ನೆಟ್‌‍ ಹೌಸ್‌‍ನಲ್ಲಿ ಅರಳಿದ ಸೇವಂತಿಗೆ; ಹೂವು, ತರಕಾರಿ ಬೆಳೆಗೂ ಅನುಕೂಲ: ಕೀಟ ಬಾಧೆ, ರೋಗಬಾಧೆ ತಡೆ!

ಕಣಿತಹಳ್ಳಿ ಎನ್‌.ಚಂದ್ರೇಗೌಡ ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪುಷ್ಪೋದ್ಯಮ ಏರುಗತಿಯಿಂದ ಸಾಗುತ್ತಿದ್ದು, ಗುಲಾಬಿ ಕೃಷಿಯಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ರೈತರು ಈಗ ಸೇವಂತಿ ಕೃಷಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರಾತ್ರಿ ವೇಳೆ ಸೇವಂತಿ ಬೆಳೆಯಲ್ಲಿ ಲೈಟ್‌ಗಳನ್ನು ಬೆಳಗಿಸಿ ರೈತರು ಗಮನ ಸೆಳೆದಿದ್ದರು. ಚಳಿಗಾಲದಲ್ಲಿ ಹಗಲಿನ ಅವಧಿ ಕಡಿಮೆ ಎನ್ನುವ ಕಾರಣಕ್ಕೆ ದೀಪ ಬೆಳಗಿಸಿ ಹೆಚ್ಚಿನ ಫಸಲು ಮತ್ತು ಗುಣಮಟ್ಟದ ಹೂವನ್ನು ರೈತರು ಬೆಳೆದಿದ್ದರು. ಈಗ ಸೇವಂತಿ ಬೆಳೆಯಲು ನೆಟ್‌‍ಹೌಸ್‌ ಮೊರೆ ಹೋಗಿದ್ದಾರೆ. ಕೀಟನಾಶಕ ಸಿಂಪಡಿಸುವ ಅಗತ್ಯವಿಲ್ಲಒಂದು ಎಕರೆ ನೆಟ್‌‍ಹೌಸ್‌ ನಿರ್ಮಿಸಬೇಕಾದರೆ 2-3 ಲಕ್ಷ ರೂ.ವರೆಗೂ ಖರ್ಚು ಬರಲಿದೆ. ಸುಮಾರು 3-4 ವರ್ಷದವರೆಗೂ ಈ ನೆಟ್‌‍ ಹೌಸ್‌‍ನಲ್ಲಿ ಬೆಳೆ ಬೆಳೆಯಬಹುದು. ಇದರಿಂದ ಹಾಕಿದ ಬಂಡವಾಳಕ್ಕಿಂತ ದುಪ್ಪಟ್ಟು ಲಾಭಕ್ಕೆ ಯಾವುದೇ ಮೋಸವಿಲ್ಲ. ಕೇವಲ ಹೂವಿನ ಬೆಳೆ ಮಾತ್ರವಲ್ಲ. ಬೆಳೆ ಬೆಳೆಯಬಹುದು. ಬೆಳೆಗೆ ಈ ನೆಟ್‌‍ಹೌಸ್‌ ಹೇಳಿ ಮಾಡಿಸಿದಂತಿದೆ. ಅತಿ ಹೆಚ್ಚು ಕೀಟಬಾಧೆಗೆ ತುತ್ತಾಗುವ ಸೇವಂತಿ ಬೆಳೆಗೆ ನೆಟ್‌‍ ಹೌಸ್‌‍ನಲ್ಲಿ ರೋಗಗಳು ಆವರಿಸುವುದೇ ಕಡಿಮೆ. ಹೀಗಾಗಿ ಅತಿ ಹೆಚ್ಚಿನ ಕೀಟನಾಶಕ ಸಿಂಪಡಿಸುವ ಅಗತ್ಯವಿರುವುದಿಲ್ಲ. ಕೀಟನಾಶಕಕ್ಕೆ ಖರ್ಚು ಮಾಡುವ ಸಾವಿರಾರು ರೂ. ಹಣ ಉಳಿಯಲಿದೆ. ಹೊಸ ತಳಿಗೆ ಡಿಮ್ಯಾಂಡ್‌ ಇನ್ನು ಇದು ಮಾಮೂಲಿ ಸೇವಂತಿಯಲ್ಲ. ಐಶ್ವರ್ಯ 2 ತಳಿಯ ಸೇವಂತಿ ಇದಾಗಿದ್ದು, ಚೆಂಡು ಹೂವಿನಂತೆ ದಿಂಡು ಇರಲಿದೆ. ಅಲ್ಲದೇ ಕೆಲ ದಿನಗಳ ಕಾಲ ಬಾಡದೆ ಉಳಿಯಲಿದೆ. ಹೀಗಾಗಿ ಮಾರುಕಟ್ಟೆಯಲ್ಲೂ ಈ ತಳಿಗೆ ಭಾರಿ ಡಿಮ್ಯಾಂಡ್‌‍ ಇದ್ದು, ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ. ಮದುವೆ ಮನೆಗಳ ಅಲಂಕಾರಕ್ಕೂ ಈ ಸೇವಂತಿಯನ್ನು ಹೆಚ್ಚಾಗಿ ಬಳಸುತ್ತಾರೆ. ಅಲ್ಲದೇ ದೊಡ್ಡ ಕಾರ್ಯಕ್ರಮಗಳು, ಹೂವಿನ ಹಾರಗಳಲ್ಲೂ ಈ ಹೂವನ್ನು ಬಳಸಲಾಗುತ್ತಿದ್ದು, ಐಶ್ವರ್ಯ ತಳಿಯ ಸೇವಂತಿ ಹೂವಿಗೆ ಭಾರಿ ಬೇಡಿಕೆ ಇದೆ. ಎಚ್‌‍ಎನ್‌ ವ್ಯಾಲಿ ವರದಾನ ಬೇಸಿಗೆ ಬಂತೆಂದರೆ ಈ ಭಾಗದ ರೈತರಿಗೆ ಕುಡಿವ ನೀರು ಸಿಗುವುದೂ ಕಷ್ಟವಾಗಿತ್ತು. ಆದರೆ ಎಚ್‌‍ಎನ್‌ ವ್ಯಾಲಿ ನೀರಿನಿಂದ ಈ ಭಾಗದ ಹಲವು ಕೆರೆಗಳು ತುಂಬಿಕೊಂಡಿದ್ದು, ಅಂತರ್ಜಲಮಟ್ಟ ಏರಿಕೆಯಾಗಿದೆ. ಹೀಗಾಗಿ ಬೇಸಿಗೆಯಲ್ಲೂ ಬೆಳೆ ಬೆಳೆಯಲು, ಅದರಲ್ಲೂ ಹೂವಿನ ಕೃಷಿಗೆ ಭಾರಿ ಅನುಕೂಲವಾಗಿದೆ. ನೆಟ್‌‍ಹೌಸ್‌‍ ವರದಾನ ನೆಟ್‌‍ಹೌಸ್‌‍ ಕೃಷಿ ಸೇವಂತಿ ಬೆಳೆಗೆ ಹೇಳಿ ಮಾಡಿಸಿದಂತಿದೆ. ತಾಲೂಕಿನ ಅಣಕನೂರು, ಕೊತ್ತನೂರು, ಬನ್ನಿಕುಪ್ಪೆ, ತಮ್ಮನಾಯಕನಹಳ್ಳಿ ಹೀಗೆ ಹಲವೆಡೆ ಈ ನೆಟ್‌‍ಹೌಸ್‌‍ಗಳನ್ನು ಕಾಣಬಹುದು. ಅತಿ ಸೂಕ್ಷ್ಮ ಬೆಳೆಯಾಗಿರುವ ಸೇವಂತಿಗೆ ವಾತಾವರಣದಲ್ಲಿ ಸ್ವಲ್ಪ ಏರುಪೇರಾದರೂ ನಾನಾ ರೋಗಗಳಿಗೆ ತುತ್ತಾಗುವುದು ನಿಶ್ಚಿತ. ಹೀಗಾಗಿ ಒಂದೇ ವಾತಾವರಣ ಒದಗಿಸಲು ನೆಟ್‌‍ಹೌಸ್‌ ಭಾರೀ ಸಹಕಾರಿ. ಅಲ್ಲದೇ ಅತಿ ಹೆಚ್ಚಿನ ಬಿಸಿಲು ಮತ್ತು ಚಳಿ ಗಿಡಕ್ಕೆ ತಾಕದಂತೆ ತಡೆಯಬಹುದು. ಹೀಗಾಗಿ ಸೇವಂತಿಯಿಂದ ಹೆಚ್ಚಿನ ಫಸಲು ಮತ್ತು ಗುಣಮಟ್ಟ ನಿರೀಕ್ಷಿಸಬಹುದು ಎನ್ನುತ್ತಾರೆ ರೈತರು. ಸೇವಂತಿಗೆ ಬೆಳೆಯುವುದು ಭಾರಿ ಕಷ್ಟ. ಆದರೆ ನೆಟ್‌‍ಹೌಸ್‌‍ನಲ್ಲಿ ಸೇವಂತಿಗೆ ಬೆಳೆಯುವುದು ಭಾರಿ ಸುಲಭ ಮತ್ತು ಲಾಭದಾಯಕ. ಹೆಚ್ಚಿನ ಕೀಟಬಾಧೆಯಿಲ್ಲದೆ ಗಿಡಗಳನ್ನು ರಕ್ಷಿಸಬಹುದಲ್ಲದೆ ಗುಣಮಟ್ಟ ಮತ್ತು ಫಸಲನ್ನು ಪಡೆಯಲು ಸಾಧ್ಯ. ಗಂಗಾಧರ್‌ ಹೂ ಬೆಳೆಗಾರ


from India & World News in Kannada | VK Polls https://ift.tt/3e7QSao

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...