ತೀರ್ಥಹಳ್ಳಿಯಲ್ಲಿ ಬೇರೂರಿದ ಗಾಂಜಾ ದಂಧೆ; ಪ್ರತಿಷ್ಠಿತರ ಮಕ್ಕಳ ನೆರಳು; ಹಳ್ಳಿ ತಲುಪಿದ ಜಾಲ!

ರಾಘವೇಂದ್ರ ಮೇಗರವಳ್ಳಿ () ಶಿವಮೊಗ್ಗ: ಹಲವು ವರ್ಷಗಳಿಂದ ತಾಲೂಕಿನಲ್ಲಿ ಕೆಲ ಸ್ಥಳದಲ್ಲಿ ಗಾಂಜಾ ಸೇವನೆ, ಮಾರಾಟ ದಂಧೆ ಭದ್ರವಾಗಿ ಬೇರು ಬಿಟ್ಟಿದೆ. ಕೆಲ ಪ್ರತಿಷ್ಠಿತರ ಮಕ್ಕಳ ನೆರಳಿನಲ್ಲಿ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿದ್ದು ಹಳ್ಳಿಹಳ್ಳಿಗೆ ವ್ಯಾಪಿಸುತ್ತಿದೆ. ಕೆಲ ಯುವಕರು, ವಿದ್ಯಾರ್ಥಿಗಳು ಗಾಂಜಾ ದಂಧೆಯಲ್ಲಿ ಸಕ್ರಿಯವಾಗಿದ್ದು, ಆಯಕಟ್ಟಿನ ಸ್ಥಳ ದಂಧೆಯ ಕೇಂದ್ರವಾಗಿದೆ. ಅತ್ಯಂತ ಗುಪ್ತವಾಗಿರುವ ದಂಧೆಯ ಹಿಂದೆ ವ್ಯವಸ್ಥಿತ ಜಾಲ ಇದ್ದು, ಅಮಾಯಕರ ಬಲಿ ಮುಂದುವರಿದಿದೆ. ಅಚ್ಚರಿ ಎಂದರೆ, ಗಾಂಜಾ ಸೇವನೆ, ಮಾರಾಟ ದಂಧೆ ಕುರಿತು ಖಚಿತ ಮಾಹಿತಿ ನೀಡಲು ಸಾರ್ವಜನಿಕರು ಇಚ್ಛಿಸುತ್ತಿಲ್ಲ. ಅವರುಗಳ ಸಹವಾಸ ಬೇಡ ಎನ್ನುವವರ ಸಂಖ್ಯೆ ಹೆಚ್ಚಿದೆ. ಕೊರೊನಾ ಸೋಂಕಿನ ಲಾಕ್‌ಡೌನ್‌ ಅವಧಿಯಲ್ಲಿ ದಂಧೆ ವಿಪರೀತ ಎನ್ನುವಷ್ಟರ ಮಟ್ಟಿಗೆ ವಿಸ್ತಾರಗೊಂಡಿದೆ. ಹೊಸದಾಗಿ ಕೆಲ ಯುವಕರು, ವಿದ್ಯಾರ್ಥಿಗಳು ದಂಧೆಗೆ ಸೇರಿಕೊಂಡಿದ್ದಾರೆ. ಕೂಲಿ ಕೆಲಸದ ಕೆಲ ಯುವಕರು ಗಾಂಜಾ ಘಮಲಿನ ಕಡೆಗೆ ವಾಲುತ್ತಿದ್ದಾರೆ. ಸಿಕ್ಕಿ ಬಿದ್ದ ಪ್ರಕರಣಇತ್ತೀಚೆಗೆ ಕೋಣಂದೂರು ಹತ್ತಿರ ಸಿಕ್ಕಿ ಬಿದ್ದ ಗಾಂಜಾ ಸಾಗಣೆ ಪ್ರಕರಣ ಅನೇಕ ಸುಳಿವು ನೀಡಿದ್ದು ಪ್ರತಿಷ್ಠಿತರ ಶಾಮೀಲು ಇರುವುದು ಗೊತ್ತಾಗಿದೆ. ವರ್ಷದಿಂದೀಚೆಗೆ 4ಕಕ್ಕೂ ಹೆಚ್ಚು ಗಾಂಜಾ ಸಾಗಣೆ ಪ್ರಕರಣ ಪತ್ತೆ ಆಗಿದ್ದರೂ, ದಂಧೆ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ. ಕೋಣಂದೂರು, ಆರಗ, ಹುಂಚ, ರಿಪ್ಪನ್‌ಪೇಟೆ, ಮಂಡಗದ್ದೆ, ತೂದೂರು, ಹಣಗೆರೆ, ಕನ್ನಂಗಿ, ಬೆಜ್ಜವಳ್ಳಿ, ಕಟ್ಟೆಹಕ್ಕಲು, ರಂಜದಕಟ್ಟೆ, ಕೈಮರ, ಮೇಗರವಳ್ಳಿ, ಆಗುಂಬೆ, ಬಿದರಗೋಡು, ಕಮ್ಮರಡಿ, ಬಸವಾನಿ, ತೀರ್ಥಹಳ್ಳಿ ಪಟ್ಟಣದ ವಿವಿಧ ಬಡಾವಣೆಯಲ್ಲಿಗಾಂಜಾ ಮಾರಾಟ, ಸೇವನೆ ದಂಧೆ ಹೆಚ್ಚಾಗಿದೆ. ಹೊರ ಊರು ಸಂಪರ್ಕ ಗಾಂಜಾ ಮಾರಾಟ, ಸೇವನೆ ದಂಧೆಯಲ್ಲಿ ತೊಡಗಿದವರು ಹೊರ ಊರಿನ ಸಂಪರ್ಕ ಇಟ್ಟುಕೊಂಡಿದ್ದಾರೆ. ಶಿಕಾರಿಪುರ, ಸೊರಬ, ಸಾಗರ, ಭದ್ರಾವತಿ, ಎನ್‌ಆರ್‌ಪುರ, ಬಾಳೆಹೊನ್ನೂರು, ಶೃಂಗೇರಿ, ಹೊಸನಗರ ಮತ್ತಿತರರ ತಾಲೂಕುಗಳ ಅನೇಕ ಊರುಗಳಲ್ಲಿ ಸಂಪರ್ಕ ಇಟ್ಟು ಗಾಂಜಾವನ್ನು ವ್ಯವಸ್ಥಿತವಾಗಿ ತೀರ್ಥಹಳ್ಳಿಗೆ ಪೂರೈಕೆ ಆಗುವಂತೆ ಸಂಪರ್ಕ ಜಾಲ ಹೊಂದಿದ್ದಾರೆ. ನಾಲ್ಕಾರು ಪ್ರಕರಣ ಪತ್ತೆ ಹಚ್ಚಿರುವ ಪೊಲೀಸರು ಬೆನ್ನು ಬಿದ್ದರೂ ಜಾಲವನ್ನು ಬೇಧಿಸುವುದಕ್ಕೆ ಈವರೆಗೂ ಸಾಧ್ಯವಾಗಿಲ್ಲ. ಮರಿ ಪುಡಾರಿಗಳ ಬೆಂಬಲ! ರಾಜಕೀಯ ನಾಯಕರ ಕೆಲ ಬೆಂಬಲಿಗ ಪುಡಾರಿಗಳು ಗಾಂಜಾ ಮಾರಾಟ, ಸೇವನೆಯಲ್ಲಿ ತೊಡಗಿದವರ ಬೆಂಬಲಕ್ಕಿರುವುದು ಸಾರ್ವಜನಿಕ ವಲಯದಲ್ಲಿ ಗುಟ್ಟಾಗಿಲ್ಲ. ಆರೋಪಿಗಳನ್ನು ರಾಜಕೀಯ ಒತ್ತಡ ಹೇರಿ ರಕ್ಷಿಸುವಂತಹ ಕೃತ್ಯಗಳು ಸಲೀಸಾಗಿ ನಡೆಯುತ್ತಿದೆ. ಕೆಲ ವರ್ಷಗಳ ಹಿಂದೆ ಹಣಗೆರೆ, ಆಯನೂರು ಭಾಗದಲ್ಲಿ ಗಾಂಜಾ ಬೆಳೆಯುತ್ತಿದ್ದ ಪ್ರಕರಣ ಹೆಚ್ಚಾಗಿತ್ತು. ಈಗಲೂ ಕೆಲ ಹಳ್ಳಿಗಳಲ್ಲಿ ಗಾಂಜಾ ಸೊಪ್ಪು ಬೆಳೆಯಲಾಗುತ್ತಿದೆ. ಗಾಂಜಾ ಮಾರಾಟ, ಸೇವನೆ ಕುರಿತಾಗಿ ಸಾರ್ವಜನಿಕರಿಂದ ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿಲ್ಲ. ಇತ್ತೀಚೆಗೆ ಕೋಣಂದೂರು ಸಮೀಪ ಪ್ರಕರಣ ಪತ್ತೆ ಹಚ್ಚಲಾಗಿದ್ದು, ಹೊರ ಊರಿನಿಂದ ಗಾಂಜಾ ಪೂರೈಕೆ ಖಚಿತವಾಗಿದೆ. ಗಾಂಜಾ ದಂಧೆ ಪತ್ತೆಗೆ ವಿಶೇಷ ತಂಡ ರಚಿಸಲಾಗಿದ್ದು, ಕಾರ‍್ಯಚರಣೆ ಬಿಗಿಗೊಳಿಸಲಾಗಿದೆ. ಶಾಂತವೀರ, ಡಿವೈಎಸ್ಪಿ, ತೀರ್ಥಹಳ್ಳಿ ತೀರ್ಥಹಳ್ಳಿಯ ಅನೇಕ ಹಳ್ಳಿಗಳಲ್ಲಿ ಗಾಂಜಾ ಮಾರಾಟ, ಸೇವನೆ ದಂಧೆ ಹೆಚ್ಚಾದ ದೂರುಗಳಿವೆ. ಪ್ರತಿಷ್ಠಿತರ ಮಕ್ಕಳು ದಂಧೆಯಲ್ಲಿ ತೊಡಗಿದ್ದಾರೆ ಎಂಬ ಅನುಮಾನ ಇದೆ. ಪೊಲೀಸ್‌ ಇಲಾಖೆ ಪ್ರತಿ ಹಳ್ಳಿಯಲ್ಲಿ ಸಭೆ ನಡೆಸಿ ದಂಧೆ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಯಡೂರು ಸುರೇಂದ್ರ, ಅಧ್ಯಕ್ಷರು,ಕರವೇ, ತೀರ್ಥಹಳ್ಳಿ ತಾಲೂಕು ಘಟಕ.


from India & World News in Kannada | VK Polls https://ift.tt/3lmk8xu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...