ಕೋಯಿಕ್ಕೋಡ್: ಏರ್ ಇಂಡಿಯಾ ಸಂಸ್ಥೆ ವಿಮಾನಗಳ ಟಿಕೆಟ್ ದರ ದಿಢೀರ್ ಏರಿಕೆ ಮಾಡಿದ್ದರ ವಿರುದ್ಧ ಪ್ರತಿಭಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಳಿಯ ಪಿ.ಎ.ಮೊಹಮದ್ ರಿಯಾಜ್‌ಗೆ ಸ್ಥಳೀಯ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ರಿಯಾಜ್ ಜತೆಗೆ ಸಹ ಆರೋಪಿಗಳಾದ ಟಿ.ವಿ.ರಾಜೇಶ್ ಮತ್ತು ಕೆ.ಕೆ. ದಿನೇಶ್‌ಗೂ ಕೋರ್ಟ್ ಬಂಧನ ವಿಧಿಸಿದೆ. 2009ರಲ್ಲಿ ಪ್ರಕರಣ ದಾಖಲಾಗಿತ್ತು. ಇಷ್ಟು ದಿನಗಳವರೆಗೆ ಜಾಮೀನು ಪಡೆದಿದ್ದ ಆರೋಪಿಗಳು, ಜಾಮೀನು ಕಾಲಾವಧಿ ವಿಸ್ತರಣೆ ಕೋರಿ ಮಾಡಿದ್ದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಕಣ್ಣೂರಿನಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರಿಯಾಜ್, ಡಿವೈಎಫ್‌ಐ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಡಿವೈಎಫ್ಐ ಮುಖಂಡ ಕೆ.ಕೆ. ದಿನೇಶ್ ಹಾಗೂ ಮೊಹಮ್ಮದ್ ರಿಯಾಸ್ ಅವರು 2009ರಲ್ಲಿ ಏರ್ ಇಂಡಿಯಾ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯನ್ನು ರಾಜೇಶ್ ಅರಂಭಿಸಿದ್ದರು. ಈ ಪ್ರತಿಭಟನೆಗಾಗಿ ನಾಯಕರ ವಿರುದ್ಧ 2009ರಲ್ಲಿ ಕೋಯಿಕ್ಕೋಡ್‌ನಲ್ಲಿ ಪ್ರಕರಣ ದಾಖಲಿಸಲಾಗಿತ್ತು.
from India & World News in Kannada | VK Polls https://ift.tt/3qeWUbt