ರಾಜಕೀಯದಲ್ಲಿ ವೃದ್ಧಿಸಿದ್ದ ಸಾಹುಕಾರ್‌ ರಮೇಶ್‌ ಜಾರಕಿಹೊಳಿ ವರ್ಚಸ್ಸಿಗೆ ಮಸಿ ಬಳಿದ ಅಶ್ಲೀಲ ವಿಡಿಯೋ!

ಬೆಳಗಾವಿ: ಜಲಸಂಪನ್ಮೂಲ ಸಚಿವ, ಜಿಲ್ಲಾಉಸ್ತುವಾರಿ ಸಚಿವ ಅವರ ಸೆಕ್ಸ್‌ ವಿಡಿಯೋ ಜಿಲ್ಲೆಯಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಬೆಳಗಾವಿ ಲೋಕಸಭೆ ಉಪಚುನಾವಣೆ ಎದುರು ನೋಡುತ್ತಿರುವ ಬಿಜೆಪಿಯಲ್ಲೂ ತಳಮಳ ಶುರುವಾಗಿದೆ. ಕಾಂಗ್ರೆಸ್‌ ತೊರೆದು ಸೇರುವ ಸಂದರ್ಭದಲ್ಲಿಯೂ ಮಹಿಳೆಯೊಂದಿಗೆ ರಮೇಶ್‌ ಜಾರಕಿಹೊಳಿ ಅಸಭ್ಯವಾಗಿ ಮಾತನಾಡಿದ್ದಾರೆ ಎಂಬ ಆಡಿಯೊ ವ್ಯಾಪಕ ವೈರಲ್‌ ಆಗಿತ್ತು. ಆದರೆ, ಅದರಲ್ಲಿ ಕೇವಲ ಧ್ವನಿ ಅಷ್ಟೇ ಇದ್ದಿದ್ದರಿಂದ ಅಷ್ಟು ದೊಡ್ಡ ಸುದ್ದಿಯಾಗಲಿಲ್ಲ. ಈ ಬಾರಿ ವಿಡಿಯೋ ಹೊರಬಿದ್ದಿದೆ. ಆ ವಿಯೋ ಜಿಲ್ಲೆಯಾದ್ಯಂತ ಮೊಬೈಲ್‌ಗಳಲ್ಲಿ ವೇಗವಾಗಿ ಶೇರ್‌ ಆಗುತ್ತಿವೆ. ಸಾಮಾನ್ಯರ ಕೈಗೂ ತಲುಪಿದೆ. ಬೆಳಗಾವಿ ಲೋಕಸಭೆ ಉಪಚುನಾವಣೆ ಹೊಸ್ತಿಲಲ್ಲಿರುವ ಬಿಜೆಪಿಗೆ ಇದು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಅಧಿವೇಶನದಲ್ಲಿ ನೀಲಿ ಚಿತ್ರ ನೋಡಿದ್ದಕ್ಕಾಗಿ ಈಗಿನ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಆಗ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂದಿತ್ತು. ಈಗ ಅದೇ ಜಿಲ್ಲೆಯ ರಮೇಶ್‌ ಜಾರಕಿಹೊಳಿ ಅವರು ಅನ್ಯ ಮಹಿಳೆಯೊಂದಿಗೆ ನಡೆಸಿದ ಸೆಕ್ಸ್‌ ವಿಡಿಯೊ ಜನರ ಕೈಗೆ ಸಿಕ್ಕಿದ್ದರಿಂದ ಬಿಜೆಪಿ ಕಾರ್ಯಕರ್ತರಲ್ಲೂ ಮುಜುಗರ ತಂದಿರಿಸಿದೆ. ನೇರ ನುಡಿಯ ರಮೇಶ್‌ ಜಾರಕಿಹೊಳಿ ಹಠತನದ ರಾಜಕಾರಣದಿಂದ ಹೆಚ್ಚು ಸುದ್ದಿಯಾಗಿದ್ದರು. ಈ ಹಿಂದೆ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ವಿಷಯವಾಗಿ ಲಕ್ಷ್ಮಿ ಹೆಬ್ಬಾಳಕರ ಅವರೊಂದಿಗೆ ನಡೆದ ಸಂಘರ್ಷದಿಂದ ಸರಕಾರವನ್ನೇ ಅಲ್ಲಾಡಿಸಿದ್ದರು. ಅದಾದ ಬಳಿಕ ಕಾಂಗ್ರೆಸ್‌ಗೆ ಸೆಡ್ಡು ಹೊಡೆದು ಬಿಜೆಪಿ ಅಧಿಕಾರ ಹಿಡಿಯಲು ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಮಹಾರಾಷ್ಟ್ರದ ಬಿಜೆಪಿ ಉಸ್ತುವಾರಿಯಾಗಿಯೂ ನೇಮಕವಾಗಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಅವರ ವರ್ಚಸ್ಸು ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಬದಲಾಗಿತ್ತು. ಜನರು ರಮೇಶ್‌ ಜಾರಕಿಹೊಳಿ ಅವರನ್ನು 'ಅಂದುಕೊಂಡಿದ್ದನ್ನು ಸಾಧಿಸುವ ಹಠವಾದಿ' ಎನ್ನುವ ದೃಷ್ಟಿಯಿಂದಲೇ ನೋಡುತ್ತಿದ್ದರು. ಇದೊಂದು ವಿಡಿಯೊ ಅವರ ಬಗ್ಗೆಯೇ ಮಾತನಾಡುವಂತೆ ಮಾಡಿದೆ. ಇನ್ನೊಂದೆಡೆ, ಬೆಳಗಾವಿ ಲೋಕಸಭೆ ಚುನಾವಣೆ ಕೂಡ ರಮೇಶ್‌ ಜಾರಕಿಹೊಳಿ ಅವರಿಗೆ ಪ್ರತಿಷ್ಠೆಯ ವಿಷಯ ಎಂದು ಹೇಳಲಾಗುತ್ತಿತ್ತು. ಸಹೋದರರ (ರಮೇಶ್‌ ಮತ್ತು ಸತೀಶ್‌ ಜಾರಕಿಹೊಳಿ) ಸವಾಲ್‌ ಎಂದು ಬಿಂಬಿಸಲಾಗಿತ್ತು. ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಬಗ್ಗೆಯೂ ಪರೋಕ್ಷವಾಗಿ ವಾಗ್ದಾಳಿ ನಡೆಸಿ ರಮೇಶ್‌ ಸುದ್ದಿಯಾಗುತ್ತಲೇ ಇದ್ದರು. ನಿನ್ನೆ- ಮೊನ್ನೆವರೆಗೂ ಅವರ ವಾಗ್ದಾಳಿ ಮುಂದುವರಿದಿತ್ತು.


from India & World News in Kannada | VK Polls https://ift.tt/3sNUoeb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...