ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿ ಯುವಿ ಎಲೈಟ್‌ ಕ್ಲಬ್‌ ಸೇರಿದ ಪೊಲಾರ್ಡ್‌!

ಹೊಸದಿಲ್ಲಿ: ಇತಿಹಾಸದಲ್ಲಿ ಒಂದೇ ಓವರ್‌ಗೆ ಆರು ಸಿಕ್ಸರ್‌ ಬಾರಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್‌ ಎಂಬ ಸಾಧನೆಗೆ ನಾಯಕ ಕೈರಾನ್ ಪೊಲಾರ್ಡ್ ಭಾಜನರಾಗಿದ್ದಾರೆ. ಅಂಟಿಗುವಾದಲ್ಲಿ ಬುಧವಾರ ನಡೆದಿದ್ದ ಶ್ರೀಲಂಕಾ ವಿರುದ್ಧದ ಮೊದಲನೇ ಟಿ20 ಪಂದ್ಯದಲ್ಲಿ ಬಲಗೈ ಬ್ಯಾಟ್ಸ್‌ಮನ್‌ ಈ ದಾಖಲೆ ಮಾಡಿದ್ದಾರೆ. ಶ್ರೀಲಂಕಾದ ಅಕಿಲಾ ದನಂಜಯ್‌ ಅವರ ಓವರ್‌ನಲ್ಲಿ ಪೊಲಾರ್ಡ್‌ ಆರು ಮನಮೋಹಕ ಸಿಕ್ಸರ್‌ಗಳನ್ನು ಸಿಡಿಸಿದ್ದರು. ಇದೇ ಪಂದ್ಯದಲ್ಲಿಯೇ ಧನಂಜಯ್ ಹ್ಯಾಟ್ರಿಕ್‌ ವಿಕೆಟ್‌ ಪಡೆದುಕೊಂಡಿರುವುದು ವಿಶೇಷ ಸಂಗತಿಯಾಗಿದೆ. ಸಿಕ್ಸರ್‌ ಹೊಡೆಸಿಕೊಳ್ಳುವುದಕ್ಕೂ ಮುನ್ನ ತಮ್ಮ ಅದ್ಭುತ ಎಸೆತಗಳಿಂದ ಎವಿನ್‌ ಲೆವಿಸ್‌, ಕ್ರಿಸ್‌ ಗೇಲ್‌ ಹಾಗೂ ನಿಕೋಲಸ್‌ ಪೂರನ್‌ ಅವರನ್ನು ಲಂಕಾ ಸ್ಪಿನ್ನರ್‌ ಹ್ಯಾಟ್ರಿಕ್‌ ಬಲಿ ಪಡೆದುಕೊಂಡಿದ್ದರು. ವೆಸ್ಟ್ ಇಂಡೀಸ್‌ ತಂಡದ ಇನಿಂಗ್ಸ್‌ನ ಆರನೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿದ್ದರು. ಆದರೆ, 11 ಎಸೆತಗಳಿಗೆ 38 ರನ್‌ ಗಳಿಸಿ ವಿಂಡೀಸ್‌ ನಾಯಕ ಬಹುಬೇಗ ವಿಕೆಟ್‌ ಒಪ್ಪಿಸಿದರು. ಹ್ಯಾಟ್ರಿಕ್‌ ವಿಕೆಟ್‌ ಪಡೆದುಕೊಂಡ ತಮ್ಮ ಹಿಂದಿನ ಓವರ್‌ನಲ್ಲಿಯೇ ಕೈರಾನ್‌ ಪೊಲಾರ್ಡ್ ಕ್ರೀಸ್‌ಗೆ ಆಗಮಿಸಿದ್ದರು. ಹ್ಯಾಟ್ರಿಕ್‌ ವಿಕೆಟ್‌ ಕಿತ್ತ ಜೋಶ್‌ನಲ್ಲಿ ಮತ್ತೊಂದು ಓವರ್‌ನಲ್ಲಿ ಮ್ಯಾಜಿಕ್‌ ಮಾಡಲು ಬಂದ ಧನಂಜಯ್‌ಗೆ ಮೊದಲನೇ ಎಸೆತದಿಂದಲೇ ಪೋಲಾರ್ಡ್ ಸಿಕ್ಸರ್‌ಗಳ ಸುರಿಮಳೆಗೈದರು. ಒವರ್‌ನ ಎಲ್ಲಾ ಎಸೆತಗಳಿಗೂ ಸಿಕ್ಸರ್‌ ಸಿಡಿಸಿದ ಬಳಿಕ ಡ್ರೆಸ್ಸಿಂಗ್‌ ರೂಂ ಕಡೆ ಮುಖ ಮಾಡಿ ವಿಶಿಷ್ಠ ರೀತಿಯಲ್ಲಿ ಪೊಲಾರ್ಡ್ ಸಂಭ್ರಮಿಸಿದರು. ಅದರಂತೆ ತಮ್ಮ ನಾಯಕನ ವಿಶಿಷ್ಠ ಸಾಧನೆಗೆ ತಂಡದ ಸಹ ಆಟಗಾರರ ಎದ್ದು ನಿಂತು ಚಪ್ಪಾಳಿ ತಟ್ಟಿದರು. ಅಂತಿಮವಾಗಿ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ 4 ವಿಕೆಟ್‌ಗಳಿಂದ ಮೊದಲನೇ ಟಿ20 ಗೆದ್ದು, ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಕೈರಾನ್‌ ಪೊಲಾರ್ಡ್‌ಗೂ ಮೊದಲು ಭಾರತ ತಂಡದ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಾಧನೆ ಮಾಡಿದ ಏಕೈಕ ಬ್ಯಾಟ್ಸ್‌ಮನ್‌ ಆಗಿದ್ದರು. 2007ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್‌ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ವೇಗಿ ಸ್ಟುವರ್ಟ್ ಬ್ರಾಡ್‌ಗೆ ಯುವಿ ಆರು ಭರ್ಜರಿ ಸಿಕ್ಸರ್‌ ಸಿಡಿಸಿದ್ದರು. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಓವರ್‌ಗೆ ಆರು ಸಿಕ್ಸರ್‌ ಸಿಡಿಸಿದ ಮೂರನೇ ಬ್ಯಾಟ್ಸ್‌ಮನ್‌ ಎಂಬ ಸಾಧನೆಗೆ ಕೈರಾನ್‌ ಪೊಲಾರ್ಡ್ ಭಾಜನರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹರ್ಷಲ್‌ ಗಿಬ್ಸ್‌ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್‌ ಆಗಿದ್ದಾರೆ. 2007ರ ಓಡಿಐ ವಿಶ್ವಕಪ್‌ ಟೂರ್ನಿಯಲ್ಲಿ ನೇದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಗಿಬ್ಸ್ ಈ ಮೈಲುಗಲ್ಲು ಸ್ಥಾಪಿಸಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3rhjX6P

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...