ಚಾಣಕ್ಯ ವಿವಿ ಮನುವಾದಿಗಳ ವಿಶ್ವವಿದ್ಯಾಲಯ ಆಗುತ್ತದೆ: ಭೂಮಿ ನೀಡುವ ನಿರ್ಧಾರಕ್ಕೆ ಸಿದ್ದರಾಮಯ್ಯ ವಿರೋಧ

ಬೆಂಗಳೂರು: ಚಾಣಕ್ಯ ವಿ.ವಿ ಮನುವಾದಿಗಳ ವಿಶ್ವವಿದ್ಯಾಲಯ ಆಗುತ್ತದೆ.‌ ಶ್ರೇಣೀಕೃತ ಸಮಾಜ ನಿರ್ಮಾಣ ಇವರ ಗುರಿ ಎಂದು ನನಗೆ ಅನ್ನಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರೋಪಿಸಿದರು. ವಿಧಾನಸೌಧದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಬಿಜೆಪಿ ಸರ್ಕಾರ ಆತುರದಿಂದ ವಿಧೇಯಕವನ್ನು ಧ್ವನಿ ಮತದಿಂದ ಚರ್ಚೆಗೆ ಅವಕಾಶ ಕೊಡದೆ ಅಂಗೀಕಾರ ಪಡೆದುಕೊಂಡಿದೆ. ಚಾಣಕ್ಯ ವಿವಿ ಸೆಂಟರ್ ಫಾರ್ ಎಜುಕೇಶನ್ ‌ಆಂಡ್ ಸೋಷಿಯಲ್ ಸ್ಟಡೀಸ್ ಸಂಸ್ಥೆಗೆ ಸೇರಿದ್ದು. ಈ ಸಂಸ್ಥೆಯಲ್ಲಿ ಇರುವವರು ಆರೆಸ್ಸೆಸ್‌ನವರು ಎಂದು ಆರೋಪ ಮಾಡಿದರು. ಟ್ರಸ್ಟಿಗಳ ಪೈಕಿ ಯಾರು ಕೂಡಾ ಶಿಕ್ಷಣ ಸಂಸ್ಥೆ ನಡೆಸುತ್ತಿಲ್ಲ. ಈ ಸಂಸ್ಥೆಗೆ ಬಿಜೆಪಿ ಸರ್ಕಾರ ಕ್ಯಾಬಿನೆಟ್ ನಿರ್ಣಯದ ಮೂಲಕ ಕೆಐಎಡಿಬಿಗೆ ಸೇರಿದ, ದೇವನಹಳ್ಳಿ ವಿಮಾನ ನಿಲ್ದಾಣದ ಹಿಂಭಾಗದಲ್ಲಿರುವ 116.16 ಎಕರೆ ಜಮೀನನ್ನು ಸೆಸ್ ಸಂಸ್ಥೆಗೆ ನೀಡಲು 28-4-21 ಕ್ಕೆ ಆದೇಶ ಆಗಿದೆ. ರೈತರಿಂದ ಪ್ರತಿ ಎಕರೆಗೆ 1.5 ಕೋಟಿ ಈ ಜಮೀನನ್ನು ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡಿದೆ. ಆದರೆ ಈ ಜಮೀನನ್ನು 50 ಕೋಟಿಗೆ ಸೆಸ್ ಸಂಸ್ಥೆಗೆ ನೀಡಿದ್ದಾರೆ. ರೈತರಿಗೆ 175 ಕೋಟಿ ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಪರಿಹಾರಕ್ಕಿಂತ ಮಾರಾಟ ಸಂದರ್ಭದಲ್ಲಿ ನಾಲ್ಕೈದು ಪಟ್ಟು ಬೆಲೆ ಹೆಚ್ಚಾಗಬೇಕು. ಇಂತಹ ಜಮೀನನ್ನು ಆರೆಸ್ಸೆಸ್‌ನವರಿಗೆ ಬಳುವಳಿಯಾಗಿ ಕೊಟ್ಟಿದ್ದಾರೆ. ನಿಯಮಾವಳಿಗಳ ಪ್ರಕಾರ ನಡೆಸಿಕೊಳ್ಳಲಿ. ಜಮೀನು ಕೊಡುವಾಗ ಮಾರುಕಟ್ಟೆ ಮೌಲ್ಯದ ಪ್ರಕಾರ ನೀಡಬೇಕು.‌ ಇದು ಮನುವಾದಿಗಳ ಯುನಿವರ್ಸಿಟಿ ಆಗುತ್ತದೆ. ಚಾಣಕ್ಯ ಕುಟುಂಬಕ್ಕೆ ಸೇರಿದವರು. ಇಂತವರ ಹೆಸರಿನಲ್ಲಿ ಅವರು ಎಂತಹ ಶಿಕ್ಷಣ ಸಂಸ್ಥೆ ತೆಗೆಯಬಹುದು? ಎಂದು ಪ್ರಶ್ನಿಸಿದರು. ಈ ವಿವಿ ಮೂಲಕ ಚಾತುವರ್ಣ ಶ್ರೇಣೀಕೃತ ವ್ಯವಸ್ಥೆ ಪುನರ್ ಸ್ಥಾಪಿಸಲು ಹೊರಟಿದ್ದಾರೆ ಎಂದು ಅನಿಸುತ್ತಿದೆ. ಸ್ಪೀಕರ್ ಕೂಡಾ ಇದಕ್ಕೆ ಮಹತ್ವ ಕೊಟ್ಟಿದ್ದಾರೆ. ಅವರು ಪಕ್ಷಾತೀತವಾಗಿ ಇರಬೇಕು. ಆದರೆ ಅವರು ನಡೆದುಕೊಂಡ ರೀತಿ ಪಕ್ಷತೀತವಾಗಿರಲಿಲ್ಲ. ಇದೊಂದು ಲೂಟಿಯಾಗಿದೆ ಹಾಗೂ ಸ್ವಜನಪಕ್ಷಪಾತವಾಗಿದೆ. ಬಿಲ್ ಭೂಮಿ ಹಂಚಿಕೆ ಆದೇಶ ರದ್ದು ಮಾಡಬೇಕು, ಖಾಸಗಿ ವಿವಿ ಮಾಡಲು ಅವಕಾಶ ಕೊಡಬಾರದು, ಅವರಿಗೆ ಯಾವುದೇ ಅರ್ಹತೆ ಇಲ್ಲ. ಸರ್ಕಾರದ ಆಸ್ತಿಯನ್ನು ಮನುವಾದಿಗಳಿಗೆ ಮಾರಾಟ ಮಾಡಿದ್ದು ಖಂಡನೀಯ. ಈ ನಿರ್ಣಯವನ್ನು ನಾವು ವಿರೋಧ ಮಾಡ್ತೀವಿ. ಹಾಗೆಯೇ ಈ ಬಗ್ಗೆ ಕಾನೂನಾತ್ಮಕವಾಗಿ ಹೋರಾಟ ಮಾಡ್ತೀವಿ ಎಂದರು. ಕೆಪಿಸಿಸಿ ಅಧ್ಯಕ್ಷ ಮಾತನಾಡಿ, ನಾನು ಕೂಡ ವಿದ್ಯಾಸಂಸ್ಥೆ ನಡೆಸುತ್ತೇನೆ. ಈಗಾಗಲೇ ಇರುವ ವಿದ್ಯಾಸಂಸ್ಥೆಗಳ ವಿಸ್ತರಣೆಗಾಗಿ ಜಮೀನು ನೀಡುವುದು ಬೇರೆ. ಆದರೆ ಇಲ್ಲಿ ಸಂಸ್ಥೆಯೇ ಇಲ್ಲದವರೆಗೆ ಜಮೀನು ನೀಡಲಾಗಿದೆ ಎಂದು ಆರೋಪಿಸಿದರು. ಏರೋ ಸ್ಪೇಸ್‌ಗಾಗಿ ಜಮೀನು ತೆಗೆದುಕೊಂಡು, ಎಕರೆಗೆ ಹತ್ತು ಕೋಟಿ ಮೌಲ್ಯದ ಜಮೀನನ್ನು ಇದೀಗ ಸೆಸ್ ಸಂಸ್ಥೆಗೆ ನೀಡಲಾಗಿದೆ. ಅನುಭವ ಇರುವವರಿಗೆ ನೀಡಲಿ, ಸರ್ಕಾರಿ ಜಾಗ ನೀಡಲಿ. ಆದರೆ ಕೈಗಾರಿಕಾ ಉದ್ದೇಶದಿಂದ ವಶಪಡಿಸಿಕೊಂಡ ಜಮೀನನ್ನು ಇವರಿಗೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಡಿಕೆಶಿ ಪ್ರಶ್ನಿಸಿದರು. ಆರೆಸ್ಸೆಸ್‌ಗೆ ಹಿಂಬಾಗಿಲಿನಿಂದ ಏಕೆ ಜಮೀನು ಕೊಡುತ್ತೀರಿ. ಕೊಡೋ ಹಾಗಿದ್ದರೆ ನೇರವಾಗಿಯೇ ಕೊಡಿ. ಇದು ಅಧಿಕಾರದ ದುರುಪಯೋಗವಾಗಿದೆ ಎಂದು ಆರೋಪ ಮಾಡಿದರು.


from India & World News in Kannada | VK Polls https://ift.tt/39GK2Fv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...