ಒಕ್ಕಲಿಗರಿಗೆ ಮೀಸಲು ನೀಡುವ ವಿಚಾರಕ್ಕೆ ನನ್ನ ಬೆಂಬಲವಿಲ್ಲ: ಸಚಿವ ಸಿ.ಪಿ.ಯೋಗೇಶ್ವರ್‌

ಮೈಸೂರು : ಒಕ್ಕಲಿಗರಿಗೆ ಮೀಸಲು ನೀಡುವ ವಿಚಾರಕ್ಕೆ ನನ್ನ ಬೆಂಬಲವಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ತಿಳಿಸಿದರು. ನಗರದ ಜಯಲಕ್ಷ್ಮಿಪುರಂನಲ್ಲಿರುವ ಸಂಸದ ವಿ.ಶ್ರೀನಿವಾಸಪ್ರಸಾದ್‌ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ, ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ''ಸಂವಿಧಾನ ಬದ್ಧವಾಗಿ ಯಾರಿಗೆ ಏನು ಸಿಗಬೇಕು ಅದು ಸಿಕ್ಕಿಲ್ಲ. ಅಶಕ್ತ ವರ್ಗದವರಿಗೆ ಮೊದಲು ಮೀಸಲು ಸಿಗಬೇಕಿದೆ. ಒಕ್ಕಲಿಗರಿಗೆ ಮೀಸಲು ನೀಡಲು ನನ್ನ ವಿರೋಧವಿದೆ'' ಎಂದು ಹೇಳಿದರು. ''ಮೊದಲು ಸಣ್ಣ ಸಮಾಜಗಳಿಗೆ ಮೀಸಲು ನೀಡಬೇಕು. ಅದನ್ನು ಬಿಟ್ಟು ಉಳ್ಳವರೇ ಶಕ್ತಿ ಪ್ರದರ್ಶನ ಮಾಡುವುದು ಸರಿಯಲ್ಲ. ಆ ರೀತಿ ಶಕ್ತಿ ಪ್ರದರ್ಶನ ಮಾಡುವುದನ್ನು ನಾನು ವೈಯಕ್ತಿಕವಾಗಿ ಒಪ್ಪುವುದಿಲ್ಲ. ಮೇಲ್ವರ್ಗಕ್ಕೆ ಮೀಸಲು ಕೊಡಲು ನನ್ನ ಬೆಂಬಲವಿಲ್ಲ'' ಎಂದರು. ''ಕುಟುಂಬ ರಾಜಕಾರಣ ಮಾಡುವವನು ನಾನಲ್ಲ. ನನ್ನ ಕುಟುಂಬದಿಂದ ಯಾರೂ ರಾಜಕೀಯಕ್ಕೆ ಬರುವುದಿಲ್ಲ. ಚಾಮುಂಡೇಶ್ವರಿ ದರ್ಶನಕ್ಕೆ ಬಂದಿದ್ದರಿಂದ ಮಗ ಶ್ರವಣ್‌ನನ್ನು ಕರೆದುಕೊಂಡು ಬಂದಿದ್ದೇನೆ. ಪ್ರಸಾದ್‌ ಅವರನ್ನು ಅವನಿಗೆ ಭೇಟಿ ಮಾಡಿಸಿ ಪರಿಚಯ ಮಾಡಿಸಿದ್ದೇನೆಯೇ ಹೊರತೂ ಬೇರೆ ಯಾವ ಉದ್ದೇಶವೂ ಇಲ್ಲ'' ಎಂದು ಹೇಳಿದರು. ಕೀಳರಿಮೆ ಇಲ್ಲ! ''ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರನ್ನು ಭೇಟಿ ಮಾಡಲು ನನಗೆ ಯಾವುದೇ ಕೀಳರಿಮೆ ಇಲ್ಲ. ಮೈಸೂರಿನಲ್ಲಿ ಸಿಕ್ಕರೆ ಭೇಟಿಯಾಗುತ್ತೇನೆ. ನನಗೆ ವೈಯಕ್ತಿಕ ಟೀಕೆಗಳ ಬಗ್ಗೆ ಮಾತನಾಡಲು ಆಸಕ್ತಿ ಇಲ್ಲ. ಅವರು ಹಿರಿಯರು. ಆರೋಪ - ಪ್ರತ್ಯಾರೋಪ ಸಹಜ. ಅವರು ನನ್ನ ಮೇಲೆ ಆರೋಪ ಮಾಡಿದ್ದರೂ ಯಾವುದೇ ಬೇಸರವಿಲ್ಲ. ಅದು ರಾಜಕೀಯದಲ್ಲಿ ಸರ್ವೆ ಸಾಮಾನ್ಯ'' ಎಂದರು.


from India & World News in Kannada | VK Polls https://ift.tt/3sOmUfH

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...