ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಹಸರಂಗ ಸೇರುವ ಸಾಧ್ಯತೆ!

ಬೆಂಗಳೂರು: ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಎರಡನೇ ಚರಣ ಸೆಪ್ಟೆಂಬರ್‌ 19ಕ್ಕೆ ಯುನೈಟೆಡ್‌ ಅರಬ್‌ ಎಮಿರೈಟ್ಸ್‌ (ಯುಎಇ) ಆತಿಥ್ಯದಲ್ಲಿ ಶುರುವಾಗಲಿದ್ದು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಬದಲಿ ಆಟಗಾರನಾಗಿ ಶ್ರೀಲಂಕಾದ ಆಲ್‌ರೌಂಡರ್‌ ಅವರನ್ನು ತೆಗೆದುಕೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ. ಟೀಮ್ ಇಂಡಿಯಾ ವಿರುದ್ಧ ಇತ್ತೀಚೆಗೆ ಅಂತ್ಯಗೊಂಡ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ ಮಿಂಚಿದ ಆಲ್‌ರೌಂಡರ್‌ ಹಸರಂಗ, ಗರಿಷ್ಠ ವಿಕೆಟ್‌ ಟೇಕರ್‌ ಎನಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ 3ನೇ ಮತ್ತು ಅಂತಿಮ ಪಂದ್ಯದಲ್ಲಿ 9 ರನ್‌ಗೆ 4 ವಿಕೆಟ್‌ ಪಡೆದು ಭಾರತ ತಂಡದ ಬ್ಯಾಟಿಂಗ್‌ ಬಲವನ್ನೇ ಅಡಗಿಸಿಬಿಟ್ಟಿದ್ದರು. ಇದೀಗ ಯುಎಇ ಆತಿಥ್ಯದಲ್ಲಿ ಐಪಿಎಲ್‌ ನಡೆಯಲಿದ್ದು, ಅಲ್ಲಿನ ಪಿಚ್‌ಗಳು ಸ್ಪಿನ್ನರ್‌ಗಳಿಗೆ ನೆರವಾಗಲಿದೆ. ಹೀಗಾಗಿ ತಂಡಕ್ಕೆ ಬದಲಿ ಆಟಗಾರನಾಗಿ ಪರಿಣತ ಸ್ಪಿನ್ನರ್‌ ಒಬ್ಬನ ಕರೆತರುವುದು ರಾಯಲ್ ಚಾಲೆಂಜರ್ಸ್‌ ತಂಡದ ಲೆಕ್ಕಾಚಾರವಾಗಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ () ಬಳಿ ಅನುಮತಿಯನ್ನೂ ಕೇಳಿದೆ. ಟೂರ್ನಿಯ ಮೊದಲ ಚರಣದ ವೇಳೆ ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಆರ್‌ಸಿಬಿ ತಂಡದ ಲೆಗ್‌ ಸ್ಪಿನ್ನರ್‌ ಆಸ್ಟ್ರೇಲಿಯಾದ ಆಡಮ್‌ ಝಾಂಪ ತಂಡದಿಂದ ಹೊರಗುಳಿದರು. ಅಷ್ಟೇ ಅಲ್ಲದೆ ಎರಡನೇ ಚರಣಕ್ಕೂ ಝಾಂಪ ಅಲಭ್ಯರಾಗಿದ್ದು, ಅವರ ಸ್ಥಾನಕ್ಕೆ ಹಸರಂಗ ಅವರನ್ನು ಕರೆತರಲು ಆರ್‌ಸಿಬಿ ಪ್ರಯತ್ನ ಮಾಡುತ್ತಿದೆ. ಭಾರತ ವಿರುದ್ಧದ ಟಿ20 ಸರಣಿಯಲ್ಲಿ ಒಟ್ಟು 7 ವಿಕೆಟ್‌ ಪಡೆದ ಹಸರಂಗ, ಇದಕ್ಕೂ ಮುನ್ನ 3 ಪಂದ್ಯಗಳ ಏಕದಿನ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ್ದರು. ಬ್ಯಾಟಿಂಗ್‌ನಲ್ಲಿ 100 ರನ್‌ ಮತ್ತು 3 ವಿಕೆಟ್‌ ಕೂಡ ಪಡೆದಿದ್ದರು. ಇದೀಗ ಟಿ20 ಕ್ರಿಕೆಟ್‌ನಲ್ಲಿ ವಿಶ್ವದ 2ನೇ ಶ್ರೇಯಾಂಕಿತ ಬೌಲರ್‌ ಎಂದೂ ಕರೆಸಿಕೊಂಡಿದ್ದಾರೆ. ಹಸರಂಗಗೆ ಮುರಳೀಧರನ್ ಬೆಂಬಲ"ಐಪಿಎಲ್‌ ಫ್ರಾಂಚೈಸಿ ತಂಡ ಹಸರಂಗ ಕಡೆಗೆ ಕಣ್ಣಾಯಿಸಬೇಕು. ಒಂದು ವೇಳೆ ಹಸರಂಗ ಅವರನ್ನು ಖರೀದಿಸಿದರೂ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಮಾಡಿಕೊಡುವುದು ಕೊಂಚ ಕಷ್ಟವಾಗಲಿದೆ. ಏಕೆಂದರೆ ಬಹುತೇಕ ತಂಡಗಳು ವಿದೇಶಿ ಸ್ಪಿನ್ನರ್‌ ಬದಲಿಗೆ ಸ್ವದೇಶಿ ಸ್ಪಿನ್ನರ್‌ಗಳನ್ನು ನೆಚ್ಚಿಕೊಂಡಿವೆ," ಎಂದು ಮುರಳೀಧರನ್‌ ಹೇಳಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3C67Yif

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...