: ಎಟಿಎಂನಿಂದ ಹಣ ಬರುವ ಸಂದರ್ಭದಲ್ಲೇ ಕೈ ಬೆರಳು ಅಡ್ಡ ಇಟ್ಟು ಸಿಸ್ಟಮ್ ಹ್ಯಾಂಗ್ ಮಾಡಿ ಹಣ ಬಂದರೂ, ಬಂದಿಲ್ಲವೆಂದು ದೂರು ಕೊಟ್ಟು ಬ್ಯಾಂಕ್‌ಗಳಿಗೆ ವಂಚಿಸುತ್ತಿದ್ದ ಉತ್ತರ ಪ್ರದೇಶ ಮೂಲದ ಆರೋಪಿಯನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 48 ಎಟಿಎಂ ಕಾರ್ಡ್ ಮತ್ತು 52 ಸಾವಿರ ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಿಯುಸಿ ಓದಿರುವ ಉತ್ತರ ಪ್ರದೇಶ ಮೂಲದ ಹಮೀರ್‌ಪುರದ ದೀಪಕ್ (20) ಬಂಧಿತ ಆರೋಪಿ. ಎಟಿಎಂಗಳ ತಾಂತ್ರಿಕ ನಿರ್ವಹಣೆ ಮಾಡುವ ಎಂಫಾಸಿಸ್ ಏಜೆನ್ಸಿಗೆ ಹಲವು ದಿನಗಳಿಂದ ನಗರದ ವಿವಿಧ ಎಟಿಎಂ ಕೇಂದ್ರಗಳಲ್ಲಿ ಮೋಸದಿಂದ ಹಣ ಡ್ರಾ ಮಾಡಿಕೊಳ್ಳುತ್ತಿರುವ ಮಾಹಿತಿ ಇತ್ತು. ಫೆ.23ರಂದು ರಾಜ್‌ಕುಮಾರ್ ರಸ್ತೆಯಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಸೆಂಟರ್‌ನಲ್ಲಿಆರೋಪಿ ದೀಪಕ್, ಮೋಸದಿಂದ ಹಣ ಡ್ರಾ ಮಾಡಿಕೊಳ್ಳಲು ಯತ್ನಿಸುತ್ತಿದ್ದ. ಅದೇ ಸಂದರ್ಭದಲ್ಲಿ ಎಟಿಎಂ ಬಳಿ ಎಂಫಾಸಿಸ್ ನೌಕರರು ಓಡಾಡುತ್ತಿದ್ದರು. ಈ ವೇಳೆ ಅನುಮಾನಾಸ್ಪದವಾಗಿ ಹಣ ಡ್ರಾ ಮಾಡುತ್ತಿದ್ದ ಕಾರಣ ಕೆಲವರು ಆರೋಪಿಗೆ ಪ್ರಶ್ನೆ ಮಾಡಿದ್ದಾರೆ. ಸೂಕ್ತ ಉತ್ತರ ನೀಡದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವ್ಯವಸ್ಥಿತ ಜಾಲವೇ ಇಧಿದರ ಹಿಂದೆ ಇರುವುದು ಬೆಳಕಿಗೆ ಬಂದಿದೆ. ನಾಲ್ಕನೇ ಬಾರಿಗೆ ಸಿಕ್ಕಿ ಬಿದ್ದ..!ದೊಡ್ಡಕಲ್ಲಸಂದ್ರದಲ್ಲಿ ಬಾಡಿಗೆ ರೂಂ ಮಾಡಿಕೊಂಡು ವಾಸವಿರುವ ಆರೋಪಿ ದೀಪಕ್, ನಾಲ್ಕನೇ ಬಾರಿ ಬೆಂಗಳೂರಿಗೆ ಬಂದಿದ್ದಾನೆ. ಈ ಹಿಂದೆ ಮೂರು ಬಾರಿ ತಲಾ 40,000, 1 ಲಕ್ಷ ರೂ. ಹಾಗೂ ಮತ್ತೊಮ್ಮೆ 1 ಲಕ್ಷ ರೂ.ಗಳನ್ನು ಮೋಸದಿಂದ ಡ್ರಾ ಮಾಡಿಕೊಂಡು ಹೋಗಿದ್ದ. ನಾಲ್ಕನೇ ಬಾರಿಗೆ ಹಣ ಡ್ರಾ ಮಾಡಲು ಬಂದಾಗ ಸಿಕ್ಕಿ ಬಿದ್ದಿದ್ದಾನೆ. ಆರೋಪಿಯ ಜತೆಗೆ ಇನ್ನೂ ಇಬ್ಬರು ಬೆಂಗಳೂರಿನಲ್ಲಿಇದೇ ರೀತಿ ಹಣ ಡ್ರಾ ಮಾಡಿಕೊಂಡು ಮೋಸ ಮಾಡಿದ್ದಾರೆ. ಆದರೆ, ಅವರು ಬೇರೆ ರಾಜ್ಯಗಳಲ್ಲಿದ್ದಾರೆ ಎಂದು ದೀಪಕ್ ತಿಳಿಸಿದ್ದಾನೆ. ಆರೋಪಿಯ ವಶದಿಂದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಸ್‌ಬಿಐ, ಫೆಡರಲ್ ಬ್ಯಾಂಕ್, ಎಚ್‌ಡಿಎಫ್‌ಸಿ ಸೇರಿದಂತೆ ವಿವಿಧ ಬ್ಯಾಂಕ್‌ಗಳ 48 ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ. ಕಮೀಷನ್ ಕೊಟ್ಟು ಎಟಿಎಂ ಕಾರ್ಡ್ ತರುತ್ತಿದ್ದ ಆರೋಪಿ ದೀಪಕ್, ತನ್ನ ಊರಿನಲ್ಲಿರುವವರ ಎಟಿಎಂ ಕಾರ್ಡ್‌ಗಳನ್ನು ಪಡೆದುಕೊಂಡು, ಅವರಿಗೆ ಕಮೀಷನ್ ಹಣ ನೀಡುತ್ತಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು. ಇತ್ತೀಚೆಗೆ ನಗರದ ಎಟಿಎಂವೊಂದರಲ್ಲಿ ಯಂತ್ರಕ್ಕೆ ಯಾವುದೇ ರೀತಿ ಹಾನಿ ಮಾಡದೇ ಹಣ ವಿತ್‌ಡ್ರಾ ಮಾಡಲಾಗಿತ್ತು. ಈ ಸಂಬಂಧ ತಾಂತ್ರಿಕ ತಂಡದವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಂಪ್ಲೇಂಟ್ ಕೊಟ್ಟರೆ ಖಾತೆಗೆ ಹಣ ವಾಪಸ್‌ಹಣ ಬರುವ ವೇಳೆ ಕೈ ಬೆರಳುಗಳನ್ನು ಅಡ್ಡ ಇಡುತ್ತಿದ್ದ. ಡ್ರಾ ಮಾಡಿದ ಹಣ ಬರುತ್ತಿತ್ತು. ಬೆರಳುಗಳನ್ನು ಅಡ್ಡ ಇಡುವ ಕಾರಣ ಸಿಸ್ಟಮ್ ಹ್ಯಾಂಗ್ ಆಗುತ್ತದೆ. ಇದೇ ನೆಪ ಮಾಡಿಕೊಳ್ಳುತ್ತಿದ್ದ ಆರೋಪಿ, ಖಾತೆಯಿಂದ ಹಣ ಕಡಿತವಾಗಿದೆ. ಹಣ ಕೈಗೆ ಬಂದಿಲ್ಲ. ಸಿಸ್ಟಮ್ ಹ್ಯಾಂಗ್ ಆಗಿದೆ ಎಂದು ಬ್ಯಾಂಕ್‌ನ ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿ ದೂರು ನೀಡುತ್ತಿದ್ದ. ಸಿಸ್ಟಮ್ ಹ್ಯಾಂಗ್‌ನಿಂದಾಗಿ ಹಣ ವಿತ್‌ಡ್ರಾದಲ್ಲಿ ಸಮಸ್ಯೆಯಾಗಿದೆ ಎಂದು ದೂರು ನೀಡಿದ 7 ದಿನಗಳ ಒಳಗಾಗಿ ಬ್ಯಾಂಕುಗಳು ಖಾತೆಗೆ ಹಣ ವಾಪಸ್ ಜಮಾ ಮಾಡುತ್ತಿದ್ದವು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
from India & World News in Kannada | VK Polls https://ift.tt/3rbwfxF