ಹೊಸದಿಲ್ಲಿ: ಜುಲೈ ತಿಂಗಳಿನಲ್ಲಿ 1.16 ಲಕ್ಷ ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗಿದ್ದು, ದೇಶದ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿರುವುದರ ಸಂಕೇತವಾಗಿದೆ ಎಂದು ಕೇಂದ್ರ ತಿಳಿಸಿದೆ. ಜುಲೈನಲ್ಲಿ 1,16,393 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಇದರಲ್ಲಿ ರಾಜ್ಯಗಳ ಜಿಎಸ್‌ಟಿ 28,541 ಕೋಟಿ ರೂ., ಕೇಂದ್ರ ಜಿಎಸ್‌ಟಿ 22,197 ಕೋಟಿ ರೂ., ಆಮದು ಪದಾರ್ಥಗಳ ಮೇಲೆ ವಿಧಿಸುವ ತೆರಿಗೆ ಸೇರಿದಂತೆ ಏಕೀಕೃತ ಜಿಎಸ್‌ಟಿ 57,864 ಕೋಟಿ ರೂ. ಸೇರಿದೆ. ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಶೇ.33ರಷ್ಟು ಹೆಚ್ಚು ಸಂಗ್ರಹವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿಇದು ಎರಡನೇ ಗರಿಷ್ಠ ಸಂಗ್ರಹವಾಗಿದೆ. ಏಪ್ರಿಲ್ ತಿಂಗಳಿನಲ್ಲಿ1.41 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. ಕೊರೊನಾ ಎರಡನೇ ಅಲೆ ಆರಂಭವಾಗುವುದಕ್ಕೂ ಮೊದಲು ಸತತ 8 ತಿಂಗಳ ಕಾಲ ಪ್ರತಿ ತಿಂಗಳೂ ಲಕ್ಷ ಕೋಟಿ ರೂ.ಗೂ ಅಧಿಕ ಜಿಎಸ್‌ಟಿ ಸಂಗ್ರಹವಾಗಿದೆ. ಎರಡನೇ ಅಲೆಯಿಂದ ಬಹುತೇಕ ರಾಜ್ಯಗಳು ಲಾಕ್‌ಡೌನ್‌ನಂತಹ ಕ್ರಮಗಳನ್ನು ಘೋಷಿಸಿದ್ದರಿಂದಾಗಿ ಮೇ ತಿಂಗಳಿನಲ್ಲಿ1.02 ಲಕ್ಷ ಕೋಟಿಗೆ ಕುಸಿದ ಜಿಎಸ್‌ಟಿ ಸಂಗ್ರಹವು ಜೂನ್ ತಿಂಗಳಿನಲ್ಲಿ ಮಾತ್ರ ಕುಸಿತ ಕಂಡು 92,849 ಕೋಟಿ ರೂ. ಸಂಗ್ರಹವಾಗಿದೆ. ಜುಲೈನಲ್ಲಿ ಉತ್ತಮ ಚೇತರಿಕೆ ಕಂಡುಬಂದಿದೆ ಎಂದು ಸಚಿವಾಲಯ ವಿವರಿಸಿದೆ.
from India & World News in Kannada | VK Polls https://ift.tt/3rKRGqm