ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿಯ ಬೆಲೆ ಹೇಗಿದೆ? ಇಲ್ಲಿದೆ ದರ ವಿವರ

ಬೆಂಗಳೂರು: ಕಳೆದ ಕೆಲ ವಾರಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಲೇ ಬಂದಿದ್ದ , ಆಭರಣಪ್ರಿಯರಿಗೆ ನಿರಾಸೆ ಮೂಡಿಸಿತ್ತು. ಈ ವಾರ ಬಂಗಾರ ಪ್ರಿಯರು ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ. ಇಂದು ಗುರುವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ₹4,795 ದಾಖಲಾಗಿದೆ. ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು (ಗುರುವಾರ) ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ₹44,800 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹48,880 ರೂಪಾಯಿ ದಾಖಲಾಗಿದೆ. ಬೆಳ್ಳಿ ದರ:ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ ₹67,600 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹67,600 ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿ ₹72,300 ರೂ ನಿಗದಿಯಾಗಿದೆ. ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ:ಬೆಂಗಳೂರು: ₹44,800 (22 ಕ್ಯಾರಟ್‌) ₹48,880 (24 ಕ್ಯಾರಟ್‌) ಚೆನ್ನೈ: ₹45,260 (22 ಕ್ಯಾರಟ್‌) ₹49,380 (24 ಕ್ಯಾರಟ್‌) ದಿಲ್ಲಿ: ₹47,040 (22 ಕ್ಯಾರಟ್‌), ₹51,320 (24 ಕ್ಯಾರಟ್‌) ಹೈದರಾಬಾದ್‌: ₹44,800 (22 ಕ್ಯಾರಟ್‌) ₹48,880 (24 ಕ್ಯಾರಟ್‌) ಕೋಲ್ಕತಾ: ₹47,290 (22 ಕ್ಯಾರಟ್‌), ₹49,990 (24 ಕ್ಯಾರಟ್‌) ಮಂಗಳೂರು: ₹44,800 (22 ಕ್ಯಾರಟ್‌) ₹48,880 (24 ಕ್ಯಾರಟ್‌) ಮುಂಬಯಿ: ₹46,950(22 ಕ್ಯಾರಟ್‌), ₹47,950 (24 ಕ್ಯಾರಟ್‌ ಮೈಸೂರು: ₹44,800 (22 ಕ್ಯಾರಟ್‌) ₹48,880 (24 ಕ್ಯಾರಟ್‌) ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಇಂದು ಬೆಳಗ್ಗಿನ ವೇಳೆಗೆ ಹಳದಿ ಲೋಹದ ಬೆಲೆಯಲ್ಲಿ ಕೆಲವಡೆ ಏರಿಳಿಕೆ ಕಂಡುಬಂದಿದ್ದರೆ, ಬೆಳ್ಳಿ ಬೆಲೆಯಲ್ಲಿಯೂ ಕೆಲವೆಡೆ ಇಳಿಕೆ ಕಂಡು ಉಳಿದೆಡೆ ಏಕರೂಪವಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.


from India & World News in Kannada | VK Polls https://ift.tt/3rUeNPi

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...