ವಿದೇಶದಲ್ಲಿ ವಿಜಯಪುರ ದ್ರಾಕ್ಷಿ ಹವಾ; ರಷ್ಯಾ, ಟರ್ಕಿ, ಅರಬ್ ರಾಷ್ಟ್ರಗಳಿಗೆ ರಪ್ತು!

ಮಂಜುನಾಥ ಕೊಣಸೂರು ವಿಜಯಪುರ: ವಿಶೇಷ ಸ್ವಾದದ ವಿಜಯಪುರ ಜಿಲ್ಲೆಯ ತಾಜಾ ದ್ರಾಕ್ಷಿಗೆ ವಿದೇಶಗಳಲ್ಲೂ ಬೇಡಿಕೆ ಬಂದಿದೆ. ಇಲ್ಲಿನ ಸತ್ವಯುತ ಮಣ್ಣಿನ ದ್ರಾಕ್ಷಿ , , ಅರಬ್‌ ರಾಷ್ಟ್ರಗಳಿಗೆ ರಫ್ತು ಆಗುತ್ತಿದೆ. ಆ ಮೂಲಕ ನಾನಾ ರಾಷ್ಟ್ರಗಳ ಜನರ ಬಾಯಲ್ಲಿ ಸಿಹಿ ಮೂಡಿಸುತ್ತಿದೆ. ವಿಜಯಪುರ ಜಿಲ್ಲೆಯ ಮಣ್ಣು, ಹವಾಗುಣದಿಂದಾಗಿ ಕಣಜವಾಗಿದ್ದು, ಸುಮಾರು 15 ಸಾವಿರ ಹೆಕ್ಟೇರ್‌ನಲ್ಲಿ ದ್ರಾಕ್ಷಿ ಬೆಳೆಯಿದೆ. ಇಲ್ಲಿ ಉತ್ಪಾದನೆಯಾಗುವ ಬಹುತೇಕ ದ್ರಾಕ್ಷಿ ಒಣದ್ರಾಕ್ಷಿ ಉದ್ಯಮಕ್ಕೆ ಬಳಕೆಯಾಗುತ್ತಿದೆ. ತಾಜಾಹಣ್ಣು ಬಳಕೆ, ಮಾರಾಟ ಕಡಿಮೆ. ಸೂಕ್ತ ಮಾರುಕಟ್ಟೆ, ಕೋಲ್ಡ್‌ ಸ್ಟೋರೇಜ್‌ ಸಮಸ್ಯೆಯನ್ನು ದ್ರಾಕ್ಷಿ ಬೆಳೆಗಾರರು ಎದುರಿಸುತ್ತಿದ್ದಾರೆ. ಈತನಕ ಒಣದ್ರಾಕ್ಷಿಯಷ್ಟೇ ಅರಬ್‌ ರಾಷ್ಟ್ರಗಳಿಗೆ ರಫ್ತಾಗುತ್ತಿತ್ತು. ಈಗ ವಿಜಯಪುರದ ಯುವರೈತ, ಉದ್ಯಮಿ ಆಕಿಬ್‌ ಆಲಮೇಲಕರ ತಾಜಾ ದ್ರಾಕ್ಷಿ ಹಣ್ಣನ್ನು ವಿದೇಶಿಗಳಿಗೆ ರಫ್ತು ಮಾಡುವ ಮೂಲಕ ರೈತರಿಗೆ ಆದಾಯದ ಮಾರ್ಗ ತೋರಿಸಿದ್ದಾರೆ. ಆಕೀಬ್‌ ಆಲಮೇಲಕರ ಅವರು ಸ್ಟಾರ್‌ ಫ್ರೂಟ್‌ ಕಂಪನಿ ಹೆಸರಲ್ಲಿ ತಮ್ಮ ಜಮೀನಿನ 3 ಎಕರೆಯಲ್ಲಿ ಬೆಳೆದ ದ್ರಾಕ್ಷಿ ಜತೆಗೆ ಇತರೆ ರೈತರಿಂದ ಖರೀದಿಸಿ ರಷ್ಯಾ, ಟರ್ಕಿ, ಇರಾನ್‌, ಕುವೈತ್‌, ಮಸ್ಕತ್‌, ಕತಾರ್‌ ಮತ್ತಿತರ ದೇಶಗಳಿಗೆ ತಾಜಾ ದ್ರಾಕ್ಷಿ ಹಣ್ಣನ್ನು ರಫ್ತು ಮಾಡುವ ಕಾರ್ಯ ಕೈಗೊಂಡಿದ್ದಾರೆ. 120 ಕಂಟೇನರ್‌ ದ್ರಾಕ್ಷಿ ರಫ್ತು ಈವೆರೆಗೆ ತಲಾ 16 ಟನ್‌ ತೂಕದ 120 ಕಂಟೇನರ್‌ ದ್ರಾಕ್ಷಿಯನ್ನು ರಫ್ತು ಮಾಡಲಾಗಿದೆ. ದ್ರಾಕ್ಷಿ ಸೀಸನ್‌ ಮುಗಿಯುವ ತನಕ ಇನ್ನೂ 50-60 ಕಂಟೇನರ್‌ ಹಣ್ಣು ರಫ್ತು ಮಾಡುವ ಗುರಿಯಿದೆ ಎಂದು ಆಕಿಬ್‌ ಆಲಮೇಲಕರ ತಿಳಿಸಿದರು. ತಾಜಾ ದ್ರಾಕ್ಷಿ ರಫ್ತು ಹೇಗೆ ತೋಟದಿಂದಲೇ ನಿರ್ದಿಷ್ಟ ಗುಣಮಟ್ಟದ ದ್ರಾಕ್ಷಿ ಹಣ್ಣನ್ನು ಕಿತ್ತು ಗಾತ್ರಕ್ಕನುಗುಣವಾಗಿ ಪ್ರತ್ಯೇಕಿಸಿ ತಕ್ಷಣವೇ ತಲಾ 4 ಕೆಜಿ ಬಾಕ್ಸ್‌ನಲ್ಲಿ ವಿಶೇಷ ರೀತಿಯಲ್ಲಿ ಪ್ಯಾಕ್‌ ಮಾಡಲಾಗುತ್ತದೆ. ತೋಟದಿಂದಲೇ ರೀಫರ್‌ ಕಂಟೇನೇರ್‌ (ರೆಫ್ರಿಜರೇಟಿಂಗ್‌ ವ್ಯವಸ್ಥೆಯ ಕಂಟೇನರ್‌)ಗೆ ತುಂಬಿ, ಮುಂಬೈ ಬಂದರಿಗೆ ಕಳುಹಿಸಲಾಗುತ್ತದೆ. ಅಲ್ಲಿಂದ ಹಡಗಿನಲ್ಲಿ ರೆಫ್ರಿಜರೇಟಿಂಗ್‌ ವ್ಯವಸ್ಥೆಯಲ್ಲೇ ದ್ರಾಕ್ಷಿ ವಿದೇಶಗಳ ಮಾರುಕಟ್ಟೆ ತಲುಪುತ್ತದೆ ಎಂದು ವಿವರಿಸಿದರು. ವಿದೇಶಗಳಿಗೆ ಏಜೆಂಟರ ಮೂಲಕ ಬೇಡಿಕೆಗನುಗುಣವಾಗಿ ದ್ರಾಕ್ಷಿ ರಫ್ತು ಮಾಡಲಾಗುತ್ತದೆ. ಅಲ್ಲಿನ ಮಾರುಕಟ್ಟೆ ತಲುಪಿದ ನಂತರ ಹಣ್ಣಿನ ಸ್ಥಿತಿ ಆಧರಿಸಿ ಬೆಲೆ ನಿರ್ಧಾರವಾಗುತ್ತದೆ. ಹಲವು ದೇಶಗಳಿಗೆ ಚೀನಾ, ಚಿಲಿ ಮತ್ತಿತರ ದೇಶಗಳ ದ್ರಾಕ್ಷಿ ಬಂದರೂ ಅದರೊಟ್ಟಿಗೆ ಹೆಚ್ಚು ಸ್ವಾದಿಷ್ಟವಿರುವ ಭಾರತೀಯ ದ್ರಾಕ್ಷಿ ಸ್ಪರ್ಧೆ ಮಾಡಿ ವಿದೇಶಿಗರನ್ನು ಆಕರ್ಷಿಸುತ್ತದೆ ಎಂದೂ ತಿಳಿಸಿದರು. ಭಾರತ ಮಣ್ಣಿನ ಹಣ್ಣಿಗೆ ಬೇಡಿಕೆ ವಿದೇಶಿ ನೆಲಕ್ಕಿಂತ ನಮ್ಮ ನೆಲದ ಮಣ್ಣು ಹೆಚ್ಚು ಸತ್ವಯುತವಾಗಿದೆ. ನಮ್ಮ ರೈತರು ಹೆಚ್ಚು ರಾಸಾಯನಿಕ ಬಳಸಲ್ಲ, ಸಾವಯವ ಗೊಬ್ಬರ ಹೆಚ್ಚು ಬಳಕೆ ಮಾಡುವುದರಿಂದ ಹಾಗೂ ಇಲ್ಲಿನ ಹವಾಗುಣದಿಂದಲೂ ಹಣ್ಣುಗಳು ಹೆಚ್ಚು ಸ್ವಾದಿಷ್ಟ. ಹೀಗಾಗಿ ವಿದೇಶಗಳಲ್ಲಿ ಭಾರತದ ಹಣ್ಣುಗಳಿಗೆ ಬೇಡಿಕೆ ಹೆಚ್ಚಿದೆ ಎಂದರು. ವಿದೇಶಗಳಿಗೆ ರಫ್ತು ಮಾಡುತ್ತಿರುವುದರಿಂದ ಸ್ಥಳೀಯ ಮಾರುಕಟ್ಟೆಗಿಂತ ಹೆಚ್ಚು ಬೆಲೆ ಸಿಗುತ್ತದೆ. ನಮ್ಮ ರೈತರಿಂದ ಸ್ಥಳೀಯ ಮಾರುಕಟ್ಟೆಗಿಂತ ಹೆಚ್ಚಿನ ದರ ನೀಡಿ ದ್ರಾಕ್ಷಿಯನ್ನು ಖರೀದಿಸಲಾಗುತ್ತದೆ. ಹೀಗಾಗಿ ರೈತರಿಗೂ ಅನುಕೂಲ, ರಫ್ತು ಮಾಡುವುದರಿಂದ ನಮಗೂ ಒಂದಿಷ್ಟು ಲಾಭ ಸಿಗುತ್ತದೆ. ವಿದೇಶಗಳಿಗೆ ಹಣ್ಣು ತಲುಪುವ ಸ್ಥಿತಿಯನ್ನಾಧರಿಸಿ ಬೆಲೆ ನಿಗದಿಯಾಗುವುದರ ಮೇಲೆ ಲಾಭ ಅವಲಂಬಿತ ಎಂದು ಆಕೀಬ್‌ ತಿಳಿಸಿದರು. ನಮ್ಮ ಕಂಪನಿಯಿಂದ 6 ವರ್ಷಗಳಿಂದ ನಿಂಬೆ, ದಾಳಿಂಬೆ, ಬೆಳ್ಳುಳ್ಳಿ, ಶುಂಠಿ ರಫ್ತು ಮಾಡುತ್ತಿದ್ದೆವು. 2 ವರ್ಷದಿಂದ ತಾಜಾ ದ್ರಾಕ್ಷಿಯನ್ನು ರಫ್ತು ಮಾಡಲಾಗುತ್ತಿದೆ. ನಿಂಬೆ ಹಾಗೂ ದ್ರಾಕ್ಷಿಯನ್ನು ಬೃಹತ್‌ ಪ್ರಮಾಣದಲ್ಲಿ ರಫ್ತು ಮಾಡುತ್ತಿದ್ದೇವೆ ಎಂದು ವಿವರಿಸಿದರು. ವಿಜಯಪುರ, ಬಾಗಲಕೋಟೆ ಜಿಲ್ಲೆಯ ಮಣ್ಣು, ನೀರು, ಹವಾಗುಣ ಹಣ್ಣು ಬೆಳೆಗೆ ಅತ್ಯಂತ ಸೂಕ್ತ. ವಿದೇಶಗಳಿಗೆ ಹೋಲಿಸಿದರೆ ನಮ್ಮ ರೈತರು ರಾಸಾಯನಿಕ ಕಡಿಮೆ, ತಿಪ್ಪೆ ಗೊಬ್ಬರ ಹೆಚ್ಚು ಬಳಕೆ ಮಾಡುವುದರಿಂದ ಉತ್ಕೃಷ್ಟ ದ್ರಾಕ್ಷಿ ಬೆಳೆಯುತ್ತದೆ. ಹೀಗಾಗಿ ವಿದೇಶಿಗಳಲ್ಲಿ ಇಲ್ಲಿನ ಹಣ್ಣಿಗೆ ಬೇಡಿಕೆ ಇದೆ. ಆಕಿಬ್‌ ಆಲಮೇಲಕರ, ದ್ರಾಕ್ಷಿ ಹಣ್ಣು ರಫ್ತು ವ್ಯಾಪಾರಿ


from India & World News in Kannada | VK Polls https://ift.tt/3e83n5S

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...