IND vs ENG: ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌!

ಅಹ್ಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಆರಂಭವಾದ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಕೊನೆಯ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ತಂಡದ ನಾಯಕ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದ್ದಾರೆ. ಈಗಾಗಲೇ ಮುಕ್ತಾಯವಾಗಿರುವ ಆರಂಭಿಕ ಮೂರು ಪಂದ್ಯಗಳಲ್ಲಿ ಭಾರತ, ಎರಡು ಪಂದ್ಯಗಳಲ್ಲಿ ಗೆದ್ದಿದ್ದರೆ, ಇಂಗ್ಲೆಂಡ್‌ ಒಂದು ಪಂದ್ಯದಲ್ಲಿ ಜಯಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಭಾರತ ಈ ಪಂದ್ಯವನ್ನು ಗೆಲ್ಲಬೇಕು ಅಥವಾ ಡ್ರಾ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಈಗಾಗಲೇ ಇಂಗ್ಲೆಂಡ್‌ ತಂಡಕ್ಕೆ ಡಬ್ಲ್ಯುಟಿಸಿ ಫೈನಲ್‌ ಹಾದಿ ಬಂದ್‌ ಆಗಿದೆ. ಟಾಸ್‌ ಬಳಿಕ ಜೋ ರೂಟ್‌ ಮಾತನಾಡಿ, " ಮೊದಲು ಬ್ಯಾಟಿಂಗ್‌ ಮಾಡುತ್ತೇವೆ. ಪ್ರಥಮ ಇನಿಂಗ್ಸ್‌ನಲ್ಲಿ ಸಾಧ್ಯವಾದಷ್ಟು ರನ್‌ ಗಳಿಸಲು ಪ್ರಯತ್ನಿಸುತ್ತೇವೆ. ಏಕೆಂದರೆ, ಪಿಚ್ ಸ್ಪಿನ್‌ ಸ್ನೇಹಿಯಾಗಿ ಯಾವಾಗ ಬೇಕಾದರೂ ಪರಿವರ್ತನೆಯಾಗಬಹುದು. ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಸ್ಟುವರ್ಟ್ ಬ್ರಾಡ್‌ ಹಾಗೂ ಜೋಫ್ರ ಆರ್ಚರ್‌ ಬದಲು ಡೇನಿಯಲ್‌ ಸ್ಯಾಮ್ಸ್‌ ಹಾಗೂ ಡಾಮ್‌ ಬೆಸ್‌ ಅಂತಿಮ 11ಕ್ಕೆ ಕರೆತಂದಿದ್ದೇವೆ," ಎಂದರು. ನಂತರ ನಾಯಕ ಮತನಾಡಿ, " ನಾವು ಕೂಡ ಮೊದಲು ಬ್ಯಾಟಿಂಗ್‌ ಮಾಡಬೇಕೆಂದು ಅಂದುಕೊಂಡಿದ್ದೆವು. ಏಕಂದರೆ ಮೊದಲನೇ ದಿನ ಬ್ಯಾಟಿಂಗ್‌ಗೆ ಪಿಚ್‌ ಸಹಕಾರಿಯಾಗಬಹುದು. ಆದರೆ, ಟಾಸ್‌ ನಮ್ಮ ಪರವಾಗಲಿಲ್ಲ. ಅಂತಿಮ 11ರಲ್ಲಿ ಒಂದು ಬದಲಾವಣೆ ಮಾಡಿದ್ದು, ಜಸ್‌ಪ್ರಿತ್‌ ಬುಮ್ರಾ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ಗೆ ಅವಕಾಶ ನೀಡಲಾಗಿದೆ," ಎಂದರು. ಉಭಯ ತಂಡಗಳ ಪ್ಲೇಯಿಂಗ್‌ ಇಲೆವೆನ್‌ ಭಾರತ: ಶುಭಮನ್‌ ಗಿಲ್‌, ರೋಹಿತ್‌ ಶರ್ಮಾ, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರಿಷಭ್‌ ಪಂತ್ (ವಿ.ಕೀ), ಅಕ್ಷರ್‌ ಪಟೇಲ್‌, ಆರ್‌ ಅಶ್ವಿನ್‌, ವಾಷಿಂಗ್ಟನ್‌ ಸುಂದರ್‌, ಇಶಾಂತ್‌ ಶರ್ಮಾ, ಮೊಹಮ್ಮದ್ ಸಿರಾಜ್‌ ಇಂಗ್ಲೆಂಡ್‌: ಡಾಮ್‌ ಸಿಬ್ಲೀ, ಝ್ಯಾಕ್‌ ಕ್ರಾವ್ಲೀ, ಜಾನಿ ಬೈರ್‌ಸ್ಟೋವ್‌, ಜೋ ರೂಟ್‌(ನಾಯಕ), ಬೆನ್‌ ಸ್ಟೋಕ್ಸ್‌, ಒಲ್ಲಿ ಪೋಪ್‌, ಬೆನ್‌ ಫೋಕ್ಸ್‌ (ವಿ.ಕೀ), ಡಾಮ್ ಬೆಸ್‌, ಜ್ಯಾಕ್‌ ಲೀಚ್‌, ಡೇನಿಯಲ್‌ ಲಾರೆನ್ಸ್‌, ಜೇಮ್ಸ್ ಅಂಡರ್ಸನ್‌


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3rf1uYx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...