ಕುಸ್ತಿ ವಿಭಾಗದಲ್ಲಿ ಸೆಮಿಫೈನಲ್‌ ತಲುಪಿದ ರವಿ ದಹಿಯಾ, ದೀಪಕ್‌ ಪೂನಿಯಾ!

ಟೋಕಿಯೋ: ಭಾರತದ ಹಾಗೂ ದೀಪಕ್ ಪೂನಿಯಾ ಅವರು ಟೋಕಿಯೋ ಒಲಿಂಪಿಕ್ಸ್ ಪುರುಷರ ಕುಸ್ತಿ ಫ್ರೀ ಸ್ಟೈಲ್‌ ಕ್ರಮವಾಗಿ 57 ಮತ್ತು 86 ಕೆಜಿ ವಿಭಾಗಗಳಲ್ಲಿ ಸೆಮಿಫೈನಲ್ಸ್‌ಗೆ ಪ್ರವೇಶ ಮಾಡಿದ್ದಾರೆ. ಆ ಮೂಲಕ ಭಾರತಕ್ಕೆ ಎರಡು ಪದಕಗಳ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಬುಧವಾರ ಬೆಳಗ್ಗೆ ನಡೆದಿದ್ದ 57 ಕೆ.ಜಿ ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕಿತ ರವಿಕುಮಾರ್‌ ದಹಿಯಾ, ಬಲ್ಗೇರಿಯಾದ ಜಾರ್ಜಿ ವ್ಯಾಲೆಂಟಿನೋವ್ ವಾಂಗೆಲೋವ್ ಅವರನ್ನು 14-4 ಅಂತರದಲ್ಲಿ ಮಣಿಸಿದರು. ಮತ್ತೊಂಡು ಕಡೆ ನಡೆದಿದ್ದ 86ಕೆ.ಜಿ ವಿಭಾಗದ ಅಂತಿಮ ಎಂಟರ ಸುತ್ತಿನ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ , ಚೀನಾದ ಝುಶೆನ್‌ ವಿರುದ್ಧ 6-3 ಅಂತರದಲ್ಲಿ ಗೆದ್ದು ಸೆಮಿಫೈನಲ್‌ ಪ್ರವೇಶ ಮಾಡಿದರು. ಎರಡನೇ ಶ್ರೇಯಾಂಕಿತ ದೀಪಕ್‌ ಪೂನಿಯಾ ಅವರು ಆರಂಭದಲ್ಲಿಯೇ ಚೀನಾ ಕುಸ್ತಿಪಟುವಿನ ವಿರುದ್ಧ ಭಾರಿ ಕಾದಾಟ ನಡೆಸಿದ್ದರು. ಇದರ ಫಲವಾಗಿ ಮೊದಲನೇ ಅವಧಿ ಮುಕ್ತಾಯಕ್ಕೆ ದೀಪಕ್‌ 1-0 ಮುನ್ನಡೆ ಗಳಿಸಿದ್ದರು. ನಂತರ, ಎರಡನೇ ಅವಧಿಗೆ ಕಣಕ್ಕೆ ಇಳಿದ ದೀಪಕ್, ಅತ್ಯುತ್ತಮ ಪ್ರದರ್ಶನ ತೋರಿ ಐದು ಅಂಕಗಳನ್ನು ಕಲೆ ಹಾಕುವ ಮೂಲಕ ಜಯ ಸಾಧಿಸಿದರು. ಆದರೆ, ಚೀನಾದ ಕುಸ್ತಿಪಟು 3 ಪಾಯಿಂಟ್‌ಗಳಿಗೆ ತಮ್ಮ ಅಭಿಯಾನ ಅಂತ್ಯಗೊಳಿಸಿದರು. ಇನ್ನು 57 ಕೆ.ಜಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ರವಿಕುಮಾರ್‌ ದಹಿಯಾ ಅವರು, ಜಾರ್ಜಿ ವ್ಯಾಲೆಂಟಿನೋವ್ ವಾಂಗೆಲೋವ್ ಸವಾಲನ್ನು ಸುಲಭವಾಗಿ ಮೆಟ್ಟಿ ನಿಂತರು. ಮೊದಲನೇ ಅವಧಿಯಲ್ಲಿ ಸತತ 6 ಪಾಯಿಂಟ್‌ಗಳನ್ನು ಕಲೆ ಹಾಕಿದ್ದ ಭಾರತದ 23ರ ಪ್ರಾಯದ ಕುಸ್ತಿಪಟುವಿಗೆ ಎದುರಾಳಿ ಪ್ರತಿಕ್ರಿಯಿಸುವಲ್ಲಿ ವಿಫಲರಾದರು. ನಂತರ, ಎರಡನೇ ಅವಧಿಗೆ ಕಣಕ್ಕೆ ಬಂದ 2019ರ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ, ವ್ಯಾಲೆಂಟಿನೋವ್ ನೀಡಿದ ಸವಾಲನ್ನು ಸುಲಭವಾಗಿ ಮೆಟ್ಟಿ ನಿಂತರು. ಆ ಮೂಲಕ ನಾಲ್ಕು ಅಂಕಗಳನ್ನು ಕಲೆ ಹಾಕಿದರು. ಇದರೊಂದಿಗೆ ಎದುರಾಳಿ ವ್ಯಾಲೆಂಟಿನೋವ್ ಅವರಿಗೆ ಮುನ್ನಡೆ ಸಾಧಿಸಲು ಅವಕಾಶ ನೀಡಲೇ ಇಲ್ಲ. ಅಂತಿಮ ಭಾರತೀಯ ಕುಸ್ತಿಪಟು 14-4 ಭಾರಿ ಅಂತರದಲ್ಲಿ ಗೆದ್ದು ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಮಾಡಿದರು. ಇದಕ್ಕೂ ಮುನ್ನ ರವಿಕುಮಾರ್‌ ದಹಿಯಾ ಕೊಲಂಬಿಯಾದ ಆಸ್ಕರ್ ಎಡ್ವರ್ಡೊ ಟಿಗ್ರೆರೋಸ್ ಅರ್ಬಾನೊ ವಿರುದ್ಧ 13-2 ಭಾರಿ ಅಂತರದಲ್ಲಿ ಗೆದ್ದು ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ ಮಾಡಿದ್ದರು. ಇನ್ನು ದೀಪಕ್‌ ಪೂನಿಯಾ ಅವರು ನೈಜೀರಿಯಾದ ಎಕೆರೆಕೆಮೆ ಅಗಿಮೊರ್‌ ವಿರುದ್ಧ 12-1 ಅಂತರದಲ್ಲಿ ಅಂತಿಮ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದರು. ದೀಪಕ್ ಪೂನಿಯಾ ಅವರು ಇಂದು ತಡವಾಗಿ ನಡೆಯುವ 86 ಕೆ.ಜಿ ಫ್ರೀ ಸ್ಟೈಲ್‌ ವಿಭಾಗದ ಸೆಮಿಫೈನಲ್‌ ಹಣಾಹಣಿಯಲ್ಲಿ ಅಮೆರಿಕದ ಡೇವಿಡ್‌ ಮಾರಿಸ್‌ ವಿರುದ್ಧ ಸೆಣಸಲಿದ್ದಾರೆ. ಮತ್ತೊಂದೆಡೆ ಇಂದು ಮಧ್ಯಾಹ್ನ 2.45ಕ್ಕೆ 57ಕೆ.ಜಿ ಫ್ರೀ ಸ್ಟೈಲ್‌ ವಿಭಾಗದ ಸೆಮಿಪೈನಲ್‌ನಲ್ಲಿ ಭಾರತದ ರವಿಕುಮಾರ್‌ ದಹಿಯಾ ಅವರು ಕಝಕಸ್ತಾನದ ನೂರಿಸ್ಲಾಮ್‌ ಸನಯೆವ್‌ ಕಾದಾಟ ನಡೆಸಲಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3yoptIu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...