ಮದ್ಯಪಾನ ಪಾರ್ಟಿಗಾಗಿ ಸ್ನೇಹಿತನ ಕೊಲೆ, ಬೆಂಗಳೂರಿನಲ್ಲಿ ಇಬ್ಬರ ಬಂಧನ

ಬೆಂಗಳೂರು: ಪಾರ್ಟಿಗೆ ಹಣ ಕೊಟ್ಟಿಲ್ಲವೆಂದು ಸ್ನೇಹಿತನನ್ನೇ ಮಾಡಿದ್ದ ಇಬ್ಬರನ್ನು ಹಲಸೂರು ಪೊಲೀಸರು ಕೊಲೆ ನಡೆದ 24 ತಾಸುಗಳಲ್ಲಿ ಬಂಧಿಸಿದ್ದಾರೆ. ದೊಮ್ಮಲೂರು ಲೇಔಟ್‌ನ ಎ.ಕೆ ಕಾಲೊನಿ ನಿವಾಸಿ, ಕೂಲಿ ಕೆಲಸ ಮಾಡುತ್ತಿದ್ದ ಸ್ಟೀಫನ್‌ ಕೊಲೆಯಾದ ವ್ಯಕ್ತಿ. ಆರೋಪಿಗಳಾದ ಮನು (23) ಹಾಗೂ ನಾಗರಾಜ (54) ಎಂಬುವರನ್ನು ಬಂಧಿಸಲಾಗಿದೆ. ಕೂಲಿ ಕೆಲಸ ಮಾಡುವ ಈ ಮೂವರು, ಪ್ರತಿ ಭಾನುವಾರ ಒಟ್ಟಿಗೆ ಸೇರಿ ಮದ್ಯಪಾನ ಪಾರ್ಟಿ ಮಾಡುತ್ತಿದ್ದರು. ಫೆ.28ರಂದು ಕೂಡ ದೊಮ್ಮಲೂರಿನಲ್ಲಿ ನಿರ್ಮಾಣ ಹಂತದ ಬಯಲು ರಂಗ ಮಂದಿರದಲ್ಲಿ ಮದ್ಯಪಾನ ಪಾರ್ಟಿ ಮಾಡಲು ಸೇರಿದ್ದರು. ಈ ವೇಳೆ ಮದ್ಯ ತರಲು ಹಣ ನೀಡಿಲ್ಲವೆಂದು ಸ್ಟೀಫನ್‌ ಜೊತೆಗೆ ಉಳಿದ ಇಬ್ಬರು ಜಗಳ ತೆಗೆದು, ಹಲ್ಲೆ ಮಾಡಿದ್ದಾರೆ. ನಂತರ ಅಲ್ಲೇ ಇರುವ ಕಾಲುವೆಗೆ ತಳ್ಳಿ ತಲೆ ಮೇಲೆ ಸಿಮೆಂಟ್‌ ಇಟ್ಟಿಗೆಗಳನ್ನು ಎತ್ತಿ ಹಾಕಿ ಪರಾರಿಯಾಗಿದ್ದರು. ಹಲಸೂರು ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು, ಗುರುತು ಪತ್ತೆ ಹಚ್ಚಿದ್ದಾರೆ. ಮದ್ಯವ್ಯಸನಿಯಾಗಿರುವ ಸ್ಟೀಫನ್‌ ಯಾರ ಜೊತೆ ಇರುತ್ತಿದ್ದ ಎಂದು ಸ್ನೇಹಿತರ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ನಂತರ ಅನುಮಾನ ಬಂದು ಮನು ಮತ್ತು ನಾಗರಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಣಕಾಸಿನ ವಿಚಾರವಾಗಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.


from India & World News in Kannada | VK Polls https://ift.tt/3e4C8ZF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...