ಸೈಟ್‌ ಹಂಚಿಕೆ ಅಕ್ರಮ; ಬಿಡಿಎ 10 ಅಧಿಕಾರಿಗಳೂ ಸೇರಿ 43 ಜನರ ವಿರುದ್ಧ ಎಫ್‌ಐಆರ್‌..!

: ಸೈಟ್‌ ಹಂಚಿಕೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಬಿಡಿಎ ನಾಲ್ಕು ಉಪ ಕಾರ್ಯದರ್ಶಿಗಳು ಸೇರಿ 10 ಮಂದಿ ಅಧಿಕಾರಿಗಳು ಹಾಗೂ 43 ಮಂದಿ ವಿರುದ್ಧ ಶೇಷಾದ್ರಿಪುರಂ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಬಿಡಿಎ ಉಪ ಕಾರ್ಯದರ್ಶಿ ಆಗಿದ್ದ ಡಾ. ಸುಧಾ, ಅನಿಲ್‌ ಕುಮಾರ್‌, ಭಾಸ್ಕರ್‌, ಮೇಲ್ವಿಚಾರಕಿ ಕಮಲಮ್ಮ, ಮಹದೇವಮ್ಮ, ರವಿಶಂಕರ್‌, ಅಶ್ವತ್ಥನಾರಾಯಣ, ವೆಂಕಟರಮಣಪ್ಪ, ಸಂಜಯ್‌ ಕುಮಾರ್‌ ವಿರುದ್ಧ ಶೇಷಾದ್ರಿಪುರ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಕೆಲವರು ಬಂಧನದ ಭೀತಿಯಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಏನಿದು ಅಕ್ರಮ?ಬನಶಂಕರಿ ಮೂರನೇ ಹಂತ ಹೊಸಕೆರೆಹಳ್ಳಿ ಗ್ರಾಮದ ಸರ್ವೆ ನಂ. 89, 90, 91 ರಲ್ಲಿ ತೆರವಾಗಿದ್ದ ಗುಡಿಸಲು ನಿವಾಸಿಗಳಿಗೆ ಬಿಡಿಎ ವತಿಯಿಂದ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ನಿರಾಶ್ರಿತ ಗುಡಿಸಲು ನಿವಾಸಿಗಳಿಗೆ ನಿವೇಶನ ಹಂಚುವ ಸಂಬಂಧ ಅಕ್ರಮ ಆಗಿರುವ ಬಗ್ಗೆ ಅನಾಥ ಮಕ್ಕಳ ಅಭಿವೃದ್ಧಿ ಸಂಸ್ಥೆ ನೀಡಿದ ದೂರು ಆಧರಿಸಿ ತನಿಖೆ ನಡೆಸುವಂತೆ ಬಿಡಿಎ ಆಯುಕ್ತರು ಆದೇಶಿಸಿದ್ದರು. ಅನುಮೋದಿತ 180 ಫಲಾನುಭವಿಗಳ ಪೈಕಿ 32 ಅನರ್ಹ ಫಲಾನುಭವಿಗಳಿಗೆ ನಿಯಮ ಬಾಹಿರವಾಗಿ ನಿವೇಶನ ಹಂಚಿಕೆ ಮಾಡಿ ಪ್ರಾಧಿಕಾರಕ್ಕೆ ವಂಚನೆ ಮಾಡಿರುವುದು ಜಾಗೃತ ದಳದ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಒಬ್ಬರಿಗೆ ಎರಡು ಮತ್ತು ಮೂರು ನಿವೇಶನ ಕೊಟ್ಟಿರುವುದು, ನಿಗದಿತ ನಿವೇಶನ ಬದಲಿಗೆ ಹೆಚ್ಚಿನ ಅಳತೆಯ ನಿವೇಶನಗಳನ್ನು ನೀಡಿರುವುದು ತನಿಖೆಯಲ್ಲಿ ಗೊತ್ತಾಗಿತ್ತು.


from India & World News in Kannada | VK Polls https://ift.tt/3b8oLG5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...