‘ರಾಸಲೀಲೆ, ರಸಲೀಲೆ ಮತ್ತು ಕರ್ಮಕಾಂಡಗಳ ನಡುವೆ ರಾಜಕಾರಣ ನಡೆಯುತ್ತಿದೆ’; ಸಿಎಂ ಇಬ್ರಾಹಿಂ

ಮೈಸೂರು: ಪರಸತಿ, ಪರಧನ ಮತ್ತು ಪರದೇಶಿ ಮದ್ಯ ರಾಜಕಾರಣ ಓಡಾಡುತ್ತಿದೆ. ರಾಸಲೀಲೆ, ರಸಲೀಲೆ ಮತ್ತು ಕರ್ಮಕಾಂಡಗಳ ನಡುವೆ ರಾಜಕಾರಣ ನಡೆಯುತ್ತಿದೆ ಎಂದು ರಮೇಶ್‌ ಜಾರಕಿಹೊಳಿ ಅವರ ಸಿಡಿ ಪ್ರಕರಣವನ್ನು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಗಿ ವಿರ್ಮಶಿಸಿದ್ದಾರೆ. ಮೈಸೂರಿನಲ್ಲಿ ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿದ ಇಬ್ರಾಹಿಂ, ಕರ್ನಾಟಕಕ್ಕೆ ನತದೃಷ್ಟ ಮುಖ್ಯಮಂತ್ರಿ ಸಿಕ್ಕಿರೋದು ದುರ್ದೈವ. ಸಿಎಂಗೆ ತಕ್ಕ ಸಹಪಾಠಿ ಮಂತ್ರಿಗಳಿದ್ದಾರೆ. ಇವರ ಮಧ್ಯೆ ಕೇಶವ ಕೃಪ, ಬಸವರ ಕೃಪ ಒದ್ದಾಡುತ್ತಿವೆ. ಈಗಿನ ರಾಜಕಾರಣಿಗಳು ಹೈಬ್ರಿಡ್‌ ತಳಿಗಳು. ನಾಟಿ ತಳಿಗಳು ಸಿಕ್ತಾ ಇಲ್ಲ. ಮರ್ಯಾದಸ್ಥರು ಸಿಗೋದು ವಿರಳವಾಗಿದೆ ಎಂದರು. ಇನ್ನು ನಾನು ಕಾಂಗ್ರೆಸ್‌ನಲ್ಲಿ ಉಳಿಯೋಕೆ ಒಂದು ಡಿಮ್ಯಾಂಡ್‌ ಇದೆ ಎಂದಿರುವ ಇಬ್ರಾಹಿಂ, ದಿಲ್ಲಿಗೆ ಹೋಗಿ ಮೇಡಂ ಅವರನ್ನು ಭೇಟಿ ಮಾಡಿ ಬಂದ ನಂತರ ನನ್ನ ನಿರ್ಧಾರ ತಿಳಿಸುತ್ತೇನೆ. ಒಂದು ವರ್ಷ ಆದ್ಮೇಲೆ ಸಿದ್ದರಾಮಯ್ಯ ನಾವು ಭೇಟಿಯಾಗಿದ್ದೇವೆ. ನಾನು ಸಿದ್ದರಾಮಯ್ಯ ರಾಜಕೀಯ ವಿಚಾರ ಮಾತ್ರ ಮಾತನಾಡಿದ್ದೇವೆ. ನಮ್ಮಿಬ್ಬರ ಮಧ್ಯೆ ಯಾವುದೇ ವ್ಯಾಪಾರ ಇಲ್ಲ ಎಂದರು. ಅಲ್ಲದೇ ನಾನು ದೇವೇಗೌಡರನ್ನು ಭೇಟಿ ಮಾಡಿದ್ದೆ. ಅಡ್ವಾಣಿ ಮನೆಗೂ ಹೋಗಿದ್ದೆ. ವಿಶ್ವಾಸಕ್ಕೆ ಯಾವುದೇ ಜಾತಿ ಪಕ್ಷ ಇಲ್ಲ. ಆರ್‌ಎಸ್‌ಎಸ್‌ನಲ್ಲಿಯೂ ನನಗೆ ಸ್ನೇಹಿತರಿದ್ದಾರೆ. ದೇಶಕ್ಕೆ ಒಳ್ಳೆಯದಾಗಬೇಕು ಅನ್ನೋದೆ ನಮ್ಮ ಉದ್ದೇಶ ಎಂದು ಹೇಳಿದರು.


from India & World News in Kannada | VK Polls https://ift.tt/3bXWDoq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...