Paralympics: ಬ್ಯಾಡ್ಮಿಂಟನ್‌ನಲ್ಲಿ ಫೈನಲ್‌ ಪ್ರವೇಶಿಸಿದ ಕನ್ನಡಿಗ ಸುಹಾಸ್‌!

ಟೋಕಿಯೋ: ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಬ್ಯಾಡ್ಮಿಂಟನ್‌ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸುಹಾಸ್ ಎಲ್‌ ಯತಿರಾಜ್‌ ಅವರು ಫೈನಲ್‌ ಪ್ರವೇಶ ಮಾಡಿದ್ದಾರೆ. ಆ ಮೂಲಕ ಪ್ರಸಕ್ತ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕವನ್ನು ಖಚಿತಪಡಿಸಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ದೇಶದ ಮೊದಲ ನಾಗರಿಕ ಸೇವಕರಾದ ಕನ್ನಡಿಗರ ಅವರು, ಪುರುಷರ ಸಿಂಗಲ್ಸ್ ಎಸ್‌ಎಲ್ 4 ಸೆಮಿಫೈನಲ್ ಹಣಾಹಣಿಯಲ್ಲಿ ಇಂಡೋನೇಷ್ಯಾದ ಸೆತಿವನ್ ವಿರುದ್ಧ ನೇರ ಗೇಮ್‌ಗಳಿಂದ ಗೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಇದರೊಂದಿಗೆ ಬೆಳ್ಳಿ ಪದಕವನ್ನು ಪಕ್ಕಾ ಮಾಡಿಕೊಂಡಿದ್ದಾರೆ. ಶನಿವಾರ ನಡೆದಿದ್ದ 31 ನಿಮಿಷಗಳ ಕಾಲ ನಡೆದಿದ್ದ ಸೆಮಿಫೈನಲ್‌ ಹಣಾಹಣಿಯಲ್ಲಿ ಸುಹಾಸ್‌, 21-9 ಹಾಗೂ 21-15 ನೇರ ಗೇಮ್‌ಗಳಿಂದ ಇಂಡೋನೇಷ್ಯಾ ಆಟಗಾರನಿಗೆ ಮಣ್ಣು ಮುಕ್ಕಿಸಿದರು. ಆ ಮೂಲಕ ಫೈನಲ್‌ ಸುತ್ತಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡರು. ನೊಯ್ಡಾ ಜಿಲ್ಲೆಯ ಮ್ಯಾಜಿಸ್ಟ್ರೇಟ್‌ ಆಗಿರುವ ಸುಹಾಸ್‌ ಚಿನ್ನದ ಪದಕ ಗೆಲ್ಲುವ ಭರವಸೆಯನ್ನು ಹೊಂದಿದ್ದಾರೆ. ಕಳೆದ ಸುತ್ತಿನ ಪಂದ್ಯಗಳ ಗೆಲುವಿನ ವಿಶ್ವಾಸದಲ್ಲಿ ಇಂದು ಕಣಕ್ಕೆ ಇಳಿದಿದ್ದ ಕನ್ನಡಿಗ ಸುಹಾಸ್‌ ಯತಿರಾಜ್‌ ಆರಂಭದಲ್ಲಿಯೇ ಮುನ್ನಡೆ ಗಳಿಸುವ ಮೂಲಕ ಇಂಡೋನೇಷ್ಯಾ ಆಟಗಾರನ ಮೇಲೆ ಒತ್ತಡ ಹೇರಿದ್ದರು. ಇದರ ಸಹಾಯದಿಂದ ಅಂತಿಮವಾಗಿ ಸುಹಾಸ್‌, 21-9 ಅಂತರದಲ್ಲಿ ಮೊದಲನೇ ಗೇಮ್‌ ಅನ್ನು ತಮ್ಮದಾಗಿಸಿಕೊಂಡರು. ನಂತರ ಎರಡನೇ ಗೇಮ್‌ಗೆ ಕಣಕ್ಕೆ ಇಳಿದಿದ್ದ ಸುಹಾಸ್‌ಗೆ ಸೆತಿವನ್ ಕಠಿಣ ಸವಾಲು ನೀಡಿದ್ದರು. ಇದರ ಹೊರತಾಗಿಯೂ ಭಾರತದ ಆಟಗಾರ ಮುನ್ನಡೆ ಗಳಿಸಿದ್ದರು. ಅಂತಿಮವಾಗಿ ಸುಹಾಸ್‌ ಯತಿರಾಜ್ 21-15 ಅಂಕಗಳ ಭಾರಿ ಅಂತರದಲ್ಲಿ ಗೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟರು. ಭಾರತದ ಮತ್ತೊಬ್ಬ ಬ್ಯಾಡ್ಮಿಂಟನ್‌ ಆಟಗಾರ ಮನೀಜ್‌ ಸರ್ಕಾರ್‌ ಅವರು ಮತ್ತೊಂದು ಪುರುಷರ ಎಸ್‌ಎಲ್3 ಸೆಮಿಫೈನಲ್‌ ಹಣಾಹಣಿಲ್ಲಿ ನೇರ ಗೇಮ್‌ಗಳಿಂದ ಸೋಲು ಅನುಭವಿಸಿದ್ದರು. ಗ್ರೇಟ್‌ ಬ್ರಿಟನ್‌ನ ಡೇನಿಯಲ್ ಬೆಥೆಲ್ ಅವರ ವಿರುದ್ಧ ಮನೋಜ್‌, 21-8 ಹಾಗೂ 21-10 ಭಾರಿ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ. ಸೆಮಿಫೈನಲ್‌ ಹಣಾಹಣಿಯಲ್ಲಿ ಸೋಲು ಅನುಭವಿಸಿರುವ ಮನೋಜ್‌ ಶನಿವಾರ ತಡವಾಗಿ ಕಂಚಿನ ಪದಕದ ಪಂದ್ಯದಲ್ಲಿ ಕಾದಾಟ ನಡೆಸಲಿದ್ದಾರೆ. ಇದಕ್ಕೂ ಮುನ್ನ ನಡೆದಿದ್ದ ಎಸ್‌ಎಲ್‌3 ಮತ್ತೊಂದು ಪುರುಷರ ಸೆಮಿಫೈನಲ್ ಹಣಾಹಣಿಯಲ್ಲಿ ಭಾರತದ ಮತ್ತೊಬ್ಬ ಆಟಗಾರ ಪ್ರಮೋದ್‌ ಭಗತ್‌ ಅವರು 21-11 ಹಾಗೂ 21-16 ರ ನೇರ ಗೇಮ್‌ಗಳಲ್ಲಿ ಜಪಾನ್‌ನ ಡೈಸೂಕ್‌ ಫುಜಿಹಾರ ವಿರುದ್ಧ ಗೆfದದು ಫೈನಲ್‌ ಪ್ರವೇಶ ಮಾಡಿದ್ದಾರೆ. ಆ ಮೂಲಕ ಭಾರತಕ್ಕೆ ಮತ್ತೊಂದು ಪದಕವನ್ನು ಖಚಿತಪಡಿಸಿದ್ದಾರೆ. ಇಂದು(ಶನಿವಾರ) ಇದಕ್ಕೂ ಮುನ್ನ ಭಾರತದ ಶೂಟರ್‌ಗಳಾದ ಹಾಗೂ ಸಿಂಗರಾಜ್ ಅಧಾನ ಅವರು ಪಿ4 ಮಿಶ್ರ 50ಮೀ ಪಿಸ್ತೂಲ್‌ ಎಸ್‌ಎಚ್‌1 ವಿಭಾಗದಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಮುಡಿಗೇರಿಕೊಂಡಿದ್ದರು. ಇಲ್ಲಿಯವರೆಗೆ ಭಾರತದ ಪದಕಗಳ ಸಂಖ್ಯೆ 15ಕ್ಕೇರಿದೆ. ಇದರಲ್ಲಿ 3 ಚಿನ್ನದ ಪದಕಗಳು, 7 ಬೆಳ್ಳಿ ಪದಕಗಳು ಹಾಗೂ 5 ಕಂಚಿನ ಪದಕಗಳು ಒಳಗೊಂಡಿವೆ. ಒಟ್ಟಾರೆ ಕ್ರೀಡಾಕೂಟದ ಪದಕಗಳ ಪಟ್ಟಿಯಲ್ಲಿ 34ನೇ ಸ್ಥಾನದಲ್ಲಿದೆ. ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿಯೇ ಭಾರತಕ್ಕೆ ಇಷ್ಟೊಂದು ಪದಕಗಳು ಬಂದಿರುವುದು ಇದೇ ಮೊದಲು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/38HbMt2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...