ಜಮೀರ್‌ ‘ಸಹವಾಸಕ್ಕೆ’ ಕೈ ಮುಸ್ಲಿಂ ಮುಖಂಡರ ಸಿಟ್ಟು, ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ್ರ ಸಿದ್ದರಾಮಯ್ಯ!

ಬೆಂಗಳೂರು: ಶಾಸಕ ಜಮೀರ್‌ ಅಹ್ಮದ್ ಖಾನ್‌ ಜೊತೆ ಸ್ನೇಹ ಮುಸ್ಲಿಂ ಶಾಸಕರು ಹಾಗೂ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದ್ದು ಇದೀಗ ಎಚ್ಚೆತ್ತುಕೊಂಡಿರುವ ಸಿದ್ದರಾಮಯ್ಯ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದಂತಿದೆ. ಸಿದ್ದರಾಮಯ್ಯ ನಡೆಯಿಂದ ಮುನಿಸಿಕೊಂಡು ದೂರವಾಗಿದ್ದ ಆಪ್ತ ಸ್ನೇಹಿತ ಸಿಎಂ ಇಬ್ರಾಹಿಂ ಮನೆಗೆ ಸ್ವತಃ ಸಿದ್ದರಾಮಯ್ಯ ತೆರಳಿ ಮಾತುಕತೆ ನಡೆಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಜೆಡಿಎಸ್‌ನಲ್ಲಿದ್ದ ಶಾಸಕ ಜಮೀರ್‌ ಅಹ್ಮದ್ ಖಾನ್ ಕಾಂಗ್ರೆಸ್ ಸೇರ್ಪಡೆಗೊಂಡು ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಜಮೀರ್‌ ಹತ್ತಿರ ಆಗುತ್ತಿದ್ದಂತೆ ಕಾಂಗ್ರೆಸ್‌ನ ಇತರ ಮುಸ್ಲಿಂ ನಾಯಕರು ಸಿದ್ದರಾಮಯ್ಯ ಅವರಿಂದ ದೂರವಾಗುತ್ತಿದ್ದಾರೆ. ಮಾಜಿ ಶಾಸಕ ರೋಷನ್ ಬೇಗ್‌, ಆಪ್ತ ಸ್ನೇಹಿತ ಹಾಗೂ ವಿಧಾನಪರಿಷತ್‌ ಸದಸ್ಯರಾಗಿದ್ದ ಸಿ.ಎಂ ಇಬ್ರಾಹಿಂ ಹಾಗೂ ಇದೀಗ ತನ್ವೀರ್‌ ಸೇಠ್ ಸಿದ್ದರಾಮಯ್ಯ ಜೊತೆ ಮುನಿಸಿಕೊಂಡಿದ್ದಾರೆ. ಅದರಲ್ಲೂ ಸಿಎಂ ಇಬ್ರಾಹಿಂ ಕಾಂಗ್ರೆಸ್ ತೊರೆದು ಇನ್ನೇನು ಜೆಡಿಎಸ್ ಸೇರ್ಪಡೆ ಆಗುತ್ತಾರೆ ಎನ್ನಲಾಗಿತ್ತು. ತನ್ವೀರ್‌ ಸೇಠ್‌ಗೂ ಜೆಡಿಎಸ್ ಆಹ್ವಾನ ನೀಡಿತ್ತು. ಕೇವಲ ಇವರು ಮಾತ್ರ ಅಲ್ಲದೆ ಇತರ ಮುಸ್ಲಿಂ ಶಾಸಕರೂ ಸಿದ್ದರಾಮಯ್ಯ ಅವರ ನಡೆಯಿಂದ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಅವರ ಆಪ್ತ ವಲಯದಿಂದ ತಿಳಿದುಬಂದಿದೆ. ಇದರ ಆರಂಭಿಕ ಹೆಜ್ಜೆಯಾಗಿ ಸಿದ್ದರಾಮಯ್ಯ ಸ್ವತಃ ಸಿಎಂ ಇಬ್ರಾಹಿಂ ಅವರ ನಿವಾಸಕ್ಕೆ ತೆರಳಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಈ ಹಿಂದೆ ಪಕ್ಷ ತೊರೆಯುವ ಮಾತನ್ನಾಡಿದ್ದರೂ ಸಿಎಂ ಇಬ್ರಾಹಿಂ ಜೊತೆಗೆ ಸಿದ್ದರಾಮಯ್ಯ ಮಾತನಾಡಿರಲಿಲ್ಲ. ಯಾವುದೇ ಬಹಿರಂಗ ಹೇಳಿಕೆಯನ್ನು ನೀಡಿರಲಿಲ್ಲ. ಇದರಿಂದ ಇಬ್ರಾಹಿಂ ಅವರೂ ಅಸಮಾಧಾನಗೊಂಡಿದ್ದರು. ಸಿದ್ದರಾಮಯ್ಯ ಬದಲಾಗಿದ್ದಾರೆ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದರು. ಆದರೆ ರಾಜಕೀಯ ಸನ್ನಿವೇಶದಲ್ಲಿ ಕೆಲವೊಂದು ಬದಲಾವಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಿ.ಎಂ ಇಬ್ರಾಹಿಂ ಅವರನ್ನು ಸಿದ್ದರಾಮಯ್ಯ ಭೇಟಿ ಆಗಿರುವುದು ಕುತೂಹಲ ಕೆರಳಿಸಿದೆ. ಈ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದರಾ ಎಂಬ ಪ್ರಶ್ನೆ ಉದ್ಭವವಾಗಿದೆ.


from India & World News in Kannada | VK Polls https://ift.tt/3uMdi6R

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...