ತೇಜ್‌ಪುರ್: ಅಸ್ಸಾಂ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ರಾಜ್ಯದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಗೂ ಸಂಚರಿಸುತ್ತಿರುವ ಪ್ರಿಯಾಂಕಾ ಗಾಂಧಿ, ಚುನಾವಣಾ ಪ್ರಚಾರ, ರೋಡ್ ಶೋ, ಮನೆ ಮನೆಗಳಿಗೆ ಭೇಟಿ ನೀಡುವಲ್ಲಿ ತಲ್ಲೀನರಾಗಿದ್ದಾರೆ. ಅದರಂತೆ ಅಸ್ಸಾಂನ ತೇಜ್‌ಪುರ್‌ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ತಡವಾಗಿ ಬಂದ ಕಾರಣ, ಪ್ರಿಯಾಂಕಾ ಗಾಂಧಿ ಓಡಿ ಬಂದು ವೇದಿಕೆ ಹತ್ತಿದ ಅಪರೂಪದ ಪ್ರಸಂಗ ನಡೆದಿದೆ. ಸಮಾವೇಶಕ್ಕೆ ತಡವಾಗಿ ಆಗಮಿಸಿದ ಪ್ರಿಯಾಂಕಾ ಗಾಂಧಿ, ಹೆಲಿಕಾಪ್ಟರ್‌ನಿಂದ ಇಳಿದು ಓಡುತ್ತಲೇ ವೇದಿಕೆ ಹತ್ತಿದರು. ಈ ವೇಳೆ ಅವರ ಭದ್ರತಾ ಸಿಬ್ಬಂದಿ ಕೂಡ ಓಡುತ್ತಲೇ ಅವರನ್ನು ಹಿಂಬಾಲಿಸಿದರು. ಪ್ರಿಯಾಂಕಾ ಗಾಂಧಿ ಆಗಮಿಸುತ್ತಿದ್ದಂತೇ ನೆರೆದ ಜನರೆಲ್ಲಾ ಪ್ರಿಯಾಂಕಾ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಜಯಕಾರ ಕೂಗಿದರು. ಈ ವೇಳೆ ಓಡುತ್ತಲೇ ಜನರತ್ತ ಕೈಬೀಸಿದ ಪ್ರಿಯಾಂಕಾ ಗಾಂಧಿ, ಆ ಬಳಿಕ ಸಾರ್ವಜನಕರನ್ನು ಉದ್ದೇಶಿಸಿ ಚುನಾವಣಾ ಭಾಷಣ ಮಾಡಿದರು. ಅಸ್ಸಾಂ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಭರ್ಜರಿ ಆಶ್ವಾಸನೆ ನೀಡಿರುವ ಪ್ರಿಯಾಂಕಾ ಗಾಂಧಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಎಎ ಜಾರಿಗೊಳಿಸುವುದನ್ನು ತಡೆ ಹಿಡಿಯುವ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ. ಅಸ್ಸಾಂ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸ್ಟಾರ್ ಪ್ರಚಾರಕಿಯಾಗಿರುವ ಪ್ರಿಯಾಂಕಾ ಗಾಂಧಿ, ಪಕ್ಷದ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
from India & World News in Kannada | VK Polls https://ift.tt/3e22f3B