ಭಾರತದಲ್ಲಿ ಬೆಲೆ ಏರಿಕೆಗೆ ಜವಾಹರ್‌ಲಾಲ್‌ ನೆಹರೂ ಮಾಡಿದ ಭಾಷಣ ಕಾರಣ; ಮ.ಪ್ರದೇಶ ಸಚಿವ

ಹೊಸದಿಲ್ಲಿ: ಭಾರತದಲ್ಲಿ ಆರ್ಥಿಕ ಸ್ಥಿತಿ ಹದಗೆಡಲು ಮತ್ತು ಬೆಲೆ ಏರಿಕೆಗೆ ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್‌ ನೆಹರು ಅವರು 1947ರ ಆಗಸ್ಟ್‌ 15ರಂದು ಮಾಡಿದ ತಪ್ಪು ಭಾಷಣವೇ ಕಾರಣ ಎಂದು ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್‌ ಸಾರಂಗ್ ಅವರು ಹೇಳಿದ್ದಾರೆ. ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ನೀಡಿರುವ ಈ ಹೇಳಿಕೆಯ ವಿಡಿಯೋ ಇದೀಗ ಸಿಕ್ಕಾಪಟ್ಟೆ ಟ್ರೋಲ್‌ ಆಗುತ್ತಿದ್ದು, ಸಾರ್ವಜನಿಕರಿಂದ ಟೀಕೆಗೂ ಗುರಿಯಾಗಿದ್ದಾರೆ. ಮಧ್ಯಪ್ರದೇಶದ ಸರ್ಕಾರದ ವಕ್ತಾರರೂ ಆಗಿರುವ ವಿಶ್ವಾಸ್‌ ಸಾರಂಗ್, ಭೋಪಾಲದಲ್ಲಿ ಸುದ್ದಿಗಾರರ ಜೊತೆ ಮಾತನಾಡುವ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿ, ದೇಶದಲ್ಲಿ ಆರ್ಥಿಕ ಕುಸಿತ ಮತ್ತು ಬೆಲೆ ಏರಿಕೆಗೆ ಮೊದಲ ಪ್ರಧಾನಿ ನೆಹರೂ ಅವರು 1947ರ ಆಗಸ್ಟ್‌ 15ರಂದು ಮಾಡಿದ ತಪ್ಪು ಭಾಷಣವೇ ಕಾರಣ ಎಂದಿದ್ದರು. ಅಲ್ಲದೇ, ದೇಶದಲ್ಲಿ ಆಗಿರೋದು ಇತ್ತೀಚೆಗೆ ಅಲ್ಲ. ಅಥವಾ ಇತ್ತೀಚೆಗೆ ಆರ್ಥಿಕತೆಯ ಬುನಾದಿ ನಿರ್ಮಾಣಗೊಂಡಿದ್ದಲ್ಲ. ಈ ಹಿಂದಿನಿಂದಲೂ ಬೆಲೆ ಏರಿಕೆ ಆಗುತ್ತಾ ಬಂದಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಮೊದಲ ದಿನದಂದು ಆಗಿನ ಪ್ರಧಾನಿ ನೆಹರೂ ಅವರು ಕೆಂಪುಕೋಟೆಯಲ್ಲಿ ಮಾಡಿದ ತಪ್ಪು ಭಾಷಣ ದೇಶದಲ್ಲಿ ಆರ್ಥಿಕತೆಯ ಹಳಿ ತಪ್ಪು ಕಾರಣವಾಗಿತ್ತು ಎಂದು ಹೇಳಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವರೊಬ್ಬರು ನೀಡಿದ ಈ ಬೇಜವಾಬ್ದಾರಿ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವಿಪಕ್ಷ ಮತ್ತು ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗುತ್ತಿದೆ.


from India & World News in Kannada | VK Polls https://ift.tt/3ykNsbB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...