ಓದುವ ಹಸಿವಿಗೆಲ್ಲಿದೆ ಬಡತನ; ದೇಗುಲದ ಮುಂದೆ ತೆಂಗು ಮಾರಿ ಆನ್‌ಲೈನ್‌ ಕ್ಲಾಸ್‌ ಕೇಳೋ ಛಲಗಾತಿ ಈಕೆ

ಸಂಗಮೇಶ ಟಿ. ಚೂರಿ ವಿಜಯಪುರ: ಹೆಸರು ಕಾವ್ಯಾ ಅರಮನಿ. ಆದರೆ ಕಿತ್ತು ತಿನ್ನುವ ಬಡತನ. ಆದಾಗ್ಯೂ ಓದಿನ ಹಸಿವು ಹಿಂಗಿಸಿಕೊಳ್ಳಬೇಕೆಂಬ ಅದಮ್ಯ ಆಸೆಯಿಂದ ಈಕೆ ಆಯ್ಕೆ ಮಾಡಿಕೊಂಡಿದ್ದು ಬೀದಿ ಬದಿಯಲ್ಲಿ ತೆಂಗು, ಹಾರ ಮಾರಾಟ. ಅದೇ ಬೀದಿ ಎಂಬ ಅರಮನೆಯಲ್ಲಿ ಕುಳಿತು ಆನ್‌ಲೈನ್‌ ಕ್ಲಾಸ್‌ ಅಟೆಂಡ್‌ ಮಾಡೋ ಮೂಲಕ ಸಾರ್ವಜನಿಕರ ಗಮನಸೆಳೆದಿದ್ದಾಳೆ. ಮೂಲತಃ ಮುದ್ದೇಬಿಹಾಳ ತಾಲೂಕಿನ ವಡ್ಡೋಡಗಿ ಗ್ರಾಮದ ಎಂಬ ವಿದ್ಯಾರ್ಥಿನಿಯೇ ಕೊರೊನಾ ಸಂಕಷ್ಟದಲ್ಲೂಈ ಸಾಹಸಕ್ಕಿಳಿದ ಛಲಗಾರ್ತಿ. ತನ್ಮೂಲಕ ಬೀದಿ-ಬದಿಯಲ್ಲಿ ವಹಿವಾಟಿನೊಂದಿಗೆ ಓದು ಮುಂದುವರಿಸುವ ಮೂಲಕ ಅನುಕೂಲಸ್ಥ ಯುವತಿಯರಿಗೆ ಈಕೆ ಮೇಲ್ಪಂಕ್ತಿಯಾಗಿದ್ದಾಳೆ. ಕೊರೊನಾ ಹೆಮ್ಮಾರಿ ವಕ್ಕರಿಸಿದಂದಿನಿಂದ ಪ್ರತಿಯೊಬ್ಬರ ಬದುಕು ಅತಂತ್ರವಾಗಿದೆ. ಇದಕ್ಕೆ ಈಕೆಯೂ ಹೊರತಾಗಿಲ್ಲ. ವರ್ಷದವಳಿದ್ದಾಗಲೇ ತಂದೆ ಕಳೆದುಕೊಂಡು ತಬ್ಬಲಿ. ಆದಾಗ್ಯೂ ಓದಬೇಕೆಂಬ ತುಡಿತ. ಆದರೆ ಕಾಲೇಜ್‌ ಶುಲ್ಕ ಭರಿಸಲಾಗದೇ ದುಃಸ್ಥಿತಿ. ಇದಕ್ಕೆ ಈಕೆ ಆಯ್ದುಕೊಂಡಿದ್ದೇ ದೇವಸ್ಥಾನ ಮುಂಭಾಗದಲ್ಲಿ ತೆಂಗು, ಹಾರ ಮಾರಾಟ. ಅದರಿಂದ ಬಂದ ಹಣದಲ್ಲಿ ಕಾಲೇಜ್‌ ಶುಲ್ಕ ಭರಿಸಿ, ಆನ್‌ಲೈನ್‌ ಕ್ಲಾಸ್‌ ಅಟೆಂಡ್‌ ಮಾಡುವುದರೊಟ್ಟಿಗೆ ಓದು ಮುಂದುವರಿಸಿದ್ದಾಳೆ. ಇರುವುದೆಲ್ಲಿ: ಓದಬೇಕೆಂಬ ಅಮಿತೋತ್ಸಾಹದಿಂದ ಈ ಬಾಲೆ ಗ್ರಾಮ ತೊರೆದು, ವಿಜಯಪುರದ ದೊಡ್ಡಮ್ಮನ ಮನೆಯಲ್ಲಿ ತಂಗಿದ್ದಾಳೆ. ಕಾಲೇಜ್‌ ಹಾಗೂ ಉಪಜೀವನದ ಖರ್ಚು ತೆಗೆಯಲು ಕಾವ್ಯಾ ನಗರದ ವಜ್ರಹನುಮಾನ ದೇವಸ್ಥಾನದ ಮುಂಭಾಗದಲ್ಲಿ ಬೀದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಲೇ ವಿದ್ಯಾಭ್ಯಾಸ ಮಾಡುತ್ತಿರುವುದು ಆಕೆಗಿರುವ ಓದಿನ ಆಸಕ್ತಿಗೆ ಸಾಕ್ಷಿಯಾಗಿದೆ. ಜಗಜ್ಯೋತಿ ಬಸವೇಶ್ವರ ಕಾಲೇಜ್‌ : ಪುಲಿಕೇಶಿ ನಗರದಲ್ಲಿರುವ ಶ್ರೀ ಜಗಜ್ಯೋತಿ ಬಸವೇಶ್ವರ ಪಪೂ ಕಾಲೇಜ್‌ನಲ್ಲಿ ದ್ವಿತೀಯ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿರುವ ಈಕೆ, ಇದೇ ಸಂಸ್ಥೆಯಲ್ಲಿಎಸ್ಸೆಸ್ಸೆಲ್ಸಿಯಲ್ಲಿ ಶೇ. 68 ರಷ್ಟು ಅಂಕ ಗಳಿಸಿದ್ದಾಳೆ. ಬಳಿಕ ವಿಜ್ಞಾನ ಓದಬೇಕೆಂಬ ಕನಸಿತ್ತು. ಆದರೆ ಅದಕ್ಕೆ ಅಷ್ಟೊಂದು ಹಣ ಪೇರಿಸುವುದಾಗಲ್ಲ ಎಂಬ ಕಾರಣಕ್ಕೆ ವಾಣಿಜ್ಯ ವಿಭಾಗ ಆಯ್ಕೆ ಮಾಡಿಕೊಂಡು, ಸ್ವತಃ ದುಡಿಯುವ ಮೂಲಕ ಓದುತ್ತಿರುವ ಗಟ್ಟಿಗಿತ್ತಿಯಾಗಿದ್ದಾಳೆ. ಸಹಾಯಕ್ಕೆ ದೊಡ್ಡಮ್ಮ : ದೊಡ್ಡಪ್ಪ ಕಾವ್ಯಾಳ ವಹಿವಾಟಿಗೆ ಮಾರ್ಗದರ್ಶಕನಾಗಿದ್ದ. ಆದರೆ ಅವರು ತೀರಿದ್ದರಿಂದ ದೊಡ್ಡಮ್ಮನೇ ಕಾವ್ಯಾಳ ವಹಿವಾಟಿಗೆ ಸಾಥ್‌ ನೀಡಿದ್ದು ವಿಶೇಷ. ವಿದ್ಯಾಭ್ಯಾಸಕ್ಕೆ ಸಕಲ ಸೌಲಭ್ಯಗಳಿದ್ದರೂ, ಓದಿನಿಂದ ವಿಮುಖರಾಗುವ ಮಕ್ಕಳಿಗೆ ಕಾವ್ಯಾಳ ಬದುಕು ದಿಕ್ಸೂಚಿಯಾಗಬಹುದಲ್ಲವೇ?


from India & World News in Kannada | VK Polls https://ift.tt/3rLnE61

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...