ಬೆಂಗಳೂರು: ಕೇಂದ್ರದ ಕೃಷಿ ಕಾಯಿದೆ ವಿರೋಧಿಸಿ ಹೊಸದಿಲ್ಲಿಯಲ್ಲಿನ ಪ್ರತಿಭಟನಾನಿರತ ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ ಟ್ವೀಟ್ ಮಾಡಿದ್ದ ಆರೋಪ ಸಂಬಂಧ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ತುಮಕೂರು ಕೋರ್ಟ್‌ನಲ್ಲಿರುವ ಪ್ರಕರಣಕ್ಕೆ ತಡೆ ನೀಡಲು ನಿರಾಕರಿಸಿದೆ. ಕಂಗನಾ ಅವರ ಅರ್ಜಿ ಮಂಗಳವಾರ ನ್ಯಾ.ಎಚ್‌ಪಿ ಸಂದೇಶ್ ಅವರಿದ್ದ ಏಕ-ಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತು. ಆಗ ಕಂಗನಾ ಪರ ವಾದ ಮಂಡಿಸಿದ ವಕೀಲ ರಿಜ್ವಾನ್ ಸಿದ್ದಿಕಿ ತುಮಕೂರಿನ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ಮೊದಲು ಅರ್ಜಿ ಸಂಬಂಧ ಇರುವ ಕಚೇರಿ ಆಕ್ಷೇಪಣೆಗಳನ್ನು ಪೂರ್ಣಗೊಳಿಸಿ. ನಂತರ ನಿಮ್ಮ ವಾದ ಆಲಿಸಲಾಗುವುದು. ಅಲ್ಲಿಯವರೆಗೆ ತಡೆ ನೀಡಲಾಗದು ಎಂದು ಹೇಳಿ ವಿಚಾರಣೆಯನ್ನು ಮಾ.18ಕ್ಕೆ ಮುಂದೂಡಿತು. ನಟಿ ಕಂಗನಾ ರಣಾವತ್ ಪರ ವಕೀಲರು, ತುಮಕೂರಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ದಾಖಲಿಸಿರುವ ಖಾಸಗಿ ದೂರು ಹಾಗೂ ಕೋರ್ಟ್ ಆದೇಶದ ಮೇರೆಗೆ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿದ್ದಾರೆ.
from India & World News in Kannada | VK Polls https://ift.tt/383Cz2J