ಭಾರತದ ಕೋವಿಡ್ ಆರ್ ಮೌಲ್ಯ 1 ಕ್ಕಿಂತ ಕಡಿಮೆ, ಕೊರೊನಾ ಅಪಾಯ ಇಳಿಕೆ!

ಹೊಸದಿಲ್ಲಿ: ಮೂರನೇ ಕೊರೊನಾ ಅಲೆಯು ಅಪ್ಪಳಿಸುವ ಭೀತಿಯಲ್ಲಿರುವ ಜನರಿಗೆ ಸಮಾಧಾನಕರ ಸಂಗತಿಯೊಂದು ಸಿಕ್ಕಿದೆ. ದೇಶಾದ್ಯಂತ ಕೋವಿಡ್‌-19 ಸೋಂಕಿನ ಪ್ರಸರಣ ವೇಗ ತಗ್ಗಿದ್ದು, ಇದನ್ನು ಅಳೆಯಲಾಗುವ ರಿಪ್ರೊಡಕ್ಟಿವ್‌ ವ್ಯಾಲ್ಯೂ (ಆರ್‌-ವ್ಯಾಲ್ಯೂ) ಭಾರಿ ಇಳಿಕೆ ಕಂಡು 0.92 ದಾಖಲಾಗಿದೆ. ಈ ಸಂಖ್ಯೆಯು '1'ಕ್ಕಿಂತ ಕಡಿಮೆ ಆದಲ್ಲಿಅಪಾಯದ ಭೀತಿಯಿಂದ ಪಾರಾದಂತೆ ಎಂದು ವಿಜ್ಞಾನಿಗಳು ಮತ್ತು ಸಂಶೋಧಕರು ಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ರಾಜಧಾನಿ ದಿಲ್ಲಿ, ಕೇರಳ ಮತ್ತು ಪುಣೆಯಲ್ಲಿ ಆಗಸ್ಟ್‌ ಅಂತ್ಯದಲ್ಲಿ ಕಡಿಮೆ ಆರ್‌-ವ್ಯಾಲ್ಯೂ ವರದಿ ಆಗಿದೆ. ಬಹಳ ಮುಖ್ಯವಾಗಿ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೊನಾ ಸೋಂಕಿನ ವೇಗ ತಗ್ಗಿರುವುದು ಮೂರನೇ ಅಲೆಯ ಆತಂಕವನ್ನು ದೂರ ಮಾಡಿದೆ ಎಂದು ಚೆನ್ನೈನ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾಥಮೆಟಿಕಲ್‌ ಸೈನ್ಸಸ್‌ನ ತಜ್ಞರಾದ ಸಿತಾಭ್ರ ಸಿನ್ಹಾ ಅವರು ಹೇಳಿದ್ದಾರೆ. ದೇಶಾದ್ಯಂತ ಆರ್‌-ವ್ಯಾಲ್ಯೂ ಲೆಕ್ಕಾಚಾರದ ಉಸ್ತುವಾರಿ ವಹಿಸಿಕೊಂಡಿರುವ ಸಂಶೋಧಕರ ತಂಡದ ನೇತೃತ್ವವನ್ನು ಸಿನ್ಹಾ ವಹಿಸಿದ್ದಾರೆ. ಇನ್ನೊಂದೆಡೆ, ಕಳೆದ 88 ದಿನಗಳಿಂದ ಪ್ರತಿ ವಾರದ ಪಾಸಿಟಿವಿಟಿ ಪ್ರಮಾಣವು ಶೇ. 3ಕ್ಕಿಂತ ಕಡಿಮೆ ಇರುವುದು ಕೂಡ ಕೊರೊನಾ ಇಳಿಮುಖವಾಗುತ್ತಿರುವ ಸಂಕೇತ ಎನ್ನಲಾಗಿದೆ. ಬೆಂಗಳೂರು, ಮುಂಬಯಿನಲ್ಲಿ ಎಚ್ಚರಿಕೆಬೆಂಗಳೂರಿನಲ್ಲಿ 1.06, ಮುಂಬಯಿನಲ್ಲಿ 1.09, ಕೋಲ್ಕೊತಾದಲ್ಲಿ 1.04 ಮತ್ತು ಚೆನ್ನೈನಲ್ಲಿ ಆರ್‌-ವ್ಯಾಲ್ಯೂ 1.11 ದಾಖಲಾಗಿದೆ. ಇದು ಸ್ವಲ್ಪ ಮಟ್ಟದಲ್ಲಿ ಎಚ್ಚರಿಕೆ ವಹಿಸಲು ಸೂಚಿಸುವ ಸಂಖ್ಯೆ ಆಗಿದೆ. ಹಾಗಾಗಿ ಜನರು ಕೊರೊನಾ ಮುನ್ನೆಚ್ಚರಿಕೆಗಳನ್ನು ಕಡೆಗಣಿಸುವಂತಿಲ್ಲ. ಕೊರೊನಾ ಎರಡನೇ ಅಲೆಯ ಆರ್ಭಟದ ವೇಳೆ ( 2021ರ ಮಾರ್ಚ್, ಏಪ್ರಿಲ್‌) ದೇಶಾದ್ಯಂತ ಆರ್‌-ವ್ಯಾಲ್ಯೂ '1.37' ಇತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸರಾಸರಿಯಾಗಿ ಎಷ್ಟು ಜನರು ಕೊರೊನಾ ಸೋಂಕಿನಿಂದ ಬಾಧಿತರಾಗಿದ್ದಾರೆ ಎನ್ನುವುದನ್ನು 'ಆರ್‌' ಅಥವಾ ಆರ್‌-ವ್ಯಾಲ್ಯೂ ತಿಳಿಸುತ್ತದೆ.


from India & World News in Kannada | VK Polls https://ift.tt/3lOPEmE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...