ರಮೇಶ್‌ ಜಾರಕಿಹೊಳಿ ರಾಸಲೀಲೆ ವಿಡಿಯೋ ರಷ್ಯಾದಿಂದ ಯುಟ್ಯೂಬ್‌ಗೆ ಅಪ್‌ಲೋಡ್‌?

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಪೊಲೀಸ್‌ ಆಯುಕ್ತರ ಕಚೇರಿಗೆ ತೆರಳಿ ದೂರು ನೀಡಿ, ಮಾಧ್ಯಮಗಳಿಗೆ ವಿಡಿಯೊ ಹಂಚಿಕೊಳ್ಳುವುದಕ್ಕೆ ಮೂರು ತಾಸು ಮೊದಲೇ ಕೆಲ ವಿಡಿಯೊಗಳನ್ನು ಯುಟ್ಯೂಬ್‌ಗೆ ಅಪ್‌ಲೋಡ್‌ ಮಾಡಲಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಿರುವ ಕುರಿತು ಇಂಟರ್ನೆಟ್‌ ಪ್ರೊಟೋಕಾಲ್‌(ಐಪಿ) ವಿಳಾಸದಿಂದ ಗೊತ್ತಾಗಿದೆ ಎಂದು ತಿಳಿದು ಬಂದಿದೆ. ಆದರೆ, ವಿಡಿಯೊವನ್ನು ಕೆಲ ತಾಸುಗಳಲ್ಲಿ ಡಿಲೀಟ್‌ ಮಾಡಲಾಗಿದೆ. ಇನ್ನು, ರಮೇಶ್‌ ಜಾರಕಿಹೊಳಿ ಮತ್ತು ಸಂತ್ರಸ್ತೆ ಕಾಮಕಾಂಡದಲ್ಲಿ ತೊಡಗಿರುವ ವಿಡಿಯೊಗಳ ಪೈಕಿ ಕೆಲವನ್ನು ಮಲ್ಲೇಶ್ವರದಲ್ಲಿನ ಹೋಟೆಲ್‌/ಅಪಾರ್ಟ್‌ಮೆಂಟ್‌/ಮನೆಯಲ್ಲಿ ರೆಕಾರ್ಡ್‌ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ, ಈ ವಿಚಾರವನ್ನು ಪೊಲೀಸರು ಖಚಿತಪಡಿಸಿಲ್ಲ. 100 ಕೋಟಿ ರೂ. ಮಾನನಷ್ಟ ದಾವೆ ಬೆಂಗಳೂರು: ರಮೇಶ್‌ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ವಿಡಿಯೊ ನಕಲಿಯಾಗಿದೆ. ಇದನ್ನು ಬಿಡುಗಡೆ ಮಾಡಿರುವ ದೂರದಾರನ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಶಾಸಕ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಮೇಶ್‌ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ಇದು ನಮ್ಮ ಕುಟುಂಬದ ವಿರುದ್ಧ ನಡೆಯುತ್ತಿರುವ ಪಿತೂರಿ. ನಾವು ನಮ್ಮ ಸಹೋದರನ ಬೆಂಬಲಕ್ಕೆ ನಿಲ್ಲುತ್ತೇವೆ. ಈ ಪ್ರಕರಣ ಸಂಬಂಧ ಸಿಐಡಿ ಅಥವಾ ಸಿಬಿಐ ತನಿಖೆಯಾಗಲಿ,'' ಎಂದು ಒತ್ತಾಯಿಸಿದರು.


from India & World News in Kannada | VK Polls https://ift.tt/3bdFV5a

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...