ಮಂಗಳೂರು: ನಗರದ ಸಿಸಿಬಿ ತಂಡದ ಅಧಿಕಾರಿ ಹಾಗೂ ಕೆಲವು ಸಿಬಂದಿ ವಿರುದ್ಧ ಸುಮಾರು 24 ಮಂದಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದರು ಎನ್ನಲಾಗಿದೆ. ಈ ಕಾರಣದಿಂದ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿಯವರು ಸಿಸಿಬಿ ಪೊಲೀಸರ ಮೇಲಿರುವ ಎಲ್ಲ ದೂರುಗಳ ಬಗ್ಗೆಯೂ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಒಂದು ವೇಳೆ ಹೀಗಾದಲ್ಲಿ ಸಿಸಿಬಿ ಮತ್ತಷ್ಟು ಕರ್ಮಕಾಂಡ ಹೊರಬರಲಿದೆ. ಕೇರಳ ಮೂಲದ ಉದ್ಯಮಿಗಳ ಎಲಿಯಾ ಕನ್‌ಸ್ಟ್ರಕ್ಷನ್ ಸಂಸ್ಥೆ ಹಣ ದ್ವಿಗುಣಗೊಳಿಸಿ ಕೊಡುವುದಾಗಿ ಹಲವರಿಂದ ಹಣ ಸಂಗ್ರಹಿಸಿ ವಂಚನೆ ಮಾಡಿದ ಬಗ್ಗೆ ನಗರದ ಎಕನಾಮಿಕ್ ಆ್ಯಂಡ್ ನಾರ್ಕೊಟಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕಂಪನಿ ಹಲವಾರು ಮಂದಿಗೆ ಒಟ್ಟು ಸುಮಾರು 30 ಕೋ.ರೂ.ಗಳಷ್ಟು ವಂಚಿಸಿತ್ತು ಎಂದು ದೂರಲಾಗಿದೆ. ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಾರನ್ನು ಜಪ್ತಿ ಮಾಡಿದ್ದರು. ಆದರೆ ಆರೋಪಿಗಳನ್ನು ಹಾಜರುಪಡಿಸುವಾಗ ಕಾರನ್ನು ತೋರಿಸದೆ ವಂಚಿಸಲಾಗಿತ್ತು. ಈ ವಿಚಾರದಲ್ಲಿ ತನಿಖಾಧಿಕಾರಿಯಾದ ರಾಮಕೃಷ್ಣ ಅವರು ಕೂಡ ಪ್ರಶ್ನಿಸದೆ ಕರ್ತವ್ಯ ಲೋಪವೆಸಗಿದ್ದರು ಎನ್ನಲಾಗಿದೆ. ಕರ್ತವ್ಯಲೋಪವೇ ಇದೀಗ ಅವರ ಅಮಾನತಿಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಆರೋಪಿಗಳ ಐಷಾರಾಮಿ ಕಾರು ಮಾರಾಟ ಪ್ರಕರಣದಲ್ಲಿ ಸದ್ಯ 4 ಮಂದಿ ಪೊಲೀಸರು ಸಸ್ಪೆಂಡ್ ಆಗಿದೆ. ತನಿಖೆ ಕೂಡ ಮುಂದುವರಿದಿದೆ. ತನಿಖೆ ತೀವ್ರತೆ ಪಡೆಯುತ್ತಿದ್ದಂತೆ ಮಂಗಳೂರಿನ ಸಿಸಿಬಿ ಪೊಲೀಸರ ಕರ್ಮಕಾಂಡ ಹೊರಬರಲಿದೆ.
from India & World News in Kannada | VK Polls https://ift.tt/3sOwW0l