ಇವರೇ ನೋಡಿ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್‌ನ ನೂತನ ಸಚಿವರು..! ಹೊಸ ಮಂತ್ರಿಗಳ ಸಂಪೂರ್ಣ ಪಟ್ಟಿ..!

ಮುಖ್ಯಮಂತ್ರಿ ನೇತೃತ್ವದ ಸಚಿವ ಸಂಪುಟಕ್ಕೆ ಸೇರುವವರ ಪಟ್ಟಿ ಅಂತಿಮವಾಗಿದೆ. ನೂತನ ಸಚಿವರ ಪಟ್ಟಿ ಬಿಡುಗಡೆಯಾಗಿದ್ದು, ಒಟ್ಟು 29 ಮಂದಿ ನೂತನ ಸಚಿವರಾಗಿ ಮಧ್ಯಾಹ್ನ 2.15ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ತಾವರ್‌ ಚಂದ್‌ ಗೆಹ್ಲೋಟ್‌ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಈ ಸಲ ಉಪ ಮುಖ್ಯಮಂತ್ರಿ ಹುದ್ದೆಯನ್ನು ಯಾರಿಗೂ ನೀಡಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ 8 ಲಿಂಗಾಯಿತ, 7 ಒಬಿಸಿ, 7 ಒಕ್ಕಲಿಗ, 3 ದಲಿತ, ಇಬ್ಬರು ಬ್ರಾಹ್ಮಣ, ತಲಾ 1 ಎಸ್‌ಟಿ, ರೆಡ್ಡಿ ಹಾಗೂ ಮಹಿಳೆಗೆ ಸ್ಥಾನ ಸಿಕ್ಕಿದೆ. ಹಿರಿಯ ನಾಯಕರಾದ ಕೆಎಸ್‌ ಈಶ್ವರಪ್ಪ, ಆರ್‌ ಅಶೋಕ್‌, ಗೋವಿಂದ ಕಾರಜೋಳ ಅವರಿಗೆ ಸಚಿವ ಸ್ಥಾನ ನೀಡಲಾಗಿದ್ದು, ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರಿಗೂ ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ಮಿನಿಸ್ಟರ್‌ ಪೋಸ್ಟ್‌ ನೀಡಿಲ್ಲ. ಇನ್ನು, ಮಾಜಿ ಡಿಸಿಎಂ ಲಕ್ಷ್ಮಣ್‌ ಸವದಿ, ಸುರೇಶ್‌ ಕುಮಾರ್‌, ಆರ್.ಶಂಕರ್, ಸಿ.ಪಿ.ಯೋಗೀಶ್ವರ್, ಅರವಿಂದ್ ಲಿಂಬಾವಳಿ, ಶ್ರೀಮಂತ ಪಾಟೀಲ್ ಹಾಗೂ ಜಗದೀಶ್ ಶೆಟ್ಟರ್ ಅವರನ್ನು ಸಂಪುಟದಿಂದ ಹೊರಗಿಡಲಾಗಿದೆ. ನೂತನ ಸಚಿವರ ಪಟ್ಟಿ ಹೀಗಿದೆ:
ಕ್ರ.ಸಂಖ್ಯೆ ನೂತನ ಸಚಿವರು ಕ್ಷೇತ್ರ ಜಾತಿ
1 ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಕುರುಬ
2 ಆರ್.ಅಶೋಕ್ ಪದ್ಮನಾಭನಗರ ಒಕ್ಕಲಿಗ
3 ಬಿಸಿ ಪಾಟೀಲ್ ಹಿರೇಕೇರೂರು ಲಿಂಗಾಯಿತ
4 ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಲ್ಲೇಶ್ವರ ಒಕ್ಕಲಿಗ
5 ಬಿ.ಶ್ರೀ ರಾಮುಲು ಮೊಳಕಾಲ್ಮೂರು ವಾಲ್ಮೀಕಿ
6 ಉಮೇಶ್ ಕತ್ತಿ ಹುಕ್ಕೇರಿ ಲಿಂಗಾಯಿತ
7 ಎಸ್.ಟಿ.ಸೋಮಶೇಖರ್ ಯಶವಂತಪುರ ಒಕ್ಕಲಿಗ
8 ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ಒಕ್ಕಲಿಗ
9 ಬೈರತಿ‌ ಬಸವರಾಜ ಕೆಆರ್‌ ಪುರಂ ಕುರುಬ
10 ಮುರುಗೇಶ್ ನಿರಾಣಿ ಬೀಳಗಿ ಲಿಂಗಾಯಿತ
11 ಶಿವರಾಂ ಹೆಬ್ಬಾರ್ ಯಲ್ಲಾಪುರ ಬ್ರಾಹ್ಮಣ
12 ಶಶಿಕಲಾ ಜೊಲ್ಲೆ ನಿಪ್ಪಾಣಿ ಲಿಂಗಾಯಿತ
13 ಕೆಸಿ ನಾರಾಯಣಗೌಡ ಕೆ‌ಆರ್ ಪೇಟೆ ಒಕ್ಕಲಿಗ
14 ಸುನೀಲ್ ಕುಮಾರ್ ಕಾರ್ಕಳ ಬಿಲ್ಲವ
15 ಅರಗ ಜ್ಞಾನೇಂದ್ರ ತೀರ್ಥಹಳ್ಳಿ ಒಕ್ಕಲಿಗ
16 ಗೋವಿಂದ ಕಾರಜೋಳ ಮುಧೋಳ ದಲಿತ
17 ಮುನಿರತ್ನ ರಾಜರಾಜೇಶ್ವರಿ ನಗರ ನಾಯ್ಡು
18 ಎಂ.ಟಿ.ಬಿ ನಾಗರಾಜ್ ವಿಧಾನ ಪರಿಷತ್‌ ಸದಸ್ಯ ಕುರುಬ
19 ಗೋಪಾಲಯ್ಯ ಮಹಾಲಕ್ಷ್ಮಿ ಲೇಔಟ್ ಒಕ್ಕಲಿಗ
20 ಮಾಧುಸ್ವಾಮಿ ಚಿಕ್ಕನಾಯಕನಹಳ್ಳಿ ಲಿಂಗಾಯಿತ
21 ಹಾಲಪ್ಪ ಆಚಾರ್ ಯಲಬುರ್ಗಾ ರೆಡ್ಡಿ
22 ಶಂಕರ್ ಪಾಟೀಲ್ ಮುನೇನಕೊಪ್ಪ ನವಲುಗುಂದ ಲಿಂಗಾಯಿತ
23 ಕೋಟಾ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್‌ ಸದಸ್ಯ ಬಿಲ್ಲವ
24 ಪ್ರಭು ಚವ್ಹಾಣ್‌ ಔರಾದ್‌ ಮರಾಠ
25 ವಿ ಸೋಮಣ್ಣ ಗೋವಿಂದರಾಜನಗರ ಲಿಂಗಾಯಿತ
26 ಎಸ್ ಅಂಗಾರ ಸುಳ್ಯ ದಲಿತ
27 ಆನಂದ್ ಸಿಂಗ್ ವಿಜಯನಗರ ರಜಪೂತ್‌
28 ಸಿಸಿ‌ ಪಾಟೀಲ್ ನರಗುಂದ ಲಿಂಗಾಯಿತ
29 ಬಿಸಿ ನಾಗೇಶ್ ತಿಪಟೂರು ಬ್ರಾಹ್ಮಣ


from India & World News in Kannada | VK Polls https://ift.tt/3jiv4K9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...