ಸ್ವೀಡನ್‌: ಮಟ ಮಟ ಮಧ್ಯಾಹ್ನ ಎಂಟು ಜನರಿಗೆ ಚೂರಿ ಇರಿದ ದುಷ್ಕರ್ಮಿ, ಉಗ್ರ ಕೃತ್ಯ ಶಂಕೆ!

ಸ್ವೀಡನ್‌: ಸ್ವೀಡನ್‌ನ ನಗರದಲ್ಲಿ ಬುಧವಾರ ದುಷ್ಕರ್ಮಿಯೊಬ್ಬ ಎಂಟು ಜನರಿಗೆ ಇರಿದಿರುವ ಪೈಶಾಚಿಕ ಘಟನೆ ನಡೆದಿದೆ. ಈ ಪೈಕಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇನ್ನು ಹಲ್ಲೆಕೋರನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಅರೆಸ್ಟ್‌ ಮಾಡಿದ್ದಾರೆ.ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಟ ಮಟ ಮಧ್ಯಾಹ್ನ ಸುಮಾರು 13,000 ನಿವಾಸಿಗಳಿರುವ ದಕ್ಷಿಣ ನಗರದ ವೆಟ್ಲ್ಯಾಂಡಾಕ್ಕೆ ನುಗ್ಗಿದ ದುಷ್ಕರ್ಮಿ ಏಕಾಏಕಿ ಚಾಕುವಿನಿಂದ ಇರಿದಿದ್ದಾನೆ. ಕೆಲವು ಇದರಲ್ಲಿ ತಪ್ಪಿಸಿಕೊಂಡರೆ, ಕೆಲವರು ಚೂರಿಯ ಹೊಡೆತಕ್ಕೆ ಸಿಲುಕಿಕೊಂಡಿದ್ದಾರೆ. ಮಾಹಿತಿ ಸಿಕ್ಕ ತಕ್ಷಣ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು 20 ವರ್ಷದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ಇದೊಂದು ಉಗ್ರ ಕೃತ್ಯ ಎಂದು ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಸ್ವೀಡನ್‌ನ ಗುಪ್ತಚರ ಸಂಸ್ಥೆಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಆರಂಭದಲ್ಲಿ ಇದೊಂದು ಕೊಲೆ ಯತ್ನ ಎಂಬ ಕೇಸ್‌ ಪೊಲೀಸರು ದಾಖಲಿಸಿದ್ದರು. ಆದರೆ ಈ ಘಟನೆ ಹಿಂದೆ ಉಗ್ರ ಕೃತ್ಯದ ಶಂಕೆ ವ್ಯಕ್ತವಾಗಿದೆ. ಜಿಹಾದಿನ ಅಮಲಿನಲ್ಲಿ ಯುವಕ ದಾಳಿ ನಡೆಸಿರುವುದು ತಿಳಿದಿದೆ. ಹೀಗಾಗಿ ತನಿಖೆ ಬಳಿಕವಷ್ಟೇ ಸ್ಪಷ್ಟ ಉತ್ತರ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಶಾಪಿಂಗ್‌ ಮಾಡುತ್ತಿದ್ದ ಜನರ ಮೇಲೆ ಟ್ರಕ್‌ವೊಂದನ್ನು ಹರಿಸಲಾಗಿತ್ತು. ಉಗ್ರ ಕೃತ್ಯದ ಭಾಗವಾಗಿ ಈ ದುಷ್ಕೃತ್ಯ ಎಸಗಲಾಗಿತ್ತು. ಈ ಘಟನೆಯಲ್ಲಿ ಇಬ್ಬರು ಸಾವನಪ್ಪಿದ್ದರು.


from India & World News in Kannada | VK Polls https://ift.tt/3e6C9MM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...