ಮುಧೋಳ: ಲೈಟ್‌ ಕಂಬ ಬಿದ್ದು ಧಗಧಗನೇ ಉರಿದ ಮದುವೆಯ ಟೆಂಪೋ, ಇಬ್ಬರು ಮಹಿಳೆಯರು ಸಜೀವ ದಹನ!

ಮುಧೋಳ: ಸಂಭ್ರಮದಲ್ಲೇ ಊರಿಗೆ ವಾಪಸ್ಸಾಗುತ್ತಿದ್ದವರಿಗೆ ವಿದ್ಯುತ್‌ ಕಂಬದ ನೆಪದಲ್ಲಿ ಎದುರಾದ ಸಾವು ಇಬ್ಬರನ್ನು ಬಲಿ ಪಡೆದಿದೆ. ತಾಲೂಕಿನ ಯಾದವಾಡ ಗ್ರಾಮಸ್ಥರು ಮದುವೆ ಸಂಭ್ರಮದಲ್ಲಿದ್ದಾಗಲೇ ಅವಘಡ ಎದುರಾಗಿದೆ. ಗ್ರಾಮದ ಭಾರತಿ ಭೂಷಣ್ಣವರ ಎಂಬ ಯುವತಿಯ ಮದುವೆಗೆ ತೆರಳಿದ್ದವರು ಸುರಕ್ಷಿತವಾಗಿ ವಾಪಸ್‌ ತಲುಪಲು ಸಾಧ್ಯವಾಗಿಲ್ಲ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿಯಲ್ಲಿ ಮದುವೆಗಾಗಿ ಯಾದವಾಡದಿಂದ ಎರಡು ಕಾರ್‌ ಹಾಗೂ ಒಂದು ಮ್ಯಾಕ್ಸಿ ಕ್ಯಾಬ್‌ನಲ್ಲಿ ಗ್ರಾಮಸ್ಥರು ತೆರಳಿದ್ದರು. ಕಾರ್‌ಗಳಲ್ಲಿದ್ದ ಭೂಷಣ್ಣವರ ಕುಟುಂಬ ಸದಸ್ಯರು ಮುಂಚೆಯೇ ಗ್ರಾಮ ತಲುಪಿದ್ದರು. ಹಿಂದಿದ್ದ ಮ್ಯಾಕ್ಸಿ ಕ್ಯಾಬ್‌ನಲ್ಲಿದ್ದವರಿಗಾಗಿ ಜವರಾಯ ಕಾಯ್ದು ಕುಳಿತಿದ್ದ. ಇನ್ನೇನು ಕೆಲವೇ ಹೊತ್ತಿನಲ್ಲಿ ತಮ್ಮ ಮನೆಗೆ ತೆರಳಬೇಕಿದ್ದವರು ಶವವಾಗಿ ಗ್ರಾಮಕ್ಕೆ ಬರುವಂತಾಯಿತು. ಇಡೀ ವಾಹನಕ್ಕೆ ಬೆಂಕಿ ತಗುಲಿ ಇಬ್ಬರೂ ಮಹಿಳೆಯರು ಸಜೀವ ದಹನವಾದರು. ಉಳಿದವರಿಗೆ ಏನು ಮಾಡಬೇಕು ಎಂದು ದಿಕ್ಕೇ ತೋಚಲಿಲ್ಲ, ವಾಹನವಿಡಿ ಭಸ್ಮವಾಗಿದ್ದು ಅಲ್ಲಿದ್ದವರ ಕರುಳು ಹಿಂಡಿತು. ಸಮೀಪದಲ್ಲಿದ್ದ ಗ್ರಾಮಸ್ಥರು ಹಾಗೂ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಅಗ್ನಿಶಾಮಕ ವಾಹನ ಆಗಮಿಸುವಷ್ಟರಲ್ಲಿ ವಾಹನ ಭಸ್ಮವಾಗಿತ್ತು. ಬಾಗಲಕೋಟೆಯ ಪೊಲೀಸ್‌ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ವಾಹನ ದಟ್ಟಣೆ ನಿಯಂತ್ರಿಸಿದರು. ಸ್ಥಳಕ್ಕೆ ಬಂದ ಗ್ರಾಮಸ್ಥರು ಇಬ್ಬರು ಮೃತಪಟ್ಟಿದ್ದನ್ನು ನೋಡಿ ದಿಗ್ಭ್ರಾಂತರಾದರು. ಮೃತಪಟ್ಟವರ ಸಂಬಂಧಿಕರು ಅಪಘಾತದ ಸ್ಥಳದ ಬಳಿ ಕುಳಿತು ರೋದಿಸುತ್ತಿದ್ದರು. ಯಾದವಾಡ ಗ್ರಾಮದಲ್ಲಿ ಶೋಕದ ವಾತಾವರಣ ನೆಲೆಸಿದೆ.


from India & World News in Kannada | VK Polls https://ift.tt/2NRI0Lr

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...