸೆಮಿಫೈನಲ್‌ ತಲುಪಲು ಅಂಕಿಅಂಶಗಳ ಪ್ರಕಾರ ಇನ್ನು ಅವಕಾಶವಿದೆ. ಸೆಮಿಫೈನಲ್‌ ತಲುಪಲು ಭಾರತಕ್ಕಿರುವ ಇರುವ ಎರಡು ಮಾರ್ಗವನ್ನು ನಾವು ಇಲ್ಲಿ ಚರ್ಚೆ ನಡೆಸಲಾಗಿದೆ. ಇನ್ನುಳಿದ 3 ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯ ಸೂಪರ್ 12ರ ಹಂತದಲ್ಲಿ ಕೊಹ್ಲಿ ಪಡೆಗೆ ಇನ್ನೂ ಮೂರು ಪಂದ್ಯಗಳು ಬಾಕಿ ಇದ್ದು, ಈ ಎಲ್ಲಾ ಪಂದ್ಯಗಳಲ್ಲಿ ಭಾರತ ತಂಡ ಗೆಲುವು ಪಡೆಯುವುದು ಅನಿವಾರ್ಯವಾಗಿದೆ. ನವೆಂಬರ್‌ 3 ರಂದು ಅಫ್ಗಾನಿಸ್ತಾನ, ನವೆಂಬರ್‌ 5 ರಂದು ಸ್ಕಾಟ್ಲೆಂಡ್‌ ಹಾಗೂ ನವೆಂಬರ್‌ 8 ರಂದು ನಮೀಬಿಯಾ ವಿರುದ್ಧ ಭಾರತ ಸೆಣಸಲಿದೆ. ಈ ಮೂರೂ ಪಂದ್ಯಗಳಲ್ಲಿ ಭಾರತ ತಂಡ 6 ಅಂಕಗಳ ಜೊತೆಗೆ ಸಾಧ್ಯವಾದಷ್ಟು ಹೆಚ್ಚಿನ ರನ್‌ರೇಟ್‌ನಲ್ಲಿ ಗೆಲ್ಲಬೇಕಾದ ಅಗತ್ಯದೆ. ಆಗ ಇನ್ನುಳಿದ ತಂಡಗಳಾದ ನ್ಯೂಜಿಲೆಂಡ್‌ ಹಾಗೂ ಅಫ್ಗಾನಿಸ್ತಾನ ತಂಡಗಳು ಇನ್ನೊಂದು ಪಂದ್ಯದಲ್ಲಿ ಸೋಲುವ ಅಗತ್ಯವಿದೆ. ನ್ಯೂಜಿಲೆಂಡ್‌ ಅಥವಾ ಅಫ್ಗಾನಿಸ್ತಾನ 6ಕ್ಕಿಂತ ಹೆಚ್ಚಿನ ಅಂಕ ಕಲೆಹಾಕಬಾರದು ಈ ಗೆಲುವಿನೊಂದಿಗೆ ನ್ಯೂಜಿಲೆಂಡ್‌ ಎರಡು ಅಂಕ ಕಲೆ ಹಾಕಿದೆ. ಇನ್ನು ಮುಂದಿನ ಪಂದ್ಯಗಳಲ್ಲಿ ಅಫ್ಗಾನಿಸ್ತಾನ, ನಮೀಬಿಯಾ ಹಾಗೂ ಸ್ಲಾಟ್ಲೆಂಡ್‌ ವಿರುದ್ಧ ಸೆಣಸಲಿದೆ. ಆದರೆ, ಅಫ್ಗಾನಿಸ್ತಾನ ವಿರುದ್ಧ ಕಿವೀಸ್‌ಗೆ ಪ್ರಬಲ ಪೈಪೋಟಿ ಎದುರಾಗಲಿದ್ದು, ಈ ಪಂದ್ಯದಲ್ಲಿ ಸೋತು, ನಮೀಬಿಯಾ ಹಾಗೂ ಸ್ಕಾಂಟ್ಲೆಂಡ್‌ ವಿರುದ್ಧ ಗೆದ್ದರೂ ಕಿವೀಸ್‌ ಒಟ್ಟು 6 ಅಂಕಗಳನ್ನು ಕಲೆ ಹಾಕಲಿದೆ. ಇನ್ನು ಅಫ್ಗಾನಿಸ್ತಾನ ತಂಡಕ್ಕೆ ಭಾರತ ಹಾಗೂ ನ್ಯೂಜಿಲೆಂಡ್‌ ವಿರುದ್ಧ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಹಾಗಾಗಿ, ಭಾರತ ತಂಡ, ಅಫ್ಗಾನಿಸ್ತಾನ ವಿರುದ್ಧ ಗೆದ್ದರೆ, ಆಫ್ಘನ್‌ ಖಾತೆಯಲ್ಲಿ ಕೇವಲ 4 ಅಂಕಗಳನ್ನು ಮಾತ್ರ ಉಳಿಯಲಿವೆ. ಆದರೆ, ಆಫ್ಗಾನಿಸ್ತಾನ ಮತ್ತು ನ್ಯೂಜಿಲೆಂಡ್‌ ನಡುವಿನ ಪಂದ್ಯ ಭಾರತ ತಂಡದ ಸೆಮಿಫೈನಲ್‌ ಹಾದಿಯನ್ನು ನಿರ್ಧರಿಸಲಿದೆ.ಈ ಪಂದ್ಯದಲ್ಲಿ ನ್ಯೂಜಿಲೆಂಡ್‌ ಗೆದ್ದರೆ ಭಾರತ ಹಾಗೂ ಆಫ್ಗಾನಿಸ್ತಾನ ತಂಡಗಳ ಟೂರ್ನಿಯ ಅಭಿಯಾನ ಅಂತ್ಯವಾಗಲಿದೆ. ಒಂದು ವೇಳೆ ನ್ಯೂಜಿಲೆಂಡ್‌ ವಿರುದ್ಧ ಆಫ್ಗಾನಿಸ್ತಾನ ಗೆದ್ದರೆ, ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳ ಖಾತೆಯಲ್ಲಿ ತಲಾ ಆರು ಅಂಕಗಳು ಇರಲಿದ್ದು, ರನ್‌ ರೇಟ್‌ ಆಧಾರದ ಮೇಲೆ ಒಂದು ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿದೆ. ಈ ಕಾರಣದಿಂದ ಭಾರತ ಇನ್ನುಳಿದ ಮೂರೂ ಪಂದ್ಯಗಳಲ್ಲಿ ಹೆಚ್ಚಿನ ರನ್‌ರೇಟ್‌ ಆಧಾರದ ಮೇಲೆ ಗೆಲುವು ಪಡೆಯಬೇಕಾದ ಅನಿವಾರ್ಯತೆ ಇದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3BxdvNv

ಬಿಬಿಎಂಪಿಗೆ ಸೇರಿದ 59 ಮೈದಾನಗಳಲ್ಲಿ 3 ದಿನ ಪಟಾಕಿ ಮಾರಾಟಕ್ಕೆ ಅನುಮತಿ; ಏನಿವೆ ನಿಯಮಗಳು?

ಬೆಂಗಳೂರು: ಸಂಭ್ರಮದಿಂದ ಆಚರಿಸುವ ದೀಪದ ಹಬ್ಬ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ದೇಶದೆಲ್ಲೆಡೆ ಕೋಟ್ಯಂತರ ಜನರು ಪಟಾಕಿ ಸಿಡಿಸಿ, ದೀಪ ಹಚ್ಚಿ ಬೆಳಕಿನ ಹಬ್ಬವನ್ನು ಆಚರಿಸಲು ಕಾತರಿಸುತ್ತಿದ್ದಾರೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮೈದಾನಗಳಲ್ಲಿ ಚಿಲ್ಲರೆ ಮಳಿಗೆ ತೆರೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದ 287 ವ್ಯಾಪಾರಿಗಳಿಗೆ ಮೂರು ದಿನಗಳ ಕಾಲ ಹಸಿರು ಪಟಾಕಿ ಮಳಿಗೆ ತೆರೆದು ಮಾರಾಟ ಮಾಡಲು ನಗರ ಪೊಲೀಸರು ಅನುಮತಿ ನೀಡಿದ್ದಾರೆ. ನ.3 ರಿಂದ 5ರವರೆಗೆ ಮಳಿಗೆ ತೆರೆಯಲು ಅನುಮತಿ ನೀಡಲಾಗಿದೆ. ನಗರದ ನಾನಾ ಪ್ರದೇಶಗಳಲ್ಲಿ ಬಿಬಿಎಂಪಿಗೆ ಸೇರಿದ 59 ಮೈದಾನಗಳಲ್ಲಿ ಮಾತ್ರ ಪಟಾಕಿ ವ್ಯಾಪಾರಿಗಳು ಮಳಿಗೆ ತೆರೆದು ಮಾರಾಟ ಮಾಡಬಹುದು ಎಂದು ಪೊಲೀಸರು ತಿಳಿಸಿದರು. ಕಳೆದ ವರ್ಷವು ಮೂರು ದಿನಗಳ ಕಾಲ ಮಾತ್ರ ಪಟಾಕಿ ಮಾರಾಟ ಮಾಡಲು ಅವಕಾಶ ನೀಡಲಾಗಿತ್ತು. ಅದರಂತೆಯೇ ಈ ವರ್ಷವೂ ಕೂಡ ವ್ಯಾಪಾರಿಗಳು ಮೂರು ದಿನಗಳ ಕಾಲ ವ್ಯಾಪಾರ ಮಾಡಲು ಅನುಮತಿ ನೀಡಲಾಗಿದೆ. ಆದರೆ, ಪ್ರತಿಯೊಬ್ಬ ವ್ಯಾಪಾರಿ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು. ಏನಾದರೂ ನಿಯಮ ಉಲ್ಲಂಘಿಸಿ ಪರಿಸರಕ್ಕೆ ಹಾನಿಯಾಗುವಂತಹ ಪಟಾಕಿ ಮಾರಾಟ ಮಾಡಿದರೆ ಅಂತಹ ಮಳಿಗೆ ಮಾಲೀಕರು ಮತ್ತು ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಬಿಬಿಎಂಪಿ ಆಯುಕ್ತರು ಹಾಗೂ ಗೃಹರಕ್ಷಕದಳ, ನಾಗರಿಕ ರಕ್ಷಣೆ ಮತ್ತು ಅಗ್ನಿ ಮತ್ತು ತುರ್ತು ಸೇವೆಗಳ ಇಲಾಖೆ ಡಿಜಿಪಿ ಅವರು ನಿಗದಿಪಡಿಸುವ ಮೈದಾನಗಳಲ್ಲಿ ಮಾತ್ರ ಪಟಾಕಿ ಮರಾಟ ಮಳಿಗೆಗೆ ತಾತ್ಕಾಲಿಕ ಪರವಾನಗಿ ನೀಡಲಾಗುವುದು. ಮೈದಾನಗಳ ಬಗ್ಗೆ ಮಾಹಿತಿಗಾಗಿ ಪೊಲೀಸ್‌ ಆಯುಕ್ತರ ಕಚೇರಿ ಜಾಲತಾಣವನ್ನು ಸಂಪರ್ಕಿಸಬೇಕು. ವ್ಯಾಪಾರಿಗಳಿಗೆ ಸೂಚನೆಗಳು
  • ಮೈದಾನಗಳಲ್ಲಿ ಅಂತರ ಕಾಯ್ದುಕೊಂಡು ಮಳಿಗೆಗಳನ್ನು ತೆರೆಯಬೇಕು
  • ಮಳಿಗೆಯಲ್ಲಿ ಹಸಿರು ಪಟಾಕಿ ಹೊರತು ಪಡಿಸಿ ಬೇರೆ ಯಾವುದೇ ಸಿಡಿಮದ್ದುಗಳನ್ನು ಇಟ್ಟಿಕೊಳ್ಳಬಾರದು.
  • ಮೈದಾನದ ಅಕ್ಕ ಪಕ್ಕದಲ್ಲಿ ನೀರು ಇಟ್ಟುಕೊಳ್ಳುವುದು ಸೂಕ್ತ
  • ಬೆಂಕಿ ನಂದಿಸುವಂತಹ ಸಿಲಿಂಡರ್‌ಗಳನ್ನು ಇಟ್ಟಿಕೊಳ್ಳಬೇಕು
  • ಕಡ್ಡಾಯವಾಗಿ ವಾಸದ ಮನೆಗಳಿಂದ ದೂರದಲ್ಲಿ ಮಳಿಗೆಗಳನ್ನು ತೆರೆಯಬೇಕು
  • ಸರಾಗವಾಗಿ ಅಗ್ನಿಶಾಮಕದಳ ವಾಹನ ಮೈದಾನದೊಳಗೆ ಸಂಚರಿಸುವಷ್ಟು ಜಾಗ ಬಿಟ್ಟು ಮಳಿಗೆಯನ್ನು ತೆರೆಯಬೇಕು
  • ಕಿತ್ತು ಹೋಗಿರುವ ಅಥವಾ ಡ್ಯಾಮೇಜ್‌ ಇರುವ ವಿದ್ಯುತ್‌ ವೈರ್‌ಗಳನ್ನು ಬಳಸಬಾರದು.


from India & World News in Kannada | VK Polls https://ift.tt/2ZH5HLX

ಬದುಕಲ್ಲಿ ಅಂಧಕಾರ ತರದಿರಲಿ ಪಟಾಕಿ; ತುರ್ತು ಚಿಕಿತ್ಸೆಗೆ ಮಿಂಟೋದಲ್ಲಿ ನಡೆದಿದೆ ಸಿದ್ಧತೆ!

ಬೆಂಗಳೂರು: ಕೇವಲ ದೀಪಗಳ ಹಬ್ಬವಲ್ಲ, ಸಿಡಿಸಿ ಸಂಭ್ರಮಿಸುವ ಹಬ್ಬ ಕೂಡ. ಪಟಾಕಿ, ಎಷ್ಟೋ ಜನರ ಬದುಕನ್ನೆ ಕತ್ತಲೆಯಾಗಿಸಿದೆ. ಪಟಾಕಿ ಸಿಡಿತದಿಂದ ಕೈ ಕಾಲಿಗೆ ಗಾಯವಾಗುವ ಪ್ರಕರಣಗಳಷ್ಟೇ ಅಲ್ಲ, ಶಾಶ್ವತವಾಗಿ ಕಣ್ಣು ಕಳೆದುಕೊಂಡವರು ಇದ್ದಾರೆ. ಪಟಾಕಿ ಹೊಡೆಯದೇ ದೀಪಾವಳಿ ಆಚರಿಸುವುದು ಒಳ್ಳೆಯದು. ಒಂದು ವೇಳೆ ಪಟಾಕಿ ಸಿಡಿಸಲೇ ಬೇಕೆನ್ನುವವರು ಅಗತ್ಯ ಮುಂಜಾಗ್ರತೆ ತೆಗೆದುಕೊಳ್ಳುವುದು ಮರೆಯಬಾರದು. ಪಟಾಕಿಯಿಂದ ಹೆಚ್ಚು ಹಾನಿಯಾಗುವುದು ಕಣ್ಣಿಗೆ. ಪ್ರತಿ ವರ್ಷ ನೂರಾರು ಮಕ್ಕಳು ದೀಪಾವಳಿ ಸಂದರ್ಭದಲ್ಲಿ ಕಣ್ಣಿಗೆ ಹಾನಿ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗುತ್ತಾರೆ. ಬೆಂಗಳೂರು ನಗರದಲ್ಲಿ ಈ ಸಂಖ್ಯೆ ತುಸು ಹೆಚ್ಚು. ಈ ಹಿನ್ನೆಲೆಯಲ್ಲಿ ನಗರದ ಪ್ರತಿಷ್ಠಿತ ಕಣ್ಣಿನ ಆಸ್ಪತ್ರೆಗಳು ಮಕ್ಕಳ ಚಿಕಿತ್ಸೆಗೆ ಸಕಲ ರೀತಿಯಲ್ಲಿ ಸಜ್ಜಾಗಿವೆ. ''ಪ್ರತಿ ವರ್ಷ ದೀಪಾವಳಿಯಲ್ಲಿ ಸರಾಸರಿ 50 ರಿಂದ 60 ಮಂದಿ ಚಿಕಿತ್ಸೆಗಾಗಿ ನಗರದ ಮಿಂಟೋ ಕಣ್ಣಿನ ಆಸ್ಪತ್ರೆಗೆ ದಾಖಲಾಗುತ್ತಾರೆ. ಆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವಂತಹ ಗಾಯಾಳುಗಳಿಗೆ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಆಸ್ಪತ್ರೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪಟಾಕಿಯಿಂದ ಸಂಭವಿಸುವ ಗಾಯಗಳಿಗೆ 24/7 ನೀಡಲಾಗುತ್ತದೆ'' ಎಂದು ಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ.ಸುಜಾತ ರಾಥೋಡ್‌ ತಿಳಿಸಿದಧಿರು. ''ಆಸ್ಪತ್ರೆಯಲ್ಲಿ ಗಾಯಾಳುಗಳಿಗಾಗಿ ಹೆಚ್ಚುವರಿ ಕೊಠಡಿ, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಕೊಠಡಿ ಮತ್ತು ಚಿಕಿತ್ಸಾ ವೈದ್ಯರ ತಂಡ ರಚಿಸಿದ್ದು, ಮೂರು ಪಾಳಿಗಳಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ. ಇದರೊಂದಿಗೆ ಗಾಯಾಳುಗಳಿಗೆ ಅಗತ್ಯ ಔಷಧಿಗಳ ದಾಸ್ತಾನು ಮಾಡಲಾಗಿದೆ'' ಎಂದು ಅವರು ಹೇಳಿದರು. ''ಪಟಾಕಿ ಅನಾಹುತದಲ್ಲಿ ಶೇ.40ರಷ್ಟು ಗಾಯಾಳುಗಳು 14 ವರ್ಷದ ಒಳಗಿನವರು. ಹಾಗಾಗಿ, ಮಕ್ಕಳು ಪಟಾಕಿ ಹಚ್ಚುವಾಗುವ ಹೆಚ್ಚು ಎಚ್ಚರಿಕೆಯಿಂದ ಇರಬೇಕು'' ಎಂದು ಅವರು ಸಲಹೆ ಮಾಡಿದರು. ''ಕೋವಿಡ್‌ ಸಮಯದಲ್ಲಿ ಪಟಾಕಿ ಅನಾಹುತಗಳು ತುಸು ತಗ್ಗಿವೆ. 2019ರಲ್ಲಿ 48 ಜನರು ಆಸ್ಪತ್ರೆಗೆ ದಾಖಲಾಗಿದ್ದರೆ, 2020ರಲ್ಲಿ 23 ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಈ ವರ್ಷ ಎಲ್ಲವೂ ಸಹಜ ಸ್ಥಿತಿಯಲ್ಲಿರುವ ಹಿನ್ನೆಯಲ್ಲಿ ಪಟಾಕಿ ಅನಾಹುತ ಹೆಚ್ಚಾಗುವ ಸಾಧ್ಯತೆ ಇದೆ'' ಎನ್ನುತ್ತಾರೆ ಡಾ. ಸುಜಾತ. ಏನೇನು ಮುನ್ನೆಚ್ಚರಿಕೆ ಅಗತ್ಯ
  • ಐಎಸ್‌ಐ ಗುರುತಿರುವ ಹಸಿರು ಪಟಾಕಿಗಳನ್ನು ಮಾತ್ರ ಖರೀದಿಸಿ.
  • ಪಟಾಕಿ ಹೊಡೆಯುವಾಗ ಉದ್ದನೆಯ ಕಡ್ಡಿ ಬಳಸಿ.
  • ಪಟಾಕಿ ಬಾಕ್ಸ್‌ ಮೇಲೆ ಇರುವ ಎಚ್ಚರಿಕೆಗಳನ್ನು ಓದಿಕೊಳ್ಳಿ.
  • ಮಕ್ಕಳು ಪಟಾಕಿ ಹಚ್ಚುವಾಗ ದೊಡ್ಡವರು ಮಾರ್ಗದರ್ಶನ ಮಾಡಬೇಕು.
  • ಸಿಂಥಟಿಕ್‌ ಅಥವಾ ಬೇಗನೆ ಸುಡುವ ಸಡಿಲ ಬಟ್ಟೆ ಧರಿಸಿ ಪಟಾಕಿಗಳನ್ನು ಹಚ್ಚಬೇಡಿ. ಕಾಟನ್‌ ಬಟ್ಟೆ ಬಳಸುವುದು ಒಳ್ಳೆಯದು.
  • ಪಕ್ಕದಲ್ಲಿ ಒಂದು ಬಕೆಟ್‌ ನೀರನ್ನು ಇಟ್ಟುಕೊಂಡಿರಿ.
  • ಕೈಯಲ್ಲಿ, ಮುಚ್ಚಿದ ಪೆಟ್ಟಿಗೆಗಳು ಅಥವಾ ಬಾಟಲಿಗಳ ಒಳಗೆ ಪಟಾಕಿಗಳನ್ನು ಸುಡಬೇಡಿ.
  • ಅರೆಬರೆ ಸುಟ್ಟ ಪಟಾಕಿಯನ್ನು ಕೈಯಲ್ಲಾಗಲಿ, ಕಾಲಲ್ಲಾಗಲಿ ನಂದಿಸುವ ಪ್ರಯತ್ನ ಮಾಡಬೇಡಿ.
  • ಗುಡಿಸಲುಗಳು ಮತ್ತು ಮನೆಗಳಿಂದ ದೂರದಲ್ಲಿರುವ ತೆರೆದ ಸ್ಥಳಗಳಲ್ಲಿ ಮಾತ್ರ ಹಗುರವಾದ 'ರಾಕೆಟ್‌' ಪಟಾಕಿಗಳನ್ನು ಹಚ್ಚಿ.
  • ಜನದಟ್ಟಣೆಯ ಪ್ರದೇಶ, ಪಟಾಕಿ ಅಂಗಡಿಗಳ ಮುಂದೆ, ಆಸ್ಪತ್ರೆಗಳ ಬಳಿ, ವೃದ್ಧಾಶ್ರಮಗಳು, ಪೆಟ್ರೋಲ್‌ ಬಂಕ್‌ ಬಳಿ ಪಟಾಕಿ ಸಿಡಿಸಬೇಡಿ.
ಪ್ರಥಮ ಚಿಕಿತ್ಸೆ
  • ಕಣ್ಣಿಗೆ ಗಾಯವಾದಾಗ ಕಣ್ಣುಗಳನ್ನು ಉಜ್ಜಿಕೊಳ್ಳಬೇಡಿ.
  • ಪಟಾಕಿಯ ದೊಡ್ಡ ಕಣವೇನಾದರೂ ಒಳಗೆ ಸಿಕ್ಕಿಹಾಕಿಕೊಂಡಿದ್ದರೆ ಬಲವಂತವಾಗಿ ಎಳೆದು ತೆಗೆಯಲು ಹೋಗಬೇಡಿ.
  • ಕಣ್ಣುಗಳನ್ನು ಮುಚ್ಚಿಸಿ ಕೂಡಲೇ ವೈದ್ಯರ ಬಳಿಗೆ ಕರೆದುಕೊಂಡು ಹೋಗಿ.
  • ಗಾಯದ ಜಾಗವನ್ನು ಸ್ವಚ್ಛಗೊಳಿಸಿ ನೀರಿನಲ್ಲಿ ಮುಳುಗಿಸಿ. ಆದರೆ ಐಸ್‌ ನೀರು ಬಳಸಬೇಡಿ, ಗಾಯದ ಸ್ಥಳ ಒಣಗಲು ಬಿಡಿ. ಶುದ್ಧವಾದ ಬಟ್ಟೆಯಿಂದ ಗಾಯ ಮುಚ್ಚಿ.
ಸಹಾಯವಾಣಿ ಪಟಾಕಿ ಅನಾಹುತದಿಂದ ಗಾಯಗೊಂಡವರಿಗೆ ತಕ್ಷಣ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಮಿಂಟೋ ಆಸ್ಪತ್ರೆ ಸಹಾಯವಾಣಿ ಸ್ಥಾಪಿಸಿದೆ. 9480832430 ಹಸಿರು ಪಟಾಕಿ ಮಾಲಿನ್ಯ ಕಡಿಮೆ ಮಾಡುತ್ತದೆಯೇ ಹೊರತು ಅಪಾಯವನ್ನು ಕಡಿಮೆ ಮಾಡದು. ಹಾಗಾಗಿ, ಪಟಾಕಿ ಹೊಡೆಯುವಾಗ ಎಚ್ಚರಿಕೆ ಬಹಳ ಮುಖ್ಯ. ಮಕ್ಕಳು ಪಟಾಕಿ ಹೊಡೆಯುವಾಗ ಹಿರಿಯರೊಬ್ಬರು ಹತ್ತಿರ ಇದ್ದು ಮಾರ್ಗದರ್ಶನ ಮಾಡಬೇಕು. ಪಟಾಕಿ ಹೊಡೆಯಲೇಬೇಕು ಎನ್ನುವವರು ದೇಹಕ್ಕೆ ಅಪಾಯವಿಲ್ಲದ ಪಟಾಕಿ ಹೊಡೆಯುವುದು ಒಳಿತು. ಡಾ.ಸುಜಾತ ರಾಥೋಡ್‌, ಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ನಗರದಲ್ಲಿಈಗಿನ ಶಬ್ದ ಮಾಲಿನ್ಯ ಮತ್ತು ವಾಯುಮಾಲಿನ್ಯವನ್ನೇ ತಡೆದುಕೊಳ್ಳಲಾಗುತ್ತಿಲ್ಲ. ಹಾಗಾಗಿ ಪಟಾಕಿ ಹೊಡೆಯದೇ ದೀಪಾವಳಿ ಆಚರಿಸುವುದು ಒಳ್ಳೆಯದು. ಒಂದು ವೇಳೆ ಪಟಾಕಿ ಹೊಡೆಯಲೇಬೇಕೆಂದರೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ. ಪಟಾಕಿಯಿಂದ ಕಣ್ಣಿಗೆ ಚಿಕ್ಕ ಗಾಯವಾದರೂ ತಕ್ಷಣ ಹತ್ತಿರದ ಕಣ್ಣಿನ ಆಸ್ಪತ್ರೆಗೆ ತೋರಿಸುವುದು ಒಳ್ಳೆಯದು. ತಡವಾದಷ್ಟೂ ಅಪಾಯ ಹೆಚ್ಚು . ಡಾ.ಭುಜಂಗ ಶೆಟ್ಟಿ, ಮುಖ್ಯಸ್ಥರು, ನಾರಾಯಣ ನೇತ್ರಾಲಯ


from India & World News in Kannada | VK Polls https://ift.tt/2Y2kxMq

ನೆಲಮಂಗಲ: ಪುರಸಭೆ ಸದಸ್ಯರ 16 ತಿಂಗಳ ಕಾನೂನು ಹೋರಾಟಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಜಯ

: 2019ರ ಜೂನ್‌ 03ರಂದು ಪ್ರಕಟವಾಗಿದ್ದ ಪುರಸಭೆ ಚುನಾವಣಾ ಫಲಿತಾಂಶಕ್ಕೆ ಸುಮಾರು 16 ತಿಂಗಳುಗಳ ಕಾನೂನು ಹೋರಾಟದಲ್ಲಿ ಚುನಾಯಿತ ಜನಪ್ರತಿನಿಧಿಗಳ ಪರವಾದ ಸುಪ್ರೀಂ ಕೋರ್ಟ್‌ ಆದೇಶ ಪುರಸಭೆ ಸದಸ್ಯರುಗಳನ್ನು ನಗರಸಭೆ ಸದಸ್ಯರುಗಳನ್ನಾಗಿಸಿದ್ದಲ್ಲದೆ ಪುರಸಭೆ ಮತ್ತು ನಗರಸಭೆಗೆ ವಿಲೀನಗೊಂಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಖಂಡರುಗಳ ಶಿಥಿಲ ಕಾನೂನು ಹೋರಾಟಕ್ಕೆ ತೆರೆಬಿದ್ದಂತಾಗಿದೆ. ಎರಡು ವಾರದಲ್ಲಿ ನಗರಸಭೆ ನೂತನ ಆಡಳಿತ ಮಂಡಳಿ ರಚನೆಯಾಗಬೇಕಿದೆ. 2019ರಲ್ಲಿ ಪುರಸಭೆ ಆಡಳಿತ ಮಂಡಳಿಗೆ ನೂತನ ಸದಸ್ಯರ ಆಯ್ಕೆಗಾಗಿ ಚುನಾವಣೆಯನ್ನು ನಡೆಸಲಾಗಿತ್ತು, ಪುರಸಭೆ 23 ವಾರ್ಡ್‌ಗಳಿಗೆ ಅಂದು ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ 14 ಮಂದಿ ಸದಸ್ಯರು ಆಯ್ಕೆಯಾಗುವ ಮೂಲಕ ಪ್ರಾಬಲ್ಯತೆಯನ್ನು ಸಾಧಿಸಿದ್ದು ಕಾಂಗ್ರೆಸ್‌ನ 06 ಮಂದಿ ಸದಸ್ಯರು, ಬಿಜೆಪಿಯ 02 ಸದಸ್ಯರು ಹಾಗೂ ಪಕ್ಷೇತರರಾಗಿ 01 ಸದಸ್ಯರು ಆಯ್ಕೆಯಾಗಿದ್ದು, ಈ ನಡುವೆ ಪಟ್ಟಣದ ಆಸುಪಾಸಿನ ಗ್ರಾಮ ಪಂಚಾಯಿತಿಗಳನ್ನು ವಿಲೀನಗೊಳಿಸಿಕೊಂಡು ಪುರಸಭೆಯನ್ನು ಮೇಲ್ದರ್ಜೆಗೇರಿಸಿ ನಗರಸಭೆಯನ್ನಾಗಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಹೆಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಪುರಸಭೆಯನ್ನು ನಗರಸಭೆಯನ್ನಾಗಿಸಿ ಸರಕಾರ ಆದೇಶವನ್ನು ಮಾಡಿದ್ದರಿಂದ ಪುರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ನೂತನ ಸದಸ್ಯರುಗಳು ಅತಂತ್ರವಾಗಿದ್ದು ತ್ರಿಶಂಕು ಸ್ಥಿತಿಯಲ್ಲಿದ್ದರು. ಬಂತುಭಾಗ್ಯ : ಮೇಲ್ದರ್ಜೆಗೇರಿದ ನಗರಸಭೆ ಪ್ರಹಸನ ಒಂದೆಡೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಖಂಡರುಗಳು ನಗರಸಭೆ ಸದಸ್ಯರಾಗಲು ಹಾತೊರೆಯುತಿದ್ದರೆ ಮತ್ತೊಂದೆಡೆ ಪುರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ ಸದಸ್ಯರು ಅಧಿಕಾರದ ಗದ್ದುಗೆಗೇರಲು ಹಾತೊರೆಯುತ್ತಿದ್ದು ತಮ್ಮ ತಮ್ಮ ನಿಲುವು ಮತ್ತು ಅಭಿಪ್ರಾಯಗಳನ್ನು ಸಭೆಗಳನ್ನು ನಡೆಸಿಕೊಂಡು ಚರ್ಚಿಸಿ ಕಾನೂನು ಹೋರಾಟಕ್ಕೆ ಮುಂದಾಗಿದ್ದರು ಅಂತಿಮವಾಗಿ ಪುರಸಭೆ ಆಯ್ಕೆಯಾಗಿದ್ದ ಸದಸ್ಯರಿಗೆ ಪ್ರಜಾಪ್ರಭುತ್ವದಡಿಯಲ್ಲಿಕಾನೂನು ಬಲಬಂದಿದ್ದು ಅಂತೂ ಇಂತು ಬಯಸಿದ ಭಾಗ್ಯ ತಡವಾಗಿಯಾದರೂ ಬಂದಂತಾಗಿದ್ದು ಪುರಸಭೆ ಸದಸ್ಯರಾಗಿ ಅಧಿಕಾರದ ಗದ್ದುಗೆ ಏರಲಿದ್ದಾರೆ. ಪಕ್ಷಾತೀತ ಹೋರಾಟ : ಪುರಸಭೆ ಚುನಾವಣೆಯಲ್ಲಿ 23 ವಾರ್ಡ್‌ಳಲ್ಲಿ ಜೆಡಿಎಸ್‌14, ಕಾಂಗ್ರೆಸ್‌ 06, ಬಿಜೆಪಿ 02 ಮತ್ತು ಪಕ್ಷೇತರ 01 ಸದಸ್ಯರು ಒಟ್ಟಾಗಿ ಪಕ್ಷಾತೀತವಾಗಿ ತಂಡವನ್ನು ಕಟ್ಟಿಕೊಂಡು ಕಾನೂನು ಹೋರಾಟ ಮಾಡಿದ್ದರಿಂದ ಗ್ರಾಮೀಣ ಭಾಗದ ಮುಖಂಡರಿಗೆ ಹಿನ್ನಡೆಯಾಗಿದ್ದು ನಗರ ನಾಯಕರಿಗೆ ಕಾನೂನು ಹೋರಾಟದಲ್ಲಿ ಜಯದೊರೆತಿದೆ. ಪ್ರತಿಭಟಿಸಿದ್ದ ಸದಸ್ಯರು : ಜೆಡಿಎಸ್‌ ಭದ್ರಕೋಟೆಯಾಗಿದ್ದ ತಾಲೂಕಿನಲ್ಲಿ ಪುರಸಭೆ ಚುನಾವಣೆಯಲ್ಲಿ ಪಕ್ಷದ 14 ಮಂದಿ ಸದಸ್ಯರು ಗೆಲುವು ಸಾಧಿಸಿದ್ದರು, ನಂತರ ನಡೆದ ಬೆಳವಣಿಗೆಯಲ್ಲಿ ಶಾಸಕ ಡಾ.ಕೆ.ಶ್ರೀನಿವಾಸ್‌ಮೂರ್ತಿ ಪತ್ರ ವ್ಯವಹಾರಗಳನ್ನರಿತ ಸ್ವಪಕ್ಷೀಯರು ನ್ಯಪಕ್ಷದ ಸದಸ್ಯರುಗಳನ್ನು ಸೇರಿಸಿಕೊಂಡು ಜೆಡಿಎಸ್‌ ಪಕ್ಷದ ತಾಲೂಕು ಅಧ್ಯಕ್ಷ ಎನ್‌.ಪಿ.ಹೇಮಂತ್‌ ಕುಮಾರ್‌ ನೇತೃತ್ವದಲ್ಲಿ ಸ್ವಪಕ್ಷದ ಶಾಸಕರ ವಿರುದ್ದವೇ ತೊಡೆತಟ್ಟಿ ಪ್ರತಿಭಟಿಸಿ ಶಾಸಕರ ನಡೆಯನ್ನು ಖಂಡಿಸಿದ್ದು ಗುಟ್ಟಾಗಿ ಉಳಿದಿಲ್ಲ. ಪ್ರತಿಕ್ರಿಯೆ : ಪುರಸಭೆ ಚುನಾವಣೆಯಲ್ಲಿ ಜೆಡಿಎಸ್‌ 14 ಸ್ಥಾನವನ್ನು ಗೆದ್ದು ಬಹುಮತ ಗಳಿಸಿದ್ದರೂ ನಮ್ಮ ಶಾಸಕರು ನ್ಯಾಯ ನೀಡುವ ಬದಲಿಗೆ ಅನ್ಯಾಯ ಮಾಡುವ ಸಲುವಾಗಿ ನಮ್ಮ ಪರ ನಿಲ್ಲಲಿಲ್ಲ,ಶಾಸಕ ಡಾ.ಕೆ. ಶ್ರೀನಿವಾಸ್‌ ಮೂರ್ತಿ ಅಸಹಕಾರದ ನಡುವೆಯೂ ಎಲ್ಲಾ ಪಕ್ಷದ ಮುಖಂಡರು ಒಗ್ಗಟ್ಟಿನಿಂದ ಹೋರಾಡಿದ ಹಿನ್ನೆಲೆಯಲ್ಲಿ ಕಾನೂನು ಜಯದೊರೆತಿದೆ. ಪುರಸಭೆ ಸದಸ್ಯರ ಕಾನೂನು ಹೋರಾಟಕ್ಕೆ ಬಿಜೆಪಿ ಮಾಜಿ ಶಾಸಕ ಎಂ.ವಿ.ನಾಗರಾಜ್‌ ನೀಡಿದ ಸಹಕಾರ ಸ್ಮರಣೀಯವಾದದ್ದು ಎಂದು ಜೆಡಿಎಸ್‌ ತಾಲೂಕು ಅಧ್ಯಕ್ಷ ಎನ್‌.ಪಿ.ಹೇಮಂತ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ಪುರಸಭೆ ಮಾಜಿ ಅಧ್ಯಕ್ಷ ಎ.ಪಿಳ್ಳಪ್ಪ ಪುರಸಭೆ ಸದಸ್ಯರ ನ್ಯಾಯಯುತವಾದ ಹೋರಾಟಕ್ಕೆ ಸುಪ್ರೀಂ ಜಯ ತಂದು ಕೊಟ್ಟಿದ್ದು ಜನರು ನೀಡಿದ್ದ ತೀರ್ಪು ಮತ್ತು ಗೆಲುವು ಕಾನೂನು ಹೋರಾಟದಲ್ಲಿ ಊರ್ಜಿತಗೊಂಡಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಜನಾಭಿಪ್ರಾಯವನ್ನು ನ್ಯಾಯಾಂಗ ಎತ್ತಿ ಹಿಡಿದಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.


from India & World News in Kannada | VK Polls https://ift.tt/3GPg1mf

ರಾಜ್ಯೋದಯದ ಬಳಿಕ ಆಗಿದೆಯೇ ಭಾಗ್ಯೋದಯ? ರಾಜ್ಯೋತ್ಸವದ ಸಂದರ್ಭದಲ್ಲಿ ಒಂದು ಅವಲೋಕನ!

ಶಶಿಧರ ಹೆಗಡೆ ಬೆಂಗಳೂರು ರಾಜ್ಯ ಉದಯವಾಗಿ 66 ವರ್ಷಗಳು ಕಳೆದಿವೆ. ಪ್ರತಿ ನವೆಂಬರ್‌ನಲ್ಲಿ ನಾಡು-ನುಡಿ, ಕನ್ನಡ ಅಸ್ಮಿತೆಯ ದನಿ ಜಾಗೃತವಾಗುತ್ತದೆ. ಭಾಷೆಯೆಂಬ ಭಾವನಾತ್ಮಕ ಸಂಗತಿ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತದೆ. ಆದರೆ ರಾಜ್ಯೋದಯದ ಬಳಿಕ ನಾಡಿನ ಪ್ರಗತಿಯ ರಥ ಎಷ್ಟು ಮುನ್ನಡೆ ಸಾಧಿಸಿದೆ? ಬೆಳವಣಿಗೆಯ ಸಮತೋಲನ ಹೇಗಿದೆ? ರಾಜ್ಯೋತ್ಸವದ ಸಂದರ್ಭದಲ್ಲಿ ವಿಕ ಅವಲೋಕನ ಇಲ್ಲಿದೆ. ಕೃಷ್ಣೆ, ಕಾವೇರಿ ಪ್ರಾಂತ್ಯ ಒಳಗೊಂಡು ಕನ್ನಡ ಮಾತನಾಡುವ ಪ್ರದೇಶ ಅಖಂಡವಾಗಿರಬೇಕು ಎಂಬ ವಿಶಾಲ ನೆಲೆಯಲ್ಲಿ ರಚನೆಯಾದದ್ದು ಕರ್ನಾಟಕ ರಾಜ್ಯ. ರಾಜ್ಯೋದಯದ ಬಳಿಕ 'ಭಾಗ್ಯೋದಯ'ದ ಅಪೇಕ್ಷೆ ಸಹಜ. ಈ ನಿಟ್ಟಿನಲ್ಲಿ ಕಳೆದ ಆರು ದಶಕಗಳಿಂದ ಅಭಿವೃದ್ಧಿ ಕಾರ್ಯಗಳನ್ನು ನಡೆಸಿಕೊಂಡು ಬರಲಾಗಿದೆ. ವಿಕಾಸದ ರಥವನ್ನು ರಾಜ್ಯದ ಮೂಲೆಮೂಲೆಗೂ ಕೊಂಡೊಯ್ಯಲು ಸರ್ವಪ್ರಯತ್ನ ಮಾಡಲಾಗಿದೆ. ಈ ನಡುವೆಯೂ ಪ್ರಗತಿಯ ವಿಚಾರದಲ್ಲಿ ಕರ್ನಾಟಕ ಖಂಡ ಖಂಡವಾಗಿಯೇ ಉಳಿದುಕೊಂಡಿದೆ. ಈ ಅಸಮತೋಲನ ನಿವಾರಣೆಗೆ ಕೈಗೊಂಡ ವಿಶೇಷ ಯೋಜನೆಗಳು ಇನ್ನೂ ಫಲ ಕೊಟ್ಟಿಲ್ಲ. ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭದಲ್ಲಿ ತುಂಗಭದ್ರೆಯ ಆಚೆಯ ದಡದ ಮತ್ತು ಈಚೆಯ ದಡದ ಕನ್ನಡಿಗರನ್ನು ಭಾಷಾ ಬಾಂಧವ್ಯದ ಮೇಲೆ ಬೆಸೆಯುವುದು ಸುಲಭವಾಗಿರಲಿಲ್ಲ. ರಾಜಕೀಯ ಕಾರಣಕ್ಕೆ ಪ್ರಬಲ ವಿರೋಧವೂ ವ್ಯಕ್ತವಾಗಿತ್ತು. ಆದರೆ, ಎಸ್‌. ನಿಜಲಿಂಗಪ್ಪ ಅವರು ಏಕೀಕರಣ ಚಳವಳಿಗೆ ರಾಜಕೀಯ ಇಚ್ಛಾಶಕ್ತಿ ತುಂಬಿದ್ದರು. ಕೆಂಗಲ್‌ ಹನುಮಂತಯ್ಯ ಅವರು ಬೆಂಬಲಿಸಿದ್ದರು. ಅನೇಕ ಸಾಹಿತಿಗಳು, ಕನ್ನಡ ಚಳವಳಿಗಾರರು ಮುಂಚೂಣಿಯಲ್ಲಿ ನಿಂತರು. ಹಾಗಾಗಿ ದಕ್ಷಿಣೋತ್ತರವನ್ನು ಬೆಸೆದು ಚೆಲುವ ಕನ್ನಡ ನಾಡನ್ನು ರಚಿಸಲಾಯಿತು. ಇಷ್ಟರ ಹೊರತಾಗಿಯೂ ರಾಜ್ಯದ ಉತ್ತರ ಭಾಗ ಅಭಿವೃದ್ಧಿಯಲ್ಲಿ ಹಿಂದುಳಿಯಿತು. ಮೈಸೂರು ರಾಜಮನೆತನದ ಕಾಲದಿಂದಲೇ ದೂರದೃಷ್ಟಿಯ ಯೋಜನೆಗಳನ್ನು ಕಂಡಿದ್ದ ಹಳೆ ಮೈಸೂರು ಪ್ರಾಂತ್ಯದ ಜಿಲ್ಲೆಗಳಲ್ಲಿಅಭಿವೃದ್ಧಿಯ ಚಟುವಟಿಕೆ ವೇಗವಾಗಿ ನಡೆಯುತ್ತಿದೆ ಎಂಬ ಭಾವ ಮೂಡಿತು. ಮೇಲ್ನೋಟಕ್ಕೆ ಹಾಗನಿಸುವುದು ಸಹಜ. ತುಸು ಆಳಕ್ಕಿಳಿದು ಅವಲೋಕಿಸಿದರೆ ಅಭಿವೃದ್ಧಿಯ ಅಸಮತೋಲನ ಮಾದರಿ ರಾಜ್ಯದ ಎಲ್ಲ ಭಾಗವನ್ನೂ ಬಾಧಿಸಿರುವುದನ್ನು ಕಾಣಬಹುದು. ಅಸಮತೋಲನ ದರ್ಶನ ಪ್ರಾರಂಭದಲ್ಲಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಹೋಲಿಸಿದಾಗ ಉತ್ತರ ಕರ್ನಾಟಕದ ಜಿಲ್ಲೆಗಳು ವಿಕಾಸದಲ್ಲಿ ತೀವ್ರ ಹಿಂದುಳಿದದ್ದು ಸಹಜವಾಗಿತ್ತು. ಯಾಕೆಂದರೆ ತಕ್ಷಣಕ್ಕೆ ಇದನ್ನು ಸಮತೋಲನಗೊಳಿಸಲು ಸಾಧ್ಯವಿರಲಿಲ್ಲ. ಅಂತಹ ಆರ್ಥಿಕ ಶಕ್ತಿಯೂ ಇರಲಿಲ್ಲ. ಕ್ರಮೇಣ ಸುಧಾರಣೆ ಕಂಡರೂ ಸಮಗ್ರ ಅಭಿವೃದ್ಧಿಯ ಮುನ್ನೋಟವಿರಲಿಲ್ಲ. ಈ ಕೊರತೆ ನೀಗಿಸುವ ಉದ್ದೇಶದಿಂದ ಡಾ. ಡಿ.ಎಂ.ನಂಜುಂಡಪ್ಪ ಅಧ್ಯಕ್ಷತೆಯಲ್ಲಿತಜ್ಞರ ಸಮಿತಿ ರಚಿಸಲಾಯಿತು. ನಂಜುಂಡಪ್ಪ ಸಮಿತಿ 2002ರ ಜೂನ್‌ನಲ್ಲಿ ಅಂತಿಮ ವರದಿ ಸಲ್ಲಿಸಿತು. ಈ ವರದಿಯಲ್ಲಿಬೆಚ್ಚಿ ಬೀಳಿಸುವ ಸಂಗತಿಗಳಿದ್ದವು. ರಾಜ್ಯದ 175 ತಾಲೂಕುಗಳಲ್ಲಿ 61 ತಾಲೂಕುಗಳು ಮಾತ್ರ ಸಾಪೇಕ್ಷವಾಗಿ ಅಭಿವೃದ್ಧಿಗೊಂಡಿವೆ ಎಂದು ವರದಿ ಹೇಳಿತು. ಅದಕ್ಕಿಂತಲೂ ಮುಖ್ಯವಾಗಿ 39 ತಾಲೂಕುಗಳು ಅತ್ಯಂತ ಹಿಂದುಳಿದ, 40 ತಾಲೂಕುಗಳು ಅತಿ ಹಿಂದುಳಿದ ಹಾಗೂ 35 ತಾಲೂಕುಗಳು ಹಿಂದುಳಿದ ಪಟ್ಟಿಯಲ್ಲಿವೆ ಎಂಬುದನ್ನು ಸಮಿತಿ ವರದಿ ಜಾಹೀರುಗೊಳಿಸಿತು. ಉತ್ತರ ಕರ್ನಾಟಕ ಹಿಂದುಳಿದಿದ್ದನ್ನು ಈ ವರದಿ ಸಾರಿ ಹೇಳಿತಾದರೂ ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳಲ್ಲೂ ಹಿನ್ನಡೆ ಆಗುತ್ತಿರುವುದನ್ನು ಎತ್ತಿ ತೋರಿಸಿತು. ಇದರೊಂದಿಗೆ ಖಚಿತವಾದದ್ದೆಂದರೆ ಅಸಮತೋಲನದ ಅಭಿವೃದ್ಧಿಯ ಮಾದರಿಯಿಂದ ಉತ್ತರ ಕರ್ನಾಟಕ ಮಾತ್ರ ಸೊರಗಿಲ್ಲ, ದಕ್ಷಿಣ ಕರ್ನಾಟಕದಲ್ಲೂ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತಿತರ ಬಯಲುಸೀಮೆಯ ಜಿಲ್ಲೆಗಳಿಗೂ ಅಭಿವೃದ್ಧಿಯ ಗಾಳಿ ಸೋಂಕಿಲ್ಲಎನ್ನುವುದು ಅರ್ಥವಾಯಿತು. ಈ ಹಿನ್ನೆಲೆಯಲ್ಲಿ ಒಟ್ಟಾರೆಯಾಗಿ ಹಿಂದುಳಿದ 114 ತಾಲೂಕುಗಳ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸಬೇಕು. ಅದಕ್ಕಾಗಿ ಪ್ರತ್ಯೇಕ ಅನುದಾನ ಹಂಚಿಕೆ ಮಾಡಬೇಕೆಂದು ನಂಜುಂಡಪ್ಪ ಸಮಿತಿ ಶಿಫಾರಸು ಮಾಡಿತು. ಅದರಂತೆ ಕ್ರಮ ಕೈಗೊಳ್ಳಲಾಗಿದೆಯಾದರೂ ಅಭಿವೃದ್ಧಿಯಲ್ಲಿ ಕ್ಷಿಪ್ರಗತಿ ಪಡೆದುಕೊಳ್ಳಲಾಗಿದೆ ಎಂದು ಹೇಳಿಕೊಳ್ಳುವ ಧೈರ್ಯವಿನ್ನೂ ಬಂದಿಲ್ಲ. ಇದರ ನಡುವೆ ಈಗ 'ಕಲ್ಯಾಣ ಕರ್ನಾಟಕ'ವೆಂದು ನಾಮಕರಣಗೊಂಡಿರುವ ಪ್ರಾಂತ್ಯಕ್ಕೆ ಸಂವಿಧಾನದ 371(ಜೆ) ಅಡಿ ವಿಶೇಷ ಸ್ಥಾನಮಾನ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿ ಅನುದಾನ ಹಂಚಿಕೆ ಮಾಡಲಾಗುತ್ತಿದೆ. ನಂಜುಂಡಪ್ಪ ವರದಿ ಅನುಷ್ಠಾನದ ಬಳಿಕವೂ ಕಲ್ಯಾಣ ಕರ್ನಾಟಕ ಹಿಂದುಳಿದಿದೆ ಎಂದರೆ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಕೈಗೊಂಡ ಕ್ರಮ ಪರಿಣಾಮಕಾರಿ ಆಗಿಲ್ಲವೆಂದು ಹೇಳಬೇಕಾಗುತ್ತದೆ. ಹಾಗಾಗಿ ಕಲ್ಯಾಣ ಕರ್ನಾಟಕಕ್ಕೆ 'ಬೂಸ್ಟರ್‌ ಡೋಸ್‌' ಕೊಡಲು ವಿಶೇಷ ಸ್ಥಾನಮಾನ ನೀಡಬೇಕಾದ ಸನ್ನಿವೇಶ ಸೃಷ್ಟಿಯಾಯಿತು. ಈಗಿನ ಸ್ಥಿತಿಯೂ ತೃಪ್ತಿಕರವಲ್ಲ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ಕೈಗಾರಿಕೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ನೋಡಿದರೂ ಈಗಲೂ ಅಸಮತೋಲನ ಕಂಡು ಬರುತ್ತದೆ. ರಾಜ್ಯದಲ್ಲಿ 4 ಕಂದಾಯ ವಿಭಾಗಗಳಿವೆ. ಈ ಪೈಕಿ ಉತ್ತರ ಪ್ರಾಂತ್ಯಕ್ಕೆ ಸೇರುವ ಬೆಳಗಾವಿ, ಕಲಬುರಗಿ ವಿಭಾಗಗಳು ಹಿಂದುಳಿದಿವೆ. ದಕ್ಷಿಣ ಪ್ರಾಂತ್ಯದ ಬೆಂಗಳೂರು, ಮೈಸೂರು ವಿಭಾಗಗಳು ಎಂದಿನಂತೆ ಮುಂದಿವೆ ಎಂದು ಹೇಳಬಹದು. ಆದರೆ, ಇದು ಸಾಮಾನ್ಯ ದೃಷ್ಟಿ. ಸ್ವಲ್ಪ ಚಿಕಿತ್ಸಕ ದೃಷ್ಟಿಯಿಂದ ನೋಡಿದಾಗ ಎಲ್ಲ ಕಂದಾಯ ವಿಭಾಗದಲ್ಲೂ ಒಂದಲ್ಲ ಒಂದು ಜಿಲ್ಲೆಅಭಿವೃದ್ಧಿಯ ನಾನಾ ಮಾನದಂಡದಲ್ಲಿ ಹಿಂದುಳಿದಿರುವುದು ಮತ್ತು ತೀವ್ರ ಹಿಂದುಳಿದಿರುವುದು ಕಂಡು ಬರುತ್ತದೆ. ಉದಾಹರಣೆಗೆ, ತಲಾ ಆದಾಯದಲ್ಲಿ ಬೆಂಗಳೂರು ವಿಭಾಗ ಯಾವತ್ತಿಗೂ ಮೊದಲ ಸ್ಥಾನದಲ್ಲಿದೆ. ಕಲಬುರಗಿ ವಿಭಾಗ ಕಡೆಯ ಸ್ಥಾನದಲ್ಲಿದೆ. ಆದರೆ, ಬೆಂಗಳೂರು ನಗರ ಜಿಲ್ಲೆಯನ್ನು ಬೆಂಗಳೂರು ವಿಭಾಗದಿಂದ ಪ್ರತ್ಯೇಕಿಸಿ ನೋಡಿದಾಗ ಈ ಸೂಚ್ಯಂಕದಲ್ಲಿ ಮೈಸೂರು ವಿಭಾಗ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಅಂದರೆ ಬೆಂಗಳೂರು ವಿಭಾಗದ ಆದಾಯದಲ್ಲಿ ಬೆಂಗಳೂರು ನಗರದ್ದೇ ಸಿಂಹಪಾಲು. ಅದಕ್ಕೆ ಕಾರಣ ಇಲ್ಲಿ ನೆಲೆಯಾಗಿರುವ ಐಟಿ, ಬಿಟಿ ಇನ್ನಿತರ ಕೈಗಾರಿಕೋದ್ಯಮ. ಎರಡನೇ, ಮೂರನೇ ಹಂತದ ನಗರ, ಪಟ್ಟಣಗಳಿಗೆ ಕೈಗಾರಿಕೆ ವಿಸ್ತರಿಸಲು ಕನಿಷ್ಠ 30 ವರ್ಷದ ಹಿಂದೆಯೇ ಕ್ರಮ ಕೈಗೊಂಡಿದ್ದರೆ ಇಷ್ಟು ಹೊತ್ತಿಗೆ ಸುಧಾರಣೆ ಕಾಣಬಹುದಿತ್ತು. ಸಾಕ್ಷರತೆ ವಿಚಾರಕ್ಕೆ ಬಂದರೆ ದಕ್ಷಿಣ ಕನ್ನಡ, ಬೆಂಗಳೂರು ನಗರ, ಉಡುಪಿ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳಿಗೆ ಅಗ್ರಸ್ಥಾನ. ಯಾದಗಿರಿಗೆ ಕಡೆಯ ಸ್ಥಾನ. 10 ಸಾವಿರ ಜನರಿಗೆಷ್ಟು ವೈದ್ಯರಿದ್ದಾರೆ ಎಂಬ ಮಾನದಂಡದಲ್ಲಿ ಉಡುಪಿಗಿಂತ ನಂತರದ ಸ್ಥಾನದಲ್ಲಿ ಬೆಂಗಳೂರು ನಗರವಿದೆ. ಇದೇ ರೀತಿ ನಾನಾ ಮಾನದಂಡಗಳಲ್ಲಿ ವ್ಯತ್ಯಾಸವಿರುವುದನ್ನು ಗಮನಿಸಬಹುದು. ಹಾಗಾಗಿ ಸಮಗ್ರ ದೃಷ್ಟಿಕೋನದಡಿ ಅಭಿವೃದ್ಧಿಯ ಭೂಪಟವನ್ನು ಮರು ವಿನ್ಯಾಸಗೊಳಿಸಲು ಇದು ಸಕಾಲ. ಜಿಲ್ಲಾವಾರು ಸಾಕ್ಷರತೆ ಪ್ರಮಾಣ ಬೆಂಗಳೂರು ನಗರ: ಶೇ.87.67 ಬೆಂಗಳೂರು ಗ್ರಾಮಾಂತರ: ಶೇ.77.92 ಕೋಲಾರ: ಶೇ.74.39 ಚಿಕ್ಕಬಳ್ಳಾಪುರ: ಶೇ.69.75 ರಾಮನಗರ: ಶೇ.69.22 ತುಮಕೂರು: ಶೇ.75.14 ಚಿತ್ರದುರ್ಗ: ಶೇ.73.71 ದಾವಣಗೆರೆ: ಶೇ.77.1 ಶಿವಮೊಗ್ಗ: ಶೇ.80.45 ಮೈಸೂರು ವಿಭಾಗ ಮೈಸೂರು: ಶೇ.72.79 ಮಂಡ್ಯ: ಶೇ.70.4 ಹಾಸನ: ಶೇ.76.07 ಚಿಕ್ಕಮಗಳೂರು: ಶೇ.79.25 ದಕ್ಷಿಣ ಕನ್ನಡ: ಶೇ.88.57 ಉಡುಪಿ: ಶೇ.86.24 ಚಾಮರಾಜನಗರ: ಶೇ.61.43 ಕೊಡಗು: ಶೇ.82.61 ಬೆಳಗಾವಿ ವಿಭಾಗ ಬೆಳಗಾವಿ: ಶೇ.73.48 ಉತ್ತರ ಕನ್ನಡ: ಶೇ.84.06 ಧಾರವಾಡ: ಶೇ.80.00 ಗದಗ: ಶೇ.75.12 ಹಾವೇರಿ: ಶೇ.77.4 ವಿಜಯಪುರ: ಶೇ.67.15 ಬಾಗಲಕೋಟೆ: ಶೇ.68.82 ಕಲಬುರಗಿ ವಿಭಾಗ ಬೀದರ್‌: ಶೇ.70.5 ಕಲಬುರಗಿ: ಶೇ.64.85 ಯಾದಗಿರಿ: ಶೇ.51.83 ಬಳ್ಳಾರಿ: ಶೇ.67.5 ರಾಯಚೂರು: ಶೇ.59.56 ಕೊಪ್ಪಳ: ಶೇ.68.09 ವಿಭಾಗವಾರು ತಲಾದಾಯ ಬೆಂಗಳೂರು ವಿಭಾಗ: 3,01,748 ರೂ. ಮೈಸೂರು ವಿಭಾಗ: 2,05,829 ರೂ. ಬೆಳಗಾವಿ ವಿಭಾಗ: 1,28,761 ರೂ. ಕಲಬುರಗಿ ವಿಭಾಗ: 1,14,133 ರೂ. ಬೆಂಗಳೂರು ನಗರ ಹೊರತು ಪಡಿಸಿ ಬೆಂಗಳೂರು ವಿಭಾಗ: 1,56,729 ರೂ. ಜಿಲ್ಲಾವಾರು ಕೈಗಾರಿಕೆಗಳು ಬೆಂಗಳೂರು ವಿಭಾಗ
  • ಬೆಂಗಳೂರು ನಗರ: 2,12,747
  • ಬೆಂಗಳೂರು ಗ್ರಾಮಾಂತರ: 38,563
  • ಕೋಲಾರ: 19,619
  • ಚಿಕ್ಕಬಳ್ಳಾಪುರ: 4,234
  • ರಾಮನಗರ: 7,378
  • ತುಮಕೂರು: 34,713
  • ಚಿತ್ರದುರ್ಗ: 13,632
  • ದಾವಣಗೆರೆ: 13,299
  • ಶಿವಮೊಗ್ಗ: 20,428
ಮೈಸೂರು ವಿಭಾಗ
  • ಮೈಸೂರು: 43,518
  • ಮಂಡ್ಯ: 13,991
  • ಹಾಸನ: 17,698
  • ಚಿಕ್ಕಮಗಳೂರು: 6,012
  • ದಕ್ಷಿಣ ಕನ್ನಡ: 20,033
  • ಉಡುಪಿ: 15,761
  • ಚಾಮರಾಜನಗರ: 9,798
  • ಕೊಡಗು: 5,473
ಬೆಳಗಾವಿ ವಿಭಾಗ
  • ಬೆಳಗಾವಿ: 62,291
  • ಉತ್ತರ ಕನ್ನಡ: 11,484
  • ಧಾರವಾಡ: 41,860
  • ಗದಗ: 7,625
  • ಹಾವೇರಿ: 1,316
  • ವಿಜಯಪುರ: 16,826
  • ಬಾಗಲಕೋಟೆ: 4,793
ಕಲಬುರಗಿ ವಿಭಾಗ
  • ಬೀದರ್‌: 3,391
  • ಕಲಬುರಗಿ: 11,433
  • ಯಾದಗಿರಿ: 5,420
  • ಬಳ್ಳಾರಿ: 25,630
  • ರಾಯಚೂರು: 16,658
  • ಕೊಪ್ಪಳ: 8,706


from India & World News in Kannada | VK Polls https://ift.tt/3jUnNkB

ಹೂಗಳಿಂದ ಸುಗಂಧಭರಿತ ಊದುಬತ್ತಿ; ಐಐಎಚ್‌ಆರ್‌ ನಿಂದ ಸಂಶೋಧನೆ, ಮಾಲಿನ್ಯ ತಡೆಗೆ ಸಹಕಾರಿ!

ಎಚ್‌.ಪಿ. ಪುಣ್ಯವತಿ, ಬೆಂಗಳೂರು ಬೆಂಗಳೂರು: ಬಳಸಿ ಎಸೆಯುವ ಹೂವುಗಳಿಂದ ತಯಾರಿಸುವ ನಿಟ್ಟಿನಲ್ಲಿ ಹೆಸರಘಟ್ಟದ ()ಯ ವಿಜ್ಞಾನಿಗಳ ತಂಡ ಕೈಗೊಂಡಿದೆ. ಐಐಎಚ್‌ಆರ್‌ನ 'ಪುಷ್ಪ ಮತ್ತು ಮತ್ತು ಔಷಧೀಯ ಬೆಳೆ'ಗಳ ವಿಭಾಗದ ಹಿರಿಯ ವಿಜ್ಞಾನಿ ಡಾ. ಜಿ.ಆರ್‌. ಸ್ಮಿತಾ ನೇತೃತ್ವದಲ್ಲಿ ಐವರ ತಂಡದಿಂದ ಸಂಶೋಧನೆ ಕೈಗೊಳ್ಳಲಾಗುತ್ತಿದೆ. ತಂತ್ರಜ್ಞಾನ ಅಭಿವೃದ್ಧಿ ಪೂರ್ಣಗೊಂಡ ಬಳಿಕ ಆಸಕ್ತ ಉದ್ಯಮಿಗಳಿಗೆ ಪರವಾನಗಿ ನೀಡಲು ಉದ್ದೇಶಿಸಲಾಗಿದೆ. ಹಲವು ದೇವಾಲಯಗಳಲ್ಲಿ ನಿತ್ಯವೂ ಸಾಕಷ್ಟು ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಬಳಸಿದ ಬಳಿಕ ಹೆಚ್ಚಿನ ಕಡೆ ಹೂವುಗಳು ಕಸದ ಬುಟ್ಟಿ ಸೇರುತ್ತಿವೆ. ಕಸ ನಿರ್ವಹಣೆಯೇ ಸವಾಲಾಗಿರುವ ಈ ದಿನಗಳಲ್ಲಿ ಹೂವನ್ನು ಅಗರಬತ್ತಿಯಂತಹ ಉತ್ಪನ್ನ ತಯಾರಿಗೆ ಬಳಸಿದಲ್ಲಿ ತ್ಯಾಜ್ಯ ಪ್ರಮಾಣದಲ್ಲಿ ಕೊಂಚ ಇಳಿಕೆ ಸಾಧ್ಯವಿದೆ. ಧಾರ್ಮಿಕ ಉದ್ದೇಶಗಳಿಗೆ ಬಳಸುವ ಹೂಗಳನ್ನು ನದಿ, ಕೆರೆಗಳಿಗೆ ಎಸೆಯುತ್ತಿರುವುದು ಜಲಮಾಲಿನ್ಯಕ್ಕೆ ಕಾರಣವಾಗಿದೆ. ಉಪ ಉತ್ಪನ್ನ ತಯಾರಿಗೆ ಪರ್ಯಾಯ ಮಾರ್ಗ ಕಂಡುಕೊಂಡಲ್ಲಿ ಮೌಲ್ಯವರ್ಧನೆಯೂ ಆಗಲಿದೆ. ಆರೋಗ್ಯಕ್ಕೆ ಪೂರಕ ಸಾಮಾನ್ಯವಾಗಿ ಊದುಬತ್ತಿಯಲ್ಲಿ ಚಾರ್‌ಕೋಲ್‌ ಬಳಲಾಗುತ್ತದೆ. ಹೀಗೆ ಬಳಸಿದ ಚಾರ್‌ಕೋಲ್‌ ಉರಿದು ಅದರಿಂದ ಹೊಮ್ಮುವ ಹೊಗೆಯು ಅಸ್ತಮಾ ಮತ್ತಿತರ ಶ್ವಾಸಕೋಶ ಸಂಬಂಧಿ ಕಾಯಿಲೆಗಳುಳ್ಳವರಿಗೆ ಅಪಾಯ ತಂದೊಡ್ಡುತ್ತದೆ. ಐಐಎಚ್‌ಆರ್‌ ಅಭಿವೃದ್ಧಿಪಡಿಸುತ್ತಿರುವ ತಂತ್ರಜ್ಞಾನದಲ್ಲಿ ಊದುಬತ್ತಿ ತಯಾರಿಗೆ ಚಾರ್‌ಕೋಲ್‌ ಬಳಸುವುದಿಲ್ಲ. ಬದಲಿಗೆ ಒಣಗಿದ ಹೂವಿನ ಪುಡಿಯನ್ನಷ್ಟೇ ಬಳಸಲಾಗುವುದು. ಇದು ಊದುಬತ್ತಿ ಬಳಕೆ ಆರೋಗ್ಯಕ್ಕೂ ಪೂರಕವಾಗಿರಲಿದೆ. ಎಲ್ಲಾ ಹೂಗಳಿಂದಲೂ ತಯಾರಿ ಸಾಧ್ಯ ಕೆಲವು ಹೂವುಗಳನ್ನು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಮತ್ತೆ ಕೆಲವನ್ನು ಗಾಳಿಯಲ್ಲಿ, ಓವನ್‌ನಲ್ಲಿ ಒಣಗಿಸಲಾಗುತ್ತದೆ. ನಾನಾ ರೀತಿಯ ಹೂವುಗಳನ್ನು ಬೇರೆ ಬೇರೆ ವಿಧಾನದಲ್ಲಿಒಣಗಿಸಿಟ್ಟು, ಅದನ್ನು ಪುಡಿಮಾಡಿ ಊದುಬತ್ತಿ ತಯಾರಿಗೆ ಬಳಸಲಾಗುತ್ತದೆ. ಎಲ್ಲ ಬಗೆಯ ಹೂಗಳಲ್ಲೂ ಊದುಬತ್ತಿ ತಯಾರಿಸಬಹುದು. ಆಯಾ ಋುತುಮಾನದಲ್ಲಿ ಸಿಗುವ ಹೂಗಳನ್ನು ಇದಕ್ಕೆ ಬಳಸಲಾಗುವುದು. ಏಕ ಪುಷ್ಪ ಹಾಗೂ ಮಿಶ್ರಿತ ಪುಷ್ಪಗಳಿಂದ ಸುವಾಸನೆಯುಕ್ತ ಊದುಬತ್ತಿ ತಯಾರಿಸಬಹುದು. ಬಳಸಿ ಎಸೆಯುವ ಹೂಗಳನ್ನು ಸಂಗ್ರಹಿಸಿ, ಅದರಲ್ಲಿ ಕಸ ಮತ್ತು ಹೂಗಳನ್ನು ಬೇರ್ಪಡಿಸಲಾಗುವುದು. ನಂತರ ಅದನ್ನು ಒಣಗಿಸಿ ಪುಡಿ ಮಾಡಲಾಗುತ್ತದೆ. ಇವುಗಳನ್ನು ಮಹಿಳಾ ಸ್ವಸಹಾಯ ಗುಂಪುಗಳು ಹಾಗೂ ಇತರರು ನಿರ್ವಹಿಸಲು ಸಾಧ್ಯವಿದೆ. ಇದರಿಂದ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲು ಅವಕಾಶವಿದೆ. ಡಾ. ಜಿ.ಆರ್‌. ಸ್ಮಿತಾ, ಹಿರಿಯ ವಿಜ್ಞಾನಿ, ಪುಷ್ಪ ಮತ್ತು ಔಷಧೀಯ ಬೆಳೆಗಳ ವಿಭಾಗ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ


from India & World News in Kannada | VK Polls https://ift.tt/3BrMj2J

ಗಡಿನಾಡಲ್ಲಿ ಕನ್ನಡ ಶಾಲೆಗಳ 'ಆರ್ತನಾದ': ಆಧ್ರದ 64 ಕನ್ನಡ ಶಾಲೆಗಳಿಗೆ ದುಃಸ್ಥಿತಿ!

ಮಾರುತಿ ಸುಣಗಾರ / ಮೈಲಾರಿ ಸಿಂಧುವಾಳ ಪ್ರತಿವರ್ಷ ನವಂಬರ್‌ ತಿಂಗಳು ಬಂತೆಂದರೆ ಸಾಕು ಕನ್ನಡ ಕಲರವ ಎಲ್ಲೆಡೆ ರಾರಾಜಿಸುತ್ತದೆ. ಆದರೆ ಅನೇಕ ದಶಕಗಳಿಂದ ರಾಜ್ಯದ ಗಡಿಭಾಗದಲ್ಲಿರುವ ಕನ್ನಡ ಶಾಲೆಗಳು ಮೂಲ ಸೌಕರ್ಯ ಸೇರಿ ನಾನಾ ಸಂಕಷ್ಟಕ್ಕೆ ಸಿಲುಕಿ ಇಂದಿಗೂ ಉಸಿರುಗಟ್ಟುವ ಪರಿಸ್ಥಿತಿಯಲ್ಲಿದ್ದು, ಅಕ್ಷರಶಃ ಕನ್ನಡದ ಗಡಿದಾಟಿ ಹೋದಂತಾಗಿದೆ. ಕಾಯಂ ಶಿಕ್ಷಕರಿಲ್ಲದೇ ಶಿಕ್ಷಣದಿಂದ ವಂಚಿತವಾಗುತ್ತಿರುವ ಮಕ್ಕಳು, ಬೀಳುವ ಹಂತದಲ್ಲಿರುವ ಶಾಲೆಯ ಕೊಠಡಿಗಳು, ಮೂಲ ಸೌಕರ್ಯಗಳ ಕೊರತೆ, ಕನ್ನಡ ಮಾಧ್ಯಮದ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿರುವ ಪೋಷಕರು, ಕನ್ನಡ ಮಾಧ್ಯಮದ ಶಾಲೆಗಳಲ್ಲಿ ತೆಲುಗು ಪಾಠ.. ಈ ಎಲ್ಲಾಅಷ್ಟಕಷ್ಟಗಳ ಮಧ್ಯೆ ಜಿಲ್ಲೆಯ ಗಡಿ ಹಂಚಿಕೊಂಡಿರುವ ನೆರೆಯ ಆಂಧ್ರಪ್ರದೇಶದ ಕನ್ನಡ ಮಾಧ್ಯಮ ಶಾಲೆಗಳು ಕೆಲವು ಕಡೆ ಮುಚ್ಚಿದರೆ, ಹಲವೆಡೆ ಇಂದೋ-ನಾಳೆಯೋ ಮುಚ್ಚುವ ಹಂತದಲ್ಲಿವೆ. ಕನ್ನಡದ ಅಭಿವೃದ್ಧಿಯ ಕುರಿತು ಮಾತುಗಳನ್ನಾಡುತ್ತಿರುವ ರಾಜ್ಯ ಸರಕಾರ ಕನ್ನಡ ಶಾಲೆಗಳ ಉಳಿವಿನ ಕುರಿತು ಎಲ್ಲಿಯೂ ಧ್ವನಿ ಎತ್ತದಿರುವುದು ಕನ್ನಡ ಶಾಲೆಗಳ ಕಣ್ಮರೆಗೆ ಕಾರಣವಾಗುತ್ತಿದೆ. ಬಳ್ಳಾರಿ ಜಿಲ್ಲೆಯ ಗಡಿಹಂಚಿಕೊಂಡಿರುವ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ 45 ಮತ್ತು ಅನಂತಪುರ ಜಿಲ್ಲೆಯ 19 ಶಾಲೆಗಳು ಸೇರಿದಂತೆ ಸದ್ಯ ಒಟ್ಟು 64 ಕನ್ನಡ ಶಾಲೆಗಳಿವೆ. ಅನಂತಪುರ ಜಿಲ್ಲೆಯಲ್ಲಿ 2653ಜನ ವಿದ್ಯಾರ್ಥಿಗಳು ಹಾಗೂ ಕರ್ನೂಲುನಲ್ಲಿ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಾಲ ಕಾಲಕ್ಕೆ ಪಠ್ಯಪುಸ್ತಕಗಳು ಪೂರೈಕೆಯಾಗದಿರುವುದು, ಕೊಠಡಿಗಳ ತೊಂದರೆ, ಕಾಯಂ ಶಿಕ್ಷಕ ಕೊರತೆ ಸೇರಿದಂತೆ ನಾನಾ ಸಮಸ್ಯೆಗಳಿಂದ ಗಡಿಭಾಗದ ಕನ್ನಡ ಮಾಧ್ಯಮದ ಶಾಲೆಯ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತವಾಗುತ್ತಿದ್ದು, ಕನ್ನಡ ಶಾಲೆಗಳ ಪರಿಸ್ಥಿತಿಯನ್ನು ಕೇಳುವವರಿಲ್ಲದಂತಾಗಿದೆ. ಗಡಿಭಾಗಕ್ಕೆ ಹೊಂದಿಕೊಂಡಿರುವ ಪ್ರದೇಶಗಳಾದ್ದರಿಂದ ಅಧಿಕಾರಿಗಳು ಭೇಟಿ ನೀಡುವುದು ಕೂಡ ಅತೀ ವಿರಳವಾಗಿದೆ. ಇದರಿಂದ ಗಡಿಭಾಗದ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ಸಂಪೂರ್ಣವಾಗಿ ವಂಚಿತರಾಗುತ್ತಿದ್ದಾರೆ. ಕೂಡಲೇ ಈ ಕುರಿತು ಕನ್ನಡ ಅಭಿವೃದ್ಧಿ ಮತ್ತು ಗಡಿ ಅಭಿವೃದ್ಧಿ ಪ್ರಾಧಿಕಾರಗಳು ಗಮನ ಹರಿಸಿ, ಮಕ್ಕಳಿಗೆ ಉತ್ತಮ ಭವಿಷ್ಯ ಒದಗಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಬೀಳುವ ಹಂತದಲ್ಲಿರುವ ಕೊಠಡಿಗಳು: ಬಳ್ಳಾರಿ ಜಿಲ್ಲೆಯ ಗಡಿ ಹಂಚಿಕೊಂಡಿರುವ ಹಾಲಹರ್ವಿ ಮಂಡಲದ ಜೆ.ಹೊಸಳ್ಳಿ ಗ್ರಾಮದ 61 ವರ್ಷದ ಹಳೆಯ ಶಾಲೆಯ ಕೊಠಡಿಗಳು ಜೋರಾದ ಮಳೆ ಬಂದರೆ ಸಾಕು ಬೀಳುವ ಹಂತದಲ್ಲಿವೆ. ಹಲವು ದಿನಗಳಿಂದ ಇದೇ ಪರಿಸ್ಥಿತಿಯಲ್ಲಿ ಮಕ್ಕಳು ಪಾಠ ಕೇಳುತ್ತಿದ್ದಾರೆ. ಶಾಲೆಗೆ 3 ವರ್ಷಗಳಿಂದ ಕಾಯಂ ಶಿಕ್ಷಕರಿಲ್ಲದೇ ಮಕ್ಕಳ ಕಲಿಕೆಗೆ ಅಡ್ಡಿಯಾಗಿದ್ದು, ಗ್ರಾಮದ ಯುವಕರು ಮೇಲಾಧಿಕಾರಿಗಳಿಗೆ ಮನವಿ ಮಾಡಿದ ನಂತರ ಇತ್ತೀಚೆಗೆ ಇಬ್ಬರು ಶಿಕ್ಷಕಿಯರನ್ನು ಗ್ರಾಮದ ಶಾಲೆಗೆ ನೇಮಿಸಲಾಗಿದೆ. ಗ್ರಾಮಕ್ಕೆ ಇದುವರೆಗೆ ಅತ್ತ ಆಂಧ್ರ, ಇತ್ತ ಕರ್ನಾಟಕ ಎರಡೂ ರಾಜ್ಯಗಳಿಂದ ಯಾವುದೇ ಬಸ್‌ ವ್ಯವಸ್ಥೆ ಕಲ್ಪಿಸದ ಪರಿಣಾಮ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕೆ ತೆರಳಲು ಸರಿಯಾದ ಸೌಲಭ್ಯಗಳಿಲ್ಲದೇ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಗಡಿಹಂಚಿಕೊಂಡಿರುವ ಮತ್ತೊಂದು ಗ್ರಾಮ ಬಲ್ಲೂರು. ಇಲ್ಲಿನ ಪ್ರಾಥಮಿಕ ಶಾಲೆಯ ಪರಿಸ್ಥಿತಿ ಕೂಡ ಹೀಗೆ ಇದೆ. ಕನ್ನಡ ಶಾಲೆಯಲ್ಲಿ ಇದುವರೆಗೆ ಕಾಯಂ ಶಿಕ್ಷಕರಿಲ್ಲದೆ, ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕರ್ನೂಲು ಜಿಲ್ಲೆಯಲ್ಲಿ 45 ಕನ್ನಡ ಶಾಲೆಗಳು: ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ನಾಲ್ಕು ಮಂಡಲಗಳಲ್ಲಿ ಒಟ್ಟು 45 ಸರ್ಕಾರಿ ಶಾಲೆಗಳು ಇಂದಿಗೂ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವಲ್ಲಿ ಕಾರ್ಯನಿರತವಾಗಿವೆ. ಹೊಳಗುಂದ ಮಂಡಲದಲ್ಲಿ 07ಪ್ರಾಥಮಿಕ, 02ಹಿರಿಯ ಪ್ರಾಥಮಿಕ, 03 ಪ್ರೌಢ ಶಾಲೆ, ಹಾಲಹರ್ವಿ ಮಂಡಲದಲ್ಲಿ 04 ಪ್ರಾಥಮಿಕ, 02 ಪ್ರೌಢಶಾಲೆ, ಕೌತಾಳಂ ಮಂಡಲದಲ್ಲಿ 12 ಪ್ರಾಥಮಿಕ ಶಾಲೆ, 01ಹಿರಿಯ ಪ್ರಾಥಮಿಕ ಶಾಲೆ, 07 ಪ್ರೌಢಶಾಲೆಗಳಿವೆ. ಆದೋನಿ ಮಂಡಲದಲ್ಲಿ 01ಪ್ರಾಥಮಿಕ ಶಾಲೆ, 04ಹಿರಿಯ ಪ್ರಾಥಮಿಕ ಶಾಲೆ, 02 ಪ್ರೌಢಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಂದು ಶಾಲೆ ಒಂದಿಲ್ಲೊಂದು ಸಮಸ್ಯೆಯಿಂದ ಬಳಲುತ್ತಿದೆ. ಅನಂತಪುರ ಜಿಲ್ಲೆಯಲ್ಲಿ 19ಕನ್ನಡ ಶಾಲೆಗಳು: ಬಳ್ಳಾರಿ ಜಿಲ್ಲೆಯ ಗಡಿಯಂಚಿಕೊಂಡಿರುವ ಆಂಧ್ರಪ್ರದೇಶದ ಮತ್ತೊಂದು ಜಿಲ್ಲೆಅನಂತಪುರ. ಜಿಲ್ಲೆಯ ಡಿ.ಹಿರೇಹಾಳ್‌, ಅಮರಾಪುರಂ ಮತ್ತು ರೊಳ್ಳಂ ಒಳಗೊಂಡಂತೆ ಈ ಮೂರು ಮಂಡಲಗಳ 19 ಕನ್ನಡ ಶಾಲೆಗಳಲ್ಲಿ 2653 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಡಿ.ಹಿರೇಹಾಳ್‌ ಮಂಡಲದಲ್ಲಿ 11 ಪ್ರಾಥಮಿಕ ಶಾಲೆ, 01 ಹಿರಿಯ ಪ್ರಾಥಮಿಕ, 03 ಪ್ರೌಢಶಾಲೆ, ಅಮರಾಪುರಂ ಮಂಡಲದಲ್ಲಿ 2 ಪ್ರಾಥಮಿಕ, 1 ಹಿರಿಯ ಪ್ರಾಥಮಿಕ, ರೊಳ್ಳ ಮಂಡಲದಲ್ಲಿ1 ಪ್ರಾಥಮಿಕ ಶಾಲೆ ಸೇರಿದಂತೆ ಮೂರು ಮಂಡಲಗಳ ಪೈಕಿ ಒಟ್ಟು 19 ಕನ್ನಡ ಮಾಧ್ಯಮ ಶಾಲೆಗಳಿದ್ದು, ಅಮರಾಪುರಂನಲ್ಲಿ 56, ರೊಳ್ಳದಲ್ಲಿ 15 ಜನ, ಡಿ.ಹಿರೇಹಾಳ್‌ ಮಂಡಲದಲ್ಲಿ 2579 ಜನ ಮಕ್ಕಳು ಸೇರಿದಂತೆ ಒಟ್ಟು 2653 ಜನ ವಿದ್ಯಾರ್ಥಿಗಳು ಈ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹಿರೇಹಾಳ್‌, ಮಡೇನಹಳ್ಳಿ ಮತ್ತು ಹೆಚ್‌.ಸಿದ್ದಾಪುರ ಗ್ರಾಮಗಳಲ್ಲಿ 3 ಪ್ರೌಢ ಶಾಲೆಗಳಿವೆ. 110 ವರ್ಷ ಪೂರೈಸಿದ ಶಾಲೆ: ಆಂಧ್ರದ ಡಿ.ಹಿರೇಹಾಳ್‌ ಗ್ರಾಮದಲ್ಲಿ 4 ಪ್ರಾಥಮಿಕ ಶಾಲೆ, 1 ಪ್ರೌಢಶಾಲೆಯಿದೆ. ಗ್ರಾಮದಲ್ಲಿ ಮೊದಲ ಬಾರಿಗೆ ಶುರುವಾದ ಶಾಲೆ 110 ವರ್ಷಗಳನ್ನು ಪೂರೈಸಿದ್ದು, ಸದ್ಯ ಈ ಶಾಲೆಯಲ್ಲಿ 148 ಜನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಾಜಿ ಶಾಸಕ ಹೆಚ್‌.ಆರ್‌.ಗವಿಯಪ್ಪ ಸೇರಿದಂತೆ ಹಲವು ಪ್ರಮುಖ ನಾಯಕರು ಇದೇ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದಿದ್ದರು ಎಂಬುವುದು ಗಮನಾರ್ಹವಾಗಿದೆ. ಮುಚ್ಚಿದ : ಅನಂತಪುರ ಜಿಲ್ಲೆಯ ಡಿ.ಹಿರೇಹಾಳ್‌ ಮಂಡಲದ ಮಡೇನಹಳ್ಳಿ ಗ್ರಾಮದಲ್ಲಿ ಎರಡು ಕನ್ನಡ ಶಾಲೆಗಳಿದ್ದವು. ಎರಡು ಶಾಲೆಗಳ ಪೈಕಿ ಪ್ರಾಥಮಿಕ ಶಾಲೆಯನ್ನು ಮುಚ್ಚಿದ್ದು, ಪ್ರೌಢಶಾಲೆ ಕಾರ್ಯನಿರ್ವಹಿಸುತ್ತಿದೆ. ಕನ್ನಡ ಶಾಲೆಯ ಜಾಗದಲ್ಲಿಯೇ ತೆಲುಗು ಮಾಧ್ಯಮದ ಶಾಲೆ ಶುರು ಮಾಡಲಾಗಿದ್ದು, ಗಡಿಯಾಚೆಗಿನ ಕನ್ನಡ ಶಾಲೆ ಮತ್ತು ಕನ್ನಡ ಶಿಕ್ಷಕರ ಗೋಳು ಕೇಳುವವರಿಲ್ಲದಂತಾಗಿದ್ದು, ಮಕ್ಕಳು ಕನ್ನಡ ಭಾಷೆಯ ಬಗ್ಗೆ ಆಸಕ್ತಿ ತೋರದೇ ಇರುವುದರಿಂದ ಕನ್ನಡ ಶಾಲೆಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿವೆ. ಸಭೆಗಳಿಗೆ ಸೀಮಿತ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರ: ಗಡಿಭಾಗದ ಗ್ರಾಮಗಳ ಅಭಿವೃದ್ಧಿಗಾಗಿ ರಚನೆಗೊಂಡಿರುವ ಗಡಿ ಪ್ರದೇಶಭಿವೃದ್ಧಿ ಪ್ರಾಧಿಕಾರ ಕೇವಲ ಸಭೆಗೆ ಮಾತ್ರ ಸೀಮಿತವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಬಳ್ಳಾರಿಗೆ ಸೆ.27ರಂದು ಪ್ರಾಧಿಕಾರದ ಅಧ್ಯಕ್ಷರು ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಬಳಿಕ ಕೆಲ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಕನ್ನಡ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಕಣ್ಣಾರೆಕಂಡಿದ್ದರು. ಆದರೆ ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದಲ್ಲದೆ, ಇಲ್ಲಿನ ಜಿಲ್ಲಾಡಳಿತ ಸಹ ಗಡಿಭಾಗವನ್ನು ಸಂಪೂರ್ಣ ನಿರ್ಲಕ್ಷ್ಯಸಿದೆ ಎಂಬುದು ಹಲವರ ಆರೋಪ ಸಹ ಬಲವಾಗಿ ಕೇಳಿಬರುತ್ತಿದೆ. ಪ್ರಾಧಿಕಾರಕ್ಕೆ ಅನುದಾನ ಕೊರತೆ?: ರಾಜ್ಯದಲ್ಲಿನ ಗಡಿಭಾಗದ ಪ್ರದೇಶಗಳ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಲು ಪ್ರಾಧಿಕಾರಕ್ಕೆ ಅನುದಾನ ಕೊರತೆ ಎದುರಾಗಿದೆ. ಕಲಬುರಗಿ, ಬೀದರ್‌, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಯ ಗಡಿಭಾಗದ ಅಭಿವೃದ್ಧಿಗೆ ಅನುದಾನ ಬಿಡುಗಡೆಗಾಗಿ ರಾಜ್ಯ ಸರಕಾರಕ್ಕೆ ಪ್ರಾಧಿಕಾರ ವರದಿ ಸಲ್ಲಿಸಿದ್ದು, ಈವರೆಗೆ ಅನುದಾನ ಬಿಡುಗಡೆಯಾಗಿಲ್ಲ. ಕೋವಿಡ್‌ ಸಂಕಷ್ಟದಿಂದಾಗಿ ಪ್ರಾಧಿಕಾರಕ್ಕೆ ಸರಕಾರ ಅನುದಾನ ಬಿಡುಗಡೆ ಮಾಡದಿರುವುದು ಗಡಿ ಪ್ರದೇಶಗಳ ಅಭಿವೃದ್ಧಿಗೆ ಸಹ ಹಿನ್ನಡೆಯಾದಂತಾಗಿದೆ. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಇತ್ತೀಚಿಗೆ ಬಳ್ಳಾರಿಯಲ್ಲಿ ಸಭೆ ನಡೆಸಲಾಗಿದೆ. ಗಡಿಭಾಗದ ಶಾಲೆ, ಗ್ರಾಮಗಳಿಗೆ ಬೇಕಿರುವ ಸೌಲಭ್ಯವನ್ನು ವಿಶೇಷ ಪಟ್ಟಿ ಮಾಡಿಕೊಡುವಂತೆ ಡಿಸಿ, ಜಿಪಂ ಸಿಇಒ, ಡಿಡಿಪಿಐಗಳಿಗೆ ಸೂಚಿಸಿದ್ದು, ಈವರೆಗೆ ಪಟ್ಟಿ ಸಲ್ಲಿಸಿಲ್ಲ. ಕಲಬುರಗಿ, ಬೀದರ್‌, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಯ ವರದಿ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆಯಾದ ಕೂಡಲೇ ನೀಡಲಾಗುವುದು. ಗಡಿಭಾಗದ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರು ಪತ್ರ ಸಲ್ಲಿಸಿದರೆ ಪ್ರಾಧಿಕಾರದಿಂದ ಕೂಡಲೇ ಕ್ರಮಕೈಗೊಳ್ಳಲಾಗುವುದು. - ಪ್ರಕಾಶ ಮತ್ತಿಹಳ್ಳಿ ಕಾರ್ಯದರ್ಶಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ. ಗಡಿ ಅಭಿವೃದ್ಧಿ ಪ್ರಾಧಿಕಾರ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿದೆ. ಇತ್ತೀಚಿಗೆ ಭೇಟಿ ನೀಡಿದ ಸಂದರ್ಭದಲ್ಲೂ ಗಡಿಭಾಗದ ಗ್ರಾಮಗಳಿಗೆ ಭೇಟಿ ನೀಡಿ, ಸ್ಥಳೀಯರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲು ಮುಂದಾಗಿಲ್ಲ. ಬೆಂಗಳೂರಿನಲ್ಲಿ ಕುಳಿತು ಆಡಳಿತ ಮಾಡಿದರೇ ಇಲ್ಲಿನ ಗಡಿಭಾಗದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಷ್ಟಸಾಧ್ಯ. ಹೀಗಾಗಿ ಹೆಸರಿಗೆ ಮಾತ್ರ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸೀಮಿತವಾಗದಿರಲಿ. ಗಡಿಭಾಗದ ಕನ್ನಡ ಶಾಲೆಗಳ ಉಳಿವಿಗೆ ರಾಜ್ಯ ಸರಕಾರ, ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು ಮುಂದಾಗಬೇಕಿದೆ. - ಸಿದ್ದರಾಮ ಕಲ್ಮಠ ನಿಕಟಪೂರ್ವ ಜಿಲ್ಲಾಧ್ಯಕ್ಷ ಕಸಾಪ ಬಳ್ಳಾರಿ.


from India & World News in Kannada | VK Polls https://ift.tt/3CERq0Y

ಕೆಬಿಜೆಎನ್‌ಎಲ್‌ ಕಚೇರಿ ಆಲಮಟ್ಟಿಗೆ ಸ್ಥಳಾಂತರ: ಸಂತ್ರಸ್ತರಲ್ಲಿ ಸಂತಸದ ಜೊತೆಗೆ ಅನುಮಾನ..!

(): ಬೆಂಗಳೂರಿನಲ್ಲಿರುವ ಕೃಷ್ಣಾ ಭಾಗ್ಯ ಜಲ ನಿಗಮ ಕಚೇರಿಯನ್ನು ಆಲಮಟ್ಟಿಗೆ ವರ್ಗಾಯಿಸಲು ಸರಕಾರ ತೀರ್ಮಾನಿಸಿದ್ದು, ಸಂತ್ರಸ್ತರಲ್ಲಿ ಸಂತಸ ಮೂಡಿಸಿದೆ. ಆದರೆ ಈ ಬಾರಿಯಾದರೂ ಕಚೇರಿ ಸ್ಥಳಾಂತರವಾಗುತ್ತಾ ಎಂಬ ಅನುಮಾನ ಮಾತ್ರ ಮಾಯವಾಗುತ್ತಿಲ್ಲ. ಕೃಷ್ಣಾ ಭಾಗ್ಯ ಜಲ ನಿಗಮದ ನೀರಾವರಿ ಯೋಜನೆಗಳ ಅನುಷ್ಠಾನದ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರಿಗೆ ರಾಜ್ಯದ ಆಡಳಿತ ಹತ್ತಿರವಾಗಲು ಅನುಕೂಲವಾಗುವಂತೆ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯಲ್ಲಿನ ಬೆಂಗಳೂರಿನಲ್ಲಿ ಕೆಬಿಜೆಎನ್‌ಎಲ್‌ ಕಚೇರಿಯನ್ನು ಆಲಮಟ್ಟಿಗೆ ಸ್ಥಳಾಂತರಿಸಲು ತೀರ್ಮಾನಿಸಿ ಜಲಸಂಪನ್ಮೂಲ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಮಂಜುನಾಥ ಎಚ್‌. ಎಂ. ಅವರು ಅ.30ರಂದು ಆದೇಶಿಸಿದ್ದಾರೆ. ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಚೇರಿ ಸ್ಥಳಾಂತರ ಕುರಿತು ಚರ್ಚೆ ನಡೆಸಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು. ಕಳೆದ ಅನೇಕ ವರ್ಷಗಳಿಂದ ಆಡಳಿತ ನಡೆಸಿದ ಸರಕಾರಗಳು ಕೆಬಿಜೆಎನ್‌ಎಲ್‌ ಕಚೇರಿ ಆಲಮಟ್ಟಿಗೆ ಸ್ಥಳಾಂತರವಾಗಲಿ ಎಂದು ಆದೇಶಿಸುತ್ತಾ ಬಂದರೂ ಇದುವರೆಗೂ ಕಚೇರಿ ಮಾತ್ರ ಬೆಂಗಳೂರು ಬಿಟ್ಟು ಆಲಮಟ್ಟಿಗೆ ಸ್ಥಳಾಂತರಗೊಂಡಿಲ್ಲ. ಆದರೆ ಈ ಬಾರಿಯಾದರೂ ಸ್ಥಳಾಂತರಗೊಳ್ಳಲಿ ಎಂಬುದು ಸಂತ್ರಸ್ತರ ಆಶಯವಾಗಿದೆ. ಸ್ಥಳಾಂತರದಿಂದ ಲಾಭ ಕಚೇರಿ ಬೆಂಗಳೂರಿನಲ್ಲಿರುವುದರಿಂದ ಪುನರ್ವಸತಿ, ಪುನರ್‌ ನಿರ್ಮಾಣ, ಭೂಸ್ವಾಧೀನ, ಕಾಲುವೆ ನಿರ್ಮಾಣ ಸೇರಿದಂತೆ ಎಲ್ಲ ಕೆಲಸ ವಿಳಂಬವಾಗಿವೆ. ಆಲಮಟ್ಟಿಯಲ್ಲಿ ಕಚೇರಿ ವಲಯ ಹಾಗೂ ವಿಭಾಗಗಳಿಂದ ಬಂದ ಕಾಗದಗಳನ್ನು ಬೆಂಗಳೂರಿಗೆ ಕಳಿಸುವುದು ಹಾಗೂ ಅಲ್ಲಿಂದ ಮರಳಿ ಬಂದ ಪತ್ರಗಳನ್ನು ಸಂಬಂಧಿಸಿದವರಿಗೆ ತಲುಪಿಸುವ ಕಾರ್ಯಕ್ಕೆ ಸೀಮಿತವಾಗಿದೆ. ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ವ್ಯಾಪ್ತಿಯಲ್ಲಿ ಭೀಮರಾಯನಗುಡಿ, ರಾಂಪುರ, ಆಲಮಟ್ಟಿ, ನಾರಾಯಣಪುರ ವಲಯಗಳಿದ್ದು, ಮುಖ್ಯಅಭಿಯಂತರರು, ಅಧೀಕ್ಷಕರು, ಎಂಜಿನಿಯರ್‌ ಕಚೇರಿಗಳು ಈ ಭಾಗದಲ್ಲೇ ಇವೆ. ಆದರೆ ಇಬ್ಬರು ಪ್ರಧಾನ ವ್ಯವಸ್ಥಾಪಕ (ಆಡಳಿತ ಹಾಗೂ ಹಣಕಾಸು), ಕೆಎಎಸ್‌ ಅಧಿಕಾರಿಗಳ ಹುದ್ದೆ ಸೇರಿ 90 ನೌಕರರು ಬೆಂಗಳೂರಿನಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ನಿಗಮದಡಿ 4 ಸಾವಿರಕ್ಕೂ ಹೆಚ್ಚು ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿಗಮದ ಆಡಳಿತ ಕಚೇರಿ ಆಲಮಟ್ಟಿಯಲ್ಲೇ ಕಾರ್ಯನಿರ್ವಹಿಸಿದರೆ ನೀರಾವರಿ ಯೋಜನೆಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳಲು ಅನುಕೂಲವಾಗಲಿದೆ. ಯೋಜನೆ, ಕಾಮಗಾರಿ ಟೆಂಡರ್‌ ಪ್ರಕ್ರಿಯೆ ಸಭೆಗಾಗಿ ಬೆಂಗಳೂರಿಗೆ ಹೋಗುವ ಬದಲು ಇಲ್ಲೇ ನಿರ್ಧಾರ ತೆಗೆದುಕೊಂಡು ತ್ವರಿತಗತಿಯ ಕೆಲಸ ಸಾಧ್ಯವಾಗಲಿದೆ. ಆಲಮಟ್ಟಿಯೇ ಮೂಲ 1994ರಲ್ಲಿ ಕೆಬಿಜೆಎನ್‌ಎಲ್‌ ಆಲಮಟ್ಟಿಯಲ್ಲಿ ಸ್ಥಾಪನೆಯಾಯಿತು. ಆರಂಭದಲ್ಲಿ ಚೀಫ್‌ ಎಂಜಿನಿಯರ್‌ ಎಂಡಿಯಾಗಿ ಪದೋನ್ನತಿ ಹೊಂದುತ್ತಿದ್ದರು. ಐಎಎಸ್‌ ಅಧಿಕಾರಿಗಳು ಈ ಹುದ್ದೆಗೆ ಬರುತ್ತಿದ್ದಂತೆ ಲಾಬಿ ನಡೆದು 1996ರಲ್ಲಿ ಮುಖ್ಯಕಚೇರಿ ಬೆಂಗಳೂರಿಗೆ ಸ್ಥಳಾಂತರಗೊಂಡಿತು. ಹಣಕಾಸು ವಿಭಾಗ, ಆಡಳಿತ ವಿಭಾಗ ಸೇರಿ ಎಲ್ಲ ವಿಭಾಗಗಳು ಬೆಂಗಳೂರಿಗೆ ಸ್ಥಳಾಂತರಗೊಂಡಿವೆ. ಆಲಮಟ್ಟಿಯಲ್ಲಿ ಕೆಬಿಜೆಎನ್‌ಎಲ್‌ ಆಡಳಿತ ಕಚೇರಿಗೆ 2 ಕೋಟಿ ರೂ. ವೆಚ್ಚದ ಅತ್ಯಾಧುನಿಕ ಸೌಲಭ್ಯದ ಕಟ್ಟಡ, ವ್ಯವಸ್ಥಾಪಕ ನಿರ್ದೇಶಕರಿಗೆ ಹೈಟೆಕ್‌ ವಸತಿ ಗೃಹ ನಿರ್ಮಿಸಲಾಗಿದೆ. ಈ ಕಟ್ಟಡದ ಸಮರ್ಪಕ ಬಳಕೆಯಾಗುತ್ತಿಲ್ಲ ಎಂಬ ಆರೋಪವೂ ಇದೆ. 'ಆಲಮಟ್ಟಿಯಲ್ಲಿಯೇ ಕೆಬಿಜೆಎನ್‌ಎಲ್‌ ಆಡಳಿತ ಕಚೇರಿ ಇರಬೇಕೆಂದು ಆರಂಭದಿಂದಲೂ ರೈತ ಸಂಘದಿಂದ ಹೋರಾಟ ಮಾಡುತ್ತಾ ಬರಲಾಗಿದೆ. ಸಾಮಾನ್ಯ ಸಾವಿರಾರು ರೂ. ಖರ್ಚು ಮಾಡಿ ಬೆಂಗಳೂರಿನ ಎಂಡಿ ಕಚೇರಿಗೆ ತೆರಳಲು ಕಷ್ಟ ಸಾಧ್ಯ. ಐಎಎಸ್‌ ಅಧಿಕಾರಿಗಳು ಸಾಮಾನ್ಯ ರೈತರಿಗೆ ಸಿಗುವುದಿಲ್ಲ. ಆಲಮಟ್ಟಿಯಲ್ಲಿ ಕಚೇರಿ ಆರಂಭವಾದರೆ ಅಧಿಕಾರಿಗಳು ರೈತರಿಗೆ ಸುಲಭವಾಗಿ ಸಿಗುತ್ತಾರೆ. ಇದರಿಂದ ರೈತರ ಎಲ್ಲ ಕೆಲಸಗಳು ಸುಲಭವಾಗುತ್ತವೆ. ಆದೇಶ ಕಾಗದಕ್ಕೆ ಸೀಮಿತವಾಗದೇ ಕಾರ್ಯರೂಪಕ್ಕೆ ಬರಬೇಕು' ಎಂದು ಅಖಂಡ ಕರ್ನಾಟಕ ರೈತ ಸಂಘದ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸಿದ್ದಾರೆ.


from India & World News in Kannada | VK Polls https://ift.tt/2XZTBge

'ಆತಂಕದ ನಿರ್ಧಾರ', ಟೀಮ್ ಇಂಡಿಯಾ ರಣತಂತ್ರ ಟೀಕಿಸಿದ ಸೆಹ್ವಾಗ್‌!

ಬೆಂಗಳೂರು: ಆತಂಕಕ್ಕೀಡಾಗಿ ಕೆಲ ಆತುರದ ನಿರ್ಧಾರಗಳನ್ನು ತೆಗೆದುಕೊಂಡಿದ್ದೇ ನ್ಯೂಜಿಲೆಂಡ್‌ ವಿರುದ್ಧದ ಸೋಲಿಗೆ ಬಹುಮುಖ್ಯ ಕಾರಣ ಎಂದು ಭಾರತ ತಂಡದ ಮಾಜಿ ಓಪನರ್‌ ಟೀಕಿಸಿದ್ದಾರೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸೂಪರ್‌ 12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿದ ವಿರಾಟ್‌ ಕೊಹ್ಲಿ ಬಳಗ ಅಪಾಯಕಾರಿ ನ್ಯೂಜಿಲೆಂಡ್‌ ಎದುರು 8 ವಿಕೆಟ್‌ಗಳ ಸೋಲಿನ ಮರ್ಮಾಘಾತಕ್ಕೀಡಾಯಿತು. ಈ ಸೋಲಿನೊಂದಿಗೆ ಸೂಪರ್‌ 12 ಹಂತದಲ್ಲಿ ಖಾತೆ ತೆರೆಯದೇ ಉಳಿದಿರುವ ಭಾರತ ತಂಡ ಸೆಮಿಫೈನಲ್ಸ್‌ ರೇಸಿಂದ ಬಹುತೇಕ ಹೊರಬೀಳುವ ಸ್ಥಿತಿಗೆ ತಲುಪಿದೆ. ಈ ಬಗ್ಗೆ ಮಾತನಾಡಿದ ಸೆಹ್ವಾಗ್‌ ಭಾರತ ತಂಡದ ರಣತಂತ್ರವನ್ನು ಕಟುವಾಗಿ ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ 2007ರ ವಿಶ್ವಕಪ್‌ನಲ್ಲೂ ಟೀಮ್ ಇಂಡಿಯಾ ಇಂಥದ್ದೇ ತಪ್ಪು ಮಾಡಿತ್ತು ಎಂದಿದ್ದಾರೆ. 2007ರ ವಿಶ್ವಕಪ್‌ನಲ್ಲೂ ಭಾರತ ತಂಡದಲ್ಲಿ ಸಚಿನ್‌ ತೆಂಡೂಲ್ಕರ್‌ ಅವರಂತಹ ದೈತ್ಯ ಓಪನರ್‌ ಇದ್ದರೂ ಟೀಮ್ ಇಂಡಿಯಾ ರಾಬಿನ್‌ ಉತ್ತಪ್ಪ ಮತ್ತು ವೀರೇಂದ್ರ ಸೆಹ್ವಾಗ್‌ ಅವರಿಂದ ಓಪನಿಂಗ್‌ ಮಾಡಿಸಿ ಎಡವಟ್ಟು ಮಾಡಿಕೊಂಡಿತ್ತು. ಈಗ ನ್ಯೂಜಿಲೆಂಡ್‌ ವಿರುದ್ಧ ಅವರನ್ನು 3ನೇ ಕ್ರಮಾಂಕದಲ್ಲಿ ಆಡಿಸಿ ಭಾರತ ತಂಡ ಅಂಥದ್ದೇ ತಪ್ಪು ಮಾಡಿದೆ ಎಂದು ಸೆಹ್ವಾಗ್‌ ಕ್ರಿಕ್‌ಬಝ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. "2007ರ ವಿಶ್ವಕಪ್‌ನಲ್ಲಿ ಸಚಿನ್‌ ತೆಂಡೂಲ್ಕರ್‌ ಇದ್ದರೂ ಕೂಡ ನಾನು ಮತ್ತು ರಾಬಿನ್‌ ಓಪನಿಂಗ್‌ ಮಾಡಿದ್ದೆವು. ಅದು ನಮ್ಮ ತಂಡಕ್ಕೆ ಭಾರಿ ಹಿನ್ನಡೆ ತಂದೊಡ್ಡಿತ್ತು. ಈಗಲೂ ನನ್ನ ಪ್ರಕಾರ ಗಂಗೂಲಿ ಮತ್ತು ಸಚಿನ್‌ ಓಪನಿಂಗ್‌ ಮಾಡೇಕಿತ್ತು ಅನ್ನಿಸುತ್ತದೆ. ನಮ್ಮಂತ ಬ್ಯಾಟ್ಸ್‌ಮನ್‌ಗಳು ಬೇರೆ ಕ್ರಮಾಂಕದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು. ಅದೇ ರೀತಿ ರಾಹುಲ್ ಮತ್ತು ರೋಹಿತ್‌ ಆರಂಭಿಕರಾಗಿಯೇ ಆಡಬೇಕು. ಕಿಶನ್ ಅವರನ್ನು ಬೇರೆ ಕ್ರಮಾಂಕದಲ್ಲಿ ಹೊಂದಾಣಿಕೆ ಮಾಡಬಹದು," ಎಂದು ಸೆಹ್ವಾಗ್‌ ಅಭಿಪ್ರಾಯ ಪಟ್ಟಿದ್ದಾರೆ. "ಇಶಾನ್‌ ಕಿಶನ್‌ ಓಪನರ್ ಆಗಿ ಸ್ಫೋಟಕ ಬ್ಯಾಟಿಂಗ್‌ ಮಾಡಬಲ್ಲರು. ಹಾಗೆಯೇ ಮಧ್ಯಮ ಕ್ರಮಾಂಕದಲ್ಲೂ ಅಬ್ಬರಿಸುವ ಸಾಮರ್ಥ್ಯ ಹೊಂದಿದ್ದಾರೆ. ಟೀಮ್ ಇಂಡಿಯಾ ತೀರಾ ಆತಂಕದಲ್ಲಿ ಇಂಥದ್ದೊಂದು ಗಡಿಬಿಡಿಯ ನಿರ್ಧಾರ ಮಾಡಿ ಎಡವಟ್ಟು ಮಾಡಿಕೊಂಡಿದೆ. ರೋಹಿತ್‌ನ 3ನೇ ಕ್ರಮಾಂಕದಲ್ಲಿ ಆಡಿಸಿದ್ದು ಬಹುದೊಡ್ಡ ತಪ್ಪು," ಎಂದಿದ್ದಾರೆ. ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ 40 ರನ್‌ ಗಳಿಸುವ ಹೊತ್ತಿಗಾಗಲೇ ಇಶಾನ್‌, ರಾಹುಲ್‌ ಮತ್ತು ರೋಹಿತ್‌ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಆಘಾತದಿಂದ ಚೇತರಿಸಲಾಗದೆ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 110 ರನ್‌ಗಳ ಅಲ್ಪ ಮೊತ್ತ ದಾಖಲಿಸಲಷ್ಟೇ ಶಕ್ತವಾಯಿತು. ನಂತರ ಕಿವೀಸ್‌ 14.3 ಓವರ್‌ಗಳಲ್ಲೇ ಜಯ ದಕ್ಕಿಸಿಕೊಂಡಿತು. "ಇಶಾನ್‌ ಮುಂಬೈ ಇಂಡಿಯನ್ಸ್‌ ತಂಡದಲ್ಲಿ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್‌. ಸಾಂದರ್ಭಿಕ ಓಪನರ್ ಆಗಿ ಮಾತ್ರ ಅವರನ್ನು ಬಳಸಿಕೊಳ್ಳಲಾಗಿದೆ. ಐಪಿಎಲ್‌ನಲ್ಲಿ ಅವರ ಪ್ರದರ್ಶನ ಉತ್ತಮವಾಗಿದೆ. ಹಾಗಂತ ಟೀಮ್ ಇಂಡಿಯಾದ ತಾಳ ಮೇಳ ಅಲ್ಲಾಡಿಸುವುದರಲ್ಲಿ ಅರ್ಥವಿಲ್ಲ. ರೋಹಿತ್‌ ಮತ್ತು ರಾಹುಲ್‌ ಓಪನರ್‌ ಆಗಿ ಅದ್ಭುತ ಆಟವಾಡಿದ್ದಾರೆ. ಅವರಿಗೆ ಅವಕಾಶ ಕೊಡದೇ ಬದಲಾವಣೆ ಮಾಡುತ್ತಿದ್ದರೆ, ನೀವು ಗಾಬರಿಗೊಂಡಿದ್ದೀರಿ ಎಂದರ್ಥ. ನಿಮ್ಮ ಆಟಗಾರರ ಮೇಲೆ ನಿಮಗೇ ವಿಶ್ವಾಸ ಇಲ್ಲ ಎಂಬುದು ಗೊತ್ತಾಗುತ್ತದೆ. ಮ್ಯಾನೇಜ್ಮೆಂಟ್ ಮತ್ತು ನಾಯಕ ಆತಂಕದಲ್ಲಿ ತೆಗೆದುಕೊಂಡಿರುವ ನಿರ್ಧಾರ ಇದಾಗಿದೆ," ಎಂದು ಸೆಹ್ವಾಗ್ ಟೀಕಿಸಿದ್ದಾರೆ. ಭಾರತ ತಂಡ ಈಗ ತನ್ನ ಪಾಲಿನ ಉಳಿದ ಪಂದ್ಯಗಳಲ್ಲಿ ಬೃಹತ್‌ ಜಯಗಳೊಂದಿಗೆ ನೆಟ್‌ ರನ್‌ರೇಟ್‌ ಸುಧಾರಿಸಿಕೊಂಡರೆ ಮಾತ್ರ ಮುಂದಿನ ಹಂತಕ್ಕೇರುವ ಅಲ್ಪ ಅವಕಾಶ ಪಡೆಯಲಿದೆ. ಇಲ್ಲವಾದರೆ ಮತ್ತು ಅಫಘಾನಿಸ್ತಾನ ತಂಡಗಳಲ್ಲಿ ಒಂದು ಪಾಕಿಸ್ತಾನ ತಂಡದೊಂದಿಗೆ ಸೆಮಿಪೈನಲ್ಸ್‌ ತಲುವುದು ಖಚಿತ. ಭಾರತ-ನ್ಯೂಜಿಲೆಂಡ್‌ ಪಂದ್ಯದ ಸಂಕ್ಷಿಪ್ತ ಸ್ಕೋರ್‌ಭಾರತ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 110 ರನ್‌ (ಕೆಎಲ್‌ ರಾಹುಲ್ 18, ಹಾರ್ದಿಕ್ ಪಾಂಡ್ಯ 23, ರವೀಂದ್ರ ಜಡೇಜಾ 26*; ಟ್ರೆಂಟ್‌ ಬೌಲ್ಟ್‌ 20ಕ್ಕೆ 3, ಇಶ್‌ ಸೋಢಿ 17ಕ್ಕೆ 2). ನ್ಯೂಜಿಲೆಂಗ್‌: 14.3 ಓವರ್‌ಗಳಲ್ಲಿ 2 ವಿಕೆಟ್‌ಗೆ 111 ರನ್‌ (ಮಾರ್ಟಿನ್‌ ಗಪ್ಟಿಲ್ 20, ಡ್ಯಾರಿಲ್ ಮಿಚೆಲ್‌ 49, ಕೇನ್‌ ವಿಲಿಯಮ್ಸನ್ ಅಜೇಯ 33; ಜಸ್‌ಪ್ರೀತ್‌ ಬುಮ್ರಾ 19ಕ್ಕೆ 2). ಪಂದ್ಯಶ್ರೇಷ್ಠ: ಇಶ್ ಸೋಢಿ


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3bpFaFq

ದೇಶದ 11 ರಾಜ್ಯಗಳಲ್ಲಿ ಮಂದಗತಿಯಲ್ಲಿ ಸಾಗಿದೆ ಕೊರೊನಾ ಲಸಿಕೆ ಅಭಿಯಾನ..

: ವಿಶ್ವದಲ್ಲೇ ಅತ್ಯಂತ ಬೃಹತ್‌ ಅಭಿಯಾನ ಎಂಬ ಹೆಮ್ಮೆಯ 'ರಾಷ್ಟ್ರೀಯ ನಿರೋಧಕ ಲಸಿಕೆ ಅಭಿಯಾನ'ವು ದೇಶದ 11 ರಾಜ್ಯಗಳಲ್ಲಿ ಮಂದಗತಿಯಲ್ಲಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ನರೇಂದ್ರ ಮೋದಿ ಅವರು ಈ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ನವೆಂಬರ್ 3ರಂದು ವಿಶೇಷ ಸಭೆ ನಡೆಸಲಿದ್ದಾರೆ. 'ವಿದೇಶ ಪ್ರವಾಸದಿಂದ ಪ್ರಧಾನಿಯವರು ನವೆಂಬರ್ 3 ರಂದು ಬೆಳಗ್ಗೆ ಮರಳುವರು. ಅದೇ ದಿನ ಮಧ್ಯಾಹ್ನ 12 ಗಂಟೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಕೊರೊನಾ ಲಸಿಕೆ ಪ್ರಗತಿ ಪರಿಶೀಲನೆ ಸಭೆ ನಡೆಸುವರು. ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಮಣಿಪುರ, ನಾಗಾಲ್ಯಾಂಡ್‌, ಮೇಘಾಲಯ, ಪಂಜಾಬ್‌, ತಮಿಳುನಾಡು, ಉತ್ತರಪ್ರದೇಶ, ಜಾರ್ಖಂಡ್‌, ಬಿಹಾರ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಅಥವಾ ಪ್ರತಿನಿಧಿಗಳ ಸಭೆಯಲ್ಲಿ ಭಾಗಿಯಾಗಲಿದ್ದಾರೆ' ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ. ಈ ರಾಜ್ಯಗಳಲ್ಲಿ ಮೊದಲ ಡೋಸ್‌ ಲಸಿಕೆ ನೀಡಿಕೆ ಪ್ರಮಾಣ ಶೇ.50ಕ್ಕಿಂತ ಕಡಿಮೆ ಇರುವ, ಎರಡನೇ ಡೋಸ್‌ ನಿಧಾನಗತಿಯಲ್ಲಿ ಸಾಗಿರುವ 40 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಗೃಹ ಸಚಿವ ಅಮಿತ್‌ ಶಾ, ಆರೋಗ್ಯ ಸಚಿವ ಮನ್ಸುಖ್‌ ಮಂಡಾವೀಯ ಹಾಗೂ ಸಹಾಯಕ ಸಚಿವೆ ಭಾರತಿ ಪವಾರ್‌ ಅವರು ಉಪಸ್ಥಿತರಿರಲಿದ್ದಾರೆ. ಎರಡನೇ ಡೋಸ್‌ ಲಸಿಕೆ ನೀಡುವ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ಆರೋಗ್ಯ ಸಚಿವಾಲಯವು ರಾಜ್ಯಗಳಿಗೆ ಮೇಲಿಂದ ಮೇಲೆ ನಿರ್ದೇಶನ ನೀಡುತ್ತಲೇ ಬಂದಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಈಗ ಖುದ್ದು ಪ್ರಧಾನಿಯವರೇ ಸಭೆ ನಡೆಸಲು ಮುಂದಾಗಿದ್ದಾರೆ. ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಅಭಿಯಾನಕ್ಕೆ ವೇಗ ನೀಡುವುದು ಪ್ರಧಾನಿ ಮೋದಿ ಅವರ ಸಭೆಯ ಉದ್ದೇಶವಾಗಿದೆ. ಕಳೆದ ವಾರ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಲಸಿಕಾ ಅಭಿಯಾನ ಸಂಬಂಧ ಸಭೆ ನಡೆಸಿದ್ದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವೀಯ ಅವರು, ನವೆಂಬರ್ 2 ರಿಂದ ಮನೆ ಬಾಗಿಲಿಗೆ ಲಸಿಕೆ (ಹರ್‌ ಘರ್‌ ದಸ್ತಕ್‌) ಕೊಂಡೊಯ್ಯುವ ಹೊಸ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಘೋಷಣೆ ಮಾಡಿದ್ದಾರೆ. ಮುನ್ನೆಚ್ಚರಿಕೆ ಮರೆತಿರುವ ಜನತೆ ದೀಪಾವಳಿ ಸಡಗರದಲ್ಲಿ ಮುಳುಗಿರುವ ದೇಶದ ಜನರು, ಕೊರೊನಾ ಪ್ರಸರಣ ತಡೆಯ ಮುನ್ನೆಚ್ಚರಿಕೆ ಕ್ರಮಗಳಾದ ಮಾಸ್ಕ್‌ ಧಾರಣೆ, ಸಾಮಾಜಿಕ ಅಂತರ ಪಾಲನೆ ಮತ್ತು ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಭಾರಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. 'ಲೋಕಲ್‌ ಸರ್ಕಲ್ಸ್‌' ಡಿಜಿಟಿಲ್‌ ವೇದಿಕೆಯ ಸಮೀಕ್ಷೆಯ ಪ್ರಕಾರ, ಜಿಲ್ಲೆಗಳಲ್ಲಿ ಶೇ.2ರಷ್ಟು ಜನ ಮಾತ್ರವೇ ಸರಿಯಾಗಿ ಮಾಸ್ಕ್‌ ಧರಿಸುತ್ತಿದ್ದಾರೆ ಮತ್ತು ಶೇ.3ರಷ್ಟು ಜನರು ಮಾತ್ರವೇ ಸಾಮಾಜಿಕ ಅಂತರ ಕಾಯ್ದುಕೊಂಡು, ಕೈಗಳನ್ನು ಆಗಾಗ್ಗೆ ತೊಳೆಯುವ ರೂಢಿಯನ್ನು ಬೆಳೆಸಿಕೊಂಡಿದ್ದಾರೆ. ದೇಶದ 366 ಜಿಲ್ಲೆಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ದೇಶಾದ್ಯಂತ ಏರ್‌ಪೋರ್ಟ್‌, ಬಸ್‌ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಸರಿಯಾಗಿ ಮಾಸ್ಕ್‌ ಧರಿಸುತ್ತಿರುವವರ ಪ್ರಮಾಣ ಶೇ. 16 ರಷ್ಟು ಮಾತ್ರವಿದೆ. ಇನ್ನೂ ಸ್ಥಳೀಯ ಪ್ರದೇಶಗಳಲ್ಲಿ ದಿನನಿತ್ಯದ ಕೆಲಸಗಳಿಗೆ ಬೆರೆಯುವ ಜನರು ಸಾಮಾಜಿಕ ಅಂತರ ಪಾಲನೆ ಮಾಡುತ್ತಿರುವುದು ತೀರ ಕಡಿಮೆಯಿದೆ. ಈ ನಿರ್ಲಕ್ಷ್ಯ ಧೋರಣೆಯೇ ಕೊರೊನಾ ಮೂರನೇ ಅಲೆ ಅಪ್ಪಳಿಸುವ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ ಎಂದೂ ವರದಿ ತಿಳಿಸಿದೆ. ಝೈಡುಸ್‌ ದರ ಇಳಿಕೆ ಝೈಡಸ್‌ ಕ್ಯಾಡಿಲಾ ಕಂಪನಿಯು ಕೊರೊನಾ ನಿರೋಧಕ ಲಸಿಕೆ 'ಝೈಕೊವ್‌-ಡಿ' ದರವನ್ನು ಪ್ರತಿ ಡೋಸ್‌ಗೆ 265 ರೂ. ನಿಗದಿಪಡಿಸಲು ಕಂಪನಿ ತೀರ್ಮಾನಿಸಿದೆ. ಸರಕಾರದ ಒತ್ತಾಯದ ಮೇರೆಗೆ ಕಂಪನಿಯು ಈ ನಿರ್ಧಾರಕ್ಕೆ ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೂಜಿ ರಹಿತವಾಗಿ ನೀಡುವ ವ್ಯವಸ್ಥೆಯಿರುವ 'ಝೈಕೊವ್‌-ಡಿ' ಲಸಿಕೆಗೆ ಲಸಿಕೆ ನೀಡುವ ಶುಲ್ಕವಾಗಿ 93 ರೂ. ಹೆಚ್ಚುವರಿಯಾಗಿ ಪಾವತಿಸಬೇಕಿದೆ. ಹೀಗಾಗಿ ಪ್ರತಿ ಡೋಸ್‌ಗೆ 358 ರೂ. ವೆಚ್ಚವಾಗಲಿದೆ. ಒಟ್ಟಾರೆ ಮೂರು ಡೋಸ್‌ಗಳ ಲಸಿಕೆ ಇದು. ಝೈಡುಸ್‌ ಕಂಪನಿಯು ಈ ಮೊದಲು ಪ್ರತಿ ಡೋಸ್‌ಗೆ 1,900 ರೂ. ದರ ನಿಗದಿಪಡಿಸಿತ್ತು. 28 ದಿನಗಳ ಅಂತರದಲ್ಲಿ ಮೂರು ಡೋಸ್‌ಗಳನ್ನು ಪಡೆಯಬಹುದಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಬಳಕೆಗೆ ಸರಕಾರದಿಂದ ಝೈಕೊವ್‌-ಡಿ ಲಸಿಕೆಗೆ ಅನುಮತಿ ಸಿಕ್ಕಿದ್ದರೂ, ರಾಷ್ಟ್ರೀಯ ಲಸಿಕೀಕರಣ ತಾಂತ್ರಿಕ ಸಲಹಾ ತಂಡ (ಎನ್‌ಟಿಎಜಿಐ)ದಿಂದ ಅಂತಿಮ ಸಮ್ಮತಿ ಬಾಕಿಯಿದೆ. ನವೆಂಬರ್‌ನಲ್ಲಿ ಝೈಡಸ್‌ ಕ್ಯಾಡಿಲಾ ಕಂಪನಿಯು ಸುಮಾರು 2 ಕೋಟಿ ಡೋಸ್‌ಗಳನ್ನು ರಾಷ್ಟ್ರೀಯ ಲಸಿಕಾ ಅಭಿಯಾನಕ್ಕೆ ಪೂರೈಕೆ ಮಾಡಲಿದೆ. 247 ದಿನಗಳಲ್ಲೇ ಕಡಿಮೆ ಸಕ್ರಿಯ ಪ್ರಕರಣ ದಾಖಲು ದೇಶದಲ್ಲಿ ಕೊರೊನಾ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಭಾನುವಾರ 247 ದಿನಗಳ ಬಳಿಕ ಕನಿಷ್ಠ ಪ್ರಮಾಣಕ್ಕೆ ಇಳಿದಿದೆ. ಒಟ್ಟು 14,667 ಸೋಂಕಿತರು ಗುಣ ಹೊಂದುವುದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 1,59,272ಕ್ಕೆ ಇಳಿದಿದೆ. ದೈನಂದಿನ ಹೊಸ ಪ್ರಕರಣ ಸಂಖ್ಯೆಯು 23 ದಿನಗಳಿಂದ ಸತತವಾಗಿ 20,000ಕ್ಕಿಂತ ಕಡಿಮೆ ಹಾಗೂ 126 ದಿನಗಳಿಂದ 50,000ಕ್ಕಿಂತ ಕಡಿಮೆ ದಾಖಲಾಗುತ್ತಿದೆ.


from India & World News in Kannada | VK Polls https://ift.tt/3w22fY6

ಅಪ್ಪಟ ಜಾನಪದ ಪ್ರತಿಭೆ ಗೌರಮ್ಮ ಹುಚ್ಚಪ್ಪ ಮಾಸ್ತರ್‌ಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ

ಸಾಗರ (): ನಗರದ ಹೊರ ವಲಯದ ಮಂಕಳಲೆ ರಸ್ತೆಯ ನಿವಾಸಿ, ಜಗತ್ತಿಗೆ ದೀರ್ಘ ಕಾಲ ಕೊಡುಗೆ ನೀಡಿದ 77 ರ ಹರೆಯದ , ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದು, ಹಿರಿತನಕ್ಕೆ ಸಂದ ಗೌರವವಾಗಿದೆ. ಜೂನ್ 1, 1945ರಲ್ಲಿ ತಾಲೂಕಿನ ಕಾನ್ಲೆಯ ಪಡವಗೋಡಿನಲ್ಲಿ ಗೌರಮ್ಮ ಜನಿಸಿದರು. ದೋಣಜಿ ಹುಚ್ಚಪ್ಪ ಮತ್ತು ರಾಮಮ್ಮ ದಂಪತಿಯ ಅವಿಭಕ್ತ ಕುಟುಂಬದಲ್ಲಿ ಜನಿಸಿದ ಗೌರಮ್ಮ, ಬಾಲ್ಯವನ್ನು ದಟ್ಟ ಕಾನನದ ಮಂಜಿನಕಾನಿನಲ್ಲಿ ಕಳೆದರು. ಔಪಚಾರಿಕ ಶಿಕ್ಷಣ ಪಡೆಯದಿದ್ದರೂ ತಾಯಿಯಿಂದ ಜಾನಪದ ಹಾಡು ಮತ್ತು ಹಸೆ ಚಿತ್ತಾರ ಕಲೆಯ ಶಿಕ್ಷಣ ದೊರಕಿತು. 11ನೆಯ ವಯಸಿನಿಂದ ಹಾಡುಗಳನ್ನು ಗುನುಗುತ್ತಾ ಹಸೆ ಚಿತ್ತಾರ ಬಿಡಿಸುತ್ತ ಗೌರಮ್ಮ ಬೆಳೆದರು. ರೈತಾಪಿ ಶ್ರಮ ಸಂಸ್ಕೃತಿಯಲ್ಲಿ ತಮ್ಮ ಸಹೋದರಿಯರೊಂದಿಗೆ ಇಪ್ಪತ್ತು ಸೇರು ಭತ್ತವನ್ನು ಕುಟ್ಟಿ ಅಕ್ಕಿ ಮಾಡುತ್ತಿದ್ದಾಗ ಜಾನಪದ ಗಾಯನಗಳ ಭರಾಟೆಯಲ್ಲಿ ಸುಸ್ತು ಮರೆಯುತ್ತಿದ್ದರು. 1962 ಮೇ 5ರಂದು ಜಾನಪದ ತಜ್ಞ ಕಲಾವಿದ ಹುಚ್ಚಪ್ಪ ಮಾಸ್ತರ್‌ ಅವರ ಕೈ ಹಿಡಿದ ಗೌರಮ್ಮನವರು ಹುಚ್ಚಪ್ಪ ಮಾಸ್ತರರ ಸಾಧನೆಗೆ ಸಹಕಾರಿಯಾದರು. ಹಿರೇಮನೆಯ ಆಶ್ರಮ ಶಾಲೆಯ ಗಿರಿಜನ ಮಕ್ಕಳಿರಲಿ, ಹುಚ್ಚಪ್ಪ ಮಾಸ್ತರರ ಬಳಿ ಮಾರ್ಗದರ್ಶನ ಬಯಸಿ ಬರುವ ಸಂಶೋಧಕರಿರಲಿ ಗೌರಮ್ಮನವರಲ್ಲಿ ಮಮತಾಮಯಿ ತಾಯಿಯನ್ನು ಕಂಡಿದ್ದಾರೆ. ದೇಸಿ ಶೈಲಿಯ ಉಪಚಾರದಿಂದಾಗಿ ಗೌರಮ್ಮನವರು ಹುಚ್ಚಪ್ಪ ಮಾಸ್ತರರ ಶಿಷ್ಯರು, ಒಡನಾಡಿಗಳಲ್ಲಿ ಆಪ್ತರಾಗಿದ್ದಾರೆ. ಬಿಳಿ ಹಸೆ, ಕೆಂಪು ಹಸೆ, ಮದುವೆ ಮನೆ ಹಸೆ, ಭೂಮು ಹುಣ್ಣಿಮೆ ಬುಟ್ಟಿಯ ಕಲಾತ್ಮಕ ಶೃಂಗಾರ, ಭತ್ತದ ತೆನೆಯ ಬಾಗಿಲು ತೋರಣ, ಹಿಟ್ಟಂಡೆ ಹುಲ್ಲಿನಾಭರಣದ ಬುಟ್ಟಿಗಳು, ಇನ್ನೂ ಮುಂತಾದ ಜಾನಪದೀಯ ಚಿತ್ತಾರಗಳಲ್ಲಿ ಗೌರಮ್ಮ ಸಿದ್ಧ ಹಸ್ತರು. ಮದುವೆಯ ಪಾರಂಪರಿಕ ಹಾಡುಗಳು, ಜನಪದ ಕಥನ ಗೀತೆಗಳು, ಒಗಟುಗಳು ಮುಂತಾದ ಜಾನಪದ ಜಗತ್ತಿನ ವಿಶೇಷತೆಗಳಿಂದಾಗಿ ಗೌರಮ್ಮ ಮುಖ್ಯರಾಗುತ್ತಾರೆ. ಕಲಿಕೆಯ ಆಸಕ್ತಿಯಿಂದ ಬಂದವರಿಗೆ ಪ್ರೀತಿಯಿಂದ ಹೇಳಿ ಕೊಡಬಲ್ಲವರು. ಮಲೆನಾಡಿನ ದೀವ ಜನಾಂಗದ ಪಾರಂಪರಿಕೆ ಅಡುಗೆಯಲ್ಲಿ ಸಹ ಗೌರಮ್ಮ ರುಚಿ ತೋರಿಸಿ ಕೊಡಬಲ್ಲವರು. ಮೂವರು ಪುತ್ರರ ತಾಯಿಯಾಗಿ, ಜಾನಪದ ಜಗತ್ತಿನ ಅವಿಭಾಜ್ಯ ಅಂಗವೆಂಬಂತೆ ಬಾಳಿ ಬದುಕಿದ ಹುಚ್ಚಪ್ಪ ಮಾಸ್ತರರ ಪತ್ನಿಯಾಗಿ ಮತ್ತು ಜಾನಪದ ಆಸಕ್ತರ ಸಮರ್ಥ ಮಾರ್ಗದರ್ಶಕಿಯಾಗಿ ಅನನ್ಯ ಬದುಕಿನ ಪ್ರೀತಿಯ ವಾತ್ಸಲ್ಯಮಯಿ ಹಿರಿಯ ವ್ಯಕ್ತಿಗೆ ದೊರಕಿದೆ. ಈ ಹಿಂದೆ ಕರ್ನಾಟಕ ಜಾನಪದ ಮತ್ತು ಯಕ್ಷ ಗಾನ ಅಕಾಡೆಮಿ ಪ್ರಶಸ್ತಿ, ಆಶ್ವಾಸನ್‌ ಸಂಸ್ಥೆಯ ಲಲಿತ ಕಲೆಯ ಗೌರವ ಮುಂತಾದವುಗಳು ಗೌರಮ್ಮನವರ ಹಿರಿಮೆಗೆ ಸಾಕ್ಷಿಯಾಗುವ ಪ್ರಶಸ್ತಿಗಳು. ನೂರಕ್ಕೂ ಹೆಚ್ಚು ಕಮ್ಮಟ, ಉಪನ್ಯಾಸ, ತರಬೇತಿ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಮಲೆನಾಡಿನ ಹಿರಿಯ ಚೇತನ ಗೌರಮ್ಮ ರಾಜ್ಯೋತ್ಸವ ಪ್ರಶಸ್ತಿಯ ಮೂಲಕ ಒಡನಾಡಿಗಳ, ಹುಚ್ಚಪ್ಪ ಮಾಸ್ತರರ ಶಿಷ್ಯರ, ಜಾನಪದ ಆಸಕ್ತರ ಅಭಿನಂದನೆಗೆ ಪಾತ್ರರಾಗಿದ್ದಾರೆ.


from India & World News in Kannada | VK Polls https://ift.tt/3CALzJK

ಆರ್ಯನ್‌ ಡ್ರಗ್ಸ್‌ ಕೇಸ್‌: ಸಿಬಿಐ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಐಪಿಎಲ್‌

ಹೊಸದಿಲ್ಲಿ: ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಅವರನ್ನು ಆವರಿಸಿರುವ ಮಾದಕ ದ್ರವ್ಯ ಸೇವನೆ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಅಕ್ಟೋಬರ್‌ 3ರಂದು ಐಷಾರಾಮಿ ಹಡಗಿನಲ್ಲಿ ರೇವ್‌ ಪಾರ್ಟಿ ನಡೆಸುತ್ತಿದ್ದ ವೇಳೆ ಆರ್ಯನ್‌ ಖಾನ್‌, ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ದಳ (ಎನ್‌ಸಿಬಿ)ಗೆ ಸಿಕ್ಕಿ ಬಿದ್ದಿದ್ದರು. ಆತನ ಗೆಳೆಯ- ಗೆಳತಿಯರು ಸೇರಿ ಹತ್ತಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ವಾರ ಕಾಲದ ಕಸ್ಟಡಿ ವಿಚಾರಣೆ ಬಳಿಕ ಆರ್ಥರ್‌ ರೋಡ್‌ ಜೈಲ್‌ ಸೇರಿದ್ದ ಆರ್ಯನ್‌ಗೆ 25 ದಿನಗಳ ಬಳಿಕ ಹೈಕೋರ್ಟ್‌ ಜಾಮೀನು ನೀಡಿತ್ತು. ಈ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಎನ್‌ಸಿಬಿ ಅಧಿಕಾರಿಗಳ ವಿರುದ್ಧವೇ ವಸೂಲಿ ಆರೋಪ ಕೇಳಿ ಬಂದಿತ್ತು. ''ಪ್ರಕರಣದಲ್ಲಿ ಪ್ರಭಾವಿಗಳ ಮಕ್ಕಳು ಪಾಲ್ಗೊಂಡಿದ್ದರಿಂದ ತನಿಖೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ. ಪ್ರಭಾವಿಗಳ ಹಸ್ತಕ್ಷೇಪ ಹೆಚ್ಚಿದೆ. ಆದ್ದರಿಂದ ಸಿಬಿಐ ತನಿಖೆಗೆ ಒಪ್ಪಿಸುವುದು ಸೂಕ್ತ,'' ಎಂದು ಅರ್ಜಿದಾರರಾಗಿರುವ ವಕೀಲ ಎಂ.ಎಲ್‌.ಶರ್ಮಾ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ''ಇಂತಹ ಪ್ರಕರಣಗಳಲ್ಲಿ ಸಾಕ್ಷಿಗಳ ಮೇಲೆ ತೀವ್ರ ಒತ್ತಡ ಸೃಷ್ಟಿಯಾಗುತ್ತದೆ. ಅವರಿಗೆ ಸರಿಯಾದ ರಕ್ಷಣೆ ಒದಗಿಸುವ ಅಗತ್ಯ ಇದೆ. ವಿವಿಧ ವರದಿಗಳು ಕೂಡ ಇದನ್ನೇ ಶಿಫಾರಸು ಮಾಡಿವೆ. ಈ ದಿಸೆಯಲ್ಲಿ ಕೇಂದ್ರ ಗೃಹ ಸಚಿವಾಲಯ 'ಸಾಕ್ಷಿ ರಕ್ಷಣಾ ಯೋಜನೆ' ರೂಪಿಸುವ ತುರ್ತಿದೆ,'' ಎಂದು ಪಿಐಎಲ್‌ ಪ್ರತಿಪಾದಿಸಿದೆ. ''ಪ್ರಕರಣ ತನಿಖೆ ನಡೆಸುತ್ತಿರುವ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ವಿರುದ್ಧ ಮಹಾರಾಷ್ಟ್ರ ಸಚಿವ ನವಾಬ್‌ ಮಲಿಕ್‌ ಹಲವು ಗಂಭೀರ ಆರೋಪ ಮಾಡಿದ್ದಾರೆ. ಭ್ರಷ್ಟಾಚಾರ ಆರೋಪವೂ ಅವರ ಪ್ರಾಮಾಣಿಕತೆ ಬಗ್ಗೆ ಸಂಶಯಿಸುವಂತೆ ಮಾಡಿದೆ. ನಡೆಸಿದರೆ ಮಾತ್ರ ಪ್ರಕರಣಕ್ಕೆ ನ್ಯಾಯ ಒದಗಿಸಲು ಸಾಧ್ಯ,'' ಎಂದು ಶರ್ಮಾ ಮನವಿ ಮಾಡಿದ್ದಾರೆ. ವಾಂಖೆಡೆ ವಿರುದ್ಧದ ಆರೋಪ: ಪುನರುಚ್ಚರಿಸಿದ ನವಾಬ್‌ ಮಲಿಕ್‌ ಮುಂಬಯಿ: ''ಎನ್‌ಸಿಬಿ ತನಿಖಾಧಿಕಾರಿ ಸಮೀರ್‌ ವಾಂಖೆಡೆ ಮೂಲತಃ ಮುಸ್ಲಿಂ ಆಗಿದ್ದು, ಸರಕಾರಿ ಉದ್ಯೋಗ ಗಿಟ್ಟಿಸುವುದಕ್ಕಾಗಿಯೇ ತಾನು ಹಿಂದೂ ಎಂದು ಹೇಳಿಕೊಂಡು ಫೋರ್ಜರಿ ಮೂಲಕ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ವಂಚನೆ ಎಸಗಿದ್ದಾರೆ. ಈ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ,'' ಎಂದು ಮಹಾರಾಷ್ಟ್ರದ ಸಚಿವ, ಎನ್‌ಸಿಪಿ ಮುಖಂಡ ನವಾಬ್‌ ಮಲಿಕ್‌ ಭಾನುವಾರ ಪುನರುಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಮಲಿಕ್‌, ''ನಾನು ಜಾತಿ ಅಥವಾ ಧರ್ಮದ ವಿರುದ್ಧ ಹೋರಾಟ ನಡೆಸಿಲ್ಲ. ಉನ್ನತ ಅಧಿಕಾರಿಯೊಬ್ಬರು ಬೋಗಸ್‌ ಜಾತಿ ಪ್ರಮಾಣ ಪತ್ರ ತೋರಿಸಿ ಸರಕಾರಿ ಕೆಲಸ ಗಿಟ್ಟಿಸಿದ್ದನ್ನು ಮಾತ್ರ ಪ್ರಶ್ನೆ ಮಾಡುತ್ತಿದ್ದೇನೆ. ಇದು ಗಂಭೀರ ಪ್ರಕರಣ,'' ಎಂದರು. ''ಸಮೀರ್‌ ವಾಂಖೆಡೆ 2015ರಿಂದಲೇ ಪೋರ್ಜರಿ ಶುರು ಮಾಡಿದರು. ತಮ್ಮ ಧರ್ಮ, ಜಾತಿ ಬದಲಾಯಿಸುವ ಕೆಲಸವನ್ನು ಆ ವರ್ಷದಿಂದಲೇ ಆರಂಭಿಸಿದ್ದರು. ಕೆಲಸಕ್ಕೆ ಸೇರಿದ ಮೇಲೆ ಅವರು ಬಾಲಿವುಡ್‌ ನಟ-ನಟಿಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಮೂಲಕ ಪ್ರಚಾರಕ್ಕೆ ಬಂದರು. ಅದು ಅವರಿಗೆ ಖಯಾಲಿಯಾಯಿತು. ಬಾಲಿವುಡ್‌ನ ಗಣ್ಯರ ಮನೆಗಳಲ್ಲಿ ಡ್ರಗ್ಸ್‌ ಅಡಗಿಸಿ ಇಡಲು ಅವರು ತಮ್ಮದೇ ಆದ ಸೇನೆಯೊಂದನ್ನು ಹೊಂದಿದ್ದಾರೆ,'' ಎಂದೂ ಮಲಿಕ್‌ ಆರೋಪಿಸಿದರು. ಐಷಾರಾಮಿ ಹಡಗಿನ ಮೇಲೆ ವಾಂಖೆಡೆ ದಾಳಿ ನಡೆಸಿದ ತರುವಾಯ ಮಲಿಕ್‌ ಅವರ ವಿರುದ್ಧ ಒಂದೊಂದೇ ಆರೋಪಗಳನ್ನು ತೂರಿಬಿಟ್ಟು ವಾಗ್ದಾಳಿ ನಡೆಸುತ್ತ ಬಂದಿದ್ದಾರೆ. ''ರೇವ್‌ ಪಾರ್ಟಿ ಮೇಲಿನ ದಾಳಿಯೇ ಬೋಗಸ್‌. ತಮಗೆ ಬೇಕಾದವರನ್ನು ಬಿಟ್ಟು, ಬಾಲಿವುಡ್‌ ನಟರನ್ನು ಟಾರ್ಗೆಟ್‌ ಮಾಡಿಕೊಂಡು ಹತ್ತಿಕ್ಕಲಾಗುತ್ತಿದೆ,'' ಎಂದಿದ್ದರು.


from India & World News in Kannada | VK Polls https://ift.tt/3CALyFG

ಕೋವಿಡ್‌ನಿಂದ ಮಕ್ಕಳ ಆತ್ಮಹತ್ಯೆ ಹೆಚ್ಚಳ..! ದಿನಕ್ಕೆ ಸರಾಸರಿ 31 ಪುಟಾಣಿಗಳು ಸಾವಿಗೆ ಶರಣು..!

: ಕೋವಿಡ್‌ ಸಾಂಕ್ರಾಮಿಕ ಹಾವಳಿಯಿಂದ ದೊಡ್ಡವರ ಆರೋಗ್ಯ ಹದಗೆಟ್ಟಿರುವುದಷ್ಟೇ ಅಲ್ಲ, ಮಕ್ಕಳ ಮಾನಸಿಕ ಸ್ಥಿತಿಯೂ ಅಲ್ಲೋಲ ಕಲ್ಲೋಲಗೊಂಡಿರುವುದು ಸಾಬೀತಾಗಿದೆ. ದೇಶದಲ್ಲಿ 2020ನೇ ಸಾಲಿನಲ್ಲಿ ಪ್ರತಿನಿತ್ಯ ಸರಾಸರಿ 31 ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಸರಕಾರದ ಅಂಕಿ - ಅಂಶಗಳೇ ಹೇಳಿವೆ..! ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ವರದಿ ಪ್ರಕಾರ, ಕಳೆದ ವರ್ಷ ದೇಶದಲ್ಲಿ 11,396 ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪ್ರಮಾಣವು 2019ಕ್ಕೆ ಹೋಲಿಸಿದರೆ ಶೇ.18ರಷ್ಟು ಹಾಗೂ 2018ಕ್ಕೆ ಹೋಲಿಸಿದರೆ ಶೇ.21ರಷ್ಟು ಅಧಿಕ ಎಂದು ವರದಿ ತಿಳಿಸಿದೆ. 18 ವರ್ಷದೊಳಗಿನ ಮಕ್ಕಳ ಸಾವಿನ ಸಂಖ್ಯೆ ಹೆಚ್ಚಾಗಲು ಕೋವಿಡ್‌ ಒಂದು ಪ್ರಮುಖ ಕಾರಣ ಎಂದು ಗುರುತಿಸಿದ್ದರೂ ಕೌಟುಂಬಿಕ ಸಮಸ್ಯೆಗಳು ಮತ್ತು ಪ್ರೇಮ ವೈಫಲ್ಯದಂತಹ ಕಾರಣಗಳೂ ಸೇರಿವೆ. ಸೈದ್ಧಾಂತಿ ಸಂಘರ್ಷ, ವ್ಯಕ್ತಿ ಪೂಜೆ, ನಿರುದ್ಯೋಗ, ಪಾಲಕರ ಆರ್ಥಿಕ ಸಂಕಷ್ಟದಂತಹ ಹಲವು ಕಾರಣಗಳು ಕೂಡ ಮಕ್ಕಳ ಆತ್ಮಹತ್ಯೆಯಲ್ಲಿ ಪ್ರಧಾನ ಪಾತ್ರ ವಹಿಸಿವೆ. 'ವಿಶೇಷವಾಗಿ ಕೋವಿಡ್‌ ಕಾರಣ ಮಕ್ಕಳು ಶಾಲೆಯಿಂದ ದೂರ ಉಳಿದರು. ಇದು ಅವರು ಮತ್ತು ಅವರ ಪೋಷಕರಲ್ಲಿ ಚಿತ್ರ ವಿಚಿತ್ರವಾದ ಮಾನಸಿಕ ಸಮಸ್ಯೆಗಳನ್ನು ಹುಟ್ಟು ಹಾಕಿತು. ಮನೆಯಲ್ಲಿದ್ದು ಒಂಟಿತನ ಮತ್ತು ಖಿನ್ನತೆಯಿಂದ ಬಳಲಿದ ಮಕ್ಕಳು ಆತ್ಮಹತ್ಯೆಯನ್ನು ಸುಲಭದ ಪರಿಹಾರವನ್ನಾಗಿ ಆಯ್ಕೆ ಮಾಡಿಕೊಂಡರು' ಎಂದು ಮಕ್ಕಳ ಸಂರಕ್ಷಣಾ ಸಂಸ್ಥೆಯ ಉಪ ನಿರ್ದೇಶಕ ಪ್ರಭಾತ್‌ ಕುಮಾರ್‌ ವಿಶ್ಲೇಷಿಸಿದ್ದಾರೆ. 2020ರ ಸಾಲಿನ ಮಕ್ಕಳ ಆತ್ಮಹತ್ಯೆ: ಒಂದಿಷ್ಟು ಅಂಕಿಅಂಶಗಳು.. * ಒಂದು ವರ್ಷದಲ್ಲಿ ಮಾಡಿಕೊಂಡ ಒಟ್ಟು ಮಕ್ಕಳು - 11,396 * ಆತ್ಮಹತ್ಯೆ ಮಾಡಿಕೊಂಡ ಬಾಲಕರು - 5,392 * ಆತ್ಮಹತ್ಯೆಗೆ ಶರಣಾದ ಬಾಲಕಿಯರು - 6,004 ಕಠಿಣ ನಿರ್ಧಾರಕ್ಕೆ ಪ್ರಧಾನ ಕಾರಣಗಳು * ಕೌಟುಂಬಿಕ ಸಮಸ್ಯೆ (4,006) * ಪ್ರೇಮ ವೈಫಲ್ಯ (1,327) * ಅನಾರೋಗ್ಯ (1,327) 'ಶಾಲೆ ಇಲ್ಲದ್ದರಿಂದ ಮಕ್ಕಳು ಮನೆಯಲ್ಲಿಯೇ ಉಳಿದು ಒತ್ತಡ ಅನುಭವಿಸಿದರು. ಸ್ನೇಹಿತರ ಜತೆಗಿನ ಒಡನಾಟವಿಲ್ಲದೇ ಖಿನ್ನತೆಗೆ ತುತ್ತಾದರು. ಪೋಷಕರ ಕಿರಿ ಕಿರಿ, ಪಠ್ಯ ಕ್ರಮದ ಗೊಂದಲ ಅವರನ್ನು ವಿಪರೀತ ಆತಂಕಕ್ಕೆ ದೂಡಿತ್ತು. ಆತ್ಮಹತ್ಯೆ ಪ್ರಕರಣಗಳು ಹೆಚ್ಚಲು ಇವು ಪ್ರಮುಖ ಕಾರಣವಾದವು' ಎನ್ನುತ್ತಾರೆ, ಕ್ರೈಂ - ಮಕ್ಕಳ ಹಕ್ಕುಗಳ ಸಂಸ್ಥೆ ನಿರ್ದೇಶಕಿ ಪ್ರೀತಿ ಮಹಾರ.


from India & World News in Kannada | VK Polls https://ift.tt/3nENo2a

ಇಂದಿರಾ ಗಾಂಧಿಯನ್ನು ಅಟಲ್ ಬಿಹಾರಿ ವಾಜಪೇಯಿ ದುರ್ಗೆಗೆ ಹೋಲಿಸಿದ್ದರು; ಡಿಕೆಶಿ

ಬೆಂಗಳೂರು: ಮಾಜಿ ಪ್ರಧಾನಿ ಅವರನ್ನುಅಟಲ್ ಬಿಹಾರಿ ವಾಜಪೇಯಿ ದುರ್ಗೆಗೆ ಹೋಲಿಸಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ನೆನಪಿಸಿಕೊಂಡರು. ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಿ.ಕೆ. ಶಿವಕುಮಾರ್ ಮಾತನಾಡಿದರು. ಇಂದಿರಾಗಾಂಧಿ ಅವರನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದುರ್ಗೆಗೆ ಹೋಲಿಸಿದರು. ದುರ್ಗೆ ಎಂದರೆ ದುಃಖವನ್ನು ದೂರ ಮಾಡುವ ದೇವಿ ಎಂದು ಅವರನ್ನು ಈ ರೀತಿ ಕರೆದರು. ಇಂದಿರಾಗಾಂಧಿ ಅವರು ಬಡತನ ನಿರ್ಮೂಲನೆ, ಎಲ್ಲ ವರ್ಗದ ಜನರ ಕಲ್ಯಾಣದ ಬಗ್ಗೆ ಆಲೋಚಿಸಿದರು. ಪಿಂಚಣಿ, ಸೇನೆ, ಮನೆ ನಿರ್ಮಾಣ, ಬ್ಯಾಂಕ್ ರಾಷ್ಟೀಕರಣ, ಅಂಗನವಾಡಿ, ಮಕ್ಕಳಿಗೆ ಬಿಸಿಯೂಟ, ವಸತಿ, ಕ್ರೀಡೆ, ಕೃಷಿ - ಹೀಗೆ ಎಲ್ಲವನ್ನೂ ಉತ್ತೇಜಿಸುವ ಕಾರ್ಯಕ್ರಮ ಕೊಟ್ಟರು. ಹೀಗಾಗಿ ವಾಜಪೇಯಿ ಅವರು ಪಕ್ಷಬೇಧ ಮರೆತು ಆ ಮಾತು ಹೇಳಿದ್ದಾರೆ. ದುರ್ಗೆಗೆ ಹೋಲಿಸಿದ್ದಾರೆ ಎಂದು ನೆನಪಿಸಿಕೊಂಡರು. ಸವಾಲು ಮನೆ ಬಾಗಿಲಲ್ಲಿ ಇರುವುದಿಲ್ಲ, ನಾವು ಪರ್ವತ ಏರಬೇಕಿಲ್ಲ, ಸಮುದ್ರ ದಾಟಬೇಕಿಲ್ಲ. ನಮ್ಮ ಸವಾಲು ಹಳ್ಳಿಗಳಲ್ಲಿನ ಬಡತನ, ಪ್ರತಿ ಮನೆಯಲ್ಲಿರುವ ಜಾತಿ ವ್ಯವಸ್ಥೆ ಸರಿಪಡಿಸುವುದರಲ್ಲಿ ಇರುತ್ತದೆ, ಇರಬೇಕು. ಆಗ ದೇಶದ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಿದ್ದರು. ಒಂದು ವ್ಯಕ್ತಿ, ಒಂದು ಸಂಸ್ಥೆ ಮೇಲೆ ಪ್ರೀತಿ ಇದ್ದರೆ ಸಾಲದು. ಪ್ರೀತಿ ಜತೆಗೆ ಸಾಮಾಜಿಕ ಕಳಕಳಿ, ಬದ್ಧತೆ ಇರಬೇಕು. ಇತಿಹಾಸ, ನಮ್ಮ ನಾಯಕರ ತ್ಯಾಗ, ಬಲಿದಾನವನ್ನು ಯುವ ಸಮುದಾಯಕ್ಕೆ ತಿಳಿಸಬೇಕು. ಯೂತ್ ಕಾಂಗ್ರೆಸ್ ಸಮಾವೇಶಕ್ಕಾಗಿ ನಾವು ರೈಲು ಹತ್ತಿದಾಗ, ಮಧ್ಯೆ ಇಂದಿರಾಗಾಂಧಿ ಅವರ ನಿಧನ ಸುದ್ದಿ ಬಂತು. ಗಲಾಟೆ ಹೆಚ್ಚಾಗಿತ್ತು. ನಮ್ಮನ್ನು ಬಂಧಿಸಿದ್ದರು. ನಂತರ ನಾನು ಚಿತ್ರ ಮಂದಿರಕ್ಕೆ ಪರವಾನಿಗೆ ಅರ್ಜಿ ಕೇಳಿದ್ದೆ. ಆಗ ಜಿಲ್ಲಾಧಿಕಾರಿಗಳು ಯಾರ ಹೆಸರು ಇಡುತ್ತೀಯಾ ಎಂದು ಕೇಳಿದರು. ನಾನು ಇಂದಿರಾಗಾಂಧಿ ಅವರ ಹೆಸರು ಎಂದೆ. ಆಗ ಕೇವಲ 5 ನಿಮಿಷದಲ್ಲಿ ಸಹಿ ಹಾಕಿಕೊಟ್ಟರು. ಇಂದಿರಾಗಾಂಧಿ ಅವರ ಹುಟ್ಟುಹಬ್ಬ ಎಂದರೆ ನಾವು ರಕ್ತದಾನ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕ್ರಮ ಮಾಡುತ್ತಿದ್ದೆವು. ಬ್ಯಾಂಕ್ ರಾಷ್ಟೀಕರಣದ ಬೆಲೆ ಈಗ ಯಾರಿಗೂ ಗೊತ್ತಾಗುವುದಿಲ್ಲ. ಆಗಿನ ಪರಿಸ್ಥಿತಿಯಲ್ಲಿ ಬಡವರನ್ನು ಬ್ಯಾಂಕ್ ಒಳಗೆ ಬಿಡುತ್ತಿರಲಿಲ್ಲ. ಅವರಿಗೆ ಬ್ಯಾಂಕ್ ಸೇವೆ ಸಿಗುತ್ತಿರಲಿಲ್ಲ. ಇದನ್ನು ಕಲ್ಪಿಸಲು ರಾಷ್ಟೀಕರಣ ಮಾಡಿದರು. ಅದೇ ರೀತಿ ಉಳುವವನಿಗೆ ಭೂಮಿ ಕೊಟ್ಟಿದ್ದು ಇಂದಿರಾಗಾಂಧಿ ಎಂದರು. ಅವರ ಹೆಸರಲ್ಲಿ ಬಡವರ ಹಸಿವು ನೀಗಿಸಲು ಇಂದಿರಾ ಕ್ಯಾಂಟೀನ್ ತೆರೆದರೆ ಅದರ ಹೆಸರು ಬದಲಿಸಲು ಮುಂದಾಗುತ್ತಾರಲ್ಲ ಇವರು ಎಂತಹ ಕ್ರೂರಿಗಳು. ಅವರು ಬರೀ ಹೆಸರು ಬದಲಿಸಲು ಮುಂದಾಗಿದ್ದರೆ ನಮ್ಮ ಶಕ್ತಿ ಏನು ಎಂದು ತೋರಿಸುತ್ತಿದ್ದೆವು. ಆದರೆ ಯೋಜನೆಯನ್ನೇ ನಿಲ್ಲಿಸಿ ಬಡವರ ಹೊಟ್ಟೆಮೇಲೆ ಕಲ್ಲು ಹಾಕಿದ್ದಾರೆ. ಅಂದು ಈ ಯೋಜನೆಗೆ ಇಂದಿರಾ ಗಾಂಧಿ ಅವರ ಹೆಸರು ಇಡಲು ಅರ್ಜಿ ಕೊಟ್ಟಿದ್ದು ಈಗ ಬಿಜೆಪಿಗೆ ಹೋಗಿರುವ ಗಿರಾಕಿಗಳೇ. ಇದೇ ಸೋಮಶೇಖರ್, ಮುನಿರತ್ನ ಅವರು ಅರ್ಜಿ ಕೊಟ್ಟಿದ್ದರು. ಆದರೆ ಈಗ ಬೀಗುತ್ತಿದ್ದಾರೆ. ಚುನಾವಣೆ ಪ್ರಚಾರಕ್ಕೆ ಹೋದರೆ ಬಿಜೆಪಿಯವರೆ ಇಲ್ಲ, ಬರೀ ಇವರೇ ಇದ್ದಾರೆ. ರಾಜಕೀಯ ಏನೇ ಇರಲಿ ಸೇವೆ ಮನೋಭಾವ, ಆಸಕ್ತಿ ಹೃದಯದಿಂದ ಬರಬೇಕು. ಇಂದಿರಾಗಾಂಧಿ ಅವರು ಜನ ಜವಾಬ್ದಾರಿಯನ್ನು ಮರೆಯುತ್ತಾರೆ, ಆದರೆ ಹಕ್ಕನ್ನು ಚಲಾಯಿಸಲು ಪ್ರಯತ್ನಿಸುತ್ತಾರೆ ಎಂದಿದ್ದರು. ನಾವು ಕಾಂಗ್ರೆಸಿಗರಾಗಿ ನಮ್ಮ ಜವಾಬ್ದಾರಿ ಏನು ಎಂದು ಅರಿತು ಕೆಲಸ ಮಾಡಬೇಕು. ಅವಕಾಶಗಳು ಮನೆ ಬಾಗಿಲಿಗೆ ಬರುವುದಿಲ್ಲ. ಅವಕಾಶಗಳನ್ನು ನೀವೇ ಸೃಷ್ಟಿಸಿ ಜನರ ಭಾವನೆಗೆ ತಕ್ಕಂತೆ ಕೆಲಸ ಮಾಡಬೇಕು ಎಂದು ಹೇಳಿದರು. ನೆಹರು ಮನೆತನಕ್ಕೆ ಇತಿಹಾಸವಿದ್ದು, ಅವರ ಮನೆಯವರಂತೆ ನಾವು ಕೆಲಸ ಮಾಡಿಕೊಂಡು ಬಂದಿದ್ದೇವೆ. ಅವರ ಕುಟುಂಬದವರು ಹಾಗೂ ಸರ್ದಾರ್ ಪಟೇಲರು ಕೂಡ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು. ಇಂದಿರಾಗಾಂಧಿ ಅವರು ದೇಶದ ಸಮಗ್ರತೆ, ಐಕ್ಯತೆ, ಶಾಂತಿಗಾಗಿ ಪ್ರಾಣತ್ಯಾಗ ಮಾಡಿದರು. ಸರ್ದಾರ್ ಪಟೇಲರು ದೇಶ ಒಗ್ಗೂಡಿಸಿ ಅಖಂಡ ಭಾರತ ನಿರ್ಮಿಸಿ, ದೇಶದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಒಬ್ಬರು ಉಕ್ಕಿನ ಮಹಿಳೆ, ಮತ್ತೊಬ್ಬರು ಉಕ್ಕಿನ ಮನುಷ್ಯ. ಅವರನ್ನು ಸ್ಮರಿಸುತ್ತಾ, ಈ ಪವಿತ್ರ ದಿನ ಅವರ ಆದರ್ಶವನ್ನು ಅಳವಡಿಸಿಕೊಳ್ಳೋಣ.ಸಮಯಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ನಾವು ಮುಂದುವರಿಯಬೇಕು ಎಂದು ಇಂದಿರಾಗಾಂಧಿ ಅವರು ಹೇಳಿದ್ದರು ಎಂದು ನೆನಪಿಸಿಕೊಂಡರು. ಪುನೀತ್ ರಾಜಕುಮಾರ್ ಅವರಿಗೆ ಸಂತಾಪ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕ್ರಮದ ಕೊನೆಯಲ್ಲಿ ಕನ್ನಡ ಚಿತ್ರರಂಗದ ಧ್ರುವತಾರೆ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನಕ್ಕೆ ಮೌನಾಚಾರಣೆ ಮಾಡಿ ಸಂತಾಪ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಪುನೀತ್ ಅವರ ಜತೆಗಿನ ಒಡನಾಟ ಮೆಲುಕು ಹಾಕಿದ ಡಿ.ಕೆ. ಶಿವಕುಮಾರ್ ಅವರು, 'ಪುನೀತ್ ರಾಜಕುಮಾರ್ ಅವರಿಗೆ ಈ ರೀತಿ ಆಗುತ್ತದೆ ಎಂದು ನಾವು ಭಾವಿಸಿರಲಿಲ್ಲ. ಅವರಿಗೆ ನಮ್ಮ ಗೌರವ ಸಲ್ಲಿಸಿದ್ದೇವೆ. ಅವರ ಕುಟುಂಬದವರು ಅಜಾತ ಶತ್ರುಗಳು. ಅವರಲ್ಲಿ ಸಾಮಾಜಿಕ ಕಳಕಳಿ, ಬದ್ಧತೆ ಇತ್ತು. ನಮ್ಮ ಸರ್ಕಾರದ ಕಾರ್ಯಕ್ರಮಗಳಿಗೆ ಯಾವುದೇ ಹಣ ಪಡೆಯದೆ ರಾಯಭಾರಿಯಾಗಿ ಕೆಲಸ ಮಾಡಿದ್ದರು. ನನ್ನ ಚಿತ್ರಮಂದಿರಗಳ ಸಮೂಹ ಅನಾವರಣಕ್ಕೆ ಆಗಮಿಸಬೇಕು ಎಂದು ಇತ್ತೀಚೆಗೆ ಅವರನ್ನು ಆಹ್ವಾನಿಸಿದ್ದೆ. ಅವರ ಜತೆಗಿನ ಒಡನಾಟ ನೆನೆಸಿಕೊಂಡರೆ, ಅವರ ಅಗಲಿಕೆ ಮನಸ್ಸಿಗೆ ತೀವ್ರ ನೋವಾಗುತ್ತದೆ. ಭಗವಂತ ಎಷ್ಟು ಕ್ರೂರಿ ಎಂಬುದಕ್ಕೆ ಇದು ಸಾಕ್ಷಿ. ಮನಸ್ಸು, ಯೌವ್ವನ, ಜೀವ ಕ್ಷಣ ಮಾತ್ರ ಎಂದು ಸಂಸ್ಕೃತದಲ್ಲಿ ಮಾತಿದೆ. ಯಮ ಯಾರಿಗೂ ಸಮಯ ಕೊಡುವುದಿಲ್ಲ. ಆತ ಪ್ರಾಣ ತೆಗೆದುಕೊಳ್ಳಬೇಕು ಎಂದರೆ ತೆಗೆದುಕೊಳ್ಳುತ್ತಾನೆ. ನೀನು ಮನುಷ್ಯನಾಗಿ ಏನೇ ಮಾಡಿದರೂ ಜಾಗೃತನಾಗಿ ಮಾಡು ಎಂದು ಹೇಳುತ್ತಾರೆ. ಪುನೀತ್ ತಮ್ಮ‌ಜೀವನದಲ್ಲಿ ಜನರಿಗೆ ಏನು ಸಹಾಯ ಮಾಡಬೇಕೋ ಅದನ್ನು ಮಾಡಿದ್ದಾರೆ. ನಾನು ಹಾಗೂ ಸಿದ್ದರಾಮಯ್ಯ ಅವರು ಆತನನ್ನು ರಾಜಕೀಯಕ್ಕೆ ಕರೆತರಲು ಸಾಕಷ್ಟು ಪ್ರಯತ್ನ ಮಾಡಿದರೂ ಅದಕ್ಕೆ ಒಪ್ಪಲಿಲ್ಲ. ನಾನು ತಂದೆ ಹಾದಿ ಬಿಡುವುದಿಲ್ಲ ಎಂದು ಹೇಳಿ ರಾಜಕೀಯದಿಂದ ದೂರ ಉಳಿದರು. ಅವರ ಅತ್ತಿಗೆ ಚುನಾವಣೆಗೆ ಸ್ಪರ್ಧಿಸಿದಾಗಲೂ, ತಂದೆ ದಾರಿ ಬಿಡಲ್ಲ ಎಂಬ ಬದ್ಧತೆಗಾಗಿ ಪ್ರಚಾರಕ್ಕೆ ಹೋಗಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಅಮಿತಾಬ್ ಬಚ್ಚನ್ ಅವರ ಎತ್ತರಕ್ಕೆ ಬೆಳೆಯುವ ಸಾಮರ್ಥ್ಯ ಪುನೀತ್ ಅವರಲ್ಲಿತ್ತು. ಹೀಗಾಗಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಪುನೀತ್ ಅವರನ್ನೇ ಆಯ್ಕೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಮಾಜಿ ಸಚಿವ ಹೆಚ್.ಎಂ ರೇವಣ್ಣ, ಮಾಜಿ ಸಚಿವೆ ಉಮಾಶ್ರೀ, ರಾಣಿ ಸತೀಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮತ್ತಿತರರು ಉಪಸ್ಥಿತರಿದ್ದರು.


from India & World News in Kannada | VK Polls https://ift.tt/3nIWsDl

20 ಲಕ್ಷ ಜನರು ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನ ಪಡೆದಿದ್ದಾರೆ; ಆರಗ ಜ್ಞಾನೇಂದ್ರ

ಬೆಂಗಳೂರು: ಸುಮಾರು 20 ಲಕ್ಷ ಜನರು ಸಿನಿಮಾ ನಟ ಅವರ ಅಂತಿಮ ದರ್ಶನ ಪಡೆದ್ದಾರೆ ಎಂದು ಗೃಹ ಸಚಿವ ತಿಳಿಸಿದರು. ವಿಧಾನಸೌಧದಲ್ಲಿ ಭಾನುವಾರ ಮಾತನಾಡಿದ ಅವರು, ಶಾಂತಿ ಸುವವ್ಯವಸ್ಥೆ ಕಾಪಾಡಿದವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಪುನೀತ್ ರಾಜ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ಶಾಂತಿ ಸುವವ್ಯವಸ್ಥೆ ಕಾಪಾಡಿದವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ಸುಮಾರು ೨೦ ಲಕ್ಷ ಜನರು ಅಂತಿಮ ದರ್ಶನ ಪಡೆದಿದ್ದಾರೆ ಎಂದು ತಿಳಿಸಿದರು. ಪುನೀತ್ ನಿಧನರಾದ ದಿನ ಹಾಗೂ ಅಂತ್ಯಸಂಸ್ಕಾದ ಸಂದರ್ಭದಲ್ಲಿ ಪೊಲೀಸರ ಶ್ರಮ ಬಹಳ ಇದೆ. ಬೆಂಗಳೂರಲ್ಲಿ 20 ಸಾವಿರ ಪೊಲೀಸರು, ಜಿಲ್ಲೆಗಳಿಂದ ಒಂದೂವರೆ ಸಾವಿರ ಪೊಲೀಸರು ಹಾಗೂ ಸೆಂಟ್ರಲ್ ಪೋರ್ಸ್ ಇತ್ತು. 50 ಕೆಎಸ್ ಆರ್ ಪಿ ತುಕಡಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಎಲ್ಲರೂ ನಿದ್ದೆ ಬಿಟ್ಟು ಶ್ರಮಪಟ್ಟಿದ್ದಾರೆ ಎಂದ ಅವರು ಎಲ್ಲರಿಗೂ ಅಭಿನಂದನೆಗಳನ್ನ ತಿಳಿಸುತ್ತೇನೆ. ಸಿಎಂ ಬೊಮ್ಮಾಯಿ ಹಾಗೂ ಹಿರಿಯ ಅಧಿಕಾರಿಗಳಿಗೂ ಧನ್ಯವಾದಗಳು. ಪುನೀತ್ ಅಭಿಮಾನಿಗಳು ಶಾಂತಿಯಿಂದ, ಶಿಸ್ತಿನಿಂದ ಸರ್ಕಾರಕ್ಕೆ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು. ರಾಜ್ ಕುಟುಂಬ ಸರ್ಕಾರಕ್ಕೆ ಸಹಕಾರ ನೀಡಿದ್ದಾರೆ. ಮಾಧ್ಯಮಗಳು ಕೂಡ ಉತ್ತಮ ಕೆಲಸ ಮಾಡಿವೆ. ಕೋಟಿಗಟ್ಟಲೆ ಜನ ಟಿವಿಯಿಂದ ವೀಕ್ಷಿಸಿದ್ದಾರೆ ಎಂದ ಅವರು ಮಾಧ್ಯಮಗಳಿಗೂ ಧನ್ಯವಾದಗಳನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ರಾಜ್ ಕುಟುಂಬ ಧನ್ಯವಾದ ತಿಳಿಸಿರುವುದು ಅದು ಅವರ ಸೌಜನ್ಯ ಎಂದರು.


from India & World News in Kannada | VK Polls https://ift.tt/2ZBn151

ಉತ್ತರಾಖಂಡದಲ್ಲಿ ಭೀಕರ ಅಪಘಾತ: ಕಂದಕಕ್ಕೆ ಉರುಳಿದ ವಾಹನ, ಕನಿಷ್ಠ 13 ಸಾವು

ಡೆಹರಾಡೂನ್: ಉತ್ತರಾಖಂಡದ ಚಕ್ರತಾದಲ್ಲಿ ಭಾನುವಾರ ವಾಹನವೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದ ಪ್ರಯಾಣಿಕರ ಪೈಕಿ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ. ಇನ್ನೂ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಸುದ್ದಿ ಹರಡುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಆರಂಭಿಸಿದ್ದಾರೆ. ತುರ್ತು ಸ್ಪಂದನಾ ಸಿಬ್ಬಂದಿ ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಅವರಿಗೆ ಸ್ಥಳೀಯ ನಿವಾಸಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈವರೆಗೂ 13 ಮೃತದೇಹಗಳನ್ನು ಕಂದಕದಿಂದ ಹೊರ ತೆಗೆಯಲಾಗಿದೆ ಎಂದು ಚಕ್ರತಾದ ಸ್ಟೇಷನ್ ಹೌಸ್ ಅಧಿಕಾರಿ ಸತೇಂದ್ರ ಭಾಟಿ ತಿಳಿಸಿದ್ದಾರೆ. ಅಪಘಾತದ ಘಟನೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ಸ್ಥಳೀಯರು ಗಾಯಾಳುಗಳನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಅಪಘಾತದ ಸ್ಥಳದಲ್ಲಿ ಮೃತದೇಹಗಳನ್ನು ಗ್ರಾಮಸ್ಥರ ನೆರವಿನಿಂದ ಹೊರಗೆ ತರಲಾಗಿದೆ. ಇದು ಬಹಳ ಕುಗ್ರಾಮ ಪ್ರದೇಶವಾಗಿದೆ. ಹೀಗಾಗಿ ಸ್ಥಳಕ್ಕೆ ಅಗತ್ಯ ಸೌಕರ್ಯ ಸಾಧನಗಳೊಂದಿಗೆ ತೆರಳಲು ರಕ್ಷಣಾ ಸಿಬ್ಬಂದಿ ಪರದಾಡಬೇಕಾಗಿದೆ. ಈ ಕಂದಕವು ರಸ್ತೆಯ ಪಕ್ಕದಲ್ಲಿ ಸುಮಾರು 300 ಅಡಿಗಳಷ್ಟು ಆಳವಿದೆ ಎಂದು ಅವರು ವಿವರಿಸಿದ್ದಾರೆ. ರಾಜಧಾನಿ ಡೆಹರಾಡೂನ್‌ನಿಂದ ಸುಮಾರು 170 ಕಿಮೀ ದೂರದಲ್ಲಿ ಚಕ್ರತಾ ತಾಲೂಕಿನ ಟಿಯುನಿ ಎಂಬ ಕುಗ್ರಾಮದಲ್ಲಿ ಈ ಸಂಭವಿಸಿದೆ. ತಾಲೂಕಿನ ಬುಲ್ಹಾದ್-ಬೈಲಾ ರಸ್ತೆ ನಡುವೆ ಈ ಅವಘಡ ಉಂಟಾಗಿದೆ. ಪೊಲೀಸ್ ಅಧಿಕಾರಿಗಳ ಜತೆಗೆ ಚಕ್ರತಾದಲ್ಲಿರುವ ರಾಜ್ಯ ವಿಪತ್ತು ನಿರ್ವಹಣಾ (ಎಸ್‌ಡಿಎಂ) ಘಟಕದ ಸಿಬ್ಬಂದಿ ಕೂಡ ತೆರಳಿದ್ದಾರೆ. ರಾಜ್ಯ ವಿಪತ್ತು ಪ್ರತಿಕ್ರಿಯಾ ದಳದ (ಎಸ್‌ಡಿಆರ್‌ಎಫ್) ಒಂದು ತುಕಡಿಯನ್ನು ಕೂಡ ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.


from India & World News in Kannada | VK Polls https://ift.tt/3CvnPGY

ರೈತರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸಿದರೆ ಸರ್ಕಾರಿ ಕಚೇರಿಗಳು ಮಾರ್ಕೆಟ್ ಆಗಿಬಿಡುತ್ತವೆ!: ಟಿಕಾಯತ್ ಎಚ್ಚರಿಕೆ

ಹೊಸದಿಲ್ಲಿ: ಗಡಿ ಭಾಗದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸಲು ಪ್ರಯತ್ನಿಸಿದರೆ ಕೆಟ್ಟ ಪರಿಣಾಮ ಎದುರಿಸಬೇಕಾಗಲಿದೆ ಎಂದು ಕೇಂದ್ರ ಸರ್ಕಾರಕ್ಕೆ ರೈತ ಮುಖಂಡ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಸರ್ಕಾರ ಇಂತಹ ಪ್ರಯತ್ನಕ್ಕೆ ಕೈ ಹಾಕಿದರೆ ದೇಶದ ಎಲ್ಲೆಡೆ ಇರುವ ಸರ್ಕಾರಿ ಕಚೇರಿಗಳು ಮಾರುಕಟ್ಟೆಗಳಾಗಿ ಬದಲಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ. 'ಗಡಿಗಳಲ್ಲಿರುವ ರೈತರನ್ನು ಬಲವಂತವಾಗಿ ತೆರವುಗೊಳಿಸಲು ಯಾವುದೇ ಪ್ರಯತ್ನ ನಡೆದರೆ, ಅವರು ದೇಶದಾದ್ಯಂತ ಇರುವ ಸರ್ಕಾರಿ ಕಚೇರಿಗಳನ್ನು ಧಾನ್ಯ ಮಾರುಕಟ್ಟೆಗಳನ್ನಾಗಿ ಪರಿವರ್ತಿಸಲಿದ್ದಾರೆ' ಎಂದು ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು) ಮುಖ್ಯಸ್ಥರಾಗಿರುವ ರಾಕೇಶ್ ಟಿಕಾಯತ್, ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ. ಘಾಜಿಪುರ ಮತ್ತು ಟಿಕ್ರಿ ಗಡಿಗಳಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆ ಹಾಗೂ ಬೇಲಿಗಳನ್ನು ದಿಲ್ಲಿ ಪೊಲೀಸರು ತೆರವುಗೊಳಿಸಿದ ಎರಡು ದಿನಗಳ ಬಳಿಕ ಟಿಕಾಯತ್ ಈ ಹೇಳಿಕೆ ನೀಡಿದ್ದಾರೆ. ಈ ಮಾರ್ಗವನ್ನು ಕೃಷಿ ಕಾಯ್ದೆಗಳ ವಿರುದ್ಧ ಆರಂಭವಾದ ಬಳಿಕ ಕಳೆದ 11 ತಿಂಗಳಿನಿಂದಲೂ ಮುಚ್ಚಲಾಗಿದೆ. ಇದರಿಂದ ತಮ್ಮ ಪ್ರಯಾಣಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸುತ್ತಲೇ ಬಂದಿದ್ದಾರೆ. ವಾಹನ ಸವಾರರು ಹಾಗೂ ಜನಸಾಮಾನ್ಯರ ಓಡಾಟಕ್ಕೆ ತೊಂದರೆಯಾಗಲು ಅಧಿಕಾರಿಗಳೇ ಕಾರಣವೇ ಹೊರತು ಪ್ರತಿಭಟನಾ ನಿರತ ರೈತರಲ್ಲ ಎಂದು ಕೆಲವು ದಿನಗಳ ಹಿಂದೆ ಸುಪ್ರೀಂಕೋರ್ಟ್ ಹೇಳಿತ್ತು. ಟಿಕ್ರಿ ಗಡಿಯಲ್ಲಿನ ಈ ಮಾರ್ಗವನ್ನು ತೆರೆಯುವುದರಿಂದ ಬಹದುರ್ಗಾ ಮತ್ತು ದಿಲ್ಲಿಯ ನಡುವೆ ಓಡಾಡುವ ಸಾವಿರಾರು ಜನರಿಗೆ ಸಹಾಯವಾಗಲಿದೆ. ಅಲ್ಲದೆ, ರಾಷ್ಟ್ರ ರಾಜಧಾನಿ ದಿಲ್ಲಿ ಹಾಗೂ ಹರ್ಯಾಣದ ಮೂಲಕ ರಾಜಸ್ಥಾನಕ್ಕೆ ತೆರಳುವವರಿಗೆ ಕೂಡ ಅನುಕೂಲವಾಗಲಿದೆ. ಟಿಕ್ರಿ, ಸಿಂಘು ಹಾಗೂ ಘಾಜಿಪುರ- ಹೀಗೆ ದಿಲ್ಲಿ ಸುತ್ತಲಿನ ಮೂರು ಗಡಿಗಳಲ್ಲಿ ಸಾವಿರಾರು 2020ರ ನವೆಂಬರ್ 26ರಿಂದಲೂ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಮೂರು ಕೃಷಿ ಕಾಯ್ದೆಗಳು ತಮ್ಮ ಹಿತಾಸಕ್ತಿಗಳಿಗೆ ಅಪಾಯಕಾರಿಯಾಗಿದೆ ಎಂದು ಪ್ರತಿಭಟನಾ ನಿರತ ರೈತರು ಆರೋಪಿಸಿದ್ದಾರೆ. ಇವುಗಳನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಇವು ರೈತರ ಪರವಾಗಿರುವ ಕಾಯ್ದೆಗಳಾಗಿವೆ ಎಂದು ಪ್ರತಿಪಾದಿಸುತ್ತಿರುವ ಸರ್ಕಾರ, ಕಾಯ್ದೆಗಳನ್ನು ರದ್ದುಗೊಳಿಸಲು ನಿರಾಕರಿಸುತ್ತಲೇ ಬಂದಿದೆ. ರೈತ ಸಂಘಟನೆಗಳ ಒಕ್ಕೂಟಗಳು ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಮತ್ತು ಸಚಿವರೊಂದಿಗೆ ಈ ಸುಮಾರು ಒಂದು ವರ್ಷದಲ್ಲಿ ಅನೇಕ ಸುತ್ತಿನ ಪ್ರತಿಭಟನೆಗಳು ನಡೆದಿವೆ. ಆದರೆ ಯಾವ ಸಭೆಯಲ್ಲಿಯೂ ಒಮ್ಮತದ ನಿರ್ಣಯ ತೆಗೆದುಕೊಳ್ಳುವುದು ಈವರೆಗೂ ಸಾಧ್ಯವಾಗಿಲ್ಲ. ಈ ನಡುವೆ ರೈತ ಒಕ್ಕೂಟಗಳು ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿವೆ.


from India & World News in Kannada | VK Polls https://ift.tt/2ZFblhl

ಕಗ್ಗತ್ತಲಲ್ಲಿ ಲಕ್ಷ್ಮೇಶ್ವರದ ಕಚೇರಿಗಳು: ಬಿಲ್‌ ಬಾಕಿ, ವಿದ್ಯುತ್‌ ಕಟ್‌; ಜನರ ಪರದಾಟ!

ಲಕ್ಷ್ಮೇಶ್ವರ: ಪಟ್ಟಣದ ವಿಶೇಷ ತಹಸೀಲ್ದಾರ , ಗ್ರಾಮ ಚಾವಡಿಗಳ ಬಿಲ್‌ ಪಾವತಿಸದ ಕಾರಣ ಈ ಕಚೇರಿಗಳ ವಿದ್ಯುತ್‌ ಸಂಪರ್ಕ ಕಟ್‌ ಮಾಡಲಾಗಿದೆ. ಇದರಿಂದ ಇಲ್ಲಿನ ಸಿಬ್ಬಂದಿಗೆ ಕೆಲಸವಿಲ್ಲ ಮತ್ತು ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರಿಗೆ ಸರಕಾರದ ಸೌಲತ್ತುಗಳನ್ನು ಕಲ್ಪಿಸಿ ನೆಮ್ಮದಿಯ ಬದುಕಿಗೆ ನಿತ್ಯ ಕಾರ್ಯನಿರ್ವಹಿಸುವ ಕಂದಾಯ ಇಲಾಖೆಯ ಕಚೇರಿಗಳ ವಿದ್ಯುತ್‌ ಪಾವತಿಸದೇ ಇರುವುದು ಆಶ್ಚರ್ಯದ ಹಾಗೂ ವಿಷಾದದ ಸಂಗತಿ. ಸರಕಾರಿ ಕಚೇರಿಗಳ ವಿದ್ಯುತ್‌ ಬಿಲ್‌ ಪಾವತಿಸದಿರುವಷ್ಟು ಸರಕಾರಕ್ಕೆ ಬಡತನವೋ ? ಅಥವಾ ಅಧಿಕಾರಿಗಳ ನಿರ್ಲಕ್ಷ್ಯವೋ? ಪಟ್ಟಣದ ಮುಖ್ಯ ಬಜಾರ್‌ ರಸ್ತೆಯಲ್ಲಿ ಬೀಳುವ ಹಂತದಲ್ಲಿರುವ ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯ(ಚಾವಡಿ)ದಲ್ಲಿ ವಿದ್ಯುತ್‌ ಸಂಪರ್ಕ ಕಡಿತವಾಗಿ ವರ್ಷವೇ ಗತಿಸಿದೆ. ಗ್ರಾಮ ಚಾವಡಿಗೆ ಪ್ರತಿ ತಿಂಗಳು 300 ರೂ. ಬಿಲ್‌ ಬರುತ್ತದೆ. 2018ರಿಂದ ಇಲ್ಲಿಯವರೆಗೂ 4,758 ರೂ. ಬಿಲ್‌ ಬಾಕಿ ಇದ್ದು 3 ವರ್ಷದಿಂದ ಈ ಬಿಲ್‌ ಪಾವತಿಯಾಗಿಲ್ಲ. ಸೋರುವ, ಬೀಳುವ ಆತಂಕ ಇರುವ ಈ ಕಟ್ಟಡ ಈಗ ಕತ್ತಲೆಯ ಕೂಪವಾಗಿದೆ. ವಿಶೇಷ ತಹಶೀಲ್ದಾರ್ ಕಚೇರಿಯಲ್ಲೂ.. ವಿಶೇಷ ತಹಶೀಲ್ದಾರ್ ಕಟ್ಟಡದಲ್ಲಿ ಕಂದಾಯ ನಿರೀಕ್ಷರ ಕಚೇರಿ, ಆಧಾರ್‌ ಕೇಂದ್ರ, ನೆಮ್ಮದಿ ಕೇಂದ್ರ, ಕಾನೂನು ಸಲಹಾ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, 2 ದಿನಗಳಿಂದ ಇಲ್ಲಿಯೂ ವಿದ್ಯುತ್‌ ಸಂಪರ್ಕ ಕಟ್‌ ಮಾಡಲಾಗಿದೆ. ಭೂ ದಾಖಲೆ, ಜಾತಿ-ಆದಾಯ, ಆಧಾರ್‌ ಕಾರ್ಡ್‌ ಹೀಗೆ ಹಲವಾರು ಕಾರ್ಯಗಳಿಗಾಗಿ ಬರುವ ನೂರಾರು ಜನರು ತೊಂದರೆ ಅನುಭವಿಸುವಂತಾಗಿದೆ. ಇಲ್ಲಿಯೂ 3-4 ತಿಂಗಳ ಬಿಲ್‌ 10,890 ರೂ. ಬಾಕಿಯಿದೆ. 2 ದಿನ ಗಡುವು! ತಾಲೂಕು ಕೇಂದ್ರವಾಗಿ 4 ವರ್ಷವಾಗಿದೆ. ಎಪಿಎಂಸಿಯವರಿಗೆ ಸೇರಿದ ಬಾಡಿಗೆ ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಎಪಿಎಂಸಿಗೆ ಬಾಡಿಗೆಯನ್ನೂ ಕಟ್ಟಿಲ್ಲವೆಂದು ಹೇಳಲಾಗುತ್ತಿದೆ. ಅಲ್ಲದೇ ತಹಶೀಲ್ದಾರ್ ಕಚೇರಿಯ 3-4 ತಿಂಗಳ ಕರೆಂಟ್‌ ಬಿಲ್‌ ಅಂದಾಜು 30 ಸಾವಿರ ರೂ. ಬಾಕಿಯಿದ್ದು 2 ದಿನದೊಳಗೆ ಬಿಲ್‌ ಪಾವತಿಸದಿದ್ದರೆ ಕರೆಂಟ್‌ ಕಟ್‌ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ತಾಲೂಕಿನ 38 ಗ್ರಾಮಗಳ ಜನರಿಗೆ ಸೇವೆ ನೀಡಲು 19 ಸಾಜಾಗಳಿದ್ದರೂ 1ಕ್ಕೆ ಮಾತ್ರ ಸ್ವಂತ ಕಟ್ಟಡವಿದೆ. ಉಳಿದಂತೆ ಶಿಥಿಲ, ಕತ್ತಲೆಯ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಿಸಲಾಗುತ್ತಿದೆ. ಸದಾ ಸೇವಾ ನಿರತ ಕಂದಾಯ ಕಚೇರಿಗಳು ಸೇವೆ ನಿಲ್ಲಿಸಿದ್ದು, ಸಾರ್ವಜನಿಕರ ಆಕ್ರೋಶ, ಅಸಮಾಧಾನಕ್ಕೆ ಕಾರಣವಾಗಿದೆ. ತಹಸೀಲ್ದಾರ್ ಕಚೇರಿಗೆ ಅಗತ್ಯ ಸೌಲಭ್ಯಗಳಿಲ್ಲ, ತಹಸೀಲ್ದಾರರರಿಗೆ ವಾಹನ ಸೌಲಭ್ಯವಿಲ್ಲದೇ ಬಾಡಿಗೆ ಅಟೋ, ಕಾರಲ್ಲಿ ಓಡಾಡುವ ಪರಿಸ್ಥಿತಿಯಿದೆ. ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಒಟ್ಟಿನಲ್ಲಿ ಲಕ್ಷ್ಮೇಶ್ವರ ತಾಲೂಕಿನ ಕಂದಾಯ ಇಲಾಖೆಯ ಕಚೇರಿಗಳಿಗೆ ಸ್ವಂತ ಕಟ್ಟಡ, ವಾಹನ, ಬೆಳಕಿನ ಭಾಗ್ಯ ಯಾವಾಗ ಲಭಿಸುತ್ತದೆಯೋ ಕಾದು ನೋಡಬೇಕು. ತಹಸೀಲ್ದಾರ ಕಚೇರಿ, ನೆಮ್ಮದಿ ಕೇಂದ್ರ ಮತ್ತು ಗ್ರಾಮ ಚಾವಡಿಗಳ ವಿದ್ಯುತ್‌ ಬಿಲ್‌ ಪಾವತಿಸಲು ಅನುದಾನಕ್ಕೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ವಿದ್ಯುತ್‌ ಸಂಪರ್ಕ ಕಲ್ಪಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ವಿದ್ಯುತ್‌ ಕಡಿತದಿಂದ ಕಚೇರಿ ಕಾರ್ಯಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಭ್ರಮರಾಂಭ ಗುಬ್ಬಿಶೆಟ್ಟಿ, ತಹಸೀಲ್ದಾರ, ಲಕ್ಷ್ಮೇಶ್ವರ ಅನೇಕ ಬಾರಿ ಬಾಕಿ ಪಾವತಿಸುವಂತೆ ನೋಟಿಸ್‌ ನೀಡಿದ್ದರೂ, ಸ್ಪಂದಿಸದ ಗ್ರಾಹಕರು, ಸಂಸ್ಥೆಗಳು, ಕಚೇರಿಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅನಿವಾರ‍್ಯವಾಗಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ. ಹಳೆ ಬಾಕಿ ಪಾವತಿಸಿದರೆ ಕೂಡಲೇ ಸಂಪರ್ಕ ಕಲ್ಪಿಸಲಾಗುತ್ತದೆ. ಎಂ.ಟಿ. ದೊಡ್ಡಮನಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನೀಯರ್, ಹೆಸ್ಕಾಂ, ಲಕ್ಷ್ಮೇಶ್ವರ ಶಾಖಾ ಕಚೇರಿ ಸರಕಾರ ಅತ್ಯಂತ ಮುಖ್ಯವಾದ ಕಂದಾಯ ಇಲಾಖೆಯ ಕಚೇರಿಗಳ ಬಾಡಿಗೆ, ವಿದ್ಯುತ್‌ ಬಿಲ್‌, ವಾಹನ, ದಿನವಹಿ ಅವಶ್ಯಕ ಸಲಕರಣೆಗಳಿಗೆ ಅನುದಾನ ಕಲ್ಪಿಸಲಾಗದ ಹೀನಾಯ ಪರಿಸ್ಥಿತಿ ಬಿಜೆಪಿ ಸರಕಾರದ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಈ ಭಾಗದ ಪ್ರಭಾವಿ ಸಚಿವರು, ಹಿರಿಯ ಶಾಸಕರು ಕನಿಷ್ಠ ಕರೆಂಟ್‌ ಬಿಲ್‌ ಪಾವತಿಸುವ ಕಾರ್ಯವನ್ನಾದರೂ ಮಾಡಲಿ. ಚನ್ನಪ್ಪ ಜಗಲಿ, ತಾಪಂ, ಪುರಸಭೆ ಮಾಜಿ ಸದಸ್ಯ, ಲಕ್ಷ್ಮೇಶ್ವರ


from India & World News in Kannada | VK Polls https://ift.tt/2ZOUfhs

ಸಿಂದಗಿ, ಹಾನಗಲ್ ಉಪಚುನಾವಣೆ ಫಲಿತಾಂಶ: ಮಂಗಳವಾರ ನಿರ್ಧಾರವಾಗಲಿದೆ ಅಭ್ಯರ್ಥಿಗಳ ಭವಿಷ್ಯ

ಬೆಂಗಳೂರು: ಸಿಂದಗಿ, ಉಪಚುನಾವಣೆಯ ಫಲಿತಾಂಶ ನವೆಂಬರ್ 2 ರಂದು ಪ್ರಕಟಗೊಳ್ಳಲಿದೆ. ಅಕ್ಟೋಬರ್ 30 ರಂದು ಚುನಾವಣೆ ನಡೆದಿದ್ದು ಎರಡು ಕ್ಷೇತ್ರಗಳಲ್ಲಿ ಜನರು ಉತ್ಸಾಹದಿಂದ ಮತದಾನ ಮಾಡಿದ್ದಾರೆ. 69.41 ಶೇಕಡಾ ಮತದಾನ ನಡೆದರೆ ಹಾನಗಲ್ ನಲ್ಲಿ ಶೇ. 83.72 ರಷ್ಟು ಮತದಾನ ನಡೆದಿದೆ. ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ಗೂ ಪ್ರತಿಷ್ಠೆಯ ಕಣವಾಗಿದೆ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿಯ ಕಣವಾಗಿತ್ತು. ಹೇಗಾದರೂ ಮಾಡಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲೇ ಬೇಕು ಎಂದು ಎರಡು ಪಕ್ಷಗಳು ಪ್ರಯತ್ನ ನಡೆಸಿದ್ದವು. ಅಭ್ಯರ್ಥಿಗಳ ಎದೆ ಡವ ಡವ ಹಾನಗಲ್ ನಲ್ಲಿ ಕಾಂಗ್ರೆಸ್ - ಶ್ರೀನಿವಾಸ್ ಮಾನೆ, ಬಿಜೆಪಿ - ಶಿವರಾಜ್ ಸಜ್ಜನರ್ ಹಾಗೂ ಜೆಡಿಎಸ್ ನಿಂದ ನಿಯಾಜ್ ಶೇಕ್ ಕಣದಲ್ಲಿದ್ದಾರೆ. ಸಿಂದಗಿಯಲ್ಲಿ ಕಾಂಗ್ರೆಸ್- ಅಶೋಕ್ ಮನಗೊಳಿ, ಬಿಜೆಪಿ - ರಮೇಶ್ ಭೂಸನೂರು ಹಾಗೂ ಜೆಡಿಎಸ್ ನಿಂದ ನಾಜಿಯಾ ಶಕೀಲ್ ಅಂಗಡಿ ಸ್ಪರ್ಧೆ ನಡೆಸಿದ್ದಾರೆ. ಮೂರು ಪಕ್ಷಗಳ ಅಭ್ಯರ್ಥಿಗಳು ಶಕ್ತಿ ಮೀರಿ ಚುನಾವಣೆಯಲ್ಲಿ ಮತದಾರರ ಮನಗೆಲ್ಲುವ ಪ್ರಯತ್ನ ನಡೆಸಿದ್ದಾರೆ. ಸದ್ಯ ಮತಗಳು ಮತಪೆಟ್ಟಿಗೆಯಲ್ಲಿ ಭದ್ರವಾಗಿವೆ. ಆದರೆ ಯಾರ ಭವಿಷ್ಯ ಏನು ಎಂಬುವುದು ನವೆಂಬರ್ 2 ರಂದು ನಿರ್ಧಾರವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರ ಚಿತ್ತ ನವೆಂಬರ್ 2 ಫಲಿತಾಂಶದತ್ತ ನೆಟ್ಟಿದೆ. ಈ ಫಲಿತಾಂಶ ಮುಂಬರುವ ರಾಜಕೀಯ ಸನ್ನಿವೇಶಗಳಿಗೆ ದಿಕ್ಸೂಚಿ ಅಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಹಾಗಿದ್ದರೂ ಈ ಫಲಿತಾಂಶ ಖಂಡಿತವಾಗಿಯೂ ಮುಂದಿನ ರಾಜಕೀಯ ಸ್ಥಿತಿಗತಿಗಳ ಮೇಲೆ ಪರಿಣಾಮ ಬೀರಲಿದೆ. ಒಟ್ಟಿನಲ್ಲಿ ಅಭ್ಯರ್ಥಿಗಳಲ್ಲಿ ಹಾಗೂ ಮುಖಂಡರಲ್ಲಿ ಕುತೂಹಲ ಇಮ್ಮಡಿಯಾಗಿದೆ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಫೈಟ್ ಇದೆ. ಈ ನಿಟ್ಟಿನಲ್ಲಿ ಗೆಲವು ಏನಿದ್ದರೂ ಸಣ್ಣ ಅಂತರದಲ್ಲಿ ಮಾತ್ರ ಎಂಬವುದು ಕಾಂಗ್ರೆಸ್ ಹಾಗೂ ಬಿಜೆಪಿಗರ ವಾದವಾಗಿದೆ. ಅದೇನೇ ಇದ್ದರೂ ಯಾವ ಭವಿಷ್ಯ ಏನಾಗಲಿದೆ ಎಂಬುವುದನ್ನು ನವೆಂಬರ್ 2 ಫಲಿತಾಂಶ ತಿಳಿಸಲಿದೆ. ಅಲ್ಲಿಯವರೆಗೆ ಕಾದು ನೋಡಬೇಕಿದೆ.


from India & World News in Kannada | VK Polls https://ift.tt/3Bq6u0Z

ಸಾರ್ವಕಾಲಿಕ ಶ್ರೇಷ್ಠ ಟಿ20-ಐ ತಂಡ ಕಟ್ಟಿ ಧೋನಿಗೆ ಕ್ಯಾಪ್ಟನ್ಸಿ ಕೊಟ್ಟ ಲೂಯಿಸ್‌!

ಬೆಂಗಳೂರು: ತಂಡದ ಸ್ಟಪೋಟಕ ಆರಂಭಿಕ ಬ್ಯಾಟ್ಸ್‌ಮನ್‌ , ಇತ್ತೀಚಿನ ಸಂದರ್ಶನದ ವೇಳೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ತಂಡ ಕಟ್ಟಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ತಂಡದ ಪರ ಐಪಿಎಲ್‌ 2021 ಟೂರ್ನಿಯಲ್ಲಿ ಬ್ಯಾಟ್‌ ಬೀಸಿದ್ದ ಎಡಗೈ ಆರಂಭಿಕ ಆಟಗಾರ ಎವಿನ್‌ ಲೂಯಿಸ್, ಇತ್ತೀಚಿನ ಸಂದರ್ಶನದಲ್ಲಿ ಅತ್ಯುತ್ತಮ ತಂಡ ಕಟ್ಟಿ, ಟೀಮ್ ಇಂಡಿಯಾದ ಮಾಜಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಅವರಿಗೆ ನಾಯಕತ್ವ ನೀಡಿದ್ದಾರೆ. ವಿಶೇಷ ಎಂದರೆ ಎವಿನ್‌ ತಮ್ಮ ತಂಡದಲ್ಲಿ ಬರೋಬ್ಬರಿ 5 ಆಟಗಾರರನ್ನು ದಿಂದ ತೆಗೆದುಕೊಂಡಿದ್ದಾರೆ. ವೆಸ್ಟ್‌ ಇಂಡೀಸ್‌ ಮೂವರು ಮತ್ತು ದಕ್ಷಿಣ ಆಫ್ರಿಕಾ, ಅಫಘಾನಿಸ್ತಾನ ಮತ್ತುಆಸ್ಟ್ರೇಲಿಯಾದಿಂದ ಒಬ್ಬ ಆಟಗಾರನನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತಮ್ಮ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನಾಗಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯ ನಾಲ್ಕು ಶತಕಗಳನ್ನು ಬಾರಿಸಿರುವ ಟೀಮ್ ಇಂಡಿಯಾ ತಾರೆ ರೋಹಿತ್‌ ಶರ್ಮಾ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರೊಟ್ಟಿಗೆ ಸ್ವಘೋಷಿತ ಯೂನಿವರ್ಸ್‌ ಬಾಸ್‌ ಕ್ರಿಸ್‌ ಗೇಲ್‌ ಅವರನ್ನು ತೆಗೆದುಕೊಂಡಿದ್ದಾರೆ. ಕ್ರಿಸ್‌ ಗೇಲ್‌ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು (14,305) ರನ್‌ಗಳಿಸಿದ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಸಲುವಾಗಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಆಗಿರುವ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ (3216 ಟಿ20-ಐ ರನ್‌), ಮತ್ತು ಮಿಸ್ಟರ್‌ 360 ಡಿಗ್ರಿ ಬ್ಯಾಟ್ಸ್‌ಮನ್‌ ಖ್ಯಾತಿಯ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿ'ವಿಲಿಯರ್ಸ್‌ (1672 ರನ್) ಅವರನ್ನು ತೆಗೆದುಕೊಂಡಿದ್ದಾರೆ. ಆಲ್‌ರೌಂಡರ್‌ಗಳನ್ನಾಗಿ ಕೈರೊನ್‌ ಪೊಲಾರ್ಡ್‌, ಆಂಡ್ರೆ ರಸೆಲ್‌ ಮತ್ತು ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡಿ, ನಾಯಕತ್ವ ಮತ್ತು ವಿಕೆಟ್‌ಕೀಪಿಂಗ್‌ ಜವಾಬ್ದಾರಿಯನ್ನು ಎಂಎಸ್‌ ಧೋನಿಗೆ ನೀಡಿದ್ದಾರೆ. ಬೌಲರ್‌ಗಳ ಪೈಕಿ ವಿಶ್ವ ಶ್ರೇಷ್ಠ ಟಿ20 ಬೌಲರ್‌ ಅಫಘಾನಿಸ್ತಾನದ ರಶೀದ್‌ ಖಾನ್‌ ಅವರನ್ನು ತಮ್ಮ ತಂಡಕ್ಕೆ ಪರಿಣತ ಸ್ಪಿನ್ನರ್‌ ಆಗಿ ತೆಗೆದುಕೊಂಡಿದ್ದಾರೆ. ರಶೀದ್‌ (101 ಟಿ20-ಐ ವಿಕೆಟ್ಸ್‌) ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ 100 ವಿಕೆಟ್‌ ಪಡೆದ ಸಾಧನೆ ಮಾಡಿದ್ದರು. ವೇಗದ ಬೌಲಿಂಗ್‌ ಸಲುವಾಗಿ ಭಾರತದ ಜೆಸ್‌ಪ್ರೀತ್‌ ಬುಮ್ರಾ (59 ಟಿ20-ಐ ವಿಕೆಟ್‌) ಮತ್ತು ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್‌ ಸ್ಟಾರ್ಕ್‌ (55 ವಿಕೆಟ್‌) ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಎವಿನ್‌ ಲೂಯಿಸ್‌ ಆಯ್ಕೆಯ ಸಾರ್ವಕಾಲಿಕ ಶ್ರೇಷ್ಠ ಟಿ20-ಐ ಇಲೆವೆನ್‌ ಹೀಗಿದೆ1. ಕ್ರಿಸ್‌ ಗೇಲ್‌ (ಓಪನರ್‌) 2. ರೋಹಿತ್‌ ಶರ್ಮಾ (ಓಪನರ್‌) 3. ವಿರಾಟ್‌ ಕೊಹ್ಲಿ (ಬ್ಯಾಟ್ಸ್‌ಮನ್‌) 4. ಎಬಿ ಡಿ'ವಿಲಿಯರ್ಸ್‌ (ಬ್ಯಾಟ್ಸ್‌ಮನ್‌) 5. ಕೈರೋನ್‌ ಪೊಲಾರ್ಡ್ (ಆಲ್‌ರೌಂಡರ್‌) 6. ಎಂಎಸ್‌ ಧೋನಿ (ಕ್ಯಾಪ್ಟನ್‌/ವಿಕೆಟ್‌ಕೀಪರ್‌) 7. ಆಂಡ್ರೆ ರಸೆಲ್‌ (ಆಲ್‌ರೌಂಡರ್‌) 8. ರವೀಂದ್ರ ಜಡೇಜಾ (ಆಲ್‌ರೌಂಡರ್‌) 9. ರಶಿದ್‌ ಖಾನ್‌ (ಲೆಗ್‌ ಸ್ಪಿನ್ನರ್‌) 10. ಜಸ್‌ಪ್ರೀತ್‌ ಬುಮ್ರಾ (ಬಲಗೈ ವೇಗಿ) 11. ಮಿಚೆಲ್‌ ಸ್ಟಾರ್ಕ್‌ (ಎಡಗೈ ವೇಗಿ)


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ZClXxA

ಹಾಸನ ಜಿಲ್ಲಾದ್ಯಂತ ಶೇ.49 ಹೆಚ್ಚುವರಿ ಮಳೆ: ವಾಣಿಜ್ಯ ಬೆಳೆ ಕಾಫಿಗೆ ದೊಡ್ಡ ಹೊಡೆತ!

ಪ್ರಕಾಶ್‌ ಜಿ.,ಹಾಸನ ಹಾಸನ: ಜಿಲ್ಲಾದ್ಯಂತ ಇತ್ತೀಚೆಗೆ ಧಾರಾಕಾರವಾಗಿ ಸುರಿದಿದ್ದು, ತಿಂಗಳ ಅಂತ್ಯಕ್ಕೆ ಶೇ.49 ಹೆಚ್ಚುವರಿ ಮಳೆಯಾಗಿದೆ. ಅರಸೀಕೆರೆ ತಾಲೂಕಿನಲ್ಲಿ ಶೇ.24ರಷ್ಟು ಹೆಚ್ಚುವರಿ ಮಳೆಯಾಗಿದ್ದರೆ, ಚನ್ನರಾಯಪಟ್ಟಣ ತಾಲೂಕಿನಲ್ಲಿ ಶೇ.32ರಷ್ಟು ದಾಖಲೆ ಮಳೆಯಾಗಿದೆ. ಮಳೆಯಿಂದಾಗಿ ಹೊಳೆನರಸೀಪುರ ತಾಲೂಕಿನಲ್ಲಿ 18 ಹೆಕ್ಟೇರ್‌ ಮುಸುಕಿನ ಜೋಳ, ಭತ್ತ 24 ಹೆಕ್ಟೇರ್‌, 8 ಹೆಕ್ಟೇರ್‌ನಷ್ಟು ರಾಗಿ ಸೇರಿದಂತೆ 50 ಹೆಕ್ಟೇರ್‌ನಷ್ಟು ಬೆಳೆಗಳು ಹಾನಿಯಾಗಿದೆ. ವಾಣಿಜ್ಯ ಬೆಳೆ ಕಾಫಿಗೆ ದೊಡ್ಡಪೆಟ್ಟು ನೀಡಿದೆ. ಪ್ರತಿವರ್ಷ ಆಗಸ್ಟ್‌ ಬಳಿಕ ಮಳೆಯ ಆರ್ಭಟ ಕ್ಷಿಣಿಸುತ್ತಿದ್ದರೂ ಈ ಬಾರಿ ವಾಡಿಕೆ ಜನವರಿಯಿಂದ ಈವರೆಗೆ 1077 ಮಿ.ಮೀ.ಮಳೆಗೆ 1117ರಷ್ಟು (ಶೇ.4ರಷ್ಟು) ಜಿಲ್ಲಾದ್ಯಂತ ಮಳೆಯಾಗಿದೆ. ಬರದನಾಡು ಅರಸೀಕೆರೆಯಲ್ಲಿ ಈ ಬಾರಿ 591 ಮಿ.ಮೀ. ಮಳೆಗೆ 772 ಮಿಮೀ ಮಳೆಯಾಗಿದ್ದು, ಶೇ.32 ದಾಖಲೆ ಮಳೆಯಾಗಿದೆ. ದೊಡ್ಡಕೆರೆ ಹಾರ್ನಹಳ್ಳಿಕೆರೆ, ಅರಸೀಕೆರೆ, ಕಣಕಟ್ಟೆ ಕೆರೆಗಳಿಗೆ ನೀರು ತುಂಬಿಲ್ಲ, ಚೆಕ್‌ಡ್ಯಾಂ ಭರ್ತಿಯಾಗಿದೆ. ಅಂತರ್ಜಲ ಮಟ್ಟ ಹೆಚ್ಚಳದ ಜತೆಗೆ ತೆಂಗಿನ ತೋಟ ಮಳೆಯಿಂದ ಒಂದಿಷ್ಟು ನಳನಳಿಸುತ್ತಿದ್ದು, ಬೆಳೆಗಾರರು ತುಸು ನೆಮ್ಮದಿ ತಂದಿದೆ. ಸಕಲೇಶಪುರ ತಾಲೂಕಿನಲ್ಲಿ 2130 ಮಿಮೀಗೆ 2681 ಶೇ.26ರಷ್ಟು ಮಳೆಬಿದ್ದಿದ್ದು, ಬೆಳೆಗೆ ದೊಡ್ಡ ಪ್ರಮಾಣದ ಹಾನಿಯಾಗಿದೆ. 25ರಿಂದ 30 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಕಾಫಿಹಣ್ಣು ಉದುರಿದೆ. ಚನ್ನರಾಯಪಟ್ಟಣ ತಾಲೂಕಿನಲ್ಲಿ 583 ಮಿಮೀಗೆ 772 ಮಿಮೀ ಮಳೆಯಾಗಿದ್ದು, ಶೇ.32ರಷ್ಟು ಹೆಚ್ಚುವರಿ ಮಳೆಯಾಗಿದೆ. ನಿಲ್ಲದ ಕಾಡಾನೆ ಹಾವಳಿಮಳೆಯ ಆರ್ಭಟದ ನಡುವೆ ಬೆಳೆ ಉಳಿಸಿಕೊಳ್ಳಲು ರೈತಾಪಿ ವರ್ಗ ಹೋರಾಟ ನಡೆಸುತ್ತಿದ್ದು, ಆಲೂರು, ಸಕಲೇಶಪುರ ತಾಲೂಕಿನಲ್ಲಿ ಕಾಡಾನೆ ಇದ್ದ ಬೆಳೆಯನ್ನು ನಾಶಮಾಡಿ ಕಂಗಾಲಾಗಿಸುತ್ತಿದೆ. ಪ್ರತಿನಿತ್ಯ ಸಂಜೆ ಹಾಗೂ ರಾತ್ರಿ ಮಳೆ ಸುರಿಯುತ್ತಿದ್ದು, ಸಾಕಪ್ಪಾ ಮಳೆಯ ಸಹವಾಸ ಎನ್ನುವಂತಾಗಿದೆ. ಅರಕಲಗೂಡು ತಾಲೂಕಿನಲ್ಲಿ ನಾನಾ ಬೆಳೆ ಹಾನಿಯಾಗಿದೆ. 111ರಷ್ಟು ಪ್ರಗತಿ, ಹಾನಿ ಆತಂಕ ಮುಂಗಾರು ಹಂಗಾಮಿನಲ್ಲಿ 2,08,564 ಲಕ್ಷ ಹೆಕ್ಟೇರ್‌ ನಾನಾ ಬೆಳೆಯ ಬಿತ್ತನೆ ಗುರಿ ಹೊಂದಿದ್ದು, 2,30,888 ಲಕ್ಷ ಹೆಕ್ಟೇರ್‌ನಲ್ಲಿನಾನಾ ಬೆಳೆ ಬಿತ್ತನೆಯಾಗಿ ಶೇ.111ರಷ್ಟು ಪ್ರಗತಿಯಾಗಿದೆ. ಪ್ರಮುಖವಾಗಿ ಮುಸುಕಿನಜೋಳ 90,305 ಹೆಕ್ಟೇರ್‌, ರಾಗಿ 72,006 ಹೆಕ್ಟೇರ್‌, ಭತ್ತ 35,845 ಹೆಕ್ಟೇರ್‌, ತಂಬಾಕು 9020 ಹೆಕ್ಟೇರ್‌, ಹೆಸರು 7009 ಹೆಕ್ಟೇರ್‌, ಅಲಸಂದೆ 8354 ಹೆಕ್ಟೇರ್‌, ಕಬ್ಬು 2595 ಹೆಕ್ಟೇರ್‌ ಇನ್ನಿತರ ಬೆಳೆಗಳು ಬಿತ್ತನೆಯಾಗಿದ್ದು, ಮಳೆ ಇದೇ ರೀತಿ ಮುಂದುವರಿದರೆ ಭಾರಿ ಪ್ರಮಾಣದಲ್ಲಿಬೆಳೆ ಹಾನಿಯಾಗುವ ಆತಂಕವನ್ನು ರೈತಾಪಿವರ್ಗ ವ್ಯಕ್ತಪಡಿಸಿದೆ. ಪೂರ್ವ ಸಮೀಕ್ಷೆ ಕಾಫಿ ಮಂಡಳಿ, ತೋಟಗಾರಿಕೆ, ಕಂದಾಯ ಇಲಾಖೆ ಜಂಟಿಯಾಗಿ ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ ಕಾಫಿ ಸಮೀಕ್ಷೆ ಮಾಡಬೇಕಿತ್ತು. ಆದರೆ ಆಗಸ್ಟ್‌ ಮತ್ತು ಸೆಪ್ಟೆಂಬರ್‌ನ ಪ್ರಾರಂಭದಲ್ಲೇ ಸಮೀಕ್ಷೆ ಮಾಡಿರುವ ಕಾರಣ ಪ್ರಸ್ತುತ ನಷ್ಟದ ವರದಿಯಾಗದೆ ಈ ಹಿಂದಿನ ಸಮೀಕ್ಷೆ ಅನ್ವಯ ಯಾವುದೇ ಹಾನಿಯಾಗಿಲ್ಲ ಎಂದು ವರದಿ ಸಲ್ಲಿಕೆಯಾಗಿದ್ದು, ಇದು ಬೆಳೆಗಾರರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್‌.ಟಿ.ಮೋಹನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾದ್ಯಂತ ಶೇ.4ರಷ್ಟು ಹೆಚ್ಚುವರಿ ಮಳೆಯಾಗಿದೆ. ಹೊಳೆನರಸೀಪುರ ತಾಲೂಕಿನಲ್ಲಿ 50 ಹೆಕ್ಟೇರ್‌ ಬೆಳೆಹಾನಿ ವರದಿಯಾಗಿದೆ. 72 ಸಾವಿರ ಹೆಕ್ಟೇರ್‌ನಲ್ಲಿ ರಾಗಿ, 35845 ಹೆಕ್ಟೇರ್‌ನಲ್ಲಿ ಭತ್ತ, ಮುಸುಕಿನಜೋಳ 90305 ಹೆಕ್ಟೇರ್‌ನಲ್ಲಿ ಬೆಳೆದಿದ್ದು, ಅರ್ಧದಷ್ಟು ಈಗಾಗಲೇ ಕಟಾವಾಗಿದೆ. ರವಿ,ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಹಾಸನ ಮಳೆಯಿಂದ ಕಾಫಿ ಹಣ್ಣು ಕೊಳೆಯುತ್ತಿದೆ, ಈಗ ಸಮೀಕ್ಷೆ ನಡೆಸಿದರೆ ವಾಸ್ತವ ನಷ್ಟದ ಸ್ಪಷ್ಟತೆ ಸಿಗುತ್ತದೆ. ಆದರೆ ಅಧಿಕಾರಿಗಳು ಮುಂಚಿತವಾಗಿ ಸಮೀಕ್ಷೆ ನಡೆಸಿರುವ ಕಾರಣ ಸಮಸ್ಯೆಯಾಗಿದೆ. ಎಚ್‌.ಟಿ.ಮೋಹನ್‌, ಅಧ್ಯಕ್ಷರು, ಬೆಳೆಗಾರರ ಒಕ್ಕೂಟ, ಸಕಲೇಶಪುರ


from India & World News in Kannada | VK Polls https://ift.tt/3mv2VlW

ಪುನೀತ್ ರಾಜ್ ಕುಮಾರ್ ಅಂತ್ಯಸಂಸ್ಕಾರ: ಪೊಲೀಸರ ಕಾರ್ಯಕ್ಕೆ ಬಸವರಾಜ ಬೊಮ್ಮಾಯಿ ಮೆಚ್ಚುಗೆ

ಬೆಂಗಳೂರು: ಸಿನಿಮಾ ನಟ ಪುನೀತ್ ರಾಜ್‌ಕುಮಾರ್ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಸೇರಿದಂತೆ ಕಳೆದ ಮೂರು ದಿನಗಳಲ್ಲಿ ಪೊಲೀಸರು ನಿರ್ವಹಿಸಿದ ಕಾರ್ಯಕ್ಕೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ಅವರು, ನಿಧನ ನಂತರ ಕಳೆದ ಮೂರು ದಿನಗಳಿಂದ ಸಾರ್ವಜನಿಕರ ದರ್ಶನದಿಂದ ಎಲ್ಲ ವ್ಯವಸ್ಥೆ ಬಗ್ಗೆ ಪೊಲೀಸರು, ಅಧಿಕಾರಿಗಳು ಶ್ರಮವಹಿಸಿದ್ದಾರೆ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಎಂದರು. ಯಾವುದೇ ರೀತಿಯಲ್ಲೂ ಹೆಚ್ಚೂಕಮ್ಮಿ ಆಗದೇ, ಅಹಿತಕರ ಘಟನೆ ನಡೆದಿಲ್ಲ. ಪೊಲೀಸರ ಶ್ರಮ, ಶ್ರದ್ಧೆಗೆ ಮೆಚ್ಚುಗೆ ವ್ಯಕ್ತಪಡಿಸ್ತೇನೆ. ಪುನೀತ್ ಕುಟುಂಬದವರೂ ಸಂಪೂರ್ಣ ಸಹಕಾರ ನೀಡಿದ್ದಾರೆ. ಅವರ ಕುಟುಂಬದವರಿಗೂ ಧನ್ಯವಾದ ಎಂದರು. ಅಭಿಮಾನಿಗಳು ಶಿಸ್ತು, ಸಂಯಮ, ಶಾಂತಿಯಿಂದ ನಡೆದುಕೊಂಡಿದ್ದಾರೆ. ಅಭಿಮಾನಿಗಳಿಗೂ ಧನ್ಯವಾದ. ಯಾವುದೇ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕರ್ತವ್ಯ. ಶಿವರಾಜ್ ಕುಮಾರ್ ಸರ್ಕಾರಕ್ಕೆ ಕೃತಜ್ಞತೆ ತಿಳಿಸಿದ್ದಾರೆ. ಸರ್ಕಾರ ತನ್ನ ಕರ್ತವ್ಯ ನಿಭಾಯಿಸಿದೆ. ನಮ್ಮ‌ಅಧಿಕಾರಿಗಳೂ ಸಹಕಾರ ಕೊಟ್ಟಿದ್ದಾರೆ. ಇದು ಸರ್ಕಾರ, ಅಧಿಕಾರಿಗಳ ಕರ್ತವ್ಯ ಆಗಿತ್ತು ಎಂದ ಅವರು, ಶಿವರಾಜ್ ಕುಮಾರ್ ಅವರ ಕೃತಜ್ಞತೆ ಅವರ ಮತ್ತು ದೊಡ್ಮನೆಯ ದೊಡ್ಡ ಗುಣ ಎಂದರು. ಸಿನಿಮಾ ನಟ ಪುನೀತ್ ರಾಜ್‌ಕುಮಾರ್‌ ಅವರು ಹೃದಯಸ್ತಂಭನದಿಂದ ಶುಕ್ರವಾರ ನಿಧನರಾದರು. ಪುನೀತ್ ಅವರ ಅಂತ್ಯಸಂಸ್ಕಾರ ಭಾನುವಾರ ನಡೆಯಿತು. ಪುನೀತ್ ನಿಧನದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.


from India & World News in Kannada | VK Polls https://ift.tt/3mrYCI2

ಹಾವೇರಿಯ ಈ ಗ್ರಾಮದ ಮಸೀದಿಯಲ್ಲಿ ಕನ್ನಡದಲ್ಲಿಯೇ ಪ್ರಾರ್ಥನೆ: ಸಾಮರಸ್ಯದ ಜೀವನಕ್ಕೆ ಮಾದರಿ

ಹಾವೇರಿ: ಜಗತ್ತಿನೆಲ್ಲೆಡೆ ಮಸೀದಿಗಳಲ್ಲಿ ಸಾಮಾನ್ಯವಾಗಿ ಧಾರ್ಮಿಕ ಪ್ರಾರ್ಥನೆಯು ಅರೇಬಿಕ್ ಭಾಷೆಯಲ್ಲಿ ಇರುತ್ತದೆ. ಕೆಲವು ಕಡೆ ಪ್ರಾದೇಶಿಕ ಭಾಷೆ ಬಳಕೆಯ ನಿದರ್ಶನಗಳೂ ಇವೆ. ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಚಿಕ್ಕ ಕಬ್ಬಾರದಲ್ಲಿನ ಹಜರತ್ ಮೆಹಬೂಬ್ ಸುಬಾನಿ ದರ್ಗಾದಲ್ಲಿ ಕನ್ನಡದಲ್ಲಿಯೇ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಚಿಕ್ಕ ಕಬ್ಬಾರ ಗ್ರಾಮದಲ್ಲಿ ಇರುವ ಈ ದರ್ಗಾದಲ್ಲಿ 150 ವರ್ಷಗಳಿಂದಲೂ ಕನ್ನಡದಲ್ಲಿಯೇ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಇಲ್ಲಿರುವ ಸುಮಾರು 400 ಮುಸ್ಲಿಮರ ಕುಟುಂಬಗಳಲ್ಲಿ ಹೆಚ್ಚಿನವರಿಗೆ ಉರ್ದು ಅಥವಾ ಅರೇಬಿಕ್ ಬರುವುದಿಲ್ಲ. ಹೀಗಾಗಿ ದಿನಕ್ಕೆ ಐದು ಬಾರಿಯೂ ಇಲ್ಲಿನ ಮೌಲ್ವಿ ತಮ್ಮ ಸಮುದಾಯದ ಜನರೊಂದಿಗೆ ಕನ್ನಡದಲ್ಲಿಯೇ ಸಂವಹನ ನಡೆಸುತ್ತಾರೆ. ಕಳೆದ ದಶಕದಲ್ಲಿಯಷ್ಟೇ ಮಕ್ಕಳು ಶಾಲೆಯಲ್ಲಿ ಉರ್ದು ಕಲಿಯುವುದನ್ನು ಆರಂಭಿಸಿದ್ದಾರೆ. ಆದರೆ ಮಸೀದಿಯ ಒಳಗೆ ಹೊರಗೆ ಇರುವ ಫಲಕಗಳಲ್ಲಿ ಕನ್ನಡವನ್ನೇ ಬಳಸಲಾಗಿದೆ. 'ಚಿಕ್ಕ ಕಬ್ಬಾರ ಗ್ರಾಮದ ಬಹುತೇಕ ಮುಸ್ಲಿಮರಿಗೆ ಅರೇಬಿಕ್ ಅಥವಾ ಉರ್ದು ಬರುವುದಿಲ್ಲ. ಹೀಗಾಗಿ ಇಲ್ಲಿ ಪ್ರಾರ್ಥನೆ ವೇಳೆ ಆ ಭಾಷೆಗಳನ್ನು ಬಳಸುವುದರಿಂದ ಪ್ರಯೋಜನ ಇಲ್ಲ. ಆದರೆ ಪ್ರಾರ್ಥನೆ ಮತ್ತು ಪ್ರವಚನಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ ಎಂಬ ಕಾರಣಕ್ಕೆ ಹಿಂದಿನಿಂದಲೂ ಮೌಲ್ವಿಗಳು ಕನ್ನಡದಲ್ಲಿಯೇ ಪ್ರವಚನ ನೀಡುತ್ತಾ ಬಂದಿದ್ದಾರೆ' ಎಂದು ಈಗಿನ ಮೌಲ್ವಿ ಮೊಹಮ್ಮದ್ ಪೀರನಸಾಬ್ ತಿಳಿಸಿದ್ದಾರೆ. ಗ್ರಾಮದಲ್ಲಿ ಮುಸ್ಲಿಮೇತರರು ಕೂಡ ಕನ್ನಡದ ಪ್ರಾರ್ಥನೆಯನ್ನು ಆಲಿಸುತ್ತಾರೆ. ಭಾಷೆಗಿಂತಲೂ ಮುಖ್ಯವಾಗಿ ಧರ್ಮದ ತತ್ವ ಹಾಗೂ ಪ್ರಾರ್ಥನೆಯ ಮಹತ್ವವನ್ನು ಅರ್ಥಮಾಡಿಕೊಳ್ಳುವುದರಲ್ಲಿ ಇದರ ಉದ್ದೇಶವಿದೆ ಎಂದು ಅವರು ಹೇಳಿದ್ದಾರೆ. ಕನ್ನಡದಲ್ಲಿಯೇ ಪ್ರಾರ್ಥನೆ ಸಲ್ಲಿಸುವುದಕ್ಕೆ ಮೌಲ್ವಿ ಅವರಿಗೆ ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಹುಸೇನ್‌ಸಾಬ್ ಬಿಲ್ಲಲ್ಲಿ ಒಪ್ಪಿಗೆ ನೀಡಿದ್ದರು. ಜನರಿಗೆ ಪ್ರಾರ್ಥನೆ ಅರ್ಥವಾಗದೆ ಇದ್ದರೆ ಧರ್ಮವನ್ನು ಪಾಲಿಸಲು ಸಾಧ್ಯವಿಲ್ಲ. ಹೀಗಾಗಿ ಮಸೀದಿಗಳಲ್ಲಿ ಅರೇಬಿಕ್ ಮತ್ತು ಉರ್ದುವಿನಲ್ಲಿ ಪ್ರಾರ್ಥನೆ ಸಲ್ಲಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಕನ್ನಡದ ಪ್ರಾರ್ಥನೆಯು ಬರಹ ರೂಪದಲ್ಲಿ ಇಲ್ಲದೆ ಇದ್ದರೂ, ಸಮುದಾಯಕ್ಕೆ ಅರ್ಥಮಾಡಿಕೊಳ್ಳಲು ಬಹಳ ಸುಲಭ ಎಂದು ತಿಳಿಸಿದ್ದಾರೆ. 'ನಮ್ಮ ಗ್ರಾಮದಲ್ಲಿ ಜನರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ನಮ್ಮ ಗ್ರಾಮದಲ್ಲಿನ ಹಿಂದೂ ಮತ್ತು ಮುಸ್ಲಿಮರ ನಡುವೆ ಯಾವುದೇ ಮನಸ್ತಾಪಗಳಿಲ್ಲ. ನಮ್ಮ ಹಬ್ಬಗಳಲ್ಲಿ ಹಿಂದೂಗಳು ಭಾಗವಹಿಸುತ್ತಾರೆ ಮತ್ತು ಹಿಂದೂಗಳ ಧಾರ್ಮಿಕ ಆಚರಣೆಗಳಲ್ಲಿ ನಾವೂ ಕೈಜೋಡಿಸುತ್ತೇವೆ' ಎಂದು ಹೇಳಿದ್ದಾರೆ. 'ಮೂರು ತಲೆಮಾರುಗಳ ಹಿಂದೆ ನಮ್ಮ ಗ್ರಾಮದಲ್ಲಿ ನಿರ್ಮಿಸಲು ಮೂರು ಗುಂಟೆ ಜಾಗವನ್ನು ದಾನ ಮಾಡಿದ್ದರು. ಇತ್ತೀಚೆಗೆ ಅಂಜುಮನ್ ಸಮಿತಿಯಲ್ಲಿ ನಾನು ಆಸ್ತಿಯನ್ನು ನೋಂದಣಿ ಮಾಡಿಸಿದ್ದೆ. ಭಾಷೆಯಲ್ಲಿ ಯಾವುದೇ ವಿವಾದವಿಲ್ಲ. ನಾವು ಅವರ ಪ್ರಾರ್ಥನೆಗಳನ್ನು ಮತ್ತು ಪ್ರವಚನಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತೇವೆ. ಏಕೆಂದರೆ ಅದು ನಮ್ಮ ಭಾಷೆಯಲ್ಲಿರುತ್ತದೆ. ನಮ್ಮ ಧರ್ಮಗಳು ಜತೆಯಾಗಿವೆ, ಇಲ್ಲಿ ಭಿನ್ನಾಭಿಪ್ರಾಯವೂ ಇಲ್ಲ. ನಾವು ಸಾಮರಸ್ಯದಿಂದ ಜೀವಿಸುತ್ತಿದ್ದೇವೆ' ಎಂದು ಮಸೀದಿಗೆ ಭೂಮಿಯನ್ನು ದಾನ ಮಾಡಿದ್ದ ವೀರನಗೌಡ ಪಾಟೀಲ ತಿಳಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಾಗಿರುವ ಹಾವೇರಿಯಲ್ಲಿನ ಈ ಗ್ರಾಮದಲ್ಲಿ ಕನ್ನಡದಲ್ಲಿಯೇ ಸಮುದಾಯದ ಧಾರ್ಮಿಕ ಕಾರ್ಯಗಳು ನಡೆಯುತ್ತಿರುವುದು ಹಾಗೂ ಎಲ್ಲ ಸಮುದಾಯಗಳ ಜನರ ನಡುವೆ ಇರುವ ಆತ್ಮೀಯತೆ ಮಾದರಿಯಾಗಿದೆ.


from India & World News in Kannada | VK Polls https://ift.tt/3EqS4PO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...