ಫೇಸ್‌ಬುಕ್‌ನಲ್ಲಿ ಕಡಿಮೆ ಬೆಲೆಗೆ ಐಫೋನ್‌ ಜಾಹೀರಾತು; ನಂಬಿದ ವ್ಯಕ್ತಿಗೆ ₹7.29 ಲಕ್ಷ ಪಂಗನಾಮ!

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಪ್ರಕಟವಾಗಿದ್ದ ಜಾಹೀರಾತು ನೋಡಿ ಐಫೋನ್‌ ಖರೀದಿಸಲು ಮುಂದಾಗಿದ್ದ ವ್ಯಕ್ತಿಯೊಬ್ಬರು 7.29 ಲಕ್ಷ ರೂ. ಕಳೆದುಕೊಂಡಿದ್ದಾರೆ. ಚನ್ನಸಂದ್ರದ 30 ವರ್ಷದ ನಿವಾಸಿ ವಂಚನೆಗೊಳಗಾದ ವ್ಯಕ್ತಿ. ಅವರು ನೀಡಿದ ದೂರಿನನ್ವಯ ಅಪರಿಚಿತ ವ್ಯಕ್ತಿ ವಿರುದ್ಧ ಪಶ್ಚಿಮ ವಿಭಾಗದ ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಫೇಸ್‌ಬುಕ್‌ನಲ್ಲಿ ತೆರೆಯಲಾಗಿರುವ ‘ಅಬುಬಿ ಸ್ಪೋರ್ಟ್‌’ ಪುಟದಲ್ಲಿ ಜಾಹೀರಾತು ನೀಡಿದ್ದ ಆರೋಪಿ, ಕಡಿಮೆ ದರದಲ್ಲಿ ಐಫೋನ್‌ಗಳು ಮಾರಾಟಕ್ಕಿವೆ ಎಂದಿದ್ದ. ಅದನ್ನು ನಂಬಿದ್ದ ದೂರುದಾರ, ಐ-ಫೋನ್‌ ಖರೀದಿಸುತ್ತೇನೆ ಎಂದು ಹೇಳಿ ಆರೋಪಿಗೆ ಸಂದೇಶ ಕಳುಹಿಸಿದ್ದರು. ಆತನ ಮೊಬೈಲ್‌ ನಂಬರ್‌ ಪಡೆದು ಮಾತನಾಡಿದ್ದರು ಎಂದು ಪೊಲೀಸರು ಹೇಳಿದರು. ಮುಂಗಡವಾಗಿ ಹಣ ಪಾವತಿ ಮಾಡಿದರೆ ಐ-ಫೋನ್‌ ನೀಡುವುದಾಗಿ ಆರೋಪಿ ಹೇಳಿದ್ದ. ಅದನ್ನೂ ನಂಬಿದ್ದ ದೂರುದಾರ, ಆರೋಪಿ ಹೇಳಿದ್ದ ಖಾತೆಗಳಿಗೆ ಜುಲೈ 26ರಿಂದ 30ರವರೆಗೆ ಹಂತ ಹಂತವಾಗಿ 7.29 ಲಕ್ಷ ಪಾವತಿಸಿದ್ದರು. ಅದಾದ ನಂತರ ಆರೋಪಿ ಮೊಬೈಲ್‌ ಕೊಟ್ಟಿಲ್ಲ. ಹಣವನ್ನೂ ವಾಪಸು ನೀಡಿಲ್ಲ ಎಂದು ಪೊಲೀಸರು ತಿಳಿಸಿದರು. ಐ-ಫೋನ್‌ ಮಾರಾಟದ ಹೆಸರಿನಲ್ಲಿ ಜನರಿಂದ ಹಣ ಪಡೆದು ವಂಚಿಸಲೆಂದೇ ಆರೋಪಿ, ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದಿರುವುದು ಗೊತ್ತಾಗುತ್ತಿದೆ. ಇಂಟರ್‌ನೆಟ್‌ ಪ್ರೋಟೊಕಾಲ್‌ (ಐ.ಪಿ) ಮಾಹಿತಿ ಆಧರಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.


from India & World News in Kannada | VK Polls https://ift.tt/3xkesXn

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...