ಮಲೆನಾಡಿಗರಿಗೆ ಸಿಗದ ಸೊಪ್ಪಿನಬೆಟ್ಟ; ಉತ್ತರ ಕನ್ನಡ ಜಿಲ್ಲೆಗೆ ಸೀಮಿತವಾದ ಅರಣ್ಯ ಕೈಪಿಡಿ ನಿಯಮ ತಿದ್ದುಪಡಿ!

ರಾಘವೇಂದ್ರ ಮೇಗರವಳ್ಳಿ ತೀರ್ಥಹಳ್ಳಿ ಶಿವಮೊಗ್ಗ: ಪ್ರದೇಶ ಮೇಲೆ ರೈತರ ವಿಶೇಷ ಹಕ್ಕನ್ನು ಸಮಗ್ರವಾಗಿ ಪ್ರತಿಷ್ಠಾಪಿಸುವ ಕುರಿತಂತೆ ರಾಜ್ಯಸರಕಾರ ಈವರೆಗೂ ಆಸಕ್ತಿ ತೋರಿಸಿಲ್ಲ. ಸಾಂಪ್ರಾದಾಯಿಕ ಕೃಷಿ ನೇಪಥ್ಯಕ್ಕೆ ಸರಿಯುವ ಆತಂಕದ ನಡುವೆ ಸೊಪ್ಪಿನಬೆಟ್ಟ ಪ್ರದೇಶವನ್ನು ರೈತರಿಂದ ಕಸಿದುಕೊಳ್ಳುವ ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ. ಏತ್ಮನಧ್ಯೆ, ಬೇರೆ ಜಿಲ್ಲೆಗಳ ಸೊಪ್ಪಿನಬೆಟ್ಟ ಪ್ರದೇಶಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಅರಣ್ಯ ಕೈಪಿಡಿ ನಿಯಮವಳಿ ಬದಲಾಗಿಲ್ಲ. ಆದರೆ, ಜಿಲ್ಲೆಗೆ ಸೀಮಿತವಾಗಿ ಸೊಪ್ಪಿನಬೆಟ್ಟ ಪ್ರದೇಶದಲ್ಲಿನ ಬೆಟ್ಟದಾರರಿಗೆ ಸೌಲಭ್ಯ ಹೆಚ್ಚಿಸಲು ಕರ್ನಾಟಕ ಬದಲಾಗಿದೆ. ಕೈಪಿಡಿ ನಿಯಮ ಕಂದಾಯ ನಿಯಮಾವಳಿ ಪ್ರಕಾರ ಕೃಷಿಗೆ ಪೂರಕ ಎಂದು ಭಾವಿಸಿ ವಿಶೇಷ ಹಕ್ಕಿನಿಂದ ಸೊಪ್ಪಿನಬೆಟ್ಟ ಪ್ರದೇಶವನ್ನು ಗುರುತಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸೊಪ್ಪಿನಬೆಟ್ಟ ಪ್ರದೇಶಕ್ಕೆ ಸಂಬಂಧಪಟ್ಟಂತೆ ಸೌಲಭ್ಯ ಹೆಚ್ಚಿಸಲು 2015 ಜುಲೈ 22ರಂದು ಅರಣ್ಯ, ಪರಿಸರ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತೀರ್ಮಾನದ ಅನ್ವಯ ಅರಣ್ಯ ಕೈಪಿಡಿ ನಿಯಮ ತಿದ್ದುಪಡಿಗೊಳಿಸಿ 2016ರ ಆಗಸ್ಟ್‌ 6ರಂದು ವಿಶೇಷ ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಗೊಂಡಿದೆ. ಕರ್ನಾಟಕ ಭೂ ಕಂದಾಯ ಕಾಯಿದೆ 1964ರ ಕಲಂ 79(2)ರಂತೆ ಕುಮ್ಕಿ, ಕಾನು, ಬೆಟ್ಟ, ಸೊಪ್ಪಿನಬೆಟ್ಟ, ಜುಮ್ಮಾಬಾನೆ ಪ್ರದೇಶ ರೈತರ ವಿಶೇಷ ಹಕ್ಕಿಗೆ ಒಳಪಟ್ಟಿದೆ. ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಸೊಪ್ಪಿನಬೆಟ್ಟ ಪ್ರದೇಶದ ಸರಳ ನಿರ್ವಹಣೆ ಉದ್ದೇಶದಲ್ಲಿ ಕರ್ನಾಟಕ ಅರಣ್ಯ ಕೈಪಿಡಿ ನಿಯಮ ತಿದ್ದುಪಡಿ ಆಗಿದೆ. ಜಿಲ್ಲೆಯ ಸೊಪ್ಪಿನಬೆಟ್ಟ ಪ್ರದೇಶದಲ್ಲಿ ಬೆಟ್ಟದಾರರಿಗೆ ಶೇ.75, ಸರಕಾರಕ್ಕೆ ಶೇ.25. ಈ ತೀರ್ಮಾನವನ್ನು ಕಾನೂನು ಇಲಾಖೆ ಒಪ್ಪದಿದ್ದರೆ ಬೆಟ್ಟದಾರರಿಗೆ ಶೇ.50, ಬೆಟ್ಟದಾರರ ಸಮೂಹಕ್ಕೆ ಶೇ.25, ಸರಕಾರಕ್ಕೆ ಶೇ.25ರಷ್ಟು ಸೌಕರ‍್ಯ ಹಕ್ಕು ನೀಡಬೇಕು ಎಂದು ಸರಕಾರ ಆದೇಶಿಸಿದೆ. ತಿದ್ದುಪಡಿ ಜಾರಿ ಕರ್ನಾಟಕ ಅರಣ್ಯ ಕೈಪಿಡಿ 1976ರ ಕಂಡಿಕೆ 131ಎಫ್‌ 7 ನಿಯಮ ತಿದ್ದುಪಡಿಗೆ ಪ್ರಧಾನ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ಸಲ್ಲಿಸಿದ ಪ್ರಸ್ತಾವನೆ ಆಧರಿಸಿ ಸೊಪ್ಟಿನಬೆಟ್ಟ ಪ್ರದೇಶದ ಸೌಲಭ್ಯ ಹೆಚ್ಚಿಸಿ ಆದೇಶಿಸಿದೆ. ತಿದ್ದುಪಡಿ ಕರಡನ್ನು ಸಂಸದೀಯ ವ್ಯವಹಾರ, ಶಾಸನ ರಚನಾ ಇಲಾಖೆಯೊಂದಿಗೆ ಸಮಾಲೋಚಿಸಿ ಪರಿಶೀಲಿಸಲಾಗಿದೆ. ಅರಣ್ಯ ಕಾಯಿದೆ ಮತ್ತು ನಿಯಮಗಳು, ಅರಣ್ಯಸಂರಕ್ಷಣೆ ಕಾಯಿದೆ, ನಿಯಮಕ್ಕೆ ವ್ಯತಿರಿಕ್ತವಾಗದಂತೆ ಎಚ್ಚರ ವಹಿಸಿ ಕರ್ನಾಟಕ ಅರಣ್ಯ ಕೈಪಿಡಿ 1976ರ ನಿಯಮ 131(ಎಫ್‌)ಗೆ ಸಂಬಂಧಿಸಿದಂತೆ ತಿದ್ದುಪಡಿ ನಿಯಮವನ್ನು ಸರಕಾರ ಜಾರಿಗೊಳಿಸಿದೆ. ಕೃಷಿಗೆ ಪೂರಕವಾದ ಸೊಪ್ಪಿನ ಬೆಟ್ಟ ಪ್ರದೇಶದಲ್ಲಿನ ಬಗರ್‌ಹುಕುಂ ಸಾಗುವಳಿ ಮಂಜೂರಾತಿಗೆ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಕರ್ನಾಟಕ ಅರಣ್ಯಕೈಪಿಡಿ ನಿಯಮ ತಿದ್ದುಪಡಿ ವಿವಾದಿತ ತೀರ್ಮಾನವಾದರೂ ಅಚ್ಚರಿ ಇಲ್ಲ. ಭಾಗದಲ್ಲಿ ಚರ್ಚೆಗೆ ನಾಂದಿ..! ಅರಣ್ಯ ಸಂರಕ್ಷಣೆ ನಿಯಮ ಕಠಿಣವಾಗುತ್ತಿರುವ ಹೊತ್ತಲ್ಲಿ ಉತ್ತರ ಕನ್ನಡ ಜಿಲ್ಲೆಯ ಬೆಟ್ಟದಾರರಿಗೆ ಸೊಪ್ಪಿನಬೆಟ್ಟ ಪ್ರದೇಶದಲ್ಲಿ ಸೌಲಭ್ಯ ಹೆಚ್ಚಿಸುವ ಸಂಬಂಧ ಅರಣ್ಯ ಕೈಪಿಡಿ ನಿಯಮ ತಿದ್ದುಪಡಿಗೊಳಿಸಿರುವ ಅಂಶ ಸಹಜವಾಗಿ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಹೊಸ ಚರ್ಚೆಗೆ ನಾಂದಿ ಆಗುವ ಸಾಧ್ಯತೆ ಇದೆ. 4 ವರ್ಷದ ಹಿಂದೆ ಸೊಪ್ಟಿನ ಬೆಟ್ಟ ಪ್ರದೇಶದಲ್ಲಿ ಬೆಟ್ಟದಾರರಿಗೆ ವಿಶೇಷ ಸೌಲಭ್ಯ ಒದಗಿಸುವ ಸಂಬಂಧ ಸರಕಾರ ರೂಪಿಸಿರುವ ನಿಯಮ ಇನ್ನು ಗೌಪ್ಯವಾಗಿ ಇದ್ದಂತಿದೆ. ಕಂದಾಯ ಕಾಯಿದೆ ಅನ್ವಯ ರೈತರ ವಿಶೇಷ ಹಕ್ಕಿನ ಸೊಪ್ಪಿನಬೆಟ್ಟ ಪ್ರದೇಶವನ್ನು ಅರಣ್ಯ ಸಂರಕ್ಷಣೆ ನಿಯಮವಳಿಯಿಂದ ದೂರ ಇಡಬೇಕು. ಸೊಪ್ಪಿನಬೆಟ್ಟ ಪ್ರದೇಶದಲ್ಲಿ ಸೌಕರ‍್ಯ ಮಾತ್ರ ನೀಡುವುದಲ್ಲ, ಈ ಪ್ರದೇಶದಲ್ಲಿ ಭೂ ಮಂಜೂರಾತಿಗೆ ಸರಕಾರ ಆದೇಶ ಹೊರಡಿಸದಿದ್ದರೆ ಜನಾಂದೋಲನ ಮಾಡಲಾಗುತ್ತದೆ. ರಮೇಶ್‌ ಹೆಗ್ಡೆ, ಪ್ರಧಾನ ಕಾರ‍್ಯದರ್ಶಿ, ಜಿಲ್ಲಾಕಾಂಗ್ರೆಸ್‌ ಘಟಕ


from India & World News in Kannada | VK Polls https://ift.tt/3e39uZ9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...