ಕೃಷ್ಣಮೃಗ ವನ್ಯಜೀವಿಧಾಮದಲ್ಲಿ ನೂರ ಹದಿನೈದು ಪಕ್ಷಿಗಳು ಬಲಿ; ವಿದೇಶಿ ಪಕ್ಷಿ ಪ್ರೇಮಿಯಿಂದ ಬಹಿರಂಗ!

ಸಿರಾಜ್ ಅಹಮದ್ ಕೆ.ಎ ಕೊಡಿಗೇನಹಳ್ಳಿ ಮಧುಗಿರಿ: ಕಳೆದ 18 ವರ್ಷಗಳಿಂದ ಕೇವಲ ಕೃಷ್ಣಮೃಗಗಳಿಗೆ ಹೆಸರು ವಾಸಿಯಾಗಿದ್ದ ಜಯಮಂಗಲಿ ಕೃಷ್ಣಮೃಗ ವನ್ಯಧಾಮದಲ್ಲಿ ಇದೀಗಾ ವಿದೇಶಿ ಹಕ್ಕಿಗಳು ಸೇರಿದಂತೆ ನೂರಾರು ಸ್ವದೇಶಿ ಹಕ್ಕಿಗಳು ವಾಸಿಸುತ್ತಿದ್ದು ಅವುಗಳಿಗೆ ಕಂಟಕ ಎದುರಾಗಿದೆ. ಹೌದು, ತುಮಕೂರು ಜಿಲ್ಲೆಯ ತಾಲೂಕಿನ ಮೈದನಹಳ್ಳಿ ಸಮೀಪವಿರುವ ಕೃಷ್ಣಮೃಗ ವನ್ಯಧಾಮವನ್ನು ಸರಕಾರ 2007 ಫೆಬ್ರವರಿಯಲ್ಲಿ ಜಯಮಂಗಲಿ ಕೃಷ್ಣಮೃಗ ಸಂರಕ್ಷಣಾ ಮೀಸಲು ಎಂದು ಘೋಷಿಸಿ 798 ಎಕರೆ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದೆ. ಕೃಷ್ಣಮೃಗ ವನ್ಯಧಾಮ ಕೇವಲ ಜಿಂಕೆಗಳಿಗೆ ಮಾತ್ರ ಸೀಮಿತ ಎನ್ನಲಾಗುತ್ತಿತ್ತು. ಇದೀಗಾ ನೂರಾರು ಬಗೆಯ ದೇಶ ವಿದೇಶಿ ಪಕ್ಷಿಗಳು ಇಲ್ಲಿ ವಾಸವಿರುವ ಬಗ್ಗೆ ವಿದೇಶಿಯೊಬ್ಬರು ಬಹಿರಂಗಪಡಿಸಿದ್ದಲ್ಲದೆ ಇಲ್ಲಿರುವ ವೈನ್ ಯಾರ್ಡ್ ನಿಂದ ಇಲ್ಲಿನ ಪ್ರಾಣಿ- ಸಂಕುಲ ನಾಶವಾಗುತ್ತಿರುವ ಆಘಾತಕಾರಿ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ವಿದೇಶಿ ಪಕ್ಷಿ ಪ್ರೇಮಿ ಕ್ರೀಸ್ ಬೌಡೆನ್ ಶನಿವಾರ ಫೆ. 27ರಂದು ಭೇಟಿ ನೀಡಿ ವನ್ಯಧಾಮದ ಸಮೀಪದಲ್ಲಿರುವ ಬ್ಲ್ಯಾಕ್‍ಬಕ್ ವೈನ್ಯಾಡ್ರ್ಸ್ ಪ್ರೈ. ಲಿಮಿಟೆಡ್ ಅಳವಡಿಸಿರುವ ತಂತಿ ಬೇಲಿಯಿಂದ ಕಾಮನ್ ಮೈನಾ 20, ಜಂಗಲ್ ಮೈನಾ 20, ಬ್ರಾಹ್ಮಣಿ ಮೈನಾ 10, ರೋಸಿ ಸ್ಟಾಲಿರ್ಂಗ್ 10, ರೆಡ್-ವೆಂಟೆಡ್ ಬುಲ್ಬುಲ್ 8, ರೆಡ್-ವಿಸ್ಕರ್ಡ್ ಬುಲ್ಬುಲ್ 1, ಹಳದಿ-ಬಿಲ್ಡ್ ಬಬ್ಲರ್ 4, ರೋಸ್- ರಿಂಗ್ಡ್ ಪ್ಯಾರಕೀಟ್ 4, ಶುಕ್ರ 1, ಜಾನುವಾರು ಎಗ್ರೆಟ್ 1. ಸೇರಿದಂತೆ ಸುಮಾರು 115 ಪಕ್ಷಿಗಳು ಸಾವನ್ನಪ್ಪಿವೆ ಎಂದು ಈ ಬರ್ಡ್ ವೆಬ್ ಸೈಟಿನಲ್ಲಿ ಬಹಿರಂಗಪಡಿಸಿದ್ದಾರೆ. ಕರ್ನಾಟಕದಲ್ಲಿ ಹೆಚ್ಚು ಕೃಷ್ಣಮೃಗ ಹೊಂದಿರುವ ಅತಿ ದೊಡ್ಡ ವನ್ಯಧಾಮದಲ್ಲಿ ಸುಮಾರು 800ಕ್ಕೂ ಹೆಚ್ಚು ಜಿಂಕೆಗಳು ಇಲ್ಲಿ ವಾಸವಿದ್ದು ವನ್ಯಧಾಮದ ಪೂರ್ವ ಭಾಗದಲ್ಲಿ ಬ್ಲಾಕ್‍ಬಕ್ ವೈನ್‍ಯಾರ್ಡ್ ಹಾಗೂ ದ್ರಾಕ್ಷಿ ತೋಟಗಳಿಗೆ ತಂತಿ ಅಳವಡಿಸಿದ್ದು ಈ ಭಾಗಕ್ಕೆ ಬರುವ ವಲಸೆ ಹಕ್ಕಿಗಳಿಗೆ ಇದು ಕಂಟಕವಾಗಿದೆ. ಪ್ರಾಣಿ ಪಕ್ಷಿಗಳಿಗೆ ಮೀಸಲಿಡಿ ಸೀಮಾಂದ್ರ ಗಡಿ ಭಾಗದಲ್ಲಿರುವ ಮೈದನಹಳ್ಳಿಯ ಜಯಂಮಗಲಿ ಕೃಷ್ಣ ಮೃಗ ವನ್ಯಧಾಮದಲ್ಲಿ ಕೇವಲ ಜಿಂಕೆಗಳೇ ವಾಸವಿದ್ದ ಸಂಗತಿ ತಿಳಿದಿತ್ತು. ಆದರೆ ವಿದೇಶಿ ಪಕ್ಷಿ ಪ್ರೇಮಿಯೊಬ್ಬರು ವನ್ಯಧಾಮಕ್ಕೆ ಭೇಟಿ ಕೊಟ್ಟ ನಂತರ ಇಲ್ಲಿನ ವೈವಿಧ್ಯಮಯ ವಾತಾವರಣ, ಪ್ರಾಣಿ ಪಕ್ಷಿಗಳ ಬಗ್ಗೆ ಮಾಹಿತಿ ಸಿಕ್ಕಿದ್ದು ಇಲಾಖೆ ಮಾಡಬೇಕಾದ ಕೆಲಸವನ್ನು ವಿದೇೀಶಿಯೊಬ್ಬರು ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ. ಕನಿಷ್ಟ ಈ ಪಕ್ಷಿ ಪ್ರಾಣಿಗಳಿಗೆ ನೀರು ಆಹಾರ ಕೊಡಲು ಸಾಧ್ಯವಾಗದಿದ್ದರೆ, ಹಕ್ಕಿಗಳಿಗೆ ಸ್ವತಂತ್ರವಾಗಿ ಬದುಕುವ ಹಕ್ಕು ಕಸಿದು ಪ್ರಾಣಿ ಪಕ್ಷಿಗಳ ಹರಣ ಮಾಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಉದಾಸೀನತೆಯಿಂದ ಉತ್ತರಿಸುತ್ತಿದ್ದು ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಪಕ್ಷಿ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಈ ಬಗ್ಗೆ ಮೆಸೇಜ್ ಬಂದಿದೆ ಅದನ್ನು ನಾವು ಚೆಕ್ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಗಿರೀಶ್ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಇಲ್ಲಿನ ಜೀವ ವೈವಿಧ್ಯ ಪ್ರಾಣಿ ಪಕ್ಷಿಗಳ ಸಂಪತ್ತು ಉಳಿಸುವ ಹಕ್ಕು ನಮ್ಮದು, ಪಕ್ಷಿ ಸಂಕುಲ ನಾಶವಾದರೆ ಧೀರ್ಘಕಾಲಕ್ಕೆ ಇಲ್ಲಿ ಯಾವುದೇ ಪ್ರಾಣಿ ಪಕ್ಷಿಗಳು ಇರಲು ಸಾಧ್ಯವಿಲ್ಲ. ಇಲ್ಲಿ ಹುಲ್ಲುಗಾವಲನ್ನು ರಕ್ಷಣೆ ಮಾಡಿ ಪ್ರಾಣಿ ಪಕ್ಷಿಗಳ ಸಂತತಿಗೆ ಅನುಕೂಲ ಕಲ್ಪಿಸಿ ಇಲ್ಲಿನ ಪ್ರಾಣಿ ಪಕ್ಷಿಗಳನ್ನು ದಾಖಲೆಯಾಗಿ ಮಾಡಬೇಕಿದೆ. ಡಾ ಉಮಾಶಂಕರ್ ಪಕ್ಷಿ ಪ್ರೇಮಿ 3 ದಿನಗಳ ಹಿಂದೆ ಈ ಬಗ್ಗೆ ದೂರು ಬಂದಿದ್ದು ವಈ ಬಗ್ಗೆ ವೈನ್‍ಯಾರ್ಡ್ ಮಾಲೀಕರಿಗೆ ಸಮನ್ಸ್ ರೆಡಿ ಮಾಡಿ ಅವರಿಗೆ ಫೋನ್ ಮಾಡಿದ್ದೇವೆ. ಅಲ್ಲಿ ಯಾರು ಪ್ರತಿಕ್ರಿಯೆ ನೀಡುತ್ತಿಲ್ಲ, ನೆಟ್ ಅಳವಡಿಸಿರುವುದರಿಂದ ಹಕ್ಕಿಗಳು ಸಾವನ್ನಪ್ಪುತ್ತವೆ, ಇದನ್ನು ತೆರವು ಮಾಡಲು ಸೂಚಿಸುತ್ತೇವೆ. ಕಾನೂನು ಉಲ್ಲಂಘಿಸಿದರೆ ಇಲಾಖೆಯ ಕಾನೂನಿನಡಿ ಒಂದೆರಡು ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ವಾಸುದೇವಮೂರ್ತಿ ತಾಲೂಕು ಅರಣ್ಯ ಸಂರಕ್ಷಣಾಧಿಕಾರಿ


from India & World News in Kannada | VK Polls https://ift.tt/3e2MgCr

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...