ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ 'ತಪ್ಪು ನಿರ್ಣಯ': ರಾಹುಲ್ ಗಾಂಧಿ

ಹೊಸದಿಲ್ಲಿ: 1975ರಲ್ಲಿ ಮಾಜಿ ಪ್ರಧಾನಿ ಅವರು ದೇಶದಲ್ಲಿ ಹೇರಿದ್ದ ಬಗ್ಗೆ ಭಾರೀ ಹೇಳಿಕೆಯನ್ನು ಕಾಂಗ್ರೆಸ್‌ನ ನಾಯಕ ನೀಡಿದ್ದಾರೆ.. ಇಂದಿರಾ ಗಾಂಧಿ ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿ ಅದೊಂದು ತಪ್ಪು ನಿರ್ಣಯವಾಗಿತ್ತು ಎಂದು ರಾಹುಲ್‌ ಅಭಿಪ್ರಾಯಪಟ್ಟಿದ್ದಾರೆ. ಆ ಸಮಯದಲ್ಲಿ ಏನಾಗಿತ್ತು ಅದು ತಪ್ಪು, ಆದರೆ ಅಂದಿನ ಸ್ಥಿತಿ ಪ್ರಸ್ತುತ ಸನ್ನಿವೇಶಕ್ಕಿಂತ ಮೂಲಭೂತವಾಗಿ ಭಿನ್ನವಾಗಿತ್ತು ಜೊತೆಗೆ ಕಾಂಗ್ರೆಸ್ ಯಾವುದೇ ಹಂತದಲ್ಲಿ ದೇಶದ ಸಾಂವಿಧಾನಿಕ ಚೌಕಟ್ಟನ್ನು ವಶಪಡಿಸಲು ಪ್ರಯತ್ನಿಸಲಿಲ್ಲ ಎಂದು ಹೇಳಿದ್ದಾರೆ. ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಭಾರತದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅವರೊಂದಿಗಿನ ಸಂವಾದದಲ್ಲಿ ಈ ರೀತಿಯ ಹೇಳಿಕೆಯನ್ನು ರಾಹುಲ್‌ ಗಾಂಧಿ ನೀಡಿದ್ದಾರೆ. ಇನ್ನು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸಂವಿಧಾನವನ್ನು ನೀಡಿದ, ಸಮಾನತೆಗಾಗಿ ನಿಂತ ಕಾಂಗ್ರೆಸ್‌ನ ಆಂತರಿಕ ಪ್ರಜಾಪ್ರಭುತ್ವವನ್ನು ಯಾವಾಗಲೂ ಬೆಂಬಲಿಸುವುದಾಗಿ ಈ ವೇಳೆ ರಾಹುಲ್‌ ಗಾಂಧಿ ತಿಳಿಸಿದರು. ತುರ್ತು ಪರಿಸ್ಥಿತಿ ಬಗ್ಗೆ ಅಭಿಪ್ರಾಯ ಕೇಳಿದಾಗ, ಅದು ತಪ್ಪು ನಿರ್ಧಾರವಾಗಿತ್ತು. ನಿಸ್ಸಂಶವಾಗಿಯೂ ಅದೊಂದು ತಪ್ಪಾದ ನಿರ್ಣಯ. ನನ್ನ ಅಜ್ಜಿ (ಇಂದಿರಾ ಗಾಂದಿ) ಕೂಡ ಇದನ್ನೇ ಹೇಳಿದ್ದರು ಎಂದು ರಾಹುಲ್‌ ಗಾಂಧಿ ಅತಿಥಿಗಳ ಪ್ರಶ್ನೆಗೆ ಉತ್ತರಿಸಿದರು. ಇನ್ನು ಇದೆ ವೇಳೆ ಆರ್‌ಎಸ್‌ಎಸ್‌ ಸಂಬಂಧ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಹುಲ್‌, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್), ಮೂಲಭೂತಕ್ಕೆ ವಿಭಿನ್ನವಾಗಿ ದೇಶದ ಸಾಂವಿಧಾನಿಕ ವ್ಯವಸ್ಥೆಗೆ ತನ್ನ ಜನರನ್ನು ತುಂಬುವ ಪ್ರಯತ್ನ ಮಾಡುತ್ತಿದೆ ಆರೋಪಿಸಿರುವ ರಾಹುಲ್‌, ನಾವು ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದರೂ ಸಾಂವಿಧಾನಿಕ ಚೌಕಟ್ಟಿನಲ್ಲಿ ಆರ್‌ಎಸ್‌ಎಸ್ ಜನರಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. 1975ರಿಂದ 1977ರ ವರೆಗೆ 21 ತಿಂಗಳುಗಳ ಕಾಲ ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಈ ಮೂಲಕ ದೇಶದ ನಾಗರಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು. ತುರ್ತು ಪರಿಸ್ಥಿತಿ ಬಳಿಕ ಬಿಜೆಪಿಗೆ ಚುನಾವಣೆಯಲ್ಲಿ ಲಾಭವಾಗಿತ್ತು. ಈಗಲೂ ಬಿಜೆಪಿ ಕಾಂಗ್ರೆಸ್‌ನ್ನು ತುರ್ತು ಪರಿಸ್ಥಿತಿ ಸಂಬಂಧ ಟೀಕಿಸುತ್ತಿದೆ. ಸದ್ಯ ರಾಹುಲ್‌ ಗಾಂಧಿ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.


from India & World News in Kannada | VK Polls https://ift.tt/3b8Zrzz

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...