ಪುತ್ತೂರು: ಪೊಲೀಸ್‌ ಠಾಣೆಯಲ್ಲೇ ಮಹಿಳಾ ಎಸ್‌ಐ ಮೇಲೆ ಹಲ್ಲೆ ನಡೆಸಿದ ಸಹೋದರಿಯರು, ಆಸ್ಪತ್ರೆಗೆ ದಾಖಲು!

ಪುತ್ತೂರು: ಮಹಿಳಾ ಪೊಲೀಸ್‌ ಠಾಣೆಯ ಎಸ್‌ಐ ಅವರ ಮೇಲೆ ಮಹಿಳೆಯರಿಬ್ಬರು ಠಾಣೆಯಲ್ಲೇ ಹಲ್ಲೆ ಮಾಡಿದ ಪ್ರಕರಣ ನಡೆದಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಮಹಿಳಾ ಪೊಲೀಸ್‌ ಠಾಣೆಯ ಎಸ್‌.ಐ ಸೇಸಮ್ಮ ಅವರು ಹಲ್ಲೆಗೊಳಗಾಗಿದ್ದಾರೆ. ಆರೋಪಿಗಳಾದ ಸಾಲ್ಮರ ಮುದ್ದೋಡಿ ನಿವಾಸಿ ಲಾರೆನ್ಸ್‌ ಡಿಸೋಜರ ಪತ್ನಿ ಬೇಬಿ ಡಿಸೋಜ(34) ಮತ್ತು ಹಾಸನ ಚೆನ್ನರಾಯಪಟ್ಟಣದ ನುಗ್ಗೆಹಳ್ಳಿ ನೆಟ್ಟಕೆರೆ ಗೋಪಾಲ ಎಂಬವರ ಪತ್ನಿ ಆಶಾ(35) ಬಂಧಿತ ಆರೋಪಿಗಳು. ಫೆ. 28ರಂದು ಸುನಿತಾ ಡಿ ಸೋಜಾ ಮತ್ತು ಬೇಬಿ ಡಿಸೋಜಾ ಎಂಬವರು ಮಹಿಳಾ ಠಾಣೆಯಲ್ಲಿ ಪರಸ್ಪರರ ವಿರುದ್ಧ ಮಹಿಳಾ ಠಾಣೆಗೆ ದೂರು ನೀಡಿದ್ದರು. ವಿಚಾರಣೆಗಾಗಿ ಅವರಿಬ್ಬರನ್ನೂ ಸೋಮವಾರ ಠಾಣೆಗೆ ಕರೆಸಲಾಗಿತ್ತು. ಈ ಸಂದರ್ಭ ಬೇಬಿಯವರ ಅಕ್ಕ ಆಶಾ ಕೂಡ ಬಂದಿದ್ದರು. ಮಹಿಳಾ ಎಸ್‌ಐ ವಿಚಾರಣೆ ನಡೆಸುತ್ತಿದ್ದಾಗ ಬೇಬಿ ಡಿಸೋಜಾ ತನ್ನ ಪತಿ ಲಾರೆನ್ಸ್‌ಗೆ ಹಲ್ಲೆ ನಡೆಸಲು ಮುಂದಾಗಿದ್ದು, ಎಸ್‌ಐ ಇದನ್ನು ತಪ್ಪಿಸಿದರು. ತಕ್ಷಣ ಬೇಬಿ ಮತ್ತು ಆಶಾ ಸೇರಿಕೊಂಡು ಎಸ್‌.ಐ. ಸೇಸಮ್ಮ ಅವರಿಗೆ ಹಲ್ಲೆನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಎಸ್‌.ಐ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಮಹಿಳಾ ಠಾಣೆಯ ಸಿಬ್ಬಂದಿ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಹೋದರಿಯರನ್ನು ಬಂಧಿಸಲಾಗಿದೆ.


from India & World News in Kannada | VK Polls https://ift.tt/3uRkzCe

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...