ಮೈಮುಲ್ ಚುನಾವಣೆಗೆ ಮುಹೂರ್ತ ಫಿಕ್ಸ್ ; ಸಾರಾ ಮತ್ತು ಜಿಟಿಡಿ ಬಣಗಳ ನಡುವೆ ಬಿಗ್ ಫೈಟ್!

ಮೈಸೂರು: ಡೈರಿ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಮಾರ್ಚ್ 16ಕ್ಕೆ ನಿಗದಿಯಾಗಿದೆ. ಡೈರಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ವಿಭಾಗೀಯ 7, ಹುಣಸೂರು ವಿಭಾಗೀಯ 8 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇನ್ನು ಮಾರ್ಚ್ 8ಕ್ಕೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದ್ದು, ಮಾರ್ಚ್ 9ಕ್ಕೆ ಪರಿಶೀಲನೆಯಾಗಲಿದೆ. ಮಾರ್ಚ್ 10ಕ್ಕೆ ನಾಮಪತ್ರ ವಾಪಾಸ್ ಗೆ ಅವಕಾಶ ನೀಡಲಾಗಿದೆ. ಮಾ.16ರ ಬೆಳಗ್ಗೆ 8ರಿಂದ ಸಂಜೆ 4ರ ತನಕ ಮತದಾನ ನಡೆಯಲಿದ್ದು, ಸಂಜೆ 5ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಒಟ್ಟು 1104 ಸೊಸೈಟಿಗಳಿಂದ 1030 ಮಂದಿ ಮತ ಚಲಾಯಿಸಲಿದ್ದಾರೆ. ಇನ್ನು ಜಿ.ಟಿ.ದೇವೇಗೌಡರಿಗೆ ಮೈಮುಲ್ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಚುನಾವಣೆಯಲ್ಲಿ ಶಾಸಕ ಬಣ, ಜಿಟಿಡಿ ಬಣದ ನಡುವೆ ಬಿಗ್ ಫೈಟ್ ಏರ್ಪಡಲಿದೆ. ಹೀಗಾಗಿ ಸಾಕಷ್ಟು ಕುತೂಹಲವನ್ನು ಈ ಚುನಾವಣೆ ಮೂಡಿಸಿದೆ. ಜೆಡಿಎಸ್ನಿಂದ ಒಂದು ಹೆಜ್ಜೆ ಆಚೆ ಇಟ್ಟಿರೋ ಜಿಟಿಡಿ ತಮ್ಮ ಪ್ರಾಬಲ್ಯ ತೋರಲು ಮೈಮುಲ್ ಚುನಾವಣೆ ವೇದಿಕೆಯಾಗಿದೆ. ಇನ್ನು, ಸಾರಾ ಮಹೇಶ್ಗೂ ಇದು ಪ್ರತಿಷ್ಠೆಯ ಕಣವಾಗಿದ್ದು, ಮೈಸೂರು ಭಾಗದಲ್ಲಿ ತಾವು ಪ್ರಬಲ ನಾಯಕರು ಅನ್ನೋದನ್ನ ಸಾಬೀತುಗೊಳಿಸಲು ಇದೊಂದು ಸದಾವಕಾಶವಾಗಿದೆ. ಎಲೆಕ್ಷನ್ ಘೊಷಣೆ ಆಗುತ್ತಿದ್ದಂತೆ ರಾಜಕೀಯ ಚಟುವಟಿಕೆ ಗರಿಗೆದರಿದೆ. ಕಳೆದ ವಾರ ಮುಕ್ತಾಯವಾದ ಮೈಸೂರು ಪಾಲಿಕೆ ಎಲೆಕ್ಷನ್ನಲ್ಲಿ ಜೆಡಿಎಸ್ಗೆ ಅಧಿಕಾರ ಗಿಟ್ಟಿಸುವಲ್ಲಿ ಶಾಸಕ ಸಾರಾ ಮಹೇಶ್ ಯಶಸ್ವಿಯಾಗಿದ್ದರು . ಮೇಯರ್ ಎಲೆಕ್ಷನ್ನಿಂದ ಜಿಟಿ ದೇವೇಗೌಡ ಕಂಪ್ಲೀಟ್ ಹೊರಗಿದ್ದರು. ಇದು ದಳಪತಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.


from India & World News in Kannada | VK Polls https://ift.tt/3ba7aO0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...